ಬೆಳ್ತಂಗಡಿ: ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ತಾಲೂಕಿನ 250ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರಿಗೆ ಎಪ್ರಿಲ್ 14ರಂದು ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುವ ಮೂಲಕ ಬೆಳ್ತಂಗಡಿ ಉದಯನಗರ ಕ್ರೈಸ್ತ ಧರ್ಮಪ್ರಾಂತ್ಯ ಹಾಗೂ ಡಿ ಕೆ.ಡಿ.ಆರ್.ಎಸ್. ಸಂಸ್ಥೆಯವರು ತಾಲೂಕಿನ 1000 ಅರ್ಹ ಕುಟುಂಬಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಈ ಮಾನವಧರ್ಮ ಕಾರ್ಯದ ಚಾಲನಾ ಪ್ರಕ್ರಿಯೆಯಲ್ಲಿ ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು ಶೆಟ್ಟಿ, ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾl ವಿದ್ಯಾವತಿ, ತಾಲೂಕು ಆರೋಗ್ಯ ಶಿಕಷಣಾಧಿಕಾರಿ ಸಿಸ್ಟರ್ ಅಮ್ಮಿ, ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖೆ ಹರಿಣಿ, ಹಿರಿಯ ಆರೋಗ್ಯ ಸಹಾಯಕ ಗಿರೀಶ್, ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತ್ಯದ ಪ್ರೊಕ್ಯೂರೇಟರ್ ವಂದನೀಯ ಅಬ್ರಹಾಂ ಪಟ್ಟೇರಿ, ಡಿ.ಕೆ.ಡಿ.ಆರ್.ಎಸ್.ನ ಬಿನೋಯ್ ಎ. ಜೆ., ಧರ್ಮಪ್ರಾಂತ್ಯದ ಗುರುಗಳಾದ ವಂದನೀಯ ಕೆ. ಜೆ. ಟೋಮಿ, ವಂದನೀಯ ಥೋಮಸ್ ಪುದಿಯಾನ್ ಮತ್ತಿತರರು ಹಾಜರಿದ್ದರು.








