ಕೊಕ್ರಾಡಿ ಸ್ನೇಹಿತರಿಂದ ವಿನೂತನ‌ ಕಾರ್ಯಕ್ರಮ ಕಾರ್ಯಕ್ರಮದುದ್ದಕ್ಕೂ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಸ್ನೇಹಿತರು

ಕೊಕ್ರಾಡಿ ಸ್ನೇಹಿತರಿಂದ ವಿನೂತನ‌ ಕಾರ್ಯಕ್ರಮ ಕಾರ್ಯಕ್ರಮದುದ್ದಕ್ಕೂ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಸ್ನೇಹಿತರು
Facebook
Twitter
LinkedIn
WhatsApp

ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರದ ಆದೇಶದ ಪ್ರಕಾರ ಲಾಕ್ ಡೌನ್ ಕಾನೂನು ಇರುವುದರಿಂದ ಜನಸಾಮಾನ್ಯರಿಗೆ ಕೂಲಿ ಕೆಲಸವಿಲ್ಲದೆ ತಮ್ಮ ಹಸಿವು ನೀಗಿಸುವಲ್ಲಿ ತೊಡಕುಂಟಾದ ಕಾರಣ ಅಂತಹ ಕುಟುಂಬಗಳಿಗೆ ನೆರವಾಗಲು; ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ಸೂರ್ಯನಾರಾಯಣ ಡಿ.ಕೆ., ಸಂತೋಷ್ ಹೆಗ್ಡೆ, ದೀಪಕ್ ಶೆಟ್ಟಿ, ಹರೀಶ್ ಕುಮಾರ್ ಹಾಗೂ ಶಿವಪ್ರಕಾಶ್ ರವರು ಸ್ನೇಹಿತರ ತಂಡ ರಚಿಸಿ, ಮೊದಲಿಗೆ ತಾವೊಂದಷ್ಟು ಹಣ ಹಾಕಿ, ನಂತರ ಕೊಕ್ರಾಡಿ ಗ್ರಾಮದ ಹಾಗೂ ಪರ ಊರಿನ ಸಹೃದಯಿ ದಾನಿಗಳಿಂದ ಧನ ಸಂಗ್ರಹಿಸಿ; ಒಟ್ಟು1,00,000/- ರೂಪಾಯಿಗಳನ್ನು ತಲಾ ರೂಪಾಯಿ 400/- ರಂತೆ 250 ಕೂಪನ್ ರಚಿಸಿ ಗ್ರಾಮದ 250 ಅರ್ಹ ಬಡ ಕುಟುಂಬಿಕರ ಮನೆಗಳಿಗೆ ಹಂಚಿದರು.ಈ ಕೂಪನ್ ನಲ್ಲಿ ಸೂಚಿಸಿದ ಗ್ರಾಮದ ದಿನಸಿ ಅಂಗಡಿಗಳಲ್ಲಿ ರೂಪಾಯಿ 400/- ಮೌಲ್ಯದ ದಿನಸಿ ಸಾಮಗ್ರಿಗಳನ್ನು ಖರೀದಿಸಬಹುದಾಗಿದೆ.ಅಲ್ಲದೆ ನಾರಾವಿಯ ಒಂದು ಮೆಡಿಕಲ್ ಸ್ಟೋರ್ ನಲ್ಲಿ ಔಷಧಿ ಸಾಮಗ್ರಿಗಳನ್ನು ಖರೀದಿಸಲು ಅನುಕೂಲ ಮಾಡಿಕೊಡಲಾಗಿದೆ.
ಈ ಕೂಪನ್ ವಿತರಣೆಯನ್ನು ಕೊಕ್ರಾಡಿಯ ಕ್ಷೇಮ ಕ್ಲಿನಿಕ್ ವಠಾರದಲ್ಲಿ ಡಾ.ವಿಷ್ಣುಕುಮಾರ್ ಹೆಗ್ಡೆಯವರು ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಕ್ರಾಡಿ ಹೊಸಮನೆ ಗುತ್ತು ಪ್ರಕಾಶ್ ಜೈನ್, ಮಾನ್ಯೋಡಿ ಗುತ್ತು ರವಿ ಪೂಜಾರಿ, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಮಂಜಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಸ್ಟೀವನ್ ಪಿರೇರಾ,ನ್ಯಾಯವಾದಿ ನವೀನ್ ಶೆಟ್ಟಿ, ಉಮೇಶ್ ಹೆಗ್ಡೆ, ದಿನೇಶ್ ಪೂಜಾರಿ, ಶಶಿಧರ ಅಂಬಲ, ಸತೀಶ್ ಪೂಜಾರಿ ಜಂತಿಗೋಳಿ ಹಾಜರಿದ್ದರು.

Latest News

Related Posts