ದ.ಕ. ಜಿಲ್ಲೆಯ ಪ್ರವೇಶ ಹಾದಿಗಳು ಕರೊನಾ ದೃಷ್ಟಿಯಿಂದ ಎಷ್ಟು ಸುರಕ್ಷಿತ ?

ದ.ಕ. ಜಿಲ್ಲೆಯನ್ನು ರಾಜ್ಯ ರಾಜಧಾನಿ ಮತ್ತಿತರ ಜಿಲ್ಲೆಗಳಿಂದ ಪ್ರವೇಶಿಸುವ ಮುಖ್ಯ ಹಾದಿಗಳಾದ ಶಿರಾಡಿ ಚೆಕ್ ಪೋಸ್ಟ್ ಮತ್ತು ಚಾರ್ಮಾಡಿ ಚೆಕ್ ಪೋಸ್ಟ್ ಗಳು ಜಿಲ್ಲೆಗೆ ಕರೋನಾ ಭಾಧಿತರು ಯಾರಾದರೂ ಎಂಟ್ರಿ ಕೊಡುತ್ತಾರಾ ಎನ್ನುವ ದೃಷ್ಟಿಯಿಂದ ಇಲ್ಲಿನ ವ್ಯವಸ್ಥೆಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಈ ಎರಡೂ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲೂ ಈಗ ಇರುವ ವ್ಯವಸ್ಥೆಗಳು ಸಂಪೂರ್ಣವಾಗಿ ವಿಫಲವೆಂದೇ ಅಂದಾಜಿಸಬಹುದಾಗಿದೆ.ಕಳೆದ ಒಂದು ವಾರದ ಬೆಳವಣಿಗೆಯಲ್ಲಿ ದ.ಕ. ಜಿಲ್ಲೆಯಲ್ಲಿ ಹೊಸ ಕೇಸುಗಳ ಸಂಖ್ಯೆ ಇಳಿಮುಖವಾಗಿದ್ದರೂ ಶುಕ್ರವಾರದಂದು ಉಪ್ಪಿನಂಗಡಿ ಯಲ್ಲಿ ಕ್ವಾರಂಟೈನ್ ನಲ್ಲಿದ್ದ […]
ಸಾವಿಗೆ ಶರಣು

ಬೆಳ್ತಂಗಡಿ : ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಠಾಣಾವ್ಯಾಪ್ತಿಯ ಬಳಂಜ ಗ್ರಾಮದಲ್ಲಿ ಎಪ್ರಿಲ್ 17ರಂದು ನಡೆದಿದೆ.ಬಳೆಂಜ ಗ್ರಾಮದ ಅಂಬ್ರಾಡಿ ಮನೆಯ ಹೆರಾಲ್ಡ್ ಸಲ್ದಾನಾ (53) ಎಂಬುವರೇ ಸನಿಹದ ಗುಡ್ಡೆಯೊಂದರಲ್ಲಿ ಇರುವ ವಿದ್ಯುತ್ ಗೋಪುರದಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಇವರು ಕೆಲ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯ ಚಿಕಿತ್ಸೆಯೂ ನಡೆಯುತ್ತಿತ್ತು. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೋಂಕಿನ ಮೂಲದಲ್ಲಿ ಗೊಂದಲ

ಉಪ್ಪಿನಂಗಡಿಯ ಕೊರೋನಾ ಸೋಂಕಿತ ವ್ಯಕ್ತಿ ದೆಹಲಿಗೆ ವಕೀಲನಾಗಿ ತನ್ನ ಕಛೇರಿಯ ಕೆಲಸಕ್ಕೆ ತೆರಳಿದ್ದು, ತಬ್ಲಿಘಿ ಜಮಾತಿನಲ್ಲಿ ಭಾಗವಹಿಸಿಲ್ಲ ಎಂದು ಸ್ವತಹ ಧ್ನನಿಮುದ್ರಿಕೆ ಯೊಂದರಲ್ಲಿ ತಿಳಿಸಿದ್ದಾರೆ ಎನ್ನಲಾಗಿದ್ದು; ಇನ್ನೊಂದೆಡೆ ಸ್ಥಳೀಯರಿಗೆ ಈತ ತಬ್ಲಿಘಿ ಜಮಾತಿನಲ್ಲಿ ಭಾಗವಹಿಸಿರಬಹುದೆಂಬ ಶಂಕೆ ಇದೆ. ಈ ವಿಚಾರವಾಗಿ ಜಿಲ್ಲಾ ಪೊಲೀಸರು ವಿಸ್ತ್ರತ ತನಿಖೆ ನಡೆಸಿ, ಸತ್ಯವನ್ನು ನಾಡಿಗೆ ತಿಳಿಸಬೇಕಾಗಿದೆ.
ಬಡವರಿಗೆ ಸಿಗುವ ಮಾನವೀಯತೆಯ ನೆರವಿಗೆ ಹುಳಿ ಹಿಂಡಿದ ಕಿರಾತಕರು

ಕೊಕ್ಕಡ, ಎ.17: ಕೊರೋನಾ ಹಾವಳಿಯಿಂದ ದೇಶವೇ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಬದಲ್ಲಿ ಕೆಲವು ಕಿಡಿಗೇಡಿಗಳ ಕುಕೃತ್ಯದಿಂದ ಬಡವರಿಗೆ ನೀಡಲಾಗುವ ಆಹಾರವು ಕೂಡಾ ಬಳಸಲು ಸಾಧ್ಯವಾಗದೇ ಇರುವಂತಹಾ ಪರಿಸ್ಥಿತಿ ಕಿಡಿಗೇಡಿಗಳ ಅಮಾನವೀಯತೆಯನ್ನು ಪ್ರಶ್ನಿಸುವ ವಾತಾವರಣ ಸೃಷ್ಟಿ ಮಾಡಿದೆ.ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು ಕೋಮುಸೌಹಾರ್ದ ಕೆಡಿಸುವುದರ ಜೊತೆಗೆ ಬಡ ಕುಟುಂಬದ ಪರಿಸ್ಥಿತಿ ದೇವರು ಕೊಟ್ಟರೂ……ಬಿಡ ಅನ್ನುವಂತಾಗಿದೆ. ಪಟ್ರಮೆಯ ಗಿರಿಜಾ ಗೌಡ ಕುಟುಂಬಕ್ಕೆ ಗುಡಿಸಲಿನಂತಹಾ ಜೀರ್ಣಾವಸ್ಥೆಯಲ್ಲಿರುವ ಮನೆಯೇ ಆಧಾರವಾಗಿದ್ದು ಮನೆ ನಂಬ್ರದಿಂದ ಹಿಡಿದು […]
ತೆಲಂಗಾಣದಿಂದ ಹಾಗೂ ಬೆಂಗಳೂರಿನಿಂದ ಬಂದ ಇಬ್ಬರಿಗೆ ಹೋಂ ಕ್ವಾರಂಟೈನ್: ಲಾಕ್ ಡೌನ್ ದೇಶದೆಲ್ಲಡೆ ಇರುವಾಗಲೇ ಬಂದದ್ದು ಹೇಗೆ???

ಕೊಕ್ಕಡ, ಎ.17: ದೇಶದೆಲ್ಲೆಡೆ ಕೋವಿಡ್ 19 ನಿಂದ ಲಾಕ್ ಡೌನ್ ಘೋಷಣೆಯಾಗಿದ್ದು ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರವೇಶಗಳು ಇಲ್ಲದಿರುವ ಸಂದರ್ಬದಲ್ಲಿಯೇ ಜನರು ವಿವಿಧ ಕಡೆಗಳಿಂದ ಮರಳುತ್ತಿರುವುದು ಗಮನಿಸಿದರೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿದೆಯೇ ಅನ್ನುವ ಬಗ್ಗೆ ಅನುಮಾನ ಮೂಡುತ್ತಿದೆ.ಕೊಕ್ಕಡ ಗ್ರಾಮದ ಮುಂಡೂರುಪಳಿಕೆಯ ವ್ಯಕ್ತಿಯೋರ್ವರು ತೆಲಂಗಾಣದಲ್ಲಿ ಸುಗಂಧ ದ್ರವ್ಯ ತಯಾರಿಕಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದು 15 ರ ತಡರಾತ್ರಿ ತಮ್ಮ ಮನೆಗೆ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣಾ […]
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೋವಿಡ್ ಪರಿಹಾರನಿಧಿಗೆ ದೇಣಿಗೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ, ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕೋವಿಡ್ ಚಿಕಿತ್ಸೆಗಾಗಿ ಪ್ರಧಾನಮಂತ್ರಿಗಳು ಪ್ರಾರಂಭಿಸಿರುವ ಪಿಎಮ್‍ಕೇರ್ ನಿಧಿಗೆ ರೂ. 5 ಕೋಟಿ ದೇಣಿಗೆಯನ್ನು ಇಂದು ಮಂಜೂರು ಮಾಡಿರುತ್ತಾರೆ. ಅದರಂತೆ ಮೊತ್ತ ರೂ. 5 ಕೋಟಿಯನ್ನು ವರ್ಗಾವಣೆ ಮಾಡಲಾಗಿದೆಯೆಂದು ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್ ಮಂಜುನಾಥ್‍ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ತೊಂದರೆಗೀಡಾದವರಿಗೆ ಯೋಜನೆಯಿಂದ ಸಹಾಯ :ರಾಜ್ಯದಾದ್ಯಂತ ಘೋಷಿಸಲಾಗಿರುವ ಲಾಕ್‍ಡೌನ್‍ನಿಂದ ತೊಂದರೆಗೊಳಗಾಗಿರುವ ಕುಟುಂಬಗಳಿಗೆ ಸ್ಥಳೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ನೆರವಿನ […]
ಕೊಕ್ಕಡ ಮತ್ತು ಶಿಶಿಲ ತಲಾ ಒಬ್ಬೊಬ್ಬರು ಹೋಮ್ ಕ್ವಾರಂಟೈನ್ ಗೆ ಸೂಚನೆ

ಕೊಕ್ಕಡ:ಆಂಧ್ರಪ್ರದೇಶದ ಹೈದರಾಬಾದ್ ನ ಫ್ಯಾಕ್ಟರಿ ಒಂದರಲ್ಲಿ ಕೆಲಸಕ್ಕಿದ್ದ ಕೊಕ್ಕಡ ಮುಂಡೂರುಪಳ್ಕೆ ಮೂಲದ ಓರ್ವ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಮನೆಗೆ ಮರಳಿದ್ದು ಮತ್ತು ಬೆಂಗಳೂರು ನಲ್ಲಿ ವಾಸವಿದ್ದ ಓರ್ವ ವ್ಯಕ್ತಿ ಶಿಶಿಲ ಗ್ರಾಮಕ್ಕೆ ಶುಕ್ರವಾರದಂದು ಬಂದಿದ್ದು ಈ ಎರಡೂ ವ್ಯಕ್ತಿಗಳ ಮಾಹಿತಿಯನ್ನು ಪತ್ತೆ ಹಚ್ಚಿದ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಗ್ರಾ.ಪಂ. ನ ಕಾರ್ಯಪಡೆಗಳು ಇಬ್ಬರ ಮನೆಗೂ ತೆರಳಿ ಸೀಲ್ ಹಾಕಿ ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ ಘಟನೆ ನಡೆದಿದೆ.ಹೈದರಾಬಾದ್ ನಲ್ಲಿ ಗಂಧದ ಎಣ್ಣೆ ತಯಾರಿಸುವ ಕಾರ್ಖಾನೆಯಲ್ಲಿ […]
ಬಿಗ್ ಬ್ರೇಕಿಂಗ್ ನ್ಯೂಸ್ ಉಪ್ಪಿನಂಗಡಿಗೂ ವಕ್ಕರಿಸಿದ ಕೊರೋನಾ

ಕಳೆದ 12ದಿನಗಳಿಂದ ಒಂದೇ ಒಂದು ಹೊಸ ಕೊರೋನಾ ಪ್ರಕರಣ ಪತ್ತೆಯಾಗದೇ ಕೊಂಚ ನಿರಾಳವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಗೆ ಎಪ್ರಿಲ್ 17ರಂದು ಆಘಾತ ಕಾದಿತ್ತು. ಉಪ್ಪಿನಂಗಡಿಯ 39ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ತಗಲಿರುವುದು ಪರೀಕ್ಷೆಯಿಂದ ದೃಢ ಪಟ್ಟಿದ್ದು, ಆತನನ್ನು ಇದೀಗ ಚಿಕಿತ್ಸೆಗಾಗಿ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್ನಲಾದ ಈತ, ವಿಚಾರ ಆರೋಗ್ಯ ಇಲಾಖೆಗೆ ತಿಳಿಯುತ್ತಿದ್ದಂತೆ ಕ್ವಾರಂಟೈನಿಗೆ ಒಳಗಾಗಿದ್ದ. ಇದೀಗ ಈತನ ರಕ್ತ ಹಾಗೂ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೋನಾ ಪಾಸಿಟೀವ್ ಎಂಬ ವರದಿ […]
ಉಜಿರೆ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜ್: ಅನ್-ಲೈನ್ ತರಗತಿ

ದೇಶದಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ನಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮನೆಮಾಡಿರುವ ಈ ಸಂಗ್ದಿದ್ಧ ಪರಿಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಂದ ವಿಮುಖರಾಗದಂತೆ ಮತ್ತು ಅವರ ಕಲಿಯುವಿಕೆಯನ್ನು ನಿರಂತರವಾಗಿಡುವ ಪ್ರಯತ್ನದ ಸಲುವಾಗಿ ಕಳೆದ ಒಂದು ತಿಂಗಳಿಂದ ಉಜಿರೆ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜು ಅನ್-ಲೈನ್ ತರಗತಿಗಳನ್ನು ಸತತವಾಗಿ ಮುನ್ನಡೆಸುತ್ತಿದೆ. ಪ್ರತಿ ದಿನ ಬೆಳಗ್ಗೆ ಮೂರು ತಾಸು ಸಮಯ ಝೂಮ್ ಅಪ್, ಟೀಂ ಲಿಂಕ್ ಅಥವಾ ಗೂಗಲ್ ಮೀಟ್ ಆಪ್ ಮೂಲಕ ಎಲ್ಲಾ ತರಗತಿಗಳಿಗೆ ಅನ್ ಲೈನ್ ಪಾಠ […]
ವಿದ್ಯಾವಂತನ ಅನಾಗರಿಕ-ಅಮಾನವೀಯ ವರ್ತನೆ
ಜನತೆಗೆ ರಕ್ಷಣೆ ನೀಡುವ ಪೊಲೀಸರಿಗೆಯೇ ರಕ್ಷಣೆ ಇಲ್ಲ : ವಿದ್ಯಾವಂತ ನಾಗರೀಕರೇ ಈ ರೀತಿ ಮಾಡಿದರೆ…. ಮಂಗಳೂರು : ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದೇಶಾದಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ನಾಗರೀಕರಿಗೆ ಸೂಕ್ತ ರೀತಿಯ ರಕ್ಷಣೆ ನೀಡುತ್ತಿರುವ ಜೊತೆಗೆ ಹಗಲು ರಾತ್ರಿ ಕರ್ತವ್ಯ ನಿರ್ವಾಹಿಸುವ ಮೂಲಕ ಲಾಕ್‌ಡೌನ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿರುವ ಪೊಲೀಸರಿಗೆ ಇಂತಹ ವಿದ್ಯಾವಂತ ನಾಗರೀಕರೇ ಈ ರೀತಿ ಅವಮಾನ ಮಾಡಿದರೆ….. ಬರೀ ಇಂಗ್ಲೀಷ್ ಮಾತನಾಡುವ ಈ ಹಿರಿಯ ನಾಗರೀಕರಿಗೆ ಲಾಕ್‌ಡೌನ್ ಎಂದರೆ ಏನೆಂದು […]