ವಾರ ಭವಿಷ್ಯ- 04-05-2020 ರಿಂದ 10-05-2020 ರವರೆಗೆ:

ವಾರ ಭವಿಷ್ಯ: 13-04-2020 ರಿಂದ 19-04-2020 ರವರೆಗೆ
Facebook
Twitter
LinkedIn
WhatsApp

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.

ಮೇಷ:ಶತ್ರು ಕಾಟದಿಂದ ಮುಕ್ತರಾಗುವಿರಿ, ಉದ್ಯೋಗಿಗಳಿಗೆ ಕೆಲಸದ ಒತ್ತಡ ಅಧಿಕವಾಗಲಿದೆ. ಉತ್ಪತ್ತಿಗಿಂತ ಅಧಿಕ ವೆಚ್ಚ ಕಂಡುಬಂದೀತು. ಗಣಪತಿ ದೇವರಿಗೆ ಗರಿಕೆ ಅರ್ಪಿಸಿ.
ಶುಭ ಸಂಖ್ಯೆ-9.
ವೃಷಭ:ಒತ್ತಡ ಕಡಿಮೆಯಾಗಿ ಮಾನಸಿಕ ನೆಮ್ಮದಿ ಕಾಣುವಿರಿ, ಗೆಳೆಯರೊಂದಿಗೆ ಸೌಮ್ಯವಾಗಿ ವರ್ತಿಸಿ, ಮಕ್ಕಳಿಂದ ಸಹಕಾರ ದೊರೆಯುವುದು.
ಶುಭ ಸಂಖ್ಯೆ- 3.
ಮಿಥುನ: ಆರ್ಥಿಕ ಸ್ಥಿತಿ ಉತ್ತಮವಾದೀತು. ಪ್ರಾಕೃತಿಕ ತೊಂದರೆ ಸಂಭವಿಸಬಹುದು. ಮನೆಯಾಕೆಯ ಸಹಕಾರ ದೊರಕೀತು.
ಶುಭ ಸಂಖ್ಯೆ- 11.
ಕರ್ಕಾಟಕ:ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ, ಆತ್ಮಸ್ಥೈರ್ಯದಿಂದ ಕಾರ್ಯ ಸಾಧನೆಯಾದೀತು. ಆರೋಗ್ಯ ಉತ್ತಮ.
ಶುಭ ಸಂಖ್ಯೆ-7.
ಸಿಂಹ;ವೈಯುಕ್ತಿಕ ಕಷ್ಟಗಳಿಂದ ಕಂಗೆಡದಿರಿ, ಧೈರ್ಯಂ ಸರ್ವತ್ರ ಸಾಧನಂ ಅನ್ನುವಂತೆ ವರ್ತಿಸಿ, ಶುಭವಾರ್ತೆಯಿಂದ ಸಂತಸ.
ಶುಭ ಸಂಖ್ಯೆ- 4.
ಕನ್ಯಾ:ಆರೋಗ್ಯ ಚೆನ್ನಾಗಿರುವುದು. ಇಚ್ಚಿತ ಕಾರ್ಯಗಳು ಕೈಗೂಡುವುದು. ಮಕ್ಕಳಿಂದ ಕಿರಿಕಿರಿ ಸಂಭವ.
ಶುಭ ಸಂಖ್ಯೆ-6.
ತುಲಾ : ಆದಾಯಕ್ಕಿಂತ ಅಧಿಕ ವೆಚ್ಚದ ಕಾರಣದಿಂದ ಆತಂಕ. ದೇವರ ದರ್ಶನದಿಂದ ಮನಸ್ಸಿಗೆ ನೆಮ್ಮದಿ
ಶುಭ ಸಂಖ್ಯೆ-3.
ವೃಶ್ಚಿಕ:ಬಂಧು ಬಳಗದವರೊಂದಿಗೆ ಸಂಭ್ರಮದಲ್ಲಿ ಪಾಲ್ಗೊಳ್ಳುವಿರಿ, ಉದ್ಯೋಗದಲ್ಲಿ ವಿನಾ ಕಾರಣ ಕಿರಿಕಿರಿ ಸಂಭವ.
ಶುಭ ಸಂಖ್ಯೆ-5.
ಧನು: ನೆರೆಹೊರೆಯವರ ಕೃತ್ಯಗಳಿಂದ ಮನಸ್ಸಿಗೆ ಬೇಸರ, ಆರ್ಥಿಕ ಅಡಚಣೆ ನಿವಾರಣೆಯಾದೀತು.
ಶುಭ ಸಂಖ್ಯೆ-2.
ಮಕರ:ಶೀತ ಸಂಬಂದಿ ರೋಗಗಳಿಂದ ಕಿರಿಕಿರಿ, ಮಕ್ಕಳ ಕಾರ್ಯದಿಂದ ಮಾನಸಿಕ ಗೊಂದಲ, ಆದಿತ್ಯ ಹೃದಯ ಪಠಿಸಿ.
ಶುಭ ಸಂಖ್ಯೆ-9.
ಕುಂಭ:ಪ್ರಾಕೃತಿಕ ವಿಕೋಪದಿಂದ ನಷ್ಟ ಸಂಭವ, ಬಂಧುಗಳ ವಾರ್ತೆಯಿಂದ ಆತಂಕ, ಮೃತ್ಯುಂಜಯ ಜಪದಿಂದ ಅನುಕೂಲ.
ಶುಭಸಂಖ್ಯೆ-6.
ಮೀನ: ಬಹುದಿನಗಳಿಂದ ನಿರೀಕ್ಷಿತ ಕಾರ್ಯಸಾಧನೆಯಿಂದ ಸಂತೃಪ್ತಿ. ಬಂಧುಗಳ ಅಯಾಚಿತ ಸಹಾಯದಿಂದ ಉತ್ಸಾಹ ಹೆಚ್ಚೀತು. ಮಕ್ಕಳಿಂದ ಸಹಾಯ
ಶುಭ ಸಂಖ್ಯೆ-8.

Latest News

Related Posts