ದಿವ್ಯಾಂಗರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ ಯಂಗ್ ಚಾಲೆಂಜರ್ಸ್ ಮುಂಡಾಜೆ

ದಿವ್ಯಾಂಗರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ ಯಂಗ್ ಚಾಲೆಂಜರ್ಸ್ ಮುಂಡಾಜೆ
Facebook
Twitter
LinkedIn
WhatsApp

ಮುಂಡಾಜೆ:ಬೆಳ್ತಂಗಡಿ ತಾ.ನ ಮುಂಡಾಜೆ ಗ್ರಾ.ಪಂ.ವ್ಯಾಪ್ತಿಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಊರ ದಾನಿಗಳ ಸಹಕಾರದಲ್ಲಿ,
ಲಾಕ್ ಡೌನ್ ನಿಂದ ಸಂಕಷ್ಟ ಕ್ಕೊಳಗಾಗಿರುವ ಮುಂಡಾಜೆ ಗ್ರಾಮದ 40ಜನ ದಿವ್ಯಾಂಗರ ಕುಟುಂಬಗಳಿಗೆ ಸೇರಿದಂತೆ ಒಟ್ಟು 50 ಕುಟುಂಬಗಳಿಗೆ ಆಹಾರ ಕಿಟ್ಟನ್ನು ಎಪ್ರಿಲ್ 24ರಂದು ಕ್ಲಬ್ಬಿನ ಸಭಾ ಭವನದಲ್ಲಿ ವಿತರಿಸ ಲಾಯಿತು.ಕ್ರೀಡಾ ಸಂಘದ ಅಧ್ಯಕ್ಷರೂ ಆಗಿರುವ ತಾ.‌ ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ತಾ.ಔಷಧ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಸುಜಿತ್ ಭಿಡೆ , ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್,ಧರ್ಮಸ್ಥಳ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್, ಮಾಜಿ ಯೋಧ ಕೆ. ಆರ್. ಹರೀಶ್ ಕೊಡಗು, ಮುಂಡಾಜೆ ರೋಟರಿ ಸಮುದಾಯ ದಳದ ಅಧ್ಯಕ್ಷ ಪ್ರಹ್ಲಾದ ಫಡ್ಕೆ, ಐರ್ಲೆಂಡ್ ನಲ್ಲಿ ಆರೋಗ್ಯ ಕಾರ್ಯಕರ್ತರಾಗಿರುವ ಟ್ರಿನಿಟಿ ಫಿಲಿಪ್, ಮುಂಡಾಜೆ ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ಗೌಡ ದೇವಸ್ಯ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಸತ್ಯನಾರಾಯಣ ಹೊಳ್ಳ‌ ಕಾನರ್ಪ ಮತ್ತಿತರರು ಉಪಸ್ಥಿತರಿದ್ದರು.ವೈಯಕ್ತಿಕ ಅಂತರವನ್ನು ಕಾಯ್ದುಕೊಂಡು ಕಾರ್ಯಕ್ರಮ ನಡೆಯಿತು.ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಕಾರ್ಯಕ್ರಮ ನಿರೂಪಿಸಿದರು.
ಪದಾಧಿಕಾರಿಗಳಾದ ಕೃಷ್ಣಪ್ಪ, ಪುಷ್ಪರಾಜ್, ಸಾಂತಪ್ಪ, ಶಿಶಿಧರ ಠೋಸರ್, ಪ್ರವೀಣ್ ಕುಮಾರ್, ಗ್ರಾ.ಪಂ ವಿ.‌ಆರ್.‌ಡಬ್ಲ್ಯು ಮಜೀದ್, ಅಶೋಕ್‌ಶೆಟ್ಟಿ‌ ಮೊದಲಾದವರು ಸಹಕರಿಸಿದರು.

Latest News

Related Posts