ಕೊಕ್ಕಡ, ಎ. 20: ಕೊರೋನಾ ಸಂಬಂದಿ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭ ಕೊಕ್ಕಡ ಗ್ರಾಮದಲ್ಲಿರುವ ಸುಮಾರು 80 ಕ್ಕಿಂತಲೂ ಅಧಿಕ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡಕುಟುಂಬಗಳ ಕಷ್ಟವನ್ನು ಮನಗಂಡು ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ. ನೇತೃತ್ವದಲ್ಲಿ ಮತ್ತು ಸ್ವಾಭಿಮಾನಿ ಗೆಳೆಯರ ಬಳಗದಿಂದ ಕಿಟ್ ವಿತರಣೆ ಮಾಡುವ ಕಾರ್ಯ ಸೋಮವಾರದಂದು ಉಪ್ಪಾರು ಸುಬ್ರಹ್ಮಣ್ಯ ಉಪ್ಪಾರ್ಣ ಇವರ ಸಹಯೋಗದಲ್ಲಿ ನಡೆಯಿತು.
ಜೈ ಕನ್ನಡಮ್ಮ ಪತ್ರಿಕೆಗೆ ಮಾಹಿತಿ ನೀಡಿದ ಕೊಕ್ಕಡ ತಾ.ಪಂ.ಲಕ್ಷ್ಮೀನಾರಾಯಣ ಟಿ.ಎಂ, ಬಡತನದಲ್ಲಿರುವ ದಿನಗೂಲಿ ಕಾರ್ಮಿಕರು ಅತ್ತ ಕಡೆ ಕೆಲಸವೂ ಇಲ್ಲದೇ ಇತ್ತ ಅವಶ್ಯಕ ಸಾಮಾಗ್ರಿ ಕೊಳ್ಳಲೂ ಹಣವೂ ಇಲ್ಲದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಜನಪ್ರತಿನಿಧಿಗಳಾಗಿ ನವೀಗ ಮಾನವೀಯತೆಯ ನೆರವು ನೀಡುವ ಕೆಲಸಕ್ಕೆ ಮುಂದಾಗಿದ್ದು ನಮ್ಮದೇ ಗೆಳೆಯರ ಬಳಗವನ್ನು ಸೇರಿಸಿಕೊಂಡು ಬಡಜನರ ಸಂಕಷ್ಟಕ್ಕೆ ನರವಾಗುತ್ತಿದ್ದೇವೆ ಎಂದು ನುಡಿದರು.
ಪ್ರತೀ ಕಿಟ್ ನಲ್ಲಿ ಅಕ್ಕಿ ಮತ್ತು ದಿನಬಳಕೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಹೊಂದಿಸಿ ಕಿಟ್ ವಿತರಣೆ ನಡೆಯಿತು. ಕೊಕ್ಕಡ ಗ್ರಾಮದ ಹಲವಾರು ದಾನಿಗಳು ಮತ್ತು ಸ್ವಾಭಿಮಾನಿ ಗೆಳೆಯರ ಬಳಗದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದಯನೀಶ್ , ಕಾರ್ಯದರ್ಶಿ ಲಕ್ಷ್ಮೀನಾರಾಯಣ ಟಿ.ಎಂ, ಪ್ರವೀಣ್ ಮಾಯಿಲಕೋಟೆ, ಚಂದ್ರಶೇಖರ್ ಕಡಿರ, ಸಿರಿಲ್ ಡಿ ಸೋಜ , ಗ್ರಾ.ಪಂ. ಸದಸ್ಯ ಇಬ್ರಾಹಿಂ ಇ.ಕೆ. , ಮುಂಡೂರು ಲಕ್ಷ್ಮೀನಾರಾಯಣ ಶಬರಾಯ , ಮತ್ತು ಎಲ್ಲ ಸದಸ್ಯರುಗಳು, ದಾನಿಗಳು ಉಪಸ್ಥಿತರಿದ್ದರು.








