ಬ್ರೇಕಿಂಗ್ ನ್ಯೂಸ್

ಬ್ರೇಕಿಂಗ್ ನ್ಯೂಸ್
Facebook
Twitter
LinkedIn
WhatsApp

ಕಳ್ಳಭಟ್ಟಿ ಸಾರಾಯಿ ತಯಾರಿಕಾ ದಾಳಿ-ಆರೋಪಿ ಬಂಧನ

ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದಂಡ ಸಂಹಿತೆ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದು, ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಇರಿಸಲಾಗಿದ್ದು,ಮಾಹಿತಿ ಮೇರೆಗೆ ದಿನಾಂಕ 17-04-2020 ರಂದು ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ನೆತ್ತರ್ ಪಲ್ಕೆಮನೆ, ಎಂಬಲ್ಲಿ ವಾಸವಾಗಿರುವ ಪೀಟರ್ ಕುವೆಲ್ಲೊ ಎಂಬವರ ಮಗ ಸುಮಾರು 66 ವರ್ಷ ಪ್ರಾಯದ ಎಲಿಯಸ್ ಕುವೆಲ್ಲೋ ಎಂಬಾತನು ತನ್ನ ಮನೆಯಲ್ಲಿ ಬೆಲ್ಲ ಹಾಗೂ ಗೇರುಹಣ್ಣಿನ ವಾಶ್ ಬಳಸಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಬಳಸಿದ್ದ ಎಲ್ಲಾ ಸಲಕರಣೆಗಳೊಂದಿಗೆ 09 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ 50 ಲೀಟರ್ ವಾಶ್ ವಶಪಡಿಸಿಕೊಂಡಿದ್ದು ,ಆರೋಪಿತನನ್ನು ಬಂಧಿಸಿ ಬೆಳ್ತಂಗಡಿ ಅಬಕಾರಿ ಪೊಲೀಸರು ಪ್ರಕರಣವನ್ನು ದಾಖಲಿಸಿರುತ್ತಾರೆ.

ಸದ್ರಿ ಪ್ರಕರಣವನ್ನು ಬೆಳ್ತಂಗಡಿ ವಲಯದ ಅಬಕಾರಿ ನೀರಿಕ್ಷಕರಾದ ಶ್ರೀಮತಿ ಸೌಮ್ಯಾಲತಾ. ಎನ್ . ಸಂತೋಷ್ ಕುಮಾರ್ ಇವರು ಮೊಕದ್ದಮೆ ದಾಖಲು ಮಾಡಿರುತ್ತಾರೆ. ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶ್ರೀಮತಿ ಶೈಲಜಾ.ಎ. ಕೋಟೆ ರವರ ನಿರ್ದೇಶನ ಮೇರೆಗೆ ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಶ್ರೀಮತಿ ಗೀತಾ.ಪಿ ರವರ ಮಾರ್ಗದರ್ಶನದೊಂದಿಗೆ ಬೆಳ್ತಂಗಡಿ ವಲಯ ಸಿಬ್ಬಂಧಿಗಳಾದ ಶ್ರೀ ಸಯ್ಯದ್ ಶಬೀರ್, ಶ್ರೀ ಭೋಜ.ಕೆ, ಶ್ರೀ ಅಬ್ದುಲ್ ಹಮೀದ್.ಕೆ, ಶ್ರೀ ಶಿವಶಂಕ್ರಪ್ಪ, ಶ್ರೀ ರವಿಚಂದ್ರ ಬೂದಿಹಾಳ ಹಾಗೂ ವಾಹನ ಚಾಲಕರಾದ ಶ್ರೀ ನವೀನ್ ಕುಮಾರ್.ಪಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು..

Latest News

Related Posts