ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್‌ನಲ್ಲಿ ಜಗದ್ಗುರು ಶ್ರೀ ಅತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ 66 ನೇ ವರ್ಷದ ಶ್ರೀ ರಾಮನಾಮ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಅಂಗವಾಗಿ ರಾಮ ನವಮಿಯ ಮಾರ್ಚ್ 27ರಂದು ಬೆಳಿಗ್ಗೆ ಶ್ರೀ ರಾಮತಾರಕ ಮಂತ್ರ ಯಜ್ಞ ಮಂಗಳಂ, ವಾಗ್ದೇವಿ ಯಜ್ಞ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ ನಡೆದು; ಮದ್ಯಾಹ್ನ ಕ್ಷೇತ್ರದ ದೇವರಿಗೆ ವಿಶೇಷ ಅಲಂಕಾರ
ಪೂಜೆ, ಮೂರ್ತಿ ಬಲಿ, ಪಾಲಕಿ ಬಲಿ, ಹಗಲು ಉತ್ಸವ ವಿಶೇಷ ಮಹಾ ಪೂಜೆ ನಡೆಯಿತು. ರಾತ್ರಿ ಭೂತ ಬಲಿ, ಶ್ರೀ ದೇವರ ಪಾಲಕಿ ಉತ್ಸವ, ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ಮಹಾಬ್ರಹ್ಮ ರಥೋತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮೀನು ಗಾರಿಕೆ ಹಾಗೂ ಬಂದರು ಸಚಿವ ಮಾಂಕಾಳ್ ಎಸ್. ವೈದ್ಯ ಸೇರಿದಂತೆ ಅನೇಕ ಗಣ್ಯರು, ಶ್ರೀ ಗುರುದೇವ ಮಠದ ಟ್ರಸ್ಟಿಗಳು, ಶ್ರೀ ರಾಮ ಕ್ಷೇತ್ರ ರಿಲಿಜಿಯಸ್ ಟ್ರಸ್ಟ್ ಟ್ರಸ್ಟಿಗಳು, ಶ್ರೀ ರಾಮ ಕ್ಷೇತ್ರ ಅಭಿವೃದ್ಧಿ ಸಮಿತಿ ಸದಸ್ಯರು, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಪದಾಧಿಕಾರಿಗಳು ಸದಸ್ಯರು, ಊರ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಿದರು.







