ವೈಯಕ್ತಿಕ ಅಂತರ ಕಾಪಾಡದ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದ ಕಾರ್ಯಕ್ರಮ

ವೈಯಕ್ತಿಕ ಅಂತರ ಕಾಪಾಡದ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದ ಕಾರ್ಯಕ್ರಮ
Facebook
Twitter
LinkedIn
WhatsApp

ಕರಾವಳಿ ಕೇಸರಿ ಯೂತ್ ಕ್ಲಬ್ ಬೆದ್ರ ಮತ್ತು ಕರಾವಳಿ ಕೇಸರಿ ಮಹಿಳಾ ಘಟಕ ಧರೆಗುಡ್ಡೆ ವತಿಯಿಂದ
ದರೆಗುಡ್ಡೆಯ ಕರಾವಳಿ ಕೇಸರಿ ಆಫೀಸ್ ನಲ್ಲಿ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರಾದ ಸುಜಾತಾ ಮತ್ತು ಬೇಬಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೈಯಕ್ತಿಕ ಅಂತರ ಕಾಪಾಡದೇ ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದು ಯಾಕೆ ಎಂಬುದಕ್ಕೆ ಶಾಸಕ ಉಮಾನಾಥ ಕೋಟ್ಯಾನರೇ ಉತ್ತರಿಸಬೇಕು. ಆಶಾ ಕಾರ್ಯಕರ್ತೆಯರಿಗೆ ದಿನ ಬಳಕೆ ಸಾಮಗ್ರಿಯ ಕಿಟ್ ಮತ್ತು ಗೌರವಧನ ನೀಡಲಾಯಿತು, ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ, ಕರಾವಳಿ ಕೇಸರಿ ಯುತ್ ಕ್ಲಬ್ ನ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಕೆಲ್ಲಪುತ್ತಿಗೆ, ಸ್ಥಾಪಕಾಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ, ಅಧ್ಯಕ್ಷರಾದ ಎ.ಜೆ ಜಯಶಂಕರ್, ಸಂಚಾಲಕರಾದ ಪ್ರಸಾದ್ ಬಿ ಪೂಜಾರಿ, ಉಪಾಧ್ಯಕ್ಷರಾದ ಅಶೋಕ್ ಸುವರ್ಣ, ಸದಾನಂದ ಶೆಟ್ಟಿ, ಅನಿಲ್ ತಿಮ್ಮೊಟ್ಟು,ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್, ಪಂಚಾಯತ್ ಸದಸ್ಯೆ ನಳಿನಿ ಹರೀಶ್, ಚಿತ್ತರಂಜನ್ ಕೋಟ್ಯಾನ್, ರಾಮ್ ಕುಮಾರ್ ಮಾರ್ನಾಡ್ ಶ್ರೇಯಸ್ ಕೋಟ್ಯಾನ್, ವಿನೋದರ ಪೂಜಾರಿ, ಆಶಿತ್ ಕೆಲ್ಲಪುತ್ತಿಗೆ,ಧರ್ಮವೀರ, ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ಜೆ ಸಾಲ್ಯಾನ್ ರಮ್ಯಾ ಎಸ್. ಶೆಟ್ಟಿ, ರೇಶ್ಮಾ ನಾಯಕ್, ಮತ್ತಿತರರು ಉಪಸ್ಥಿತರಿದ್ದರು

Latest News

Related Posts