
ಬೆಳ್ತಂಗಡಿ:ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರದ ಕಿಟ್ ದೊರೆತರೂ, ದಿನನಿತ್ಯದ ಬಳಕೆಗೆ ತರಕಾರಿ ಸಮಸ್ಯೆ ಎದುರಿಸುತ್ತಿದ್ದು ಇದನ್ನು ಮನಗಂಡ ಲಾಯಿಲದ ದಿl ಶೀನ ಶೆಟ್ಟಿ ಇವರ ಮಕ್ಕಳು ತಮ್ಮ ತಂದೆಯ ಸ್ಮರಣಾರ್ಥ ಲಾಯಿಲ ಗ್ರಾಮದ 4ನೇ ವಾರ್ಡಿನ ಸುಮಾರು 350 ಕುಟುಂಬಗಳಿಗೆ ತರಕಾರಿ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಪುಷ್ಪರಾಜ್ ಶೆಟ್ಟಿ, ಲೋಕೋಪಯೋಗಿ ಇಲಾಖಾ ಗುತ್ತಿಗೆದಾರ
ವಿಶ್ವನಾಥ ಲಾಯಿಲ, ಅರವಿಂದ ಲಾಯಿಲ, ಉದಯ ಕುಮಾರ್ ಪುತ್ರಬೈಲು ಹಾಗೂ ದಿ.ಶೀನ ಶೆಟ್ಟಿಯವರ ಪುತ್ರರಾದ ಗಣೇಶ ಗ್ಯಾರೇಜ್ ಮಾಲಕ ರಾಜೇಶ್ ಶೆಟ್ಟಿ, ಲಾಯಿಲ ಗ್ರಾ ಪಂ ಸದಸ್ಯರೂ ಆಗಿರುವ ನ್ಯಾಯವಾದಿ ದಿನೇಶ್ ಶೆಟ್ಟಿ, ಕಕ್ಕಿಂಜೆ ಕಾರುಣ್ಯ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ,ಜಗದೀಶ್ ಶೆಟ್ಟಿ ಹಾಜರಿದ್ದರು. ಕಾರ್ಯಕ್ರಮ ಸಂಘಟಕರೊಂದಿಗೆ ಫಲಾನುಭವಿಗಳೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡಿದ್ದರು.








