ಕೊರೋನಾ ಸೋಂಕಿನ ವಿರುದ್ಧ ಹೋರಾಟ ಲಾಕ್ ಡೌನ್ ಅಂತಿಮ ಹೋರಾಟವಲ್ಲ – ಆರಂಭ ಮಾತ್ರ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಆಂದೋಲನವಾಗಬೇಕು

ಕೊರೋನಾ ಸೋಂಕಿನ ಹರಡುವಿಕೆಯ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಲಾಕ್ ಡೌನಿಗೆ ಇದೀಗ 40ದಿನಗಳು ಕಳೆಯಿತು. ಇನ್ನು ಮುಂದೆ ಏನು ಎಂಬ ಕುತೂಹಲ ಪ್ರತಿಯೋರ್ವ ಭಾರತೀಯನಲ್ಲಿದೆ. 40ದಿನಗಳ ಸುದೀರ್ಘ ಲಾಕ್ ಡೌನ್ ಹೋರಾಟ ಮಹಾಮಾರಿ ಕೊರೋನಾ ಸೋಂಕನ್ನು ನಮ್ಮ ದೇಶದಿಂದ ಬಡಿದೋಡಿಸಬಹುದಾ…ನಾವಿನ್ನು ನೆಮ್ಮದಿಯಾಗಿ ಮೊದಲಿನಂತೆ ಓಡಾಡಿಕೊಂಡಿರಬಹುದಾ…ಮುಂತಾದ ಪ್ರಶ್ನೆಗಳು ಎಲ್ಲರ ಮನದಲ್ಲಿ ಹರಿದಾಡುತ್ತಿದೆ. ಇದಕ್ಕೆಲ್ಲಾ ಒಂದೇ ಉತ್ತರ ‘ ಕೊರೋನಾ ಸೋಂಕಿನ ವಿರುದ್ಧ ಲಾಕ್ ಡೌನ್ ಅಂತಿಮ ಹೋರಾಟವಲ್ಲ, ಇದು ಹೋರಾಟದ ಆರಂಭ […]
ಮಳೆಗಾಲಕ್ಕೂ ಮುನ್ನ ಪ್ರಕೃತಿಮಾತೆಯ ಟೆಸ್ಟ್ ಡೋಸ್ ಬೆಳ್ರಂಗಡಿ ತಾಲೂಕಿನ ವಿವಿಧೆಡೆ ಗಾಳಿ ಮಳೆ ಅಪಾರ ಹಾನಿ

ಬೆಳ್ತಂಗಡಿ ತಾಲೂಕಿನ ನಾಗರಿಕರಿಗೆ ಅದರಲ್ಲೂ ರೈತಾಪಿ ಕೃಷಿಕ ವರ್ಗಕ್ಕೆ ಕಳೆದ ವರ್ಷದ ಮಳೆಗಾಲದ ಪ್ರವಾಹದ ಕಹಿನೆನಪು ಮಾಸದಿರುವಾಗಲೇ ಮತ್ತೊಂದು ಮಳೆಗಾಲ ಅದೇನು ಅನಾಹುತ ಸೃಷ್ಟಿಸೀತು ಎಂಬ ಆತಂಕ ಮನೆ ಮಾಡುತ್ತಿದೆ. ಎಪ್ರಿಲ್ 30ರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ವಿವಿಧೆಡೆ ಅಡಿಕೆ ಮರ ಸಹಿತ ವಿದ್ಯುತ್ ಕಂಬಗಳು ಧರೆಗುರುಳಿ ಅಪಾರ ಹಾನಿ ಸಂಭವಿಸಿದೆ. ಇದು ಮುಂದೆ ಆಗಬಹುದಾದ ಪ್ರಾಕೃತಿಕ ವಿಕೋಪದ ಟೆಸ್ಟ್ ಡೋಸ್ ಆಗಿರಬಹುದು ಎಂದು ಬೆದರಿರುವ ಅನೇಕ ಕೃಷಿಕರು, ಮಳೆಯಿಂದಾಗಬಹುದಾದ ಸಂಭಾವ್ಯ ಅನಾಹುತದಿಂದ […]
ಕಲ್ಲಮುಂಡ್ಕೂರಿನಲ್ಲೊಬ್ಬ ದಾರಿ ತಪ್ಪಿದ ಮಾಲಕ ಹೊಟ್ಟೆಗೆ ಹಿಟ್ಡಿಲ್ಲದೇ ಊರೂರು ಸುತ್ತಿ ಕ್ವಾರಂಟೈನ್ ಸೇರಿದ ಕಾರ್ಮಿಕ
ಮೂಡುಬಿದಿರೆ: ತನ್ನದೇ ತೋಟದಲ್ಲಿ ಕೃಷಿ ಕೂಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬನನ್ನು, ಲಾಕ್ ಡೌನ್ ಆದೊಡನೆ ಬೀದಿ ಪಾಲು ಮಾಡುವ ಮಾಲಕನ ನಿರ್ಧಾರದಿಂದಾಗಿ ಇದೀಗ ಕೂಲಿ ಕಾರ್ಮಿಕ ಕ್ವಾರಂಟೈನ್ ಸೇರುವಂತಾದ ಘಟನೆ ಕಲ್ಲಮುಂಡ್ಕೂರಿನಿಂದ ವರದಿಯಾಗಿದೆ.ಬಿಹಾರಿ ಮೂಲದ ಕೂಲಿ ಕಾರ್ಮಿಕನೊಬ್ಬ ಕಳೆದ ಕೆಲವು ತಿಂಗಳುಗಳಿಂದ ಕಲ್ಲಮುಂಡ್ಕೂರು ಗ್ರಾಮದ ನಿವಾಸಿ ಕೃಷಿಕರೊಬ್ಬರ ಬಳಿ ತೋಟದ ಕೆಲಸ ಮಾಡಿಕೊಂಡಿದ್ದ. ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದಾಗಿನಿಂದ ತೋಟದ ಮಾಲಕ ಈ ಕೂಲಿಕಾರ್ಮಿಕನಿಗೆ ಮೂಲಸೌಲಭ್ಯ ಒದಗಿಸಲು ಹಿಂದೇಟು ಹಾಕಿದ್ದರೆಂದು ಸ್ವತಹ ಕೂಲಿ ಕಾರ್ಮಿಕ ದೂರಿದ್ದಾನೆಇದೇ […]
ಸಮಾಜ ಬಾಂಧವರ ನೆರವಿಗೆ ಧಾವಿಸಿದ ಭಂಡಾರಿ ಸಮಾಜ ಸೇವಾ ಸಂಘ ವೈಯಕ್ತಿಕ ಅಂತರಕ್ಕೆ ಮಾದರಿ ಆದರೆ ಕೆಲವರಲ್ಲಿ ಮಾಸ್ಕ್ ಮಾತ್ರ ಇಲ್ಲ

ಮೂಡುಬಿದಿರೆ: ದೇಶದಲ್ಲಿ ಪ್ರಥಮವಾಗಿ ಮಾರ್ಚ್ 22ರಂದು ಲಾಕ್ ಡೌನ್ ಘೋಷಣೆಯಾಗುವುದಕ್ಕೂ ಮೊದಲೇ ಸೆಲೂನುಗಳ ಬಾಗಿಲು ಮುಚ್ಚಿಸುವ ಆದೇಶವನ್ನು ಸರಕಾರ ಹೊರಡಿಸಿತ್ತು. ಬಹುತೇಕ ಕ್ಷೌರಿಕ ವೃತ್ತಿಯನ್ನೇ ಅವಲಂಬಿಸಿರುವ ಭಂಡಾರಿ ಸಮಾಜದ ಹಲವು ಕುಟುಂಬಗಳು ಇದರಿಂದಾಗಿ ಉಪವಾಸ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೂಡುಬಿದಿರೆ ಫಿರ್ಕಾದಲ್ಲಿ ಭಂಡಾರಿ ಸಮಾಜಕ್ಕೆ ಸೇರಿದ 200ಕ್ಕೂ ಹೆಚ್ಚು ಕುಟುಂಬಗಳಿದ್ದು ನಿತ್ಯ ದುಡಿದು ತಿನ್ನುವ ಕೈಗಳಿವು. ತನ್ನದೇ ಸಮಾಜಬಾಂಧವರು ಸರಕಾರದ ಲಾಕ್ ಡೌನ್ ಅದೇಶದಿಂದ ಸಂಕಷ್ಟಕ್ಕೊಳಗಾದಾಗ ನೆರವಿಗೆ ಧಾವಿಸಿರುವ ಇಲ್ಲಿನ ಭಂಡಾರಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು […]
ಖಾಸಗಿ ಬಸ್ ಸಿಬ್ಬಂದಿಗಳಿಗೆ ಎಂ.ಎಲ್.ಸಿ. ಹರೀಶ್ ಕುಮಾರರಿಂದ ಆಹಾರ ಕಿಟ್ ವಿತರಣೆ ,ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಶಿಸ್ತುಬದ್ಧ ಕಾರ್ಯಕ್ರಮ.

ಬೆಳ್ತಂಗಡಿ: ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಗೊಳಗಾಗಿದ್ದ ಬೆಳ್ತಂಗಡಿ ತಾಲೂಕಿನ ಖಾಸಗಿ ಬಸ್ ಸಿಬ್ಬಂದಿಗಳಿಗೆ ವಿಧಾನ ಪರಿಷತ್ ಶಾಸಕ , ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಆಹಾರ ಕಿಟ್ ಗಳನ್ನು ಬುಧವಾರ ಬೆಳ್ತಂಗಡಿಯಲ್ಲಿ ವಿತರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಾದ ಖಾಸಗಿ ಬಸ್ ಸಿಬ್ಬಂದಿಗಳು ಮಾತ್ರವಲ್ಲದೇ ಎಂ.ಎಲ್.ಸಿ. ಹರೀಶ್ ಕುಮಾರ್ ಜೊತೆಗಿದ್ದವರೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿ ಭಾಗವಹಿಸುವ ಮೂಲಕ ಇತರರಿಗೆ ಮಾದರಿಯಾದರು. ಕಳೆದ ಮಾರ್ಚ್ 22 ರಿಂದ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಖಾಸಗಿ […]
ಕನಿಷ್ಠ ಗೌರವಧನ ಪಡೆದು ನಮ್ಮೆಲ್ಲರ ಸೇವೆ ಮಾಡುವ ಆಶಾ ಕಾರ್ಯಕರ್ತೆ ಯರು ನಮ್ಮೆಲ್ಲರಿಂದ ಮುಂದಿದ್ದಾರೆ- ಡಾ. ಎಂ.ಎನ್.ಆರ್.

ಮೂಡುಬಿದಿರೆ : ಸಂಪೂರ್ಣ ಜಗತ್ತನ್ನು ಆವರಿಸಿರುವ ಕೊರೋನಾ ವೈರಸ್ ನಿಂದ ಜನ ಭೀತಿಯಿಂದಿದ್ದಾರೆ. ಆದರೆ ಕನಿಷ್ಠ ಗೌರವಧನ ಪಡೆಯುವ ಆಶಾ ಕಾರ್ಯಕರ್ತೆಯರು ಊರೆಲ್ಲಾ ಸುತ್ತಾಡಿ ಎಲ್ಲರ ಸೇವೆ ಮಾಡುತ್ತಿರುವುದರಿಂದ ನಮ್ಮೆಲ್ಲರಿಗಿಂತ ಮುಂದಿದ್ದಾರೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ನುಡಿದರು.ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆದ ಮೂಡುಬಿದಿರೆ ತಾಲೂಕಿನ ಆಶಾ […]
ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಯ್ದು ಸಂಘ ಸಂಸ್ಥೆಗಳಿಗೆ ಮಾಸ್ಕ್ ವಿತರಣೆ

ಬಳಂಜ:ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಬಳಂಜ,ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು ವತಿಯಿಂದ ಸಂಘ ಸಂಸ್ಥೆಗಳಿಗೆ ಮಾಸ್ಕ್ ವಿತರಣೆಯು ಎಪ್ರಿಲ್ 29 ರಂದು ಬಳಂಜದಲ್ಲಿ ನಡೆಯಿತು..ಕೊರೊನಾ ಹಿನ್ನೆಲೆಯಲ್ಲಿ ದೇಶ ಲಾಕ್ ಡೌನ್ ಆಗಿರುವುದರಿಂದ ಸರಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೊಂದಿಗೆ,ಮಾಸ್ಕ್ ಧರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಬಳಂಜ ಗ್ರಾಮ ಪಂಚಾಯತ್, ನಾಲ್ಕೂರು ಹಾಲು ಉತ್ಪಾದಕರ ಸಹಕಾರ ಸಂಘ, ರಾಮನಗರ, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಬಳಂಜ ಸಂಘಗಳಿಗೆ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು […]
ಬೆಳ್ತಂಗಡಿ ನಗರ ಪಂಚಾಯಿತಿ 5ನೇ ವಾರ್ಡ್ ನಲ್ಲಿ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ : ಮಹಾಮಾರಿ ಕೊರಾನಾ ವೈರಸ್‌ನಿಂದ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನಗರ ಪಂಚಾಯತಿಯ 5ನೇ ವಾರ್ಡ್ ನಲ್ಲಿ ತೀರಾ ಸಂಕಷ್ಟಕ್ಕೆ ಒಳಗಾಗಿರುವ ಸುಮಾರು 21 ಅರ್ಹ ಬಡ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಂಗಳವಾರ ನಡೆಯಿತು.ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆಯವರ ಸಹಕಾರದೊಂದಿಗೆ 5ನೇ ವಾರ್ಡ್ ನ ನಗರ ಪಂಚಾಯಿತಿ ಸದಸ್ಯ ಜನಾರ್ದನ ಕುಂಬಾರ ವೈಯಕ್ತಿಕ ಅಂತರ ಕಾಯ್ದುಕೊಂಡು ಕಿಟ್ ವಿತರಿಸಿದರು.
ಕೊರೋನಾ ವಾರಿಯರ್ಸ್ ಗಳಿಗೆ ಅವಮಾನ ಮಾಸ್ಕ್ ನ್ನು ಕೊರಳಿಗೆ ನೆಕ್ಲೆಸ್ ಆಗಿಸಿದ ತಾಲೂಕು ವೈದ್ಯಾಧಿಕಾರಿ ಹಾಗೂ ಎಂ.ಎಲ್.ಸಿ.

ಇವರು ತಾಲೂಕಿನ ವೈದ್ಯಾಧಿಕಾರಿಗಳು; ಡಾl ಕಲಾಮಧು ಶೆಟ್ಟಿ. ಎಪ್ರಿಲ್ 27ರಂದು ಬೆಳ್ತಂಗಡಿಯ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಕೊಡಮಾಡಿದ ಪ್ರಯಾಣಭತ್ತೆಯ ಮೊತ್ತವನ್ನು ಸ್ವೀಕರಿಸಿದರು. ಓರ್ವ ವೈದ್ಯನಾಗಿ, ಅದರಲ್ಲೂ ಸರಕಾರಿ ಆಸ್ಪತ್ರೆಯೊಂದರ ವೈದ್ಯ ಹುದ್ದೆಯ ಜೊತೆಗೆ ತಾಲೂಕು ವೈದ್ಯಾಧಿಕಾರಿಯಾಗಿ ರುವ ಈ ಕಲಾಮಧು ಶೆಟ್ಟರಿಗೆ ಮಾಸ್ಕ್ ಇರೋದು ಕುತ್ತಿಗೆಗೆ ನೆಕ್ಲೆಸ್ ನಂತೆ ಅಲಂಕಾರಕ್ಕೆ ಅಲ್ಲ; ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆಗಾಗಿ ಬಾಯಿ ಮತ್ತು ಮೂಗು ಮುಚ್ವಿಕೊಳ್ಳಲು […]
ಬಿಗ್ ಬ್ರೇಕಿಂಗ್ ನ್ಯೂಸ್ ಶಿರಾಡಿ ಕೊಡ್ಯಕಲ್ ತಿರುವಿನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

ಕೊಕ್ಕಡ : ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಕೊಡ್ಯಕಲ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿ ಆದ ಘಟನೆ ಇಂದು (28) ಬೆಳಿಗ್ಗೆ ನಡೆದಿದೆ.ಈ ಘಟನೆಯಲ್ಲಿ ಅದೃಷ್ಟವಶಾತ್ ಗ್ಯಾಸ್ ಸೋರಿಕೆಯಾಗದಿರುವುದರಿಂದ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಇದೇ ಕೊಡ್ಯಕಲ್ ತಿರುವಿನಲ್ಲಿ ನಿರಂತರ ಗ್ಯಾಸ್ ಟ್ಯಾಂಕರ್ ಗಳು ಪಲ್ಟಿಯಾಗುತ್ತಿದ್ದು ಈ ಬಗ್ಗೆ ಚಾಲಕರಿಗೆ ಮಾಹಿತಿ ಕೊಡುವ ಕೆಲಸವು ಎಂ.ಆರ್.ಪಿ.ಎಲ್. ನಿಂದ ಆಗುತ್ತಿಲ್ಲ ಎನ್ನುವ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.ಕ್ವಿಕ್ ರೆಸ್ಪಾನ್ಸ್ ವೆಹಿಕಲ್ ಅಸಮರ್ಪಕ […]