ಬಿಹಾರದ ಕಾರ್ಮಿಕರಿಗೆ ಅಕ್ಕಿ ವಿತರಣೆ-ಹಸಿವಿನ ಬೇಗೆಯಲ್ಲಿ ವೈಯಕ್ತಿಕ ಅಂತರ ಮರೆತ ಬಡಪಾಯಿಗಳು

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದಲ್ಲಿ ಹೊಟ್ಟೆಪಾಡಿಗಾಗಿ ಉದ್ಯೋಗವನ್ನರಸಿ ಬಂದ 24ಮಂದಿ ವಲಸೆ ಕಾರ್ಮಿಕರಿದ್ದಾರೆ. ಇದೀಗ ಲಾಕ್ ಡೌನಿನಿಂದಾಗಿ ಇತ್ತ ಕೆಲಸವೂ ಇಲ್ಲದೇ, ಅತ್ತ ತಮ್ಮೂರಿಗೂ ಹೋಗಲಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇವರೆಲ್ಲರೂ ಒಪ್ಪೊತ್ತಿನ ಕೂಳಿಗೂ ಪರದಾಡಬೇಕಾಗಿದೆ. ಇವರ ವೇದನೆಯನ್ನರಿತ ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಈ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಪರಿಹಾರವಾಗಿ ನೀಡಿದ 50ಕೆ.ಜಿ. ಅಕ್ಕಿ ಹಾಗೂ 5ಕೆ.ಜಿ. ಅವಲಕ್ಕಿಯನ್ನು ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ಹಸ್ತಾಂತರಿಸಿದರು. ಇದರೊಂದಿಗೆ ಸ್ಥಳೀಯ ದಾನಿಗಳಿಂದ ಗ್ರಾಮ ಪಂಚಾಯತಿನ‌ ಸಂಗ್ರಹಿಸಿದ ಮೂಲಕ […]

ಕೊಕ್ಕಡ ಸ್ವಾಭಿಮಾನಿ ಗೆಳೆಯರ ಬಳಗ ಮತ್ತು ದಾನಿಗಳಿಂದ ಕಿಟ್ ಗಳ ವಿತರಣೆ

ಕೊಕ್ಕಡ, ಎ. 20: ಕೊರೋನಾ ಸಂಬಂದಿ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭ ಕೊಕ್ಕಡ ಗ್ರಾಮದಲ್ಲಿರುವ ಸುಮಾರು 80 ಕ್ಕಿಂತಲೂ ಅಧಿಕ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡಕುಟುಂಬಗಳ ಕಷ್ಟವನ್ನು ಮನಗಂಡು ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ. ನೇತೃತ್ವದಲ್ಲಿ ಮತ್ತು ಸ್ವಾಭಿಮಾನಿ ಗೆಳೆಯರ ಬಳಗದಿಂದ ಕಿಟ್ ವಿತರಣೆ ಮಾಡುವ ಕಾರ್ಯ ಸೋಮವಾರದಂದು ಉಪ್ಪಾರು ಸುಬ್ರಹ್ಮಣ್ಯ ಉಪ್ಪಾರ್ಣ ಇವರ ಸಹಯೋಗದಲ್ಲಿ ನಡೆಯಿತು.ಜೈ ಕನ್ನಡಮ್ಮ ಪತ್ರಿಕೆಗೆ ಮಾಹಿತಿ ನೀಡಿದ ಕೊಕ್ಕಡ ತಾ.ಪಂ.ಲಕ್ಷ್ಮೀನಾರಾಯಣ ಟಿ.ಎಂ, ಬಡತನದಲ್ಲಿರುವ ದಿನಗೂಲಿ ಕಾರ್ಮಿಕರು ಅತ್ತ ಕಡೆ […]

ವೈಯಕ್ತಿಕ ಅಂತರ ಹಾಗೂ ಮಾಸ್ಕ್ ಮರೆತು ಕಿಟ್ ವಿತರಣೆ

ಮೂಡಬಿದರೆ ತಾಲೂಕು ವಾಲ್ಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡಿನಲ್ಲಿ ಎಪ್ರಿಲ್ 20ರಂದು ವಾಲ್ಪಾಡಿ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಇವರ ನೇತೃತ್ವದಲ್ಲಿ ವಾಲ್ಪಾಡಿ ಯೂತ್ ಕಾಂಗ್ರೆಸ್ ಮತ್ತು ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಮಾರು 220 ಮನೆಗಳಿಗೆ ಹೋಗಿ ಕಿಟ್ ಗಳನ್ನು ವಿತರಿಸಲಾಯಿತು…… ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಮಂಗಳೂರು ಎಪಿಎಂಸಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ,ಶಿವಾನಂದ ಪಾಂಡ್ರು, ಸುಕುಮಾರ್ ಕಡಂಬ ,ಮತ್ತು ಯುತ್ ಕಾಂಗ್ರೆಸ್ […]

ಕೋವಿಡ್-19 ಹೋರಾಟದಲ್ಲಿ ವಿಮುಕ್ತಿ ವೈಯಕ್ತಿಕ ಅಂತರ ಕಾಪಾಡಲು ಮರೆತರಿವರು

ಲಾಯಿಲ: ಕೋವಿಡ್-19 ರೋಗವನ್ನು ತಡೆಗಟ್ಟುವಲ್ಲಿ ಭಾರತ ಸರಕಾರ ಕೈಗೊಂಡ ಲಾಕ್‌ಡೌನ್ ನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೈಲ್ಡ್ ಪಂಡ್ ಇಂಡಿಯಾ ಸಹಭಾಗಿತ್ವದೊಂದಿಗೆ ತಾಲೂಕಿನ ಅರ್ಹ 600 ಕುಟುಂಬಗಳಿಗೆ ಆಹಾರ ಕಿಟ್, 200 ಆರೋಗ್ಯ/ಸ್ವಚ್ಚತೆ ಕಿಟ್ ಹಾಗೂ 200 ಶಿಕ್ಷಣ ಕಿಟ್ ಹೀಗೆ ಒಟ್ಟು ಹೀಗೆ 5 ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಏ.20 ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ […]

ರೈತರ ಪ್ರತಿಭಟನೆಯಲ್ಲೂ ವೈಯಕ್ತಿಕ ಅಂತರ

ಮೂಡುಬಿದಿರೆ : ಕೊರೋನಾವೈರಸ್ ಮಹಾಮಾರಿಯ ಅಬ್ಬರ ಮತ್ತು ಈ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಬವಣೆಗೆ ಸರಕಾರದಿಂದ ಸೂಕ್ತ ರೀತಿಯ ಸ್ಪಂದನ ಸಿಗದ ಹಿನ್ನೆಲೆಯಲ್ಲಿ ರೈತರು ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಪ್ರತಿಭಟನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ತೀರ್ಮಾನ ಕೈಗೊಂಡಿತ್ತು.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿ ಮತ್ತು ಮೂಡುಬಿದಿರೆ ಕ್ಷೇತ್ರ ಕಾಂಗ್ರೆಸ್ ಕಿಸಾನ್ ಘಟಕದ ನೂತನ ಅಧ್ಯಕ್ಷರೂ ಆಗಿರುವ ಆಲ್ವಿನ್ ಎಸ್. ಮಿನೇಜಸ್ ಅವರು ಗಂಟಾಲ್ಕಟ್ಟೆಯ ತಮ್ಮ ಮನೆಯ ತೋಟದಲ್ಲಿ ಮೂಡುಬಿದಿರೆ ಕೃಷಿಕರ […]

ಆಹಾರ ಪದಾರ್ಥಗಳ ಕಿಟ್ ವಿತರಣೆ ಗಮನ ಸೆಳೆದ ವೈಯಕ್ತಿಕ ಅಂತರ ಜಾಗೃತಿ

ಮೇಲಂತಬೆಟ್ಟು ಗ್ರಾಮದ ಕೆಲ್ಲಕೆರೆಯ ಕೊರಗ ಸಮುದಾಯದ ಕಾಲೋನಿ ಮತ್ತು ಪ.ಜಾತಿ ಕಾಲೋನಿಯ ಜನರಿಗೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೇಸ್ ನ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ನ ಸದಸ್ಯರಾದ ಹರೀಶ್ ಕುಮಾರ್ ರವರು ನೀಡಿರುವ ದೈನಂದಿನ ದಿನಸಿ ಸಾಮಾಗ್ರಿಗಳ ಆಹಾರದ ಕಿಟ್ ಗಳನ್ನು ಎಪ್ರಿಲಾ 20_ ರಂದು ಬ್ಲಾಕ್ ಕಾಂಗ್ರೇಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್ ಕುರ್ತೋಡಿಯವರು ವಿತರಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ತಾಲೂಕು ಎಸ್ಸಿ ಘಟಕದ ಅಧ್ಯಕ್ಷರಾದ ಬಿ.ಕೆ. ವಸಂತ್ ಬೆಳ್ತಂಗಡಿ, […]

ಉಚಿತ ಅಡುಗೆ ಅನಿಲ ವಿತರಣೆಗೆ ಒತ್ತಾಯಿಸಿ ಮನವಿ

ವೇಣೂರು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಪ.ಜಾತಿ ಹಾಗೂ ಪ.ಪ೦ಗಡ ಸೇರಿದಂತೆ ಅರ್ಹ ಬಡ ಕುಟುಂಬಗಳಿಗೆ ವೇಣೂರು ಅರಣ್ಯ ಇಲಾಖೆಯ ವತಿಯಿಂದ ಭಾರತ್ ಗ್ಯಾಸ್ ಕ೦ಪೆನಿ ಮೂಲಕ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಿದ್ದು, ಈಗ ಈ ಫಲಾನುಭವಿಗಳು ಅಡುಗೆ ಅನಿಲ ಸಿಲಿಂಡರ್ ಪಡೆಯಲು ಹಣ ಪಾವತಿಸ ಬೇಕಾಗಿದೆ.ಆದರೆ ಕೊರೊನಾ ಹಾವಳಿಯಿ೦ದ ಜನ ಆಥಿ೯ಕ ಸ೦ಕಷ್ಟದಲ್ಲಿದ್ದು ಲಾಕ್‌ ಡೌನ್ ವೇಳೆ ಉಚಿತವಾಗಿ ಗ್ಯಾಸ್ ಸೇವೆ ಒದಗಿಸಬೇಕೆ೦ದು ವೇಣೂರು ಪ೦ಚಾಯತ್ ನೀರು ಮತ್ತು ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ […]

ವಾಹನವಿಲ್ಲದೇ ಸರಕಾರಿ ನೌಕರರ ಪರದಾಟ

ಕೊರೋನಾ ಸೋಂಕಿನ‌ ಭಯದ ನಡುವೆಯೂ ಸರಕಾರವೇನೋ ಒಂದಷ್ಟು ಇಲಾಖಾ ಸಿಬ್ಬಂದಿಗಳಿಗೆ ಎಪ್ರಿಲ್ 20ರಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ. ಆದರೆ ಬಹುತೇಕ ಗ್ರಾಮೀಣ ಪ್ರದೇಶದಿಂದ ತಾಲೂಕು ಕೇಂದ್ರದಲ್ಲಿರುವ ಇಲಾಖಾ ಕಛೇರಿಗೆ ಬರಲು ವಿವಿಧ ಇಲಾಖಾ ಸಿಬ್ಬಂದಿಗಳಿಗೆ ವಾಹನದ ವ್ಯವಸ್ಥೆ ಇಲ್ಲದೇ ಸರಕಾರಿ ನೌಕರರು ಪರದಾಡುವಂತಾಗಿದೆ. ಅದರಲ್ಲೂ ಮಹಿಳಾ ಸಿಬ್ಬಂದಿಗಳ ಪಾಡಂತೂ ಇನ್ನೂ ಕಷ್ಟಕರ.ಈ ಸರಕಾರಿ ಸಿಬ್ಬಂದಿಗಳು ತಮ್ಮ‌ ಮನೆಯಿಂದ ತಾಲೂಕು ಕೇಂದ್ರದಲ್ಲಿರುವ ಕಛೇರಿಗೆ ಬರೋದು ಹ್ಯಾಗೆ, ಸಂಜೆ ಮನೆಗೆ ಹಿಂತಿರುಗುವುದು ಹ್ಯಾಗೆ ಎಂಬ ಪ್ರಶ್ನೆಗೆ ತಾಲೂಕು ಆಡಳಿತ ಉತ್ತರ […]

ಬೆಳ್ತಂಗಡಿ ವಾರದ ಸಂತೆ ಎ.ಪಿ.ಎಂ.ಸಿ.ಪ್ರಾಂಗಣಕ್ಕೆ

ಪ್ರತೀ ಸೋಮವಾರ ನಡೆಯುವ ಬೆಳ್ತಂಗಡಿಯ ವಾರದ ಸಂತೆ ಮಾರುಕಟ್ಟೆಯನ್ನು ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಸ್ಥಳಾಂತರಿಸಲು ಎಪ್ರಿಲ್ 19ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಕ್ರಮ‌ಕೈಗೊಳ್ಳಲಾಗಿತ್ತು. ಎಪ್ರಿಲ್ 20ರ ಸೋಮವಾರ ಎ.ಪಿ.ಎಂ.ಸಿ. ಪ್ರಾಂಗಣಕ್ಕೆ ಭೇಟಿನೀಡಿದ ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಪಿ. ಬೆಳಾಲು ಸ್ಧಳ ಪರಿಶೀಲನೆ ಮಾಡಿ ಬೇಕಾದ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಲು ಕಾರ್ಯದರ್ಶಿ ರವೀಂದ್ರರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ನ್ಯಾಯವಾದಿ ಪಿ.ಕೇಶವ ಬೆಳಾಲುರವರು ವ್ಯಾಪಾರಿಗಳಿಗೆ ವೈಯಕ್ತಿಕ ಅಂತರ ಹಾಗೂ ಶುಚಿತ್ವದ ಬಗ್ಗೆ ಮಾರ್ಗದರ್ಶನ ನೀಡಿದರು. ಎಲ್ಲಾ ರೀತಿಯ […]