ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಬಡ ಅಸಹಾಯಕರಿಗೆ ಕಿಟ್ ವಿತರಣೆ.

ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಬಡ ಅಸಹಾಯಕರಿಗೆ ಕಿಟ್ ವಿತರಣೆ.
Facebook
Twitter
LinkedIn
WhatsApp

ಇಂದು ಬೆಳಿಗ್ಗೆ ಬೆಳ್ತಂಗಡಿ ರೋಟರಿ ಕ್ಲಬ್ ಲಾಯಿಲ ಗ್ರಾಮದ 20 ಬಡ ಕುಟುಂಬಗಳಿಗೆ ತಿಂಗಳ ಅವಧಿಗೆ ಬೇಕಾದ ಆಹಾರ ಪದಾರ್ಥಗಳ ಕಿಟ್ಗಳನ್ನು ಹಸ್ತಾಂತರ ಮಾಡಿದರು. ಲಾಯಿಲ ಗ್ರಾಮದ ಅರ್ಹ ಫಲಾನುಭವಿಗಳನ್ನು ಪಂಚಾಯತ್ ಸದಸ್ಯರು ಗುರುತಿಸಿ ಸಹಕರಿಸಿದರು. ರೋಟರಿ ಅಧ್ಯಕ್ಷ ರೋ ಜಯರಾಮ್, ನಿಯೋಜಿತ ಅಧ್ಯಕ್ಷ ರೋ ದನಂಜಯ ರಾವ್, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ರಾವ್, ಉಪಾಧ್ಯಕ್ಷ ಶ್ರಿ ಗಿರೀಶ್ ಡೋಂಗ್ರೆ, ತಾಲೂಕು ಪಂಚಾಯತ್ ಪಂಚಾಯತ್ ಸದಸ್ಯ ಶ್ರೀ ಸುಧಾಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ವೆಂಕಟರಮಣ ಭಟ್, ರೋ ಶ್ರೀಕಾಂತ್ ಕಾಮತ್,ರೋ ಡಾ ಶಶಿಕಾಂತ ಡೋಂಗ್ರೆ, ರೋ ಯೋಗೀಶ್ ಭಿಡೆ, ರೋ ವೈಕುಂಠ ಪ್ರಭು, ರೋ ದಯಾನಂದ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಡಾ ಭೀಮರಾವ್ ಅಂಬೇಡ್ಕರ್ ರವರ  ಜಯಂತಿ ಆಚರಣೆ ಅಂಗವಾಗಿ ಆಯೋಜಿಸಿದ್ದ ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ರೋ ಧನಂಜಯ ರಾವ್ ರವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಶ್ರೀ ಗಿರೀಶ್ ಡೋಂಗ್ರೆ ಯವರು ಸ್ವಾಗತಿಸಿದರು. ಶ್ರೀ ಸುಧಾಕರ್ ವಂದಿಸಿದರು.

Latest News

Related Posts