ದಯಾ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ದಯಾ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಕಪುಚಿನ್‌ ಕೃಷಿಕ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಉಜಿರೆಯ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಆಚರಿಸಲಾಯಿತು. ಶಾಲಾ ಸಂಚಾಲಕರಾದ ವಂದನೀಯ ವಿನೋದ್‌ ಮಸ್ಕರೇನಸ್‌ ಕಾರ್ಯಕ್ರಮದ ಅಧ್ಯಕ್ಷತೆದ್ದರು. ಮುಖ್ಯ ಅತಿಥಿಗಳಾಗಿ ಬದ್ಯಾರು ಎಲ್‌.ಎಂ‌. ಪಿಂಟೊ ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ರೋಶನ್‌ ಕ್ರಾಸ್ತಾ, ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಲೇರಿಯನ್‌ ರೋಡ್ರಿಗಸ್‌, ಉಪಾಧ್ಯಕ್ಷ ಅನಿಲ್‌ ಪ್ರಕಾಶ್‌ ಡಿಸೋಜಾ, ವಿಮುಕ್ತ ಸ್ವ-ಸಹಾಯ ಸಂಘಗಳ ಟ್ರಸ್ಟ್‌ನ ಅಧ್ಯಕ್ಷೆ ಶಾಲಿ, ಶಾಲಾ ಮುಖ್ಯ ಶಿಕ್ಷಕಿ ದಿವ್ಯಾ ಟಿ.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್‌‌ರವರ ಭಾವಚಿತ್ರಕ್ಕೆ ಮತ್ತು ಭಾರತದ ಸಂವಿಧಾನ ಗ್ರಂಥಕ್ಕೆ ಪುಷ್ಪದ ಹಾರವನ್ನು ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ವಂದನೀಯ ರೋಶನ್‌ ಕ್ರಾಸ್ತಾ ಮಾತನಾಡಿ; ಈ ಶಾಲೆಯು ಹೆಸರಿಗೆ ತಕ್ಕಂತೆ ದಯೆ ಮತ್ತು ಪ್ರೀತಿಯ ತಾಣವಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರ ಸೇವೆಯಲ್ಲಿ ದಯೆ ಮತ್ತು ಪ್ರೀತಿಯು ಎದ್ದು ಕಾಣುತ್ತಿದೆ. ಶಾಲೆಯ ಈ ಸೇವೆಯಲ್ಲಿ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಎಲ್‌.ಎಮ್‌. ಪಿಂಟೋ ಆಸ್ಪತ್ರೆಯ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುತ್ತೇವೆ ಎಂದು ಭರವಸ ನೀಡಿದರಲ್ಲದೇ, ಎಲ್ಲಾ ಶಿಕ್ಷಕರಿಗೂ, ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಉಜಿರೆ ಅನುಗ್ರಹ ಸೊಸೈಟಿಯ ಅಧ್ಯಕ್ಷ ವಲೇರಿಯನ್‌ ರೋಡ್ರಿಗಸ್‌ ಮಾತನಾಡಿ; ಒಬ್ಬ ಮನುಷ್ಯನ ಜೀವನದಲ್ಲಿ ಪ್ರಪಂಚವನ್ನು ತೋರಿಸುವವಳು ತಾಯಿಯಾದರೆ, ಈ ಪ್ರಪಂಚ ಹೇಗಿದೆ ಎಂಬುದನ್ನು ತೋರಿಸುವವರು ಶಿಕ್ಷಕರು. ಈ ಶಾಲೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರ ಸೇವೆ ಪ್ರಶಂಸನೀಯ ಮತ್ತು ಇಲ್ಲಿನ ಮಕ್ಕಳ ಸೇವೆಗಾಗಿ ಇಂತಹ ಶಿಕ್ಷಕರನ್ನು ಪಡೆದುಕೊಂಡಿರುವುದು ಸಂಸ್ಥೆಯ ಪಣ್ಯವೇ ಸರಿ ಎಂದು ಶಿಕ್ಷಕರ ಸೇವೆಯನ್ನು ಶ್ಲಾಘಿಸಿದರು. ಅಧ್ಯಕ್ಷೀಯ ಭಾಷಣ ಮಾಡಿದ ವಂದನೀಯ ವಿನೋದ್‌ ಮಸ್ಕರೇನಸ್‌; ತಾಯಿ-ತಂದೆ ನಮ್ಮ ಮೊದಲ ಗುರು. ತದನಂತರ ನಾವು ಬೆಳೆದಂತೆ ನಮ್ಮ ದೇಶ, ರಾಜ್ಯ, ಊರು, ಶಾಲೆ ಮುಂತಾದವುಗಳ ಮೇಲೆ ಬೆಳಕನ್ನು ಚೆಲ್ಲಿ ನಮ್ಮ ಜ್ಞಾನದ ಭಂಡಾರವನ್ನು ವಿಸ್ತರಿಸುವವರು ನಮ್ಮ ಶಿಕ್ಷಕರು. ಇಂತಹ ಶಿಕ್ಷಕರನ್ನು ಸ್ಮರಿಸಲು ನಮಗೆ ಪ್ರೇರಣೆ ನೀಡಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರನ್ನು ತುಂಬು ಕೃತಜ್ಞತೆಯಿಂದ ಸ್ಮರಿಸಬೇಕು. ಶಾಲೆಯ ಎಲ್ಲಾ ಮಕ್ಕಳ ಪ್ರತಿಯೊಂದು ಬೆಳವಣಿಗೆಯಲ್ಲಿ ಸಂಸ್ಥೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ವಿವಿಧ ಥೆರಪಿಸ್ಟ್‌ಗಳ ಸೇವೆ ಶ್ಲಾಘನೀಯ. ಇಂತಹ ಅತ್ಯುತ್ತಮ ಸಿಬ್ಬಂದಿಗಳಿಂದಲೇ ನಮ್ಮ ಮಕ್ಕಳು ಕಲಿಕೆಯಲ್ಲಿ ಮತ್ತು ಇನ್ನಿತರ ಕೌಶಲ್ಯಗಳಲ್ಲಿ ಮುಂದೆ ಬರಲು ಸಾಧ್ಯವಾಗಿದೆ ಎನ್ನುತ್ತಾ ಎಲ್ಲಾ ಶಿಕ್ಷಕರಿಗೂ ಶುಭಾಶಯಗಳನ್ನು ತಿಳಿಸಿದರು. . ಕಾರ್ಯಕ್ರಮದ ಪ್ರಾಯೋಜಕರಾದ ಉಜಿರೆಯ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್‌ ನೆಲ್ಸನ್‌ ಮೋನಿಸ್‌, ಸಂಘದ ನಿರ್ದೇಕರು, ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು, ದಯಾ ವಿಶೇಷ ಶಾಲೆಯ ಮತ್ತು ಸಿ.ಕೆ.ಎಸ್.‌ಕೆ. ಯ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳು ಹಲವು ಆಟೋಟಗಳನ್ನು ಆಯೋಜಿಸಿ ಶಿಕ್ಷಕರಿಗೆ ಬಹುಮಾನಗಳನ್ನು ವಿತರಿಸಿ, ಎಲ್ಲಾ ಸಿಬ್ಬಂದಿಗಳಿಗೆ ನೆನಪಿನ ಕಾಣಿಕೆಗಳನ್ನು ನೀಡಿ, ಈ ಕಾರ್ಯಕ್ರಮದ ಪ್ರಯುಕ್ತ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು. ಮಕ್ಕಳ ಮತ್ತು ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಣೆಯು ಮುಕ್ತಾಯಗೊಂಡಿತು. ಶಿಕ್ಷಕಿ ಅರ್ಚನಾ ಸ್ವಾಗತಿಸಿ, ಶಿಕ್ಷಕಿ ಸುಜಾತಾ ವಂದಿಸಿದರು. ಶಿಕ್ಷಕಿ ಜೆನ್ವಿರಾ ವಾಸ್‌ ಕಾರ್ಯಕ್ರಮ ನಿರೂಪಿಸಿದರು.

Latest 5

Related Posts