ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಪ್ರಥಮ ಹಂತದ ಲಾಕ್ಡೌನ್ ಅವಧಿಯಲ್ಲಿ ಹಲವು ಸೇವಾ ಕಾರ್ಯಕ್ರಮಗಳು ಜರಗಿದವು. ತಾಲೂಕಿನ ವಿವಿದೆಡೆ 5 ಕೊರೋನಾ ಜಾಗೃತಿ ನಾಮಫಲಕ, ವಿವಿದೆಡೆ ಸುಮಾರು 2240 ಮಾಸ್ಕ್ ವಿತರಣೆ, ವಿವಿಧ ಸಂಘ ಸಂಸ್ಥೆಗಳ ಮುಖೇನ ಸುಮಾರು 8200 ಕರಪತ್ರಗಳ ಒದಗಣೆ, ತಾಲೂಕಿನ ಅರ್ಹ 43 ಆಯ್ದ ಫಲಾನುಭವಿ ಕುಟುಂಬಗಳಿಗೆ ತಲಾ ರೂ. 940 ವೆಚ್ಚದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಈಗಾಗಲೆ ನಡೆದಿದೆ. ಕ್ಲಬ್ಬಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಫಲಾನುಭವಿಗಳ ಮನೆಗೆ ತೆರಳಿ ಕಿಟ್ ನೀಡಿರುತ್ತಾರೆ.…………………………………………………………………………………………………………………………
ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಅತೀ ಅಗತ್ಯವಾಗಿ ಬೇಕಾಗಿದ್ದ ಸುಮಾರು ರೂ. 75000 ಮೌಲ್ಯದ ಆರೋಗ್ಯ ಸಿಬ್ಬಂದಿಗಳಿಗೆ, ವೈದ್ಯರಿಗೆ ರಕ್ಷಣಾತ್ಮಕ ಉಪಕರಣ(ಪಿಪಿಇ ಕಿಟ್) ಅನ್ನು ತಾಲೂಕಿನ ಶಾಸಕರಾದ ಹರೀಶ್ ಪೂಂಜಾರ ಮುಖಾಂತರ ಬೆಳ್ತಂಗಡಿ ಕ್ಲಬ್ಬಿನ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ| ಕಲಾಮಧು, ಆಡಳಿತ ವೈದ್ಯಾಧಿಕಾರಿ ಡಾ| ವಿದ್ಯಾವತಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ಲಯನ್ ರಾಜು ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ, ಅಶ್ರಫ್ ಆಲಿ, ಅನಂತಕೃಷ್ಣ, ಮಂಜುನಾಥ್ ಜಿ., ರವೀಂದ್ರ ಶೆಟ್ಟಿ, ಪ್ರಸಾದ್ ಶೆಟ್ಟಿ, ಸುಭಾಷಿಣಿ, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.








