ಜನತೆಗೆ ರಕ್ಷಣೆ ನೀಡುವ ಪೊಲೀಸರಿಗೆಯೇ ರಕ್ಷಣೆ ಇಲ್ಲ : ವಿದ್ಯಾವಂತ ನಾಗರೀಕರೇ ಈ ರೀತಿ ಮಾಡಿದರೆ….
ಮಂಗಳೂರು : ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದೇಶಾದಾದ್ಯಂತ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ನಾಗರೀಕರಿಗೆ ಸೂಕ್ತ ರೀತಿಯ ರಕ್ಷಣೆ ನೀಡುತ್ತಿರುವ ಜೊತೆಗೆ ಹಗಲು ರಾತ್ರಿ ಕರ್ತವ್ಯ ನಿರ್ವಾಹಿಸುವ ಮೂಲಕ ಲಾಕ್ಡೌನ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿರುವ ಪೊಲೀಸರಿಗೆ ಇಂತಹ ವಿದ್ಯಾವಂತ ನಾಗರೀಕರೇ ಈ ರೀತಿ ಅವಮಾನ ಮಾಡಿದರೆ…..
ಬರೀ ಇಂಗ್ಲೀಷ್ ಮಾತನಾಡುವ ಈ ಹಿರಿಯ ನಾಗರೀಕರಿಗೆ ಲಾಕ್ಡೌನ್ ಎಂದರೆ ಏನೆಂದು ಗೊತ್ತಿಲ್ಲ. ಲಾಕ್ಡೌನ್ ಜಾರಿಯಾಗಿರುವುದು ಗೊತ್ತಿಲ್ಲ. ಎಲ್ಲ ಬಿಡಿ, ಕಾರಿನ ದಾಖಲೆ ಪತ್ರಗಳನ್ನು ಕೇಳಿದರೆ ಕೊಡುವುದಿಲ್ಲ ಎಂಬ ರೋಷದ ಉತ್ತರ.
ಹಿರಿಯ ನಾಗರೀಕರ ವರ್ತನೆ ನೋಡಿದರೆ ಬಿಪಿ, ಶುಗರ್ ಇರುವ ಹಾಗೆ ಕಾಣುತ್ತದೆ. ಅದೇನೆ ಇದ್ದರೂ ಅ ಹಿರಿಯ ನಾಗರೀಕರು ಎಲ್ಲಿಯಾದರೂ ಈ ಪೊಲೀಸರ ಜೊತೆ ಸ್ವಲ್ಪ ಸಮಾಧಾನದಿಂದ ನಡೆದುಕೊಳ್ಳುತ್ತಿದ್ದರೆ… ಈ ರೀತಿಯ ಸನ್ನಿವೇಶ ಸೃಷ್ಠಿಯಾಗುತ್ತಿರಲಿಲ್ಲವೋ ಎಂದು ನನಗೆ ಅನಿಸುತ್ತಿದೆ.
ಈ ಘಟನೆ ನಡೆದಿದ್ದು, ಇಂದು (16/04/2020) ಸಂಜೆ ನಗರದ ಲಾಲ್ ಭಾಗ್ ಸಮೀಪದ ಪಬ್ಬಸ್ ಮುಂಭಾಗ. ಅದೂ ಜಡ್ಜ್ ಮನೆಯ ಎದುರು. ಪೊಲೀಸರ ಕರ್ತವ್ಯಕ್ಕೆ ಅಡ್ದಿಪಡಿಸಿದ ಈ ಹಿರಿಯ ನಾಗರೀಕರಿಗೆ FIR ಹಾಕದೆ ಎನ್ ಸಿ ಹಾಕಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಎನ್ ಸಿ ಹಾಕಲು ಹಿರಿಯ ಪೊಲೀಸ್ ಅಧಿಕಾರಿಗಳೇ ಒತ್ತಡ ಹಾಕಿದ್ದಾರೆ. ಈ ರೀತಿ ನಮ್ಮನ್ನು ಸೂ.. ಮಗನೆ ಎಂದು ಬೈದರೂ… FIR ಹಾಕದೆ ಎನ್ ಸಿ ಹಾಕಿ ಕಳುಹಿಸಲು ಹಿರಿಯ ಅಧಿಕಾರಿಗಳು ಒತ್ತಡ ಹಾಕುವುದಾದರೆ ನಾಗರೀಕರ ಒಳಿತಿಗಾಗಿ ಹಗಲು ರಾತ್ರಿ ಕರ್ತವ್ಯ ನಿರ್ವಾಹಿಸುವ ನಮಗೆ ಯಾವೂದೇ ಬೆಲೆ ಇಲ್ಲವೇ ಎಂದು ಅಲ್ಲಿ ಅ ಸಂದರ್ಭದಲ್ಲಿ ಕರ್ತವ್ಯ ನಿರ್ವಾಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳು ತಮ್ಮ ದುಖವನ್ನು ತೊಡಿಕೊಳ್ಳುವುದು ಕಂಡು ಬಂದಿದೆ.
ಒಟ್ಟಿನಲ್ಲಿ ಜನತೆಗೆ ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲವೇ ಎಂಬ ಮಾತು…..
ಈ ದುರಂಹಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಿದರೆ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸಿದಂತಾಗುತ್ತದೆ.
ದೇವಿಪ್ರಸಾದ್, ಸಂಪಾದಕ,
ಜೈಕನ್ನಡಮ್ಮ ವಾರಪತ್ರಿಕೆ, ಬೆಳ್ತಂಗಡಿ.







