ದೇಶದಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ನಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮನೆಮಾಡಿರುವ ಈ ಸಂಗ್ದಿದ್ಧ ಪರಿಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಂದ ವಿಮುಖರಾಗದಂತೆ ಮತ್ತು ಅವರ ಕಲಿಯುವಿಕೆಯನ್ನು ನಿರಂತರವಾಗಿಡುವ ಪ್ರಯತ್ನದ ಸಲುವಾಗಿ ಕಳೆದ ಒಂದು ತಿಂಗಳಿಂದ ಉಜಿರೆ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜು ಅನ್-ಲೈನ್ ತರಗತಿಗಳನ್ನು ಸತತವಾಗಿ ಮುನ್ನಡೆಸುತ್ತಿದೆ.
ಪ್ರತಿ ದಿನ ಬೆಳಗ್ಗೆ ಮೂರು ತಾಸು ಸಮಯ ಝೂಮ್ ಅಪ್, ಟೀಂ ಲಿಂಕ್ ಅಥವಾ ಗೂಗಲ್ ಮೀಟ್ ಆಪ್ ಮೂಲಕ ಎಲ್ಲಾ ತರಗತಿಗಳಿಗೆ ಅನ್ ಲೈನ್ ಪಾಠ ನಡೆಸಲ್ಪಡುತ್ತದೆ. ಮಧ್ಯಾಹ್ನ ಘಂಟೆ ಎರಡರಿಂದ ಮೂರರ ತನಕ ವಿದ್ಯಾರ್ಥಿಗಳು ಅಧ್ಯಾಪಕರ ಜೊತೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿ ಮಾರ್ಗದರ್ಶನ ಪಡೆಯಬಹುದು. ಗೂಗಲ್ ಕ್ಲಾಸ್ ರೂಮ್ ಎಂಬ ವ್ಯವಸ್ಥೆಯ ಮುಖಾಂತರ ನೊಟ್ಸ್, ಧ್ವನಿಮುದ್ರಿತ ವಿವರಣೆ, ಕ್ವಿಜ್, ಅಸೈನ್ಮ್ಂಟ್ ಪ್ರಶ್ನೋತ್ತರಗಳು, ಯೂ-ಟ್ಯೂಬ್ ಲಿಂಕ್ಸ್, ನೇಮಕಾತಿ ತರಬೇತಿ ಟೆಸ್ಟ್, ಇತ್ಯಾದಿಗಳನ್ನು ಸತತವಾಗಿ ರವಾನಿಸುತ್ತಿದೆ. ಇನ್ ಟರ್ನಶಿಪ್ ಹಾಗೂ ಪ್ರಾಜೆಕ್ಟ ರಿಪೋರ್ಟ್ ಗಳನ್ನು ಇಮೈಲ್ ಮೂಲಕ ಸ್ವೀಕರಿಸಿ ತಿದ್ದಿ – ಸರಿಪಡಿಸಿ ಕೊಡಲಾಗುತ್ತಿದೆ.
ಈ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗಬಹುದಾದ ಆತಂಕ ದೂರಮಾಡಿ, ಆತ್ಮವಿಶ್ವಾಸ, ಭರವಸೆಗಳನ್ನು ಮೂಡಿಸುವ ಸಲುವಾಗಿ ಮೆಂಟರಿಂಗ್ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲ್ಪಡುತ್ತಾ, ಕಾಲೇಜಿನ ಅಧ್ಯಾಪಕರು ವಿದ್ಯಾರ್ಥಿಗಳನ್ನು ವಾರಕ್ಕೊಮ್ಮೆ ಫೋನ್ ಮುಖಾಂತರ ಸಂಪರ್ಕಿಸಿ ಸಲಹೆ-ಸೂಚನೆ ನೀಡುತ್ತಿರುವರು.
ಈ ಸಂದರ್ಭದಲ್ಲಿ, ವಿ.ಟಿ.ಯು ವಿಶ್ವವಿದ್ಯಾನಿಲಯವೂ ಇ-ಶಿಕ್ಷಣ ಮುಖಾಂತರ ಅನೇಕ ವಿಷಯಗಳಲ್ಲಿ ವಿಡಿಯೋ ತರಗತಿಗಳನ್ನು ನಡೆಸುತ್ತಿರುವುದಲ್ಲದೆ, ಎಮ್-ಲೈಬ್ರರಿ ಅಪ್ ಮೂಲಕ ಅನ್ ಲೈನ್ ಲೈಬ್ರರಿಯನ್ನೂ ಅದ್ಯಯನಕ್ಕಾಗಿ ಮುಕ್ತವಾಗಿರಿಸಿರುತ್ತದೆ. ಎಪ್ರಿಲ್ ೧೨ ರಿಂದ, ಎ.ಐ.ಸಿ.ಟಿ,ಇ ಯು ತರಬೇತಿ ಕಂಪೆನಿಗಳ ಸಹಬಾಗಿತ್ವದಲ್ಲಿ ಹೊಸದಾಗಿ ಂ.I.ಅ.ಖಿ.ಇ ಇಐIS (ಇ.ಎಲ್.ಎಸ್) ಎಂಬ ವೆಬ್ ಪೋರ್ಟಲ್ ಬಿಡುಗಡೆ ಮಾಡಿದ್ದು, ಅನೇಕ ಕೋರ್ಸ್ ಗಳನ್ನು ಉಚಿತವಾಗಿ ಓದಗಿಸುತ್ತಿದ್ದು, ಎಸ್.ಡಿ.ಎಮ್. ಐ. ಟಿ ಕಾಲೇಜು ಈ ಎಲ್ಲಾ ಮಾಹಿತಿಯನ್ನು ವಿದ್ಯಾರ್ಥಿವೃಂದಕ್ಕೆ ಸಮಯಾನುಸಾರ ನೀಡುತಲಿದೆ.
ಕೆಲವಾರು ತಾಂತ್ರಿಕ ಅಡಚಣೆಗಳು ಮತ್ತು ಇತಿ-ಮಿತಿಗಳಿದ್ದರೂ, ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ವಿದ್ಯಾರ್ಥಿಗಳು ಮೇಲಿನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಹಾಜರಾತಿ ಉತ್ತಮವಾಗಿದೆ. ಈ ಎಲ್ಲಾ ಪ್ರಯತ್ನಗಳನ್ನು ಪೋಷಕರ ಗಮನಕ್ಕೂ ತರಲಾಗಿದ್ದು, ಮನೆಯಲ್ಲಿ ವಿದ್ಯಾರ್ಥಿಗಳ ಅಭ್ಯಾಸದೆಡೆಗೆ ಗಮನ ನೀಡಿ ಸದಾ ಪ್ರೊತ್ಸಾಹಿಸುವಂತೆ ಕೋರಲಾಗಿದೆ ಎಂದು ಪ್ರಾಂಶುಪಾಲರಾದ ಪ್ರೊ. ಅಶೋಕ್ ಕುಮಾರ್ ತಿಳಿಸಿರುತ್ತಾರೆ.








