ಶಾಸಕ ಹರೀಶ್ ಪೂಂಜಾರ “ಶ್ರಮಿಕ ನೆರವು” ಕೊಕ್ಕಡದಲ್ಲಿ ವಿತರಣೆ.

ಕೊರೋನ ಮಹಾಮಾರಿ ನಿರ್ಮೂಲನೆಗಾಗಿ ದೇಶದ ಮಾನ್ಯ ಪ್ರಧಾನಿ ಮೋದಿಜಿ ಯವರ ಸೂಚನೆಯಂತೆ ದೇಶವೇ ಲಾಕ್ ಡೌನ್ ಆಗಿರುವ ಈ ಸಂಕಷ್ಟದ ಸಂದರ್ಭ.ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಕೊಕ್ಕಡ ಗ್ರಾಮದ 4 ಬೂತುಗಳಿಗೆ ತಲಾ 100 ರಂತೆ 400 ಕಿಟ್ ನೀಡಿರುವುದನ್ನು ಆಯಾ ಬೂತು ಗಳಲ್ಲಿ ಕೂಲಿ ಕಾರ್ಮಿಕರಿಗೆ, ರಿಕ್ಷಾ ಚಾಲಕರಿಗೆ, ನಿರ್ಗತಿಕರಿಗೆ ಮನೆಮನೆಗೆ ತೆರಳಿ ವಿತರಣೆ ಮಾಡಲಾಯಿತು. ಗ್ರಾಮದ 400 ಕುಟುಂಬಗಳಿಗೆ ಶ್ರಮಿಕ ನೆರವು ನೀಡಿದ ಶಾಸಕ ಹರೀಶ್ ಪೂಂಜಾರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಈ […]

ಕ್ರಾಂತಿಯೋಗಿ ಬಸವಣ್ಣ ಜಯಂತಿ ಆಚರಣೆ ಇದ್ದ ಆರರಲ್ಲಿ ಒಬ್ಬರು ಮಾಸ್ಕ್ ರಹಿತರು

ಬೆಳ್ತಂಗಡಿ: ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಎಪ್ರಿಲ್ 26ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ ಕ್ರಾಂತಿಯೋಗಿ ಬಸವಣ್ಣ ಜಯಂತಿ ಆಚರಣೆಯನ್ನು ಸರಳ ರೀತಿಯಲ್ಲಿ ನಡೆಸಲಾಯಿತು. ವೇದಿಕೆಯಲ್ಲಿದ್ದ ತಹಶೀಲ್ದಾರ್ ಸಹಿತ ಆರು ಮಂದಿ ವೈಯಕ್ತಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕೊರೋನಾ ಸೋಂಕಿನ ವಿರುದ್ಧ ಹೋರಾಟದ ಮುನ್ನೆಚ್ಚರಿಕೆ ಸಾರಿದರಾದರೂ; ಆರರಲ್ಲಿ ಒಬ್ಬರು ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿ,ಕೊರೋನಾ ಸೋಂಕಿನ ವಿರುದ್ಧದ ಜಾಗೃತಿಗೇ ಸವಾಲಾದರು.ತಹಸೀಲ್ದಾರ್ ಗಣಪತಿ ಶಾಸ್ತ್ರೀ ಅವರು, ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, […]

ಗೃಹರಕ್ಷಕ ದಳದ ಸೇನಾನಿಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ

ಕೊರೊನ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳ ನಿಜವಾದ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿದ್ದು, ಜನರಲ್ಲಿ ಶಿಸ್ತು ತರಲು ಸಹಕರಿಸುತ್ತಿದ್ದಾರೆ ಎಂದು ಉಜಿರೆ ಶ್ರೀ ಜನಾರ್ದನ ದೇವಾಲಯದ ಶರತ್ ಕ್ರಷ್ಣ ಪಡ್ವೆಟ್ನಾಯ ಹೇಳಿದರು. ಅವರು ಉಜಿರೆಯ ಕೃಷ್ಞಾನುಗ್ರಹ ಸಭಾಭವನದಲ್ಲಿ ಎ.25ರಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದಿಂದ ತಾಲೂಕಿನ 75 ಗೃಹ ರಕ್ಷಕ ಸಿಬ್ಬಂದಿ ಯವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡುತ್ತಿದ್ದರು.ಶಾಸಕ ಹರೀಶ್ ಪೂಂಜ ಮಾತನಾಡಿ ದೇಶದ ಲಾಕ್ ಡೌನ್ ಸಂದರ್ಭದಲ್ಲಿ ಜನರ ನಿಯಂತ್ರಣ ಮಾಡುವಲ್ಲಿ […]

ಉಜಿರೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಆಹಾರಧಾನ್ಯದ ಕಿಟ್ ವಿತರಣೆ

ಕೊರೊನ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ತರವಾದುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು,ಅವರು ಉಜಿರೆಯ ಕ್ರಷ್ಞಾನುಗ್ರಹ ಸಭಾಭವನದಲ್ಲಿ ಎ.25ರಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದಿಂದ ಉಜಿರೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಆಹಾರಧಾನ್ಯದ ಕಿಟ್ ವಿತರಿಸಿ ಮಾತನಾಡುತ್ತದ್ದರು. ವೇದಿಕೆಯಲ್ಲಿ ಉಜಿರೆ ಶ್ರೀ ಜನಾರ್ದನ ದೇವಾಲಯದ ಶರತ್ ಕ್ರಷ್ಣ ಪಡ್ವೆಟ್ನಾಯ, ಬದುಕು ಕಟ್ಟೋಣ ಬನ್ನಿ ತಂಡದ ರಾಜೇಶ್ ಪೈ ಇದ್ದರು.ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಪ್ರಸ್ತಾವಿಸಿ, ತಿಮ್ಮಯ್ಯ ನಾಯ್ಕ […]

ಬಿಗ್ ಬ್ರೇಕಿಂಗ್ ನ್ಯೂಸ್ ಸಾಲದ ಕಂತು ಪಾವತಿಸುವಂತೆ ಆಶಾ ಕಾರ್ಯಕರ್ತೆಗೆ ದಮ್ಕಿ

ಉಜಿರೆಯ ದ್ವಿಚಕ್ರ ವಾಹನ ವಿತರಕನೋರ್ವ ಸಾಲದ ಕಂತು ಪಾವತಿಸುವಂತೆ ಆಶಾ ಕಾರ್ಯಕರ್ತೆಗೆ ಇಂದಿನ ಸಂಕಷ್ಟದ ದಿನಗಳಲ್ಲಿ ದಮ್ಕಿ ಹಾಕಿದ ಬಗ್ಗೆ ತಿಳಿದು ಬಂದಿದೆ.ತಾಲೂಕಿನ ಆಶಾ ಕಾರ್ಯಕರ್ತೆಯೋರ್ವಳು ಉಜಿರೆಯ ದ್ವಿಚಕ್ರ ವಾಹನ ವಿತರಕರಿಂದ ಕೆಲ ತಿಂಗಳ ಹಿಂದೆ ಸ್ಕೂಟಿಯೊಂದನ್ನು ಖರೀದಿಸಿದ್ದರು. ಈ ಸ್ಕೂಟಿ ಖರೀದಿಗೆ ಅದೇ ದ್ವಿಚಕ್ರ ವಾಹನ ವಿತರಕ ಸದ್ರಿ ಆಶಾ ಕಾರ್ಯಕರ್ತೆಗೆ ಖಾಸಗಿ ಫೈನಾನ್ಸಿನಿಂದ ಸಾಲ ಒದಗಿಸಿದ್ದರು ಎನ್ನಲಾಗಿದೆ. ಸಾಲಕ್ಕೆ ಭದ್ರತೆಯಾಗಿ ತಿಂಗಳ ಕಂತಿನ‌ ಮೊಬಲಗಿನ ಚೆಕ್ ಸಹಿತ ಸಾಕಷ್ಟು ಭದ್ರತೆಯನ್ನು ಆಶಾ ಕಾರ್ಯಕರ್ತೆ ಒದಗಿಸಿದ್ದರು. […]

ಕಲ್ಲಬೆಟ್ಟು: ಗೋವುಗುಡ್ಡೆಯಲ್ಲಿ ಆಹಾರ ಕಿಟ್ ವಿತರಣೆ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು 18ನೇ ವಾರ್ಡಿನ ಗೋವುಗುಡ್ಡೆ 5 ಸೆಂಟ್ಸ್ ನ ಅರ್ಹ ಕುಟುಂಬಗಳಿಗೆ ವಾರ್ಡ್ ಸದಸ್ಯ ಜೊಸ್ಸಿ ಮಿನೇಜಸ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿರುವ ಅಕ್ಕಿ, ತರಕಾರಿ ಮತ್ತು ನಿತ್ಯ ಬಳಕೆಯ ವಸ್ತುಗಳನ್ನು ಒಳಗೊಂಡಿರುವ ಆಹಾರದ ಕಿಟ್ ಗಳನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವಿತರಿಸಿದರು.ಮಾಸ್ಕ್ ತೊಟ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅಭಯಚಂದ್ರ ಜೈನ್ ಅವರು ಕೊರೋನಾ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕ್ ಡೌನ್ […]

ಕರಿಂಜೆ: ರಾಮಗುಡ್ಡೆ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ 20ನೇ ವಾರ್ಡ್ ನ ರಾಮಗುಡ್ಡೆ ಪರಿಸರದ ಕುಟುಂಬಗಳಿಗೆ ವಾರ್ಡ್ ಸದಸ್ಯ ಸುರೇಶ್ ಕೊಟ್ಯಾನ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿರುವ ಅಕ್ಕಿ ಮತ್ತು ಇತರ ಆಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಕಿಟ್ ಗಳನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ವಿತರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ಸುರೇಶ್ ಕೊಟ್ಯಾನ್, ಜೊಸ್ಸಿ ಮಿನೇಜಸ್, ಮಾಜಿ ಸದಸ್ಯರುಗಳಾದ ಮೇರಿ ಪಿರೇರಾ, ಸುಂದರ, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್, […]

ಯಕ್ಷಗಾನ ಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಣೆ

ಬೆಳ್ತಂಗಡಿ: ಕೋವಿದ್ -19 ಸೋಂಕಿನ ಹಿನ್ನಲೆಯಲ್ಲಿ ಲಾಕ್ ಡೌನ್ ನಿಂದ ಯಕ್ಷಗಾನ ಮೇಳಗಳ ತಿರುಗಾಟವನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದ ಸಂಕಷ್ಟದಲ್ಲಿರುವ ತಾಲೂಕಿನ ಯಕ್ಷಗಾನ ಕಲಾವಿದರು ಹಾಗೂ ರಂಗ ಪರಿಚಾಕರಿಗೆ ಶಾಸಕ ಹರೀಶ್ ಪೂಂಜ ಅವರು ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಸಾಂಕೇತಿಕವಾಗಿ ಶ್ರಮಿಕ ನೆರವು ಆಹಾರ ಕಿಟ್ ಗಳನ್ನು ಎಪ್ರಿಲ್ 24ರಂದು ವಿತರಿಸಿದರು.ಕಿಟ್ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಲಾಕ್ ಡೌನ್ ನಿಂದ ಮೇಳಗಳ ತಿರುಗಾಟವಿಲ್ಲದೇ ಕಲಾವಿದರು ಸಮಸ್ಯೆಯಲ್ಲಿದ್ದಾರೆ. ತಾಲೂಕಿನ ಸುಮಾರು 150ಕ್ಕೂ ಹೆಚ್ಚು ಕಲಾವಿದರಿದ್ದು, […]

ಮೃತರ ಅಂತ್ಯಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಶಾಸಕರ ವಿರುದ್ಧ ಕ್ರಮಕ್ಕೆ ಎಂ.ಎಲ್.ಸಿ. ಹರೀಶ್ ಕುಮಾರ್ ಆಗ್ರಹ

ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತ ಪಟ್ಟ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದೆ ತಡರಾತ್ರಿಯವರೆಗೆ ಜಿಲ್ಲಾಡಳಿತವನ್ನು ತಡೆದ ಜಿಲ್ಲೆಯ ಶಾಸಕರುಗಳ ವಿರುದ್ದ ಕೂಡಲೇ ಸರಕಾರ ಕೇಸು ದಾಖಲಿಸಿ ಬಂಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.ಬೆಳ್ತಂಗಡಿ ಯಲ್ಲಿ ಎಪ್ರಿಲ್ 24ರಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಮೃತದೇಹವನ್ನು ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಬೇಕಾಗಿದೆ. ಅಲ್ಲಿ ಯಾವುದೇ ರೀತಿಯಲ್ಲಿ ಸೋಂಕು ಹರಡುವ ಸಾಧ್ಯತೆಗಳಿಲ್ಲ ಆದರೂ ಉದ್ದೇಶ ಪೂರ್ವಕವಾಗಿ ಬೇಜವಾಬ್ದಾರಿಯಿರುವ ಶಾಸಕರೆ ಮುಂದೆ ನಿಂತು ಅದನ್ನು […]

ಊರಿಗೆಲ್ಲಾ ಬುದ್ಧಿ ಹೇಳೋರು ಉಜಿರೆಗೆ ಬಂದರು ವೈಯಕ್ತಿಕ ಅಂತರಕ್ಕೇ ಸವಾಲು ಹಾಕಿದರು

ರಾಜ್ಯದ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಎಪ್ರಿಲ್ 23ರ ಮಧ್ಯಾಹ್ನ ಪೂರ್ವ ನಿಗದಿತ ಸರಕಾರಿ ಕಾರ್ಯಕ್ರಮ‌ ಇಲ್ಲದಿದ್ದರೂ ಉಜಿರೆಗೆ ಆಗಮಿಸಿ; ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಏರ್ಪಡಿಸಿದ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೃಶ್ಯ ಮಾಧ್ಯಮದ ಮುಂದೆ ಅನಗತ್ಯ ಪೋಸ್ ನೀಡುವ ಸಂದರ್ಭ ವೈಯಕ್ತಿಕ ಅಂತರದ ಅನಿವಾರ್ಯತೆಗೇ ಸವಾಲು ಹಾಕಿ, ಕೊರೋನಾ ಸೋಂಕು ವಿರೋಧಿ ಮುಂಜಾಗ್ರತಾ ಕ್ರಮಗಳ‌ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಿದರು.ಹೇಳಿಕೇಳಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ […]