ಮೇಷ: ಹಣಕಾಸಿನ ಖರ್ಚು ಅಧಿಕ, ಕಾರ್ಯಹಾನಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಶಿವ ಪ್ರಾರ್ಥನೆಯಿಂದ ಶುಭ.ಶುಭ ಸಂಖ್ಯೆ-9.ವೃಷಭ: ಉತ್ತಮ ಆರೋಗ್ಯ, ಅಧಿಕ ಅವಕಾಶಗಳಿಂದ ಸಂತೃಪ್ತಿ, ಮಕ್ಕಳಿಂದ ಅನುಕೂಲ, ಹಿತಶತ್ರುಗಳಿಂದ ಕಾರ್ಯಹಾನಿ ಜಾಗ್ರತೆ ಅವಶ್ಯ. ದೇವರ ಪ್ರಾರ್ಥನೆಯಿಂದ ಶುಭ. ಶುಭ ಸಂಖ್ಯೆ- 3.ಮಿಥುನ: ವೈರಿಗಳಿಂದ ಆಪತ್ತು, ದೇಹಾಯಾಸ, ಮನೋಚಿಂತೆ, ವಾರಾಂತ್ಯದಲ್ಲಿ ಶುಭ. ದುರ್ಗೆಯ ಆರಾಧನೆ ಮಾಡಿ.ಶುಭ ಸಂಖ್ಯೆ- 11.ಕರ್ಕಾಟಕ: ಉಸಿರಾಟದ ತೊಂದರೆಯಿಂದ ಆರೋಗ್ಯದಲ್ಲಿ ಏರಪೇರು, ವಾಗ್ವಾದದಿಂದ ಮನಸ್ಸಿಗೆ ಆತಂಕ, ಆರ್ಥಿಕ ಅಡಚಣೆ ಇರದು, ಗಣಪತಿಯ ಪ್ರಾರ್ಥನೆ ಅಗತ್ಯ. ಶುಭ ಸಂಖ್ಯೆ-8.ಸಿಂಹ;ಶತ್ರುಗಳಿಂದ ತೊಂದರೆ, ವಾಹನ ಚಲಾಯಿಸುವಾಗ ಎಚ್ಚರದಿಂದಿರಿ, ನೆಮ್ಮದಿಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಶುಭ ಸಂಖ್ಯೆ- 4.ಕನ್ಯಾ: ವ್ಯವಹಾರದಲ್ಲಿ ಸೋಲು, ಮಕ್ಕಳಿಂದ ಅನುಕೂಲ, ಆರ್ಥಿಕ ಸ್ಥಿತಿ ಉತ್ತಮವಾಗಿರದು. ಕಠಿಣ ಪರಿಶ್ರಮ ಅಗತ್ಯ. ಶುಭ ಸಂಖ್ಯೆ-6.ತುಲಾ:ಬಂಧುಗಳಿಂದ ಮನಸ್ಸಿಗೆ ಆತಂಕ, ಆರ್ಥಿಕ ಸ್ಥಿತಿ ಸುಗಮವಾಗಿರುವುದು. ನಾಗನಿಗೆ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ-5.ವೃಶ್ಚಿಕ:ಮಿತ್ರರಲ್ಲಿ ಕಲಹ, ಮೇಲಾಧಿಕಾರಿಗಳಿಂದ ತೊಂದರೆ, ಆರ್ಥಿಕ ಸ್ಥಿತಿ ಸುಧಾರಣೆಯಾದೀತು. ಶನಿದೇವರ ಜಪ ಅಗತ್ಯ ಮಾಡಿ. ಶುಭ ಸಂಖ್ಯೆ-2.ಧನು: ಪ್ರಯಾಣದಲ್ಲಿ ಎಚ್ಚರವಹಿಸಿ, ಹಣಕಾಸಿನ ತೊಂದರೆ ಇರದು, ಮನೆಯಾಕೆಯೊಂದಿಗೆ ವಿರಸ ಸಂಭವ, ಆದಿತ್ಯ ಹೃದಯ ಪಾರಾಯಣದಿಂದ ಶುಭ, ಶುಭ ಸಂಖ್ಯೆ-9.ಮಕರ:ಕಾರ್ಯಹಾನಿಯಿಂದ ಚಿಂತೆ, ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ, ಮಕ್ಕಳಿಂದ ಸಹಾಯ, ರಾಹು ಜಪ ಮಾಡಿ. ಶುಭ ಸಂಖ್ಯೆ-4.ಕುಂಭ:ಮಾನಸಿಕ ಸ್ಥಿತಿ ಚೆನ್ನಾಗಿ ಇರದು, ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರವಿರಲಿ, ಮನೆಯಾಕೆಯಿಂದ ಕಿರಿಕಿರಿ ಸಂಭವ, ದುರ್ಗೆಯ ಆರಾಧನೆ ಮಾಡಿ, ಶುಭಸಂಖ್ಯೆ-9.ಮೀನ: ಸರ್ವಕಾರ್ಯ ಜಯ, ಗೌರವ ಪ್ರಾಪ್ತಿ, ಸಾಂಪತ್ತಿಕ ಸ್ಥಿತಿ ಉತ್ತಮ, ವಿರೋಧಿಗಳ ಬಗ್ಗೆ ಎಚ್ಚರವಿರಿ, ವಿಷ್ಣು ಆರಾಧನೆಯಿಂದ ಶುಭ. ಶುಭ ಸಂಖ್ಯೆ-6.