
ಪ್ರತೀ ಸೋಮವಾರ ನಡೆಯುವ ಬೆಳ್ತಂಗಡಿಯ ವಾರದ ಸಂತೆ ಮಾರುಕಟ್ಟೆಯನ್ನು ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಸ್ಥಳಾಂತರಿಸಲು ಎಪ್ರಿಲ್ 19ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಕ್ರಮಕೈಗೊಳ್ಳಲಾಗಿತ್ತು. ಎಪ್ರಿಲ್ 20ರ ಸೋಮವಾರ ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಭೇಟಿನೀಡಿದ ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಪಿ. ಬೆಳಾಲು ಸ್ಧಳ ಪರಿಶೀಲನೆ ಮಾಡಿ ಬೇಕಾದ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಲು ಕಾರ್ಯದರ್ಶಿ ರವೀಂದ್ರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ನ್ಯಾಯವಾದಿ ಪಿ.ಕೇಶವ ಬೆಳಾಲುರವರು ವ್ಯಾಪಾರಿಗಳಿಗೆ ವೈಯಕ್ತಿಕ ಅಂತರ ಹಾಗೂ ಶುಚಿತ್ವದ ಬಗ್ಗೆ ಮಾರ್ಗದರ್ಶನ ನೀಡಿದರು. ಎಲ್ಲಾ ರೀತಿಯ ಸಹಕಾರ ಎ.ಪಿ.ಎಂ.ಸಿ. ವತಿಯಿಂದ ನೀಡುವುದಾಗಿ ಹೇಳಿದರು. ಮುಂಜಾಗ್ರತಾ ಕ್ರಮಗಳಲ್ಲಿ ಯಾವುದೇ ರೀತಿಯ ಉದಾಸಿನತೆ ತೊರ ಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.








