ಪ.ಜಾತಿಗೆ ಕಾಲೋನಿ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನ ಮಂಜೂರು

ಪ.ಜಾತಿಗೆ  ಕಾಲೋನಿ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನ ಮಂಜೂರು
Facebook
Twitter
LinkedIn
WhatsApp

ಬೆಳ್ತಂಗಡಿ: 2025-26 ನೇ ಸಾಲಿನ ಕಾಲೋನಿ ಅಭಿವೃದ್ಧಿ/ಪ್ರಗತಿ ಕಾಲೋನಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿಗೆ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿಪಡಿಸಲು ಈ ಕೆಳಗಿನ ಕಾಮಗಾರಿಗಳಿಗೆ ರೂಪಾಯಿ 200 ಲಕ್ಷಗಳ ಅನುದಾನವನ್ನು ಮಂಜೂರು ಗೊಳಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮುಖಾಂತರ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಶೇಖರ್ ಕುಕ್ಕೆಡಿ ಮತ್ತು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್‌ರವರು ಸರಕಾರಕ್ಕೆ ಮನವಿಯನ್ನು ಮಾಡಿದ್ದರು. ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಸಮಾಜ ಕಲ್ಯಾಣ ಇಲಾಖೆಯ ಮೂಲಕ ರೂಪಾಯಿ 200 ಲಕ್ಷಗಳ ಕಾಮಗಾರಿಗಳಿಗೆ ಮಂಜೂರಾತಿ ನೀಡಿ ಸರಕಾರದ ಆದೇಶ ಮಾಡಿಸಲು ಸಫಲರಾಗಿದ್ದಾರೆ.ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಣಂದೂರು ಗ್ರಾಮದ ಮಾಮುರ್ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಿಕರಣಕ್ಕೆ ರೂಪಾಯಿ20 ಲಕ್ಷ,ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಕುಳ್ಳಂಜ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಿಕರಣ ರೂಪಾಯಿ 20 ಲಕ್ಷ,ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಶಕ್ತಿ ನಗರ ಎಎಸ್ ಎಂಕ್ಷಾಟ್ರಸ್ ಬಳಿಯಿಂದ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟೀಕರಣ ರೂಪಾಯಿ 10 ಲಕ್ಷ,ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳಿಯಂಗಡಿ ಮುಖ್ಯ ರಸ್ತೆಯಿಂದ ಪಾಣೂರು ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಿಕರಣಕ್ಕೆ ರೂಪಾಯಿ25 ಲಕ್ಷ,ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಣೂರು ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಕರಣಕ್ಕೆ ರೂಪಾಯಿ 25 ಲಕ್ಷ,ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಲಿಯೂರು ಬರ್ಕದ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಿಕರಣ ರೂಪಾಯಿ 25 ಲಕ್ಷ,ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬೇಡ್ಕರ್ ಭವನದ ಬಳಿ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಿಕರಣಕ್ಕೆ ರೂಪಾಯಿ 20 ಲಕ್ಷ, ಬೆಳ್ತಂಗಡಿ ತಾಲೂಕು ಪೆರಾಡಿ ಗ್ರಾಮದ ಕೊಂಡ್ರಂಜೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಕಾಂಕ್ರೀಟಿಕರಣಕ್ಕೆ ರೂಪಾಯಿ 25 ಲಕ್ಷ,ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ರನ್ನಾಡಿ ಪಲ್ಕೆಯಿಂದ ಹಚ್ಚೇವು ಪಲ್ಕೆ ರಸ್ತೆ ಕಾಂಕ್ರೀಟಿಕರಣಕ್ಕೆ ರೂಪಾಯಿ 20 ಲಕ್ಷ, ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ಮೂಡುಬೈಲು ಶಾಂತಿಚೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ ರೂಪಾಯಿ 10 ಲಕ್ಷ; ಒಟ್ಟು ಎರಡು ಕೋಟಿ ಅನುದಾನ ಮಂಜುರಾಗಿದ್ದು, ಈ ಅನುದಾನಕ್ಕೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಹಾದೇವಪ್ಪ ರವರಿಗೆ ಅಭಿವಂದನೆಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.

Latest News

Related Posts