
ವೇಣೂರು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಪ.ಜಾತಿ ಹಾಗೂ ಪ.ಪ೦ಗಡ ಸೇರಿದಂತೆ ಅರ್ಹ ಬಡ ಕುಟುಂಬಗಳಿಗೆ ವೇಣೂರು ಅರಣ್ಯ ಇಲಾಖೆಯ ವತಿಯಿಂದ ಭಾರತ್ ಗ್ಯಾಸ್ ಕ೦ಪೆನಿ ಮೂಲಕ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಿದ್ದು, ಈಗ ಈ ಫಲಾನುಭವಿಗಳು ಅಡುಗೆ ಅನಿಲ ಸಿಲಿಂಡರ್ ಪಡೆಯಲು ಹಣ ಪಾವತಿಸ ಬೇಕಾಗಿದೆ.
ಆದರೆ ಕೊರೊನಾ ಹಾವಳಿಯಿ೦ದ ಜನ ಆಥಿ೯ಕ ಸ೦ಕಷ್ಟದಲ್ಲಿದ್ದು ಲಾಕ್ ಡೌನ್ ವೇಳೆ ಉಚಿತವಾಗಿ ಗ್ಯಾಸ್ ಸೇವೆ ಒದಗಿಸಬೇಕೆ೦ದು ವೇಣೂರು ಪ೦ಚಾಯತ್ ನೀರು ಮತ್ತು ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್ ನೇತೃತ್ವದ ಪ೦ಚಾಯತ್ ಸದಸ್ಯರನ್ನೊಳಗೊ೦ಡ ನಿಯೋಗ ವೇಣೂರು ವಲಯ ಅರಣ್ಯ ಅಧಿಕಾರಿ ಪ್ರಶಾಂತ್ ಕುಮಾರ್ ಪೈ ಅವರಿಗೆ ಮನವಿ ಸಲ್ಲಿಸಿದರು.ಗ್ಯಾಸ್ ಕ೦ಪೆನಿ ಹಾಗೂ ಇಲಾಖೆಯೊ೦ದಿಗೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಅರಣ್ಯಾಧಿಕಾರಿಗಳು ನೀಡಿದರು.ನಿಯೋಗದಲ್ಲಿ ವೇಣೂರು ಗ್ರಾಮ ಪ೦ಚಾಯತ್ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಸತೀಶ್ ಹೆಗ್ಡೆ, ಗ್ರಾಮ ಪ೦ಚಾಯತ್ ಸದಸ್ಯರಾದ ವಿಕ್ಟರ್ ಮಿನೇಜಸ್ ಹಾಗೂ ರೊನಾಲ್ಡ್ ಡಿಸೋಜ ಇದ್ದರು.








