ಎಪ್ರಿಲ್ 29, ಅಂತರರಾಷ್ಟ್ರೀಯ ನೃತ್ಯದಿನ. ಈ ದಿನದಂದು ಬೆಳ್ತಂಗಡಿ ರೋಟರಿ ಕ್ಲಬ್ ಬೆಳ್ತಂಗಡಿಯ ಹತ್ತು ಧೀಮಂತ ಯಕ್ಷಗಾನ ಕಲಾವಿದರಿಗೆ ಗೌರವವನ್ನು ಸೂಚಿಸಿತು .ಈ ಹತ್ತು ಜನ ಕಲಾವಿದರುಗಳಿಗೆ ಗೌರವಗಳೊಂದಿಗೆ ಲಾಕ್ ಡೌನಿನ ಈ ಸಂಕಷ್ಟದ ದಿನಗಳಲ್ಲಿ ಅಗತ್ಯ ದಿನನಿತ್ಯ ಬಳಕೆಯ ರೂ ಹತ್ತು ಸಾವಿರ ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಉಜಿರೆ ಅಶೋಕ್ ಭಟ್, ರೋಟರಿ ಸದಸ್ಯರಾದ ಕೆ. ಪಿ. ಪ್ರಸಾದ್, ಪ್ರಕಾಶ್ ಪ್ರಭು, ಶ್ರೀಧರ್ ಕೆ.ವಿ, ಶಶಿಕಾಂತ್ ಡೋಂಗ್ರೆ, ಬಿ. ಕೆ ಧನಂಜಯ್ ರಾವ್, ರಾಜಶ್ರೀ, ಗಾಯತ್ರಿ ಶ್ರೀಧರ್ ಹಾಗೂ ವಿಷ್ಣುಮೂರ್ತಿ ಭಟ್ ಹಾಗೂ ಯಕ್ಷ ಭಾರತಿಯ ಪ್ರತಿನಿಧಿಯಾದ ಮಹೇಶ್ ರವರು ಭಾಗವಹಿಸಿದ್ದರು .ಆಹಾರದ ಕಿಟ್ ಗಳ ಪ್ರಾಯೋಜಕತ್ವವನ್ನು ಬೆಂಗಳೂರಿನ ಶ್ರೀಮತಿ ಮತ್ತು ಶ್ರೀ ಅನೀಶ್, ಕೆ.ಪಿ ಪ್ರಸಾದ್ ,ಬಿ.ಕೆ ಗೋಪಾಲ್ ರಾವ್ ಹಾಗೂ ಬಿ.ಕೆ ವಿಘ್ನೇಶ್ ಕುಮಾರ್ ಕಿಲ್ಲೂರುರವರು ನೀಡಿ ಸಹಕರಿಸುತ್ತಾರೆ.








