ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು
Facebook
Twitter
LinkedIn
WhatsApp

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಅರಸಮಜಲು ಎಂಬಲ್ಲಿ ಬಟ್ಟೆ ಒಗೆಯಲು ತೆರಳಿದ ಮನೆಯವರೊಂದಿಗೆ ನೇತ್ರಾವಾತಿ ನದಿ ತಟಕ್ಕೆ ಹೋದ ಬಾಲಕ ಮನೆಯವರ ಕಣ್ತಪ್ಪಿಸಿ, ಅನತಿ ದೂರದಲ್ಲಿ ನೀರಲ್ಲಿ ಇಳಿದು ಹುಡುಗಾಟ ಮಾಡಲು ಹೋಗಿ, ಆಯ ತಪ್ಪಿ ನದಿಗೆ ಬಿದ್ದು, ಪ್ರಾಣಕ್ಕೇ ಸಂಚಕಾರ ತಂದುಕೊಂಡ ಘಟನೆ ಮಾರ್ಚ್ 17ರ ಮಧ್ಯಾಹ್ನ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ದೇವಿಗುಡಿ ಶಾರದ ನಗರ ನಿವಾಸಿ ನಿಶಾಂತ್ (16) ಎಂದು ಗುರುತಿಸಲಾಗಿದೆ. ಸ್ಥಳೀಯ ಮುಂಡಾಜೆ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ಬರೆದು ಮುಗಿಸಿರುವ ವಿದ್ಯಾರ್ಥಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಮಹಜರು ಕಾರ್ಯ ನಡೆಸುತ್ತಿದ್ದಾರೆ.

Latest 5

Related Posts