ವೈಯಕ್ತಿಕ ಅಂತರ ಕಾಪಾಡದ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದ ಕಾರ್ಯಕ್ರಮ

ಕರಾವಳಿ ಕೇಸರಿ ಯೂತ್ ಕ್ಲಬ್ ಬೆದ್ರ ಮತ್ತು ಕರಾವಳಿ ಕೇಸರಿ ಮಹಿಳಾ ಘಟಕ ಧರೆಗುಡ್ಡೆ ವತಿಯಿಂದದರೆಗುಡ್ಡೆಯ ಕರಾವಳಿ ಕೇಸರಿ ಆಫೀಸ್ ನಲ್ಲಿ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರಾದ ಸುಜಾತಾ ಮತ್ತು ಬೇಬಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೈಯಕ್ತಿಕ ಅಂತರ ಕಾಪಾಡದೇ ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದು ಯಾಕೆ ಎಂಬುದಕ್ಕೆ ಶಾಸಕ ಉಮಾನಾಥ ಕೋಟ್ಯಾನರೇ ಉತ್ತರಿಸಬೇಕು. ಆಶಾ ಕಾರ್ಯಕರ್ತೆಯರಿಗೆ ದಿನ ಬಳಕೆ ಸಾಮಗ್ರಿಯ […]

ಬ್ರೇಕಿಂಗ್ ನ್ಯೂಸ್ ಬೆಳ್ತಂಗಡಿ ವಾರದ ಸಂತೆ ಎ.ಪಿ.ಎಂ.ಸಿ. ಯಾರ್ಡಿಗೆ ಶಿಫ್ಟ್

ಬೆಳ್ತಂಗಡಿ ಪಟ್ಟಣದಲ್ಲಿ ಪ್ರತೀ ಸಮವಾರ ಸೋಮವಾರ ನಡೆಯುವ ವಾರದ ಸಂತೆಯನ್ನು ಹಳೆಕೋಟೆಯಲ್ಲಿರುವ ಎ.ಪ.ಎಂ.ಸಿ. ಯಾರ್ಡಿಗೆ ಶಿಫ್ಟ್ ಮಾಡಲಾಗಿದೆ.ಪ್ರತೀ ವಾರದ ಸಂತೆಯ ಸಂದರ್ಭ ಮಾರಾಟಗಾರರು ಮತ್ತು ಗ್ರಾಹಕರು ವೈಯಕ್ತಿಕ ಅಂತರವನ್ನೂ ಕಾಯ್ದುಕೊಳ್ಳದೇ ತಮಗೆ ಅಪಾಯವನ್ನು ಆಹ್ವಾನಿಸುವ ಜೊತೆಗೆ, ಸಮಾಜವನ್ನೂ ಕೊರೋನಾ ಭೀತಿಯೆಡೆಗೆ ತಳ್ಳುತ್ತಿದ್ದುದನ್ನು ಗಮನಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ; ಎಪ್ರಿಲ್ 19ರಂದು ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ತಾಲೂಕಿನ ಸಂಬಂಧಿತ ಇಲಾಖಾಧಿಕಾರಿಗಳ ಸಭೆ ಕರೆದು, ಎಪ್ರಿಲ್ 20ರ ಸೋಮವಾರದಿಂದ ಸಂತೆಯನ್ನು ಎ.ಪಿ.ಎಂ‌.ಸಿ. ಯಾರ್ಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ತೀರ್ಮಾನ ಕೈಗೊಂಡರು.ನಂತರ […]

ಬಂಟರ ಯಾನೆ ನಾಡವರ ಸಂಘದಿಂದ ಕಿಟ್ ವಿತರಣೆ

ಕೊರೋನಾ ಸೋಂಕಿನ‌ ವಿರುದ್ಧದ ಹೋರಾಟದ ಭಾಗವಾಗಿ ಇಡೀ ಊರಿಗೆ ಊರೇ ಲಾಕ್ ಡೌನ್ ಆಗಿ ಜನಸಾಮಾನ್ಯರು ದಿನಬಳಕೆಯ ವಸ್ತುಗಳ ಖರೀದಿಗೂ ಸಂಕಷ್ಟವೆದುರಿಸುತ್ತಿರುವುದನ್ನು ಮನಗಂಡ ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದವರು ಬರೋಡದ ಉಧ್ಯಮಿ- ಗುರುವಾಯನಕೆರೆ ನವಶಕ್ತಿ ನಿವಾಸಿ ಶಶಿಧರ ಶೆಟ್ಟರ ಸಹಕಾರದಲ್ಲಿ ತಾಲೂಕಿನ ಬಂಟ ಸಮಾಜದ ಆಯ್ದ ಅರ್ಹ 600 ಬಡ ಕುಟುಂಬಿಕರಿಗೆ ಆಹಾರ ವಸ್ತುಗಳ‌ ಕಿಟ್ ನೀಡಲು ಸಂಕಲ್ಪಿಸಿದ್ದು, ಈ ಕಾರ್ಯಕ್ರಮಕ್ಕೆ ಎಪ್ರಿಲ್ 19ರಂದು ಗುರುವಾಯನಕೆರೆಯಲ್ಲಿರುವ ಬಂಟರ ಯಾನೆ ನಾಡವರ ಸಂಘದ ಸಭಾಂಗಣದಲ್ಲಿ ಬೆಳ್ತಂಗಡಿಯ […]

ಯುವತಿ‌ ಮಂಡಲದಿಂದ ಮಾಸ್ಕ್ ಕೊಡುಗೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಕಳೆದ 15 ದಿನಗಳಿಂದ ಮಾಸ್ಕ್ ಹೊಲಿಯುತಿದ್ದು, ದೇವಸ್ಥಾನ, ಅನ್ನಪೂರ್ಣ ಛತ್ರ,ಹಾಗೂ ಕ್ಷೇತ್ರದ ವಿವಿಧ ವಿಭಾಗದ ಸಿಬ್ಬಂದಿಯವರಿಗೆ, ಊರವರಿಗೆ ವಿತರಿಸಿದರು. ಸುಮಾರು 500 ಮಾಸ್ಕ್ ಗಳನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ಮನವಿಯ ಮೇರೆಗೆ ಬೆಳ್ತಂಗಡಿ ಮಿನಿ ವಿಧಾನ ಸೌದದಲ್ಲಿರುವ ತಹಸೀಲ್ದಾರ್ ರವರ ಕಚೇರಿಯ covid-19(ವಾರ್ ರೂಮ್ ) ತುರ್ತು ಸೇವಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಂಡಲದ ಪದಾಧಿಕಾರಿಗಳು ಹಸ್ತಾಂತರಿಸಿದರು.ಮಾಸ್ಕಿಗೆ ಇನ್ನೂ ಹೆಚ್ಚಿನ ಬೇಡಿಕೆ ಇದ್ದು, ಯುವತಿ ಮಂಡಲದ […]

ಕೋವಿಡ್- 19 ಕುರಿತು ಆನ್ ಲೈನ್ ಮಾಹಿತಿ ಕಾರ್ಯಗಾರ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯ ಜಂಟಿಯಾಗಿ  ಎನ್.ಎಸ್.ಎಸ್. ಸ್ವಯಂಸೇವಕರಿಗೆ ಕೋವಿಡ್-19 ತಡೆಗಟ್ಟುವ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಝೂಮ್ ಆ್ಯಪ್ ಮೂಲಕ ಆನ್ ಲೈನ್ ಕಾರ್ಯಗಾರವನ್ನು ಹಮ್ಮಿಕೊಂಡಿತ್ತು.     ಈ ಸಂದರ್ಭದಲ್ಲಿ ರಾಜ್ಯ ಎನ್.ಎಸ್.ಎಸ್. ಕೋಶದ ಯೋಜನಾಧಿಕಾರಿ ಡಾ. ಗಣನಾಥ್ ಶೆಟ್ಟಿ ಎಕ್ಕಾರ್ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದರು. ಅರಿವೇ ಗುರು ಎನ್ನುವಂಥದ್ದು ನಮಗೆ ತಿಳಿದಿದೆ. ಅರಿವನ್ನು ನೀಡುವಂತಹ ಕಾರ್ಯ ಪವಿತ್ರವಾದದ್ದು. ಹಾಗಾಗಿ ಇಂತಹ ವೈರಸ್ ವಿರುದ್ಧ ಹೋರಾಡಬೇಕಾದರೆ ಸಾಮಾಜಿಕ ಜಾಲತಾಣಗಳ […]

ಹಸಿದು ಕಂಗಾಲಾದ ಕೋತಿಗಳಿಗೆ ಹಣ್ಣು ನೀಡಿದ ಶಾಸಕ

ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಎಪ್ರಿಲ್ 18ರಂದು ಚಾರ್ಮಾಡಿ ಘಾಟಿ ಪ್ರದೇಶಕ್ಕೆ ಭೇಟಿ ನೀಡಿ, ಇಲ್ಲಿ ಆಹಾರವಿಲ್ಲದೇ ಹಸಿದು ಕಂಗಾಲಾದ ಕೋತಿಗಳಿಗೆ ವಿವಿಧ ಹಣ್ಣುಗಳನ್ನು ಹಂಚಿ ಮಾನವೀಯತೆ ಮೆರೆದರು. ಆಹಾರಕ್ಕಾಗಿ ಈ ಘಾಟಿ ರಸ್ತೆ ಹಾದುಹೋಗುವ ಪ್ರಯಾಣಿಕರನ್ನೇ ಅವಲಂಬಿಸಿದ್ದ ಇಲ್ಲಿನ ಕೋತಿಗಳು; ಕೊರೋನಾ ಸೋಂಕಿನ ಬೀತಿಯಿಂದ ದೇಶವೇ ಲಾಕ್ ಡೌನ್ ಆದ ಕಾರಣ ಪ್ರವಾಸಿಗರಿಲ್ಲದೇ ಆಹಾರ ದೊರಕದೇ ಕಂಗಾಲಾಗಿ ಆಕಾಶದತ್ತ ನೋಡುತ್ತಿದ್ದವು.

ಮಡಂತ್ಯಾರು ಕಾಲೇಜು ಉಪನ್ಯಾಸಕ ಅವಿನ್ ಆಕಾಶ್ ಫ್ರಾಂಕೊ ವಿಧಿವಶ

ಬೆಳ್ತಂಗಡಿಯ ಸೋಜಾ ಇಲೆಕ್ಟ್ರಾನಿಕ್ಸಿನ‌ ಮಾಲಕ ಅಲ್ಫೋನ್ಸ್ ಫ್ರಾಂಕೋರ ಪುತ್ರ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಅವಿನ್ ಆಕಾಶ್ ಫ್ರಾಂಕೋ ಎಪ್ರಿಲ್ 18ರ ಶನಿವಾರ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ‌ ವಿಧಿವಶರಾದರು. ಅವರಿಗೆ 25 ವರ್ಷ ವಯಸ್ಸಾಗಿತ್ತು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದ ಅವಿನ್ ಆಕಾಶ್ ಫ್ರಾಂಕೋ, ಸ್ನೇಹ ಜೀವಿಯಾಗಿದ್ದರು. ತಂದೆ ಅಲ್ಫೋನ್ಸ್ ಫ್ರಾಂಕೋರಂತೆಯೇ ಸಮಾಜಮುಖಿ ಚಿಂತಕರಾಗಿದ್ದ ಅವಿನ್ ಬಾಲ್ಯದಿಂದಲೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಎದೆನೋವು ಬಂದು ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಂ.ಸಿ. […]

ಲಾಕ್ ಡೌನ್ ಎಫೆಕ್ಟ್ 300 ಟನ್ ಅನನಾಸು ಬೆಳೆದ ಕೃಷಿಕ ಕಂಗಾಲು

ಬೆಳ್ತಂಗಡಿ: ಸುಮಾರು 80 ಎಕರೆ ಪ್ರದೇಶದಲ್ಲಿ 1.5 ಕೋಟಿ ಸಾಲ ಮಾಡಿ ಅನನಾಸು ಬೆಳೆದ ಕೃಷಿಕನಿಗೆ ಮಹಾಮಾರಿ ಕೊರೊನಾ ಲಾಕ್ ಡೌನ್ ನಿಂದಾಗಿ ಮಾರುಕಟ್ಟೆ ಬೇಡಿಕೆಯಿಲ್ಲದೆ ಕಂಗಾಲಾಗಿದ್ದಾನೆ. ಕೇರಳದ ಶೈಜು ಎಂಬವರು ಕಕ್ಕಿಂಜೆ ಅಸುಪಾಸಿನಲ್ಲಿ ಕೆಲವು ಜನರಿಂದ ಜಾಗಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ವ್ಯವಸ್ಥಿತ ರೀತಿಯಲ್ಲಿ ಅನನಾಸು ಬೆಳೆ ಬೆಳೆದಿದ್ದಾರೆ.ಬೆಳೆ ಚೆನ್ನಾಗಿ ಬಂದಿದ್ದರೂ ಕಟಾವಿಗೆ ಬಂದ ಈ ಸಂದರ್ಭದಲ್ಲಿ ಲಾಕ್ ಡೌನ್ ನಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದೆ.ಕೇಳುವವರಿಲ್ಲದ ಪರಿಸ್ಥಿತಿ ಇವರದ್ದಾಗಿದೆ.ಪ್ರತಿ ಬಾರಿ ಅವರು ಬೆಳೆದ ಅನನಾಸುಗಳನ್ನು ದೆಹಲಿ,ಪೂನಾ,ಮುಂಬೈ,ಜೈಪುರ,ಅಲಹಾಬಾದ್ […]

ಬ್ರೇಕಿಂಗ್ ನ್ಯೂಸ್..

ಬೆಂಗಳೂರು ಪೊಲೀಸರ ಕಾರು ಬೆಳ್ತಂಗಡಿಯಲ್ಲಿ ಇಂದು ದೇಶ ಹಾಗೂ ರಾಜ್ಯದ ಎಲ್ಲ ಸರಕಾರಿ ಇಲಾಖಾಧಿಕಾರಿಗಳು ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲಾಕ್ ಡೌನ್ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳಂತೂ ಅಹರ್ನಿಷಿ ಶ್ರಮ ಪಡುತ್ತಿದ್ದಾರೆ. ಆದರೆ ಇಂತಹ ಸಂಕಷ್ಟದ ಸಂದಿಗ್ಧ ಸಂದರ್ಭದಲ್ಲಿ ಬೆಂಗಳೂರು ನೊಂದಾವಣೆಯ ಸರಕಾರಿ‌ ಪೊಲೀಸ್ ಅಧಿಕಾರಿಯ ವಾಹನವೊಂದು ಬೆಳ್ತಂಗಡಿಯ ಪೇಟೆಯಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ಎಪ್ರಿಲ್ 17ರ ಅಪ ರಾತ್ರಿಯಿಂದ ನಿಂತಿದ್ದು, ಈ ಪೊಲೀಸ್ ಅಧಿಕಾರಿಯ ಕಾರು ಬೆಳ್ತಂಗಡಿಗೆ […]

ಬ್ರೇಕಿಂಗ್ ನ್ಯೂಸ್

ಕಳ್ಳಭಟ್ಟಿ ಸಾರಾಯಿ ತಯಾರಿಕಾ ದಾಳಿ-ಆರೋಪಿ ಬಂಧನ ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದಂಡ ಸಂಹಿತೆ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದು, ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಇರಿಸಲಾಗಿದ್ದು,ಮಾಹಿತಿ ಮೇರೆಗೆ ದಿನಾಂಕ 17-04-2020 ರಂದು ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ನೆತ್ತರ್ ಪಲ್ಕೆಮನೆ, ಎಂಬಲ್ಲಿ ವಾಸವಾಗಿರುವ ಪೀಟರ್ ಕುವೆಲ್ಲೊ ಎಂಬವರ ಮಗ ಸುಮಾರು 66 ವರ್ಷ ಪ್ರಾಯದ ಎಲಿಯಸ್ ಕುವೆಲ್ಲೋ ಎಂಬಾತನು ತನ್ನ ಮನೆಯಲ್ಲಿ ಬೆಲ್ಲ ಹಾಗೂ ಗೇರುಹಣ್ಣಿನ ವಾಶ್ ಬಳಸಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಬಳಸಿದ್ದ ಎಲ್ಲಾ […]