ಉಜಿರೆ ದೇಗುಲದಲ್ಲಿ ದೃಢಕಲಶ

ಉಜಿರೆ ದೇಗುಲದಲ್ಲಿ ದೃಢಕಲಶ
Facebook
Twitter
LinkedIn
WhatsApp

ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕಳೆದ ಮಾರ್ಚ್ 3ರಿಂದ 11ನೇ ತಾರೀಕಿನ ತನಕ ನಡೆದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ ಹಾಗೂ ನೂತನ ಬ್ರಹ್ಮರಥ-ಪುಷ್ಪರಥ ಸಮರ್ಪಣಾ ಸಮಾರಂಭದ ಬಳಿಕ ಮುಂದುವರಿದ ಧಾರ್ಮಿಕ ವಿಧಿಯಂತೆ ದೃಢ ಕಲಶಾಭಿಷೇಕ ಮಹೋತ್ಸವವು ಎಪ್ರಿಲ್ 24ರಂದು ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ಮತ್ತು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ಣಾಯರ ನೇತೃತ್ವದಲ್ಲಿ ಜರಗಿತು.ಬೆಳಿಗ್ಗೆ ವಾಸ್ತು ಹೋಮ, ವಾಸ್ತು ಬಲಿ, ಗಣಹೋಮ, ಶ್ರೀ ಜನಾರ್ದನ ಸ್ವಾಮಿ, ಮಂಜುಳೇಶ, ಮಹಾಗಣಪತಿ ಹಾಗೂ ಅಮ್ಮನವರಿಗೆ ಕಲಶಾಭಿಷೇಕ ನಡೆದು ಮದ್ಯಾಹ್ನ ಮಹಾಪೂಜೆ ನಡೆಯಿತು. ಅರ್ಚಕ ವೇದಮೂರ್ತಿ ರಾಮಚಂದ್ರ ಹೊಳ್ಳರಿಂದ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಪಲ್ಲಪೂಜೆ ನಡೆದು ಸಹಸ್ರಾರು ಭಕ್ತಾದಿಗಳು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು. ನೀಲೇಶ್ವರ ಆಲಂಬಾಡಿ ವಾಸುದೇವ ತಂತ್ರಿ, ದೇವಸ್ಥಾನದ ಪವಿತ್ರಪಾಣಿ ಶಿವರಾಮ ಪಡುವೆಟ್ಣಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ಮೋಹನ ಶೆಟ್ಟಿಗಾರ್, ಕೆ. ಮೋಹನ್ ಕುಮಾರ್, ಅರುಣಕುಮಾರ್, ರವೀಂದ್ರ ಶೆಟ್ಟಿ, ಭರತ್ ಕುಮಾರ್, ಡಾ. ಶ್ರೀಧರ ಭಟ್, ಪ್ರಭಾತ್ ಭಟ್, ಲಕ್ಷ್ಮಣ ಸಫಲ್ಯ, ರಾಘವೇಂದ್ರ ಬೈಪಾಡಿತ್ತಾಯ, ರಾಜಪ್ರಸಾದ್ ಪೋಳ್ನಾಯ, ಗಿರಿರಾಜ ಬಾರಿತ್ತಾಯ, ಜಯಾ ಅನಂತಕೃಷ್ಣ ಆರ್ಮುಡತ್ತಾಯ, ಪುಷ್ಪಾವತಿ ಆರ್. ಶೆಟ್ಟಿ, ನಿರಂಜನ ಶೆಟ್ಟಿ, ಶರತ್ ಕುಮಾರ್, ರಾಜೇಶ್ ಪೈ ಹಾಗೂ ಊರ ಪರಊರ ಭಕ್ತಾದಿಗಳು ಭಾಗವಹಿಸಿದ್ದರು. ಮುಂಜಾನೆ ಮಂಜುನಾಥ ಶೆಟ್ಟಿ ನಿಡಿಗಲ್ ಹಾಗೂ ಸೌಮ್ಯಾ ರಾವ್ ನೇತೃತ್ವದಲ್ಲಿ ವಾಸುದೇವ ರಾವ್ ಕಕ್ಕೇನೇಜಿ ಸಹಕಾರದಲ್ಲಿ ಕೊಲ್ಲಿ ಶ್ರೀ ದುರ್ಗಾದೇವಿ ಭಜನಾ ಮಂದಿರ, ಪುತ್ತೂರಿನ ಭಜನಾ ಮಂದಿರ ಹಾಗೂ ಹಳೇಕೋಟೆ ಶ್ರೀ ಸತ್ಯ ಸಾಯಿ ಭಜನಾ ಮಂದಿರದ ಸದಸ್ಯರಿಂದ ಭಜನಾ ಸೇವೆ ನಡೆಯಿತು. ಸಂಜೆ ಕೊಯ್ಯುರು ಶ್ರೀ ಪಂಚದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಸಂಘ ಮತ್ತು ಅತಿಥಿ ಕಲಾವಿದರ ಸಹಕಾರದೊಂದಿಗೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ರಾಮಕೃಷ್ಣ ಭಟ್ ಉಜಿರೆ ಸಂಯೋಜನೆಯಲ್ಲಿ “ಪಾರ್ಥಸಾರಥ್ಯ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.

Latest News

Related Posts