ಯುವತಿ‌ ಮಂಡಲದಿಂದ ಮಾಸ್ಕ್ ಕೊಡುಗೆ

ಯುವತಿ‌ ಮಂಡಲದಿಂದ ಮಾಸ್ಕ್ ಕೊಡುಗೆ
Facebook
Twitter
LinkedIn
WhatsApp

ಶ್ರೀ ಕ್ಷೇತ್ರ ಧರ್ಮಸ್ಥಳದ ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಕಳೆದ 15 ದಿನಗಳಿಂದ ಮಾಸ್ಕ್ ಹೊಲಿಯುತಿದ್ದು, ದೇವಸ್ಥಾನ, ಅನ್ನಪೂರ್ಣ ಛತ್ರ,ಹಾಗೂ ಕ್ಷೇತ್ರದ ವಿವಿಧ ವಿಭಾಗದ ಸಿಬ್ಬಂದಿಯವರಿಗೆ, ಊರವರಿಗೆ ವಿತರಿಸಿದರು. ಸುಮಾರು 500 ಮಾಸ್ಕ್ ಗಳನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ಮನವಿಯ ಮೇರೆಗೆ ಬೆಳ್ತಂಗಡಿ ಮಿನಿ ವಿಧಾನ ಸೌದದಲ್ಲಿರುವ ತಹಸೀಲ್ದಾರ್ ರವರ ಕಚೇರಿಯ covid-19(ವಾರ್ ರೂಮ್ ) ತುರ್ತು ಸೇವಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಂಡಲದ ಪದಾಧಿಕಾರಿಗಳು ಹಸ್ತಾಂತರಿಸಿದರು.
ಮಾಸ್ಕಿಗೆ ಇನ್ನೂ ಹೆಚ್ಚಿನ ಬೇಡಿಕೆ ಇದ್ದು, ಯುವತಿ ಮಂಡಲದ ಸ್ಥಾಪಕಾಧ್ಯಕ್ಷರಾದ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಯುವತಿ ಮಂಡಲದ ಸದಸ್ಯರು ಮಾಸ್ಕ್ ತಯಾರಿಕ ಕಾರ್ಯದಲ್ಲಿ ನಿರತರಾಗಿದ್ದಾರೆ .

Latest News

Related Posts