ಸೌತಡ್ಕ ದೇವಳ-ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೊಕ್ಕಡ ಕಂದಾಯ ನಿರೀಕ್ಷಕರು

ಸೌತಡ್ಕ ದೇವಳ-ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೊಕ್ಕಡ ಕಂದಾಯ ನಿರೀಕ್ಷಕರು
Facebook
Twitter
LinkedIn
WhatsApp

ಕೊಕ್ಕಡ: ಕೊಕ್ಕಡದ ಶ್ರೀ ಸೌತಡ್ಕ ಶ್ರೀ ಮಹಾಗಣಪತಿ ದೇವಳದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೊಕ್ಕಡ ಹೋಬಳಿಯ ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿಯವರು ಬುಧವಾರದಂದು ತಮ್ಮ ಕರ್ತವ್ಯಕ್ಕೆ ಹಾಜರಾದರು. ಕೊಕ್ಕಡ ನಾಡಕಛೇರಿ ವ್ಯಾಪ್ತಿಯ ಕಂದಾಯ ನಿರೀಕ್ಷಕರಾಗಿ ಇತ್ತೀಚೆಗಷ್ಟೆ ಕರ್ತವ್ಯಕ್ಕೆ ನಿಯುಕ್ತರಾಗಿದ್ದರು. ಸೌತಡ್ಕ ದೇವಳದಲ್ಲಿ ಈ ವರೆಗೆ ಕರ್ತವ್ಯದಲ್ಲಿದ್ದ ಹರಿಶ್ಚಂದ್ರ ಅವರು ಮಂಗಳವಾರದಂದು ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಬುಧವಾರದಂದು ಇವರು ಕೂಡಲೆ ಈ ಕರ್ತವ್ಯಕ್ಕೆ ನಿಯುಕ್ತಿಗೊಂಡಿರುತ್ತಾರೆ. ಕಛೇರಿಯ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ ನೂತನ ಅಧಿಕಾರಿ ಮುಂದಿನ ಕಾರ್ಯಗಳ ಕುರಿತು ದೇವಳದ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದರು.

Latest News

Related Posts