ವೇಣೂರು ಸೊಸೈಟಿ ಮಹಾಸಭೆ

ವೇಣೂರು ಸೊಸೈಟಿ ಮಹಾಸಭೆ
Facebook
Twitter
LinkedIn
WhatsApp

ಬೆಳ್ತಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ವೇಣೂರು ಇದರ 2024 -25ನೇ ಸಾಲಿನ ವಾರ್ಷಿಕ ಮಹಾಸಭೆಯು ವೇಣೂರು ಬಾಹುಬಲಿ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2024-25ನೇ ಸಾಲಿನಲ್ಲಿ ರೂಪಾಯಿ 380 ಕೋಟಿ ವ್ಯವಹಾರ ನಡೆಸಿ ರೂಪಾಯಿ 1,86,50,423.61 ಲಾಭ ಗಳಿಸಿ ಶೇಕಡ 20% ಡಿವಿಡೆಂಡ್ ಘೋಷಿಸಲಾಯಿತು.ಸಂಘದ ಉಪಾಧ್ಯಕ್ಷ ರತ್ನಾಕರ ಬಿ., ನಿರ್ದೇಶಕರಾದ ರಾಮದಾಸ್‌ ನಾಯಕ್, ಸಂದೀಪ್ ಹೆಗ್ಡೆ ಎಂ.ಆರ್., ಸಂತೋಷ, ನಾಗಪ್ಪ, ಆಶಾ, ರೋಹಿಣಿ, ಕೃಷ್ಣಪ್ಪ ಮೂಲ್ಯ, ಪ್ರಶಾಂತ್, ರಾಜು ನಾಯ್ಕ, ಪ್ರವೀಣ, ಜಿಲ್ಲಾ ಸಹಕಾರಿ ಬ್ಯಾಂಕ್‌ ಪ್ರತಿನಿಧಿ ಸಿರಾಜುದ್ದಿನ್, ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ ವರದಿ ವಾಚಿಸಿದರು.

Latest News

Related Posts