ಕೊರೋನಾ ವಿರುದ್ಧ ಹೋರಾಟದ ವಾರಿಯರ್ಸ್ ಬೆಳ್ತಂಗಡಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಎಂ.ಎಲ್.ಸಿ. ಹರೀಶ್ ಕುಮಾರರಿಂದ ಪ್ರಯಾಣ ಭತ್ತೆ ಕೊಡುಗೆ

ತಾಲೂಕಿನಲ್ಲಿರುವ 250 ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ತಮ್ಮ ಸ್ವಂತ ಹಣವನ್ನು ಪ್ರಯಾಣಕ್ಕಾಗಿ ಬಳಸುತ್ತಿದ್ದಾರೆ. ಸರ್ಕಾರದಿಂದ ಅಲ್ಪ ವೇತನವನ್ನು ಪಡೆದು ತಮ್ಮ ಜೀವದ ಹಂಗು ತೊರೆದು ಕೊರೋನಾ ವೈರಸ್ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ತಾಲೂಕಿನ ಕೊರೋನಾ ವಿರುದ್ಧದ ಹೋರಾಟದ ವಾರಿಯರ್ಸ್ ಗಳಾದ ಪ್ರತೀ ಆಶಾ ಕಾರ್ಯಕರ್ತೆಯರಿಗೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪ್ರಯಾಣ ಭತ್ಯೆಗಾಗಿ ಪ್ರತಿ ಆಶಾ ಕಾರ್ಯಕರ್ತೆಯರಿಗೆ ರೂ 500 ರಂತೆ ರೂಪಾಯಿ 1.25 ಲಕ್ಷ ಗಳನ್ನು ನೀಡಿದರು.ವಾರದ ಹಿಂದೆಯಷ್ಟೇ ತಾಲೂಕಿನ ಎಲ್ಲ ಆಶಾ […]
ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ಚೆಕ್ ಹಸ್ತಾಂತರ ಯಾರಲ್ಲೂ ಮಾಸ್ಕ್ ಇಲ್ಲ-ವೈಯಕ್ತಿಕ ಅಂತರ ಗೊತ್ತೇ ಇಲ್ಲ

ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಮೋದಿ ನೀಡಿದ ಕರೆಗೆ ಇವರಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲವೋ ಎಂಬ ಸಂದೇಹ ನಿಮ್ಮ ಮನದಲ್ಲಿ ಮೂಡಿದರೂ ಅಚ್ಚರಿಯಿಲ್ಲ.ನಮ್ಮ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರವರಿಗೆ ಕೆಲದಿನಗಳ ಹಿಂದೆ ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಹಾಗೂ ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು ಇವರುಗಳು ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಐದು ಸಾವಿರ ರೂಪಾಯಿಗಳ ಚೆಕ್ಕನ್ನು ಹಸ್ತಾಂತರಿಸಿದರು.ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ […]
ಆಶಾ ಕಾರ್ಯಕರ್ತೆಗೆ ಆರ್ಥಿಕ ನೆರವು ನೀಡಿ ಸ್ಥೈರ್ಯ ತುಂಬಿದ ಎಂ.ಎಲ್.ಸಿ. ಹರೀಶ್ ಕುಮಾರ್

ಕೆಲ ದಿನಗಳ ಹಿಂದೆ ಉಜಿರೆಯ ದ್ವಿಚಕ್ರ ವಾಹನ ವಿತರಕರೊಬ್ಬರು ಸ್ಕೂಟಿಯ ಸಾಲದ ಕಂತಿನ ಮೊತ್ತದ ಚೆಕ್ ಬೌನ್ಸ್ ಆಗಿರೋದಕ್ಕೆ ಬೆಳ್ತಂಗಡಿ ತಾಲೂಕಿನ ಆಶಾ ಕಾರ್ಯಕರ್ತೆಯೋರ್ವಳಿಗೆ ದಮ್ಕಿ ಹಾಕಿದ ಬಗ್ಗೆ ನಮ್ಮ ಇ-ಪತ್ರಿಕೆಯಲ್ಲಿ ವರದಿ ಮಾಡಿದ್ದೆವು.ಕೊರೋನಾ ಸೋಂಕು ಹರಡುವಿಕೆಯ ವಿರುದ್ಧ ಬಿಸಿಲು-ನೆರಳೆನ್ನದೆ ದುಡಿಯುತ್ತಿರುವ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯ ಸಂಕಷ್ಟವನ್ನು ತಿಳಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಈ ವಿಚಾರವಾಗಿ ಸಮಗ್ರ ಮಾಹಿತಿ ಪಡೆದು; ಎಪ್ರಿಲ್ 27ರಂದು ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಗೌಡರ ಮೂಲಕ […]
ವಾರ ಭವಿಷ್ಯ- 27-04-2020 ರಿಂದ 03-05-2020 ರವರೆಗೆ

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.
ಮಾಜಿ ಶಾಸಕ ವಸಂತ ಬಂಗೇರರ ಆರೋಗ್ಯದ ಬಗ್ಗೆ ಕಾಳಜಿ ಮರೆತ ಅಭಿಮಾನಿಗಳು ವೈಯಕ್ತಿಕ ಅಂತರ ಹಾಗೂ ಮಾಸ್ಕ್ ಧರಿಸಲು ಮರೆತ ಅಭಿಮಾನಿಗಳು

ಎಲ್ಲರೂ ತಿಳಿದಿರುವಂತೆ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರು ಇಂದಿನ ಸಂದಿಗ್ಧ ಸ್ಥಿತಿಯಲ್ಲಿಯೂ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸಿ, ಬಡವರಿಗೆ ಹಾಗೂ ಅಶಕ್ತರಿಗೆ ಸಾಂತ್ವನ-ಸಹಾಯ ನೀಡುತ್ತಿದ್ದಾರೆ. ತನಗಾದ ವಯಸ್ಸನ್ನೂ ಲೆಕ್ಕಿಸದೇ, ಕೊರೋನಾ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿ, ಮಾಸ್ಕ್ ಧರಿಸಿ ವೈಯಕ್ತಿಕ ಅಂತರದ ಬಗ್ಗೆಯೂ ಎಚ್ಚರಿಕೆ ವಹಿಸಿ, ತಾಲೂಕಿನ ವಿವಿದೆಡೆ ಸಂಚರಿಸಿ, ಬಡವರ-ಅಶಕ್ತರ ಯೋಗಕ್ಷೇಮ ವಿಚಾರಿಸುತ್ತಿರುವ ಮಾಜಿ ಶಾಸಕ ವಸಂತ ಬಂಗೇರ ಎಪ್ರಿಲ್ 26ರಂದು ಗರ್ಡಾಡಿಯ ಅಶಕ್ತ ಕುಟುಂಬದ ಮನೆಯೊಂದಕ್ಕೆ ಭೇಟಿ ನೀಡಿ ಮನೆಯೊಡೆಯನ ಆರೋಗ್ಯ […]
ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ವತಿಯಿಂದ ಪ್ರಾರ್ಥನೆ ಹಾಗೂ ಅಕ್ಕಿ ಮತ್ತು ದಿನಸಿ ವಸ್ತುಗಳ ವಿತರಣೆ-ವೈಯಕ್ತಿಕ ಅಂತರದತ್ತ ಎಲ್ಲರ ಚಿತ್ತ

ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ಇದರ ವತಿಯಿಂದ ಪೂಜಾ ಕಟ್ಟೆಯಲ್ಲಿ ಕೊರೊನ ಮುಕ್ತ ಜಗತ್ತಿಗಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಅರ್ಚಕರಾದ ಸದಾನಂದ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೊರೊನ ತಡೆಗಟ್ಟಲು ಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸೂಕ್ತ ಸಲಹೆಯನ್ನು ಸಮಿತಿಯ ಅಧ್ಯಕ್ಷರಾದ ಎಂ. ಬಾಹುಬಲಿ ಪ್ರಸಾದ್ ರವರು ನೀಡಿದರು. ಈ ಬಗ್ಗೆ ವಿವರವುಳ್ಳ ಕರಪತ್ರವನ್ನು ವಿತರಿಸಲಾಯಿತು. ವೈಯಕ್ತಿಕ ಅಂತರದತ್ತ ಎಲ್ಲರ ಚಿತ್ತವಿದ್ದುದು ವಿಶೇಷವಾಗಿತ್ತು.50 ಕುಟುಂಬಗಳಿಗೆ […]
ಪುರಸಭೆ ಸ್ವಚ್ಛತಾ ಸಿಬ್ಬಂದಿಗೆ ಜವನೆರ್ ಬೆದ್ರ ಆಹಾರ ಕಿಟ್ ವಿತರಣೆ – ವೈಯಕ್ತಿಕ ಅಂತರ ಕಾಪಾಡಿ ಮಾದರಿಯಾದ ಸಿಬ್ಬಂದಿಗಳು

ಆರೋಗ್ಯ ಸಿಬ್ಬಂದಿಗಳು, ಪೊಲೀಸರು, ಮಾಧ್ಯಮದವರ ಜೊತೆಗೆ ಸ್ಥಳೀಯ ಸಂಸ್ಥೆಗಳ ಸ್ವಚ್ಛತಾ ಸಿಬ್ಬಂದಿಗಳನ್ನೂ ಕೊರೋನಾ ವಾರಿಯರ್ಸ್ ಎಂದು ಸರಕಾರ ಹೇಳಿದೆ. ಕೊರೋನಾ ರಣಕೇಕೆಯ ಮಧ್ಯೆ ನುಸುಳಿ ದಿನನಿತ್ಯ ಹೋರಾಟ ಮಾಡುವ, ಈ ಸೇವೆಯಲ್ಲಿ ವೈದ್ಯರಿಗೆ ಸರಿಸಮಾನವಾಗಿ ಶೇಕಡಾ 100 ಸಾಧನೆ ಮಾಡುತ್ತಿರುವ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಗುರುತಿಸುವ ಕಾರ್ಯ ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆಯ ಮುಖಾಂತರ ನಡೆದಿದೆ.ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ ನೇತ್ರತ್ವದ ತಂಡವು ಮೂಡುಬಿದಿರೆ ಪುರಸಭೆಯ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳಿಗೆ ಅಕ್ಕಿ ಮತ್ತು ದಿನಬಳಕೆಯ […]
ದಿವ್ಯಾಂಗರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ ಯಂಗ್ ಚಾಲೆಂಜರ್ಸ್ ಮುಂಡಾಜೆ

ಮುಂಡಾಜೆ:ಬೆಳ್ತಂಗಡಿ ತಾ.ನ ಮುಂಡಾಜೆ ಗ್ರಾ.ಪಂ.ವ್ಯಾಪ್ತಿಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಊರ ದಾನಿಗಳ ಸಹಕಾರದಲ್ಲಿ,ಲಾಕ್ ಡೌನ್ ನಿಂದ ಸಂಕಷ್ಟ ಕ್ಕೊಳಗಾಗಿರುವ ಮುಂಡಾಜೆ ಗ್ರಾಮದ 40ಜನ ದಿವ್ಯಾಂಗರ ಕುಟುಂಬಗಳಿಗೆ ಸೇರಿದಂತೆ ಒಟ್ಟು 50 ಕುಟುಂಬಗಳಿಗೆ ಆಹಾರ ಕಿಟ್ಟನ್ನು ಎಪ್ರಿಲ್ 24ರಂದು ಕ್ಲಬ್ಬಿನ ಸಭಾ ಭವನದಲ್ಲಿ ವಿತರಿಸ ಲಾಯಿತು.ಕ್ರೀಡಾ ಸಂಘದ ಅಧ್ಯಕ್ಷರೂ ಆಗಿರುವ ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಅಧ್ಯಕ್ಷತೆ ವಹಿಸಿದ್ದರು.ಬೆಳ್ತಂಗಡಿ ತಾ.ಔಷಧ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಸುಜಿತ್ ಭಿಡೆ , ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ […]
ಬಡಪಾಯಿಯ ದ್ವಿಚಕ್ರವಾಹನ ಬೆಂಕಿಗಾಹುತಿ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಅಪ್ಪ-ಮಗನ ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ: ಕೂಲಿ ಕಾರ್ಮಿಕನೋರ್ವನ ದ್ವಿಚಕ್ರ ವಾಹನ ಅಗ್ನಿಗೆ ಆಹುತಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ವೇಣೂರು ಠಾಣೆಯಲ್ಲಿ ತಂದೆ-ಮಗನ ಮೇಲೆ ಪ್ರಕರಣ ದಾಖಲಾಗಿದೆ.ಎ. 21 ರಂದು ತಾಲೂಕಿನ ಬಡಗಕಾರಂದೂರು ಗ್ರಾಮದ ಕಟ್ಟೂರು ಎಂಬಲ್ಲಿ ಅದೇ ಗ್ರಾಮದ ಮುಳ್ಳುಗುಡ್ಡೆ ನಿವಾಸಿ ಸಾಜಿ ಸಿ. ಎಂಬುವರು ಸದಾಶಿವ ರಾವ್ ಎಂಬುವರ ರಬ್ಬರ್ ತೋಟದ ಟ್ಯಾಪಿಂಗ್ ಮಾಡುತ್ತಿದ್ದರು. ಈ ಸಂದರ್ಭ ಬೆಳಿಗ್ಗೆ ಸಾಜಿ ಅವರ ಡಿಯೋ ಸ್ಕೂಟರ್ ಬೆಂಕಿಗೆ ಆಹುತಿಯಾಗಿತ್ತು. ಈ ಕೃತ್ಯವೆಸಗಿದವರು ಕಟ್ಟೂರು ಶಂಕರ ಭಟ್ ಹಾಗು ಅವರ ಮಗ ಎಂದು ದೂರುದಾರರು […]
ಮಾನವೀಯತೆಗೆ ಸಾಕ್ಷಿಯಾಯಿತು ಯುವಕರ ನಡೆ ಬಡಕುಟುಂಬಿಕರಿಗೆ ಅಕ್ಕಿ ವಿತರಿಸಿದ ಕೂಲಿಕಾರ್ಮಿಕರು.

ಇವರು ಅಡಿಕೆ ಸಿಪ್ಪೆ ಸುಳಿಯುವ ಕೂಲಿ ಕೆಲಸಗಾರರು. ಆದರೂ ಅವರ ಹೃದಯ ವೈಶಾಲ್ಯ ಇತರರಿಗೆ ಮಾದರಿ ಯಾಗುವಂತದ್ದು. ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಬಡಜನರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿರುವುದನ್ನು ಕಣ್ಣಾರೆ ಕಂಡ ಇವರು ತಮ್ಮ ಉಳಿತಾಯದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.ಇಂದಬೆಟ್ಟು ಹಾಗೂ ಬಂಗಾಡಿ ಪರಿಸರದಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಕೆಲಸ ಮಾಡುತ್ತಿದ್ದ ಸುಪ್ರೀತಾ ಪ್ರಸನ್ನ ಬಂಗಾಡಿ, ನಾರಾಯಣ ನೇತ್ರಾವತಿ ನಗರ , ಭಾಸ್ಕರ ನೇತ್ರಾವತಿ ನಗರ, ಅಕ್ಷಯ್ ನೇತ್ರಾವತಿ ನಗರ, ಸುಜಯ್ , ಸಂತೋಷ್ […]