ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ಇದರ 15 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಿದ್ಧತಾ ಸಭೆಯು ಸಮಿತಿಯ ಅಧ್ಯಕ್ಷ ತರುಷ್ ಜೆ. ಹೇರಾಜೆ ಇವರ ಅಧ್ಯಕ್ಷತೆಯಲ್ಲಿ ಮದ್ದಡ್ಕ ಬಂಡಿಮಠ ಮೈದಾನದ ವೆಲ್ಕಂ ಯೂತ್ ಕ್ಲಬ್ ರಂಗ ಮಂದಿರದಲ್ಲಿ ಮೇ 31ರಂದು ಜರಗಿತು ಸಭೆಯಲ್ಲಿ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ನಡೆಯುವ ವೈದಿಕ ವಿಧಿ ವಿಧಾನಗಳ ಬಗ್ಗೆ, ತಾಲೂಕಿನ ಪ್ರೌಡ ಶಾಲೆ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟ, ಸಾರ್ವಜನಿಕ ಆಟೋಟ ಸ್ಪರ್ಧೆಗಳ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನೂಪ್ ಬಂಗೇರ, ನಿಕಟ ಪೂರ್ವ ಅಧ್ಯಕ್ಷರಾದ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಕಾರ್ಯಧ್ಯಕ್ಷರಾದ ದಾಮೋದರ್ ಕುಂದರ್ ಸಬರಬೈಲು, ಧನಲಕ್ಷಿ ಚoದ್ರಶೇಖರ್ ಕರಿಯಬೆ ಸೊಣoದೂರು, ಪ್ರಧಾನ ಸoಚಾಲಕ ಚಂದ್ರಶೇಖರ್ ಕೋಟ್ಯಾನ್ ಕರಿಯಬೆ ಸೊಣಂದೂರು, ದಿನೇಶ್ ಮೂಲ್ಯ ಕೊಂಡೆಮಾರು, ಉಪಾಧ್ಯಕ್ಷರಾದ ಗಾಯತ್ರಿ ಜೆ. ಬಂಗೇರ ಪ್ರಣಮ್ಯ ಕುವೆಟ್ಟು, ಸಂಘಟನಾ ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್ ಮಾಲಾಡಿ, ಸಾಂಸ್ಕ್ರತಿಕ ಕಾರ್ಯದರ್ಶಿ ಪ್ರೇಮ ಎಂ. ಬಂಗೇರ, ಸುಜಾತ ಚಂದ್ರಹಾಸ್ ಕೇದೆ, ವೈದಿಕ ಸಮಿತಿ ಸಂಚಾಲಕ ಅನಂತ ಎಸ್. ಇರ್ವತ್ರಾಯ ತಂಗೋಯಿ, ರಾಜು ಕುಮಾರ್ ಭಟ್ ಬರಮೇಲು, ಗಣೇಶೋತ್ಸವ ಕಾರ್ಯಕ್ರಮದ ಸಂಘಟಕರಾದ ಚoದ್ರಹಾಸ್ ಕೇದೆ, ಹಿರಿಯರಾದ ವೃಷಭ ಆರಿಗ ಪರಾರಿಗುತ್ತು, ಜಗದೀಶ್ ಬಂಗೇರ ಕುವೆಟ್ಟು, ರಾಮಚಂದ್ರ ಪೂಜಾರಿ ನ್ಯಾಯದಕಲ, ಕೃಷ್ಣಪ್ಪ ಪೂಜಾರಿ ಕಿನ್ನಿಗೋಳಿ; ಹಾಗೂ ಸಮಿತಿಯ ಸದಸ್ಯರಾದ ಉಮೇಶ್ ಮದ್ದಡ್ಕ, ಯೋಗಿಶ್ ನಾಯ್ಕ್ ಭದ್ರಕಜೆ, ದಿಶಾನ್ ಕರಿಯಬೆ, ದಿಶಾಲಿ ಕರಿಯಬೆ ಉಪಸ್ಥಿತರಿದ್ದರು. (✍️ ಮನು ಮದ್ದಡ್ಕ )






