ಮಡಂತ್ಯಾರು ಕಾಲೇಜು ಉಪನ್ಯಾಸಕ ಅವಿನ್ ಆಕಾಶ್ ಫ್ರಾಂಕೊ ವಿಧಿವಶ

ಮಡಂತ್ಯಾರು ಕಾಲೇಜು ಉಪನ್ಯಾಸಕ ಅವಿನ್ ಆಕಾಶ್ ಫ್ರಾಂಕೊ ವಿಧಿವಶ
Facebook
Twitter
LinkedIn
WhatsApp

ಬೆಳ್ತಂಗಡಿಯ ಸೋಜಾ ಇಲೆಕ್ಟ್ರಾನಿಕ್ಸಿನ‌ ಮಾಲಕ ಅಲ್ಫೋನ್ಸ್ ಫ್ರಾಂಕೋರ ಪುತ್ರ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಅವಿನ್ ಆಕಾಶ್ ಫ್ರಾಂಕೋ ಎಪ್ರಿಲ್ 18ರ ಶನಿವಾರ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ‌ ವಿಧಿವಶರಾದರು. ಅವರಿಗೆ 25 ವರ್ಷ ವಯಸ್ಸಾಗಿತ್ತು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದ ಅವಿನ್ ಆಕಾಶ್ ಫ್ರಾಂಕೋ, ಸ್ನೇಹ ಜೀವಿಯಾಗಿದ್ದರು. ತಂದೆ ಅಲ್ಫೋನ್ಸ್ ಫ್ರಾಂಕೋರಂತೆಯೇ ಸಮಾಜಮುಖಿ ಚಿಂತಕರಾಗಿದ್ದ ಅವಿನ್ ಬಾಲ್ಯದಿಂದಲೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಎದೆನೋವು ಬಂದು ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿರುತ್ತಾರೆ. ಅವಿನ್ ರವರ ಅಕಾಲಿಕ ನಿಧನಕ್ಕೆ ಮಡಂತ್ಯಾರು ಕಾಲೇಜಿನ ಆಡಳಿತ ಮಂಡಳಿ, ಪ್ರಿನ್ಸಿಪಾಲ್ ಹಾಗೂ ಉಪನ್ಯಾಸಕ ವೃಂದ ಮತ್ತು ಅಪಾರ ವಿದ್ಯಾರ್ಥಿಬಳಗ ಕಂಬನಿ ಮಿಡಿದಿದೆ.

Latest News

Related Posts