ಬೆಳ್ತಂಗಡಿ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ
ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿಕೊಂಡು ಕೊರೋನಾ ಸೋಂಕು ಹರಡುವಿಕೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ನಡೆದ ಸರಳ ಮಾದರಿ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ಬಿನವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು ಹಸ್ತಾಂತರಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯರಾಮ್, ಸದಸ್ಯರಾದ ಬಿ. ಕೆ. ಧನಂಜಯ ರಾವ್, ಕೆ. ವಿ. ಶ್ರೀಧರ್, ಯಶವಂತ ಪಟವರ್ದನ್, ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಪಿ. ಜಿ. ಸಂದೇಶ್ ಮತ್ತಿತರರು ಹಾಜರಿದ್ದರು. ಬೆಳ್ತಂಗಡಿ ತಾಲೂಕಿನಲ್ಲಿ ರೋಟರಿ ಕ್ಲಬ್ಬಿನವರು ಕೊರೋನಾ ಸೋಂಕು ಹರಡುವಿಕೆಯ […]
ರೋಟರಿ ಸಮುದಾಯ ದಳದಿಂದ ಚಿಕಿತ್ಸೆಗೆ ಆರ್ಥಿಕ ನೆರವು.
ಮಾಸ್ಕ್ ನಿಂದ ಮುಖ ಮುಚ್ಚದ ರೋಟರಿ ಸದಸ್ಯರು. ಬೆಳ್ತಂಗಡಿ ರೋಟರಿ ಕ್ಲಬ್ಬಿನವರು ಲಾಕ್ ಡೌನಿನ ಬಳಿಕ ತಮ್ಮ ಎಲ್ಲ ಸೇವಾಕಾರ್ಯಗಳಲ್ಲಿ ಕೊರೋನಾ ಸೋಂಕು ತಡೆಯಲು ವಹಿಸಬೇಕಾದ ಮುಂಜಾಗ್ರತೆಯ ಬಗ್ಗೆ ಸಂದೇಶ ನೀಡುತ್ತಿದ್ದು, ತಾಲೂಕಿನ ಇತರ ಸೇವಾಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ. ಆದರೆ ಮೇ 9ರಂದು ಚಾರ್ಮಾಡಿ ಗ್ರಾಮದ ಕಕ್ಕಿಂಜೆಯಲ್ಲಿ ರೋಟರಿ ಸಮುದಾಯ ದಳದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಪ್ರಕಾಶ್ ನಾರಾಯಣ್ ಹಾಗೂ ಸದಸ್ಯ ಕಜೆ ವೆಂಕಟೇಶ್ವರ ಭಟ್ ಮಾಸ್ಕನ್ನು ಕತ್ತಿಗೆ ಮಾಲಾಕಾರವಾಗಿ ಹಾಕಿಕೊಳ್ಳುವ ಮೂಲಕ ಫೊಟೋಗೆ […]
ಉತ್ತರಭಾರತ ನಿವಾಸಿಗಳಿದ್ದ ಎರಡು ಲಾರಿಗಳಿಗೆ ಗುಂಡ್ಯ ಚೆಕ್‍ಪೋಸ್ಟ್ ನಲ್ಲಿ ಪೊಲೀಸರ ತಡೆ, ಊರಿಗೆ ಕಳುಹಿಸಿಕೊಡುವಂತೆ ಪಟ್ಟು; ಎ.ಸಿ.ಯವರ ಮಾತುಕತೆ -ಮಂಗಳೂರಿಗೆ ಶಿಫ್ಟ್
ಮಂಗಳೂರಿನಿಂದ ಉತ್ತರಭಾರತ ಮೂಲದ 120 ಮಂದಿ ಕಾರ್ಮಿಕರನ್ನು ತುಂಬಿಕೊಂಡು ಬೆಂಗಳೂರು ಮಾರ್ಗವಾಗಿ ಉತ್ತರ ಭಾರತಕ್ಕೆ ಹೊರಟಿದ್ದ ಹರಿಯಾಣ ನೋಂದಾವಣೆಯ ಎರಡು ಲಾರಿಗಳಿಗೆ ಗುಂಡ್ಯ ಚೆಕ್‍ಪೋಸ್ಟ್ ನಲ್ಲಿ ಪೊಲೀಸರು ತಡೆಯೊಡ್ಡಿರುವ ಘಟನೆ ಮೇ 8ರಂದು ಮುಂಜಾನೆ ನಡೆದಿದೆ. ಈ ಮಧ್ಯೆ ಕಾರ್ಮಿಕರು ಊರಿಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದರಾದರೂ ಎ.ಸಿ.ಯವರ ಮನವೊಲಿಕೆ ಬಳಿಕ ಎಲ್ಲರನ್ನೂ ಮೂರು ಕೆಎಸ್‍ಆರ್‍ಟಿಸಿ ಬಸ್ಸಿನ ಮೂಲಕ ಮತ್ತೆ ಮಂಗಳೂರಿಗೆ ಕಳುಹಿಸಿಕೊಡಲಾಗಿದೆ. ಕಾರ್ಮಿಕರಿಗೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಯಿತು.ಸುಮಾರು 120 ಮಂದಿ […]
ಉಜಿರೆ ನೇಕಾರಪೇಟೆ ಪ್ರದೇಶದ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ.
ಮಾಸ್ಕ್ ಹಾಗೂ ವೈಯಕ್ತಿಕ ಅಂತರದ ಬಗ್ಗೆ ಎಚ್ಚರಿಕೆ ವಹಿಸಿದ ಕಾರ್ಯಕ್ರಮ. ಲಾಕ್ ಡೌನಿನಿಂದಾಗಿ ಸಂಕಷ್ಟಕ್ಕೆ ಒಳಗಾದ ಉಜಿರೆಯ ನೇಕಾರ ಪೇಟೆಯಲ್ಲಿನ ತೀರಾ ಬಡತನದಲ್ಲಿರುವ ಕುಟುಂಬಗಳಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್ ರವರು ನೀಡಿರುವ ಆಹಾರದ ಕಿಟ್ ಗಳನ್ನು ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಶೈಲೇಶ್ ಕುಮಾರ್ ಮತ್ತು ಯೂತ್ ಕಾಂಗ್ರೆಸ್ ನ ಅಧ್ಯಕ್ಷರಾದ ಅಭಿನಂದನ್ ಹರೀಶ್ ಕುಮಾರ್ ವಿತರಣೆ ಮಾಡಿದರು .ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಧರ್ […]
ಎಣ್ಣೆ ಮಿಲ್ಲಿನ ರಾಸಾಯನಿಕ ಮಿಶ್ರಿತ ತ್ಯಾಜ್ಯ ಕೆಂಪು ಕಲ್ಲಿನ ಕೋರೆ ಗುಂಡಿಗೆ .
ಮೂಡುಬಿದಿರೆ ಪರಿಸರದ ಸಾವಿರಾರು ಕುಟುಂಬಗಳು ಅಪಾಯದಲ್ಲಿ. ಮೂಡುಬಿದಿರೆ ಪರಿಸರದ ಬೆಳುವಾಯಿ, ಕೆಸರುಗದ್ದೆ, ಪಟ್ಲ, ಕೊಡ್ಯಡ್ಕ,ಗುಂಡ್ಯಡ್ಕ ಭಾಗದ ಕೃಷಿಕರೇ ಎಚ್ಚರಾ ಎಚ್ಚರಾ..!!ನಿಮ್ಮ ಕೃಷಿ ಭೂಮಿ ಬರಡಾಗುವಂತೆ ಮಾಡಿ ತೋಡಿನ ಬದಿಯಲ್ಲಿ ಇರುವ ನಿಮ್ಮ ಬಾವಿಯ ನೀರು ವಿಷವನ್ನಾಗಿಸಲಿದೆ ಈ ಅಪಾಯಕಾರಿ ರಾಸಾಯನಿಕ ತ್ಯಾಜ್ಯಏನಿದು ಅಂತೀರಾ..? ಮುಂದಕ್ಕೆ ಓದಿ.. ಕಾಲ ಮಿಂಚಿ ಹೋಗುವ ಮುನ್ನ ಈಗಲೇ ಜಾಗೃತರಾಗಿ..ಬೆಳುವಾಯಿ ಗ್ರಾಮದ ನಾನಿಲು ಎಂಬಲ್ಲಿ ಕೆಂಪು ಕಲ್ಲಿನ 30 ಅಡಿ ಆಳದ ಕೋರೆಯನ್ನು ಮುಚ್ಚಲು ಮೂಡು ಬಿದಿರೆಯ ಜ್ಯೋತಿನಗರದ ಎಣ್ಣೆ ಮಿಲ್ ನ […]
ಕಳಿಯ ಸೊಸೈಟಿಯಿಂದ ಉಚಿತ ಮೈಲುತುತ್ತು ವಿತರಣೆ
ಮಾಸ್ಕ್ ಧರಿಸಿ-ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ ಗೇರುಕಟ್ಟೆ: ಇಲ್ಲಿನ ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಸಂಘದ ಸದಸ್ಯರಿಗೆ ಗೇರುಕಟ್ಟೆ ಕಳಿಯ ಸಹಕಾರಿ ಸಭಾ ಭವನದಲ್ಲಿ ಉಚಿತ ಮೈಲುತುತ್ತು ವಿತರಣಾ ಕಾರ್ಯಕ್ರಮ ಮೇ 9ರಂದು ನಡೆಯಿತು.ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು ಮಾತನಾಡಿ, ಕೃಷಿಕರು ಪ್ರತಿ ಹಂತದಲ್ಲೂ ಬೆಳೆಗೆ ಸೂಕ್ತ ಬೆಲೆ ಸಿಗದೆ ಸಂಕಷ್ಟ ಅನುಭವಿಸುತ್ತಾರೆ. ಈ ಸಮಯದಲ್ಲಿ ಕೋವಿಡ್ -19 ನಿಂದ ಮತ್ತಷ್ಟು […]
ಕುಡಿತದ ನಶೆಯಲ್ಲಿ ಹಲ್ಲೆ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು
ಕಳೆದ ಮೇ 6ರ ರಾತ್ರಿ ಕುಡಿತದ ನಶೆಯಲ್ಲಿ ಸ್ನೇಹಿತನಿಗೆ ಹಲ್ಲೆ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪಿ ಲೋಕೇಶನನ್ನು ಮೇ 8ರಂದು ಬಂಧಿಸಿ ಕಾನೂನಿನ ಬೇಡಿ ತೊಡಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.ಕುಡಿತದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ ಸ್ನೇಹಿತ ಸುರೇಶನ ಮೇಲೆ ಹಲ್ಲೆ ನಡೆದಿದ ಲೋಕೇಶ್, ರಕ್ತ ನೋಡುತ್ತಿದ್ದಂತೆ ನಶೆ ಇಳಿದು ಕಾನೂನಿನ ಭಯದಿಂದ ತಲೆಮರೆಸಿಕೊಂಡಿದ್ದ. ಈತನ ಪತ್ತೆ ಕಾರ್ಯಕ್ಕೆ ಮುಂದಾದ ಧರ್ಮಸ್ಥಳ ಪೊಲೀಸರು ಮೇ 8ರಂದು ಈತನಿರುವ ಜಾಗವನ್ನು ಪತ್ತೆಹಚ್ಚಿ, ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದು […]
ಆಹಾರದ ಕಿಟ್ ವಿತರಣೆ ಜನಪ್ರತಿನಿಧಿಗಳು ಮಾಸ್ಕ್ ಹಾಗೂ ವೈಯಕ್ತಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಲಿ .
ಲಾಯಿಲ : ಕೋರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿರುವ ತೀರಾ ಬಡತನ ದಲ್ಲಿರುವ ಕುಟುಂಬಗಳಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಕೆ. ಹರೀಶ್ ಕುಮಾರ್ ರವರು ನೀಡಿರುವ ಆಹಾರದ ಕಿಟ್ ಗಳನ್ನು ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ರವರು ಹಾಗೂ ತಾಲೂಕು ಯೂತ್ ಕಾಂಗ್ರೆಸಿನ ಅಧ್ಯಕ್ಷರಾದ ಅಭಿನಂದನ್ ಹರೀಶ್ ಕುಮಾರ್ ವಿತರಿಸಿದರು.ಜನಪ್ರತಿನಿಧಿಗಳು ತಮ್ಮವರು ಮಾಸ್ಕ್ ಧರಿಸುವಂತೆ ಮುನ್ನಚ್ಚರಿಕೆ ವಹಿಸುವುದರೊಂದಿಗೆ, ಕಿಟ್ ವಿತರಣೆಯ […]
ಲಾಕ್ ಡೌನ್ ಸಡಿಲಿಕೆ ಅನಗತ್ಯ ಬೀದಿಗೆ ಬರುವ ಜನ – ಇಲ್ಲದ ಕಾನೂನಿನ ಭಯ ನಿರ್ಬಂಧಿತ ವ್ಯಾಪಾರವೂ ಸಲೀಸು

ಕೊರೋನಾ ಸೋಂಕು ಹರಡದಂತೆ ಎಲ್ಲ ಸೂಕ್ತ ಮುಂಜಾಗ್ರತೆ ವಹಿಸಿ, ಜನತೆ ಲಾಕ್ ಡೌನಿನಿಂದ ಹೊರ ಬಂದು ಮುಕ್ತವಾಗಿ ಜೀವನ ನಡೆಸಲಿ ಎಂಬ ಉದ್ಧೇಶದಿಂದ ಸರಕಾರ ಲಾಕ್ ಡೌನಿನ ನಿಯಮಗಳನ್ನು ಸಾಕಷ್ಟು ಸಡಿಲಿಕೆ ಮಾಡಿದೆ. ಆದರೆ ಸರಕಾರ ಮಾಡಿದ ಲಾಕ್ ಡೌನ್ ನಿಯಮಗಳ ಸಡಿಲಿಕೆಯನ್ನು ಉಪಯೋಗಕ್ಕಿಂತ ದುರುಪಯೋಗಪಡಿಸಿಕೊಳ್ಳುತ್ತಿರುವ ಬಹುತೇಕ ಮಂದಿ ದಿನಬೆಳಗಾದರೆ ಬೀದಿಗಿಳಿಯುತ್ತಿದ್ದಾರೆ, ಅನಗತ್ಯ ತಿರುಗುತ್ತಿದ್ದಾರೆ. ಮಾಸ್ಕ್ ಧರಿಸದ-ಧರಿಸಿದರೂ ಸರಿಯಾಗಿ ಧರಿಸದ ವೈಯಕ್ತಿಕ ಅಂತರ ಸಂಪೂರ್ಣವಾಗಿ ಮರೆತ ಬಹುತೇಕ ಮಂದಿಗೆ ಕೊರೋನಾ ಸೋಂಕು ಹರಡಬಹುದೆಂಬ ಭಯವೇ ಇದ್ದಂತಿಲ್ಲ. ಇಂತಹ […]
ರೋಟರಿ ಕ್ಲಬ್ಬಿನಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ
ಮೇ 8, ವಿಶ್ವ ರೆಡ್ ಕ್ರಾಸ್ ದಿನಾಚರಣೆ; ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯರು ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. 88 ಬಾರಿ ರಕ್ತದಾನ ಮಾಡಿ ಸಾಕಷ್ಟು ಜೀವ ಉಳಿಸಿದ ಅತ್ತಾಜೆ ಕೇಶವ ಭಟ್ಟರನ್ನು ಸಮ್ಮಾನಿಸುವ ಮೂಲಕ ರಕ್ತದಾನದ ಮಹತ್ವದ ಸಂದೇಶ ಸಾರಿದರು. ಬೆಳ್ತಂಗಡಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಜಯರಾಮ್, ಮಾಜಿ ಅಧ್ಯಕ್ಷ ಯಶವಂತ ಪಟವರ್ಧನ್, ನಿಯೋಜಿತ ಅಧ್ಯಕ್ಷ ಧನಂಜಯ ರಾವ್ ಬಿ.ಕೆ., ಚುನಾಯಿತ ರೋಟರಿ ಜಿಲ್ಲಾ ಉಪರಾಜ್ಯಪಾಲ ಪ್ರತಾಪ ಸಿಂಹ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.