ಸೂರು ಕುಸಿಯುವ ಭೀತಿಯಲ್ಲಿ ಪಟ್ರಮೆಯ ಬಡ ಕುಟುಂಬ: ಸಣ್ಣ ಮಕ್ಕಳೊಂದಿಗೆ ಅಸಹಾಯಕ ತಾಯಿ

ಕೊಕ್ಕಡ, ಎ.16: ಪಟ್ರಮೆ ಗ್ರಾಮದ ಅನಾರು ಸಮೀಪದ ಮೈಕೆ ಎಂಬಲ್ಲಿ ಗಿರಿಜ ಗೌಡ ಎಂಬವರ ಬಡ ಕುಟುಂಬವು ಮಳೆಗಾಲವನ್ನು ಹೇಗೆ ಕಳೆಯುವುದು ಎಂಬ ಚಿಂತೆಯಲ್ಲಿದೆ.ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅನಾರು ಸಮೀಪದ ಮೈಕೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಕೆಲವು ವರ್ಷಗಳಿಂದ ಗುಡಿಸಲು ರೀತಿಯ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆ, ಸಣ್ಣ ಸಣ್ಣ ಮಕ್ಕಳೊಂದಿಗೆ ತೀರಾ ಬಡತನದಲ್ಲಿದೆ. ಈ ಕುಟುಂಬಕ್ಕೆ ಸರಕಾರೀ ಜಾಗದಲ್ಲಿ ಮನೆ ಕಟ್ಟಿರುವುದರಿಂದ ಮನೆ ನಂಬ್ರ ಕೊಡಲಾಗುತ್ತಿಲ್ಲ, ಮನೆ ನಂಬ್ರ ಸಿಗದೇ ಪಡಿತರ ಚೀಟಿ ಇಲ್ಲ. ಬಡವರಿಗೆ […]
ಲಾಕ್ ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ಉದ್ಯೋಗ್ಯ ಭಾಗ್ಯ

ಕೃಷಿ ಚಟುವಟಿಕೆಗಳನ್ನು ಈ ಭಾರಿಯ ಲಾಕ್ ಡೌನಿನ ನಿಷೇದಾಜ್ಞೆಯಿಂದ ಹೊರಗಿಡಲಾಗಿದೆ. ಇದರೊಂದಿಗೆ ಎಪ್ರಿಲ್ 20ರ ನಂತರ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ಉದ್ಧೇಶದಿಂದ ಕಟ್ಟಡ, ರಸ್ತೆ, ಸೇತುವೆ ಮುಂತಾದ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಇದರೊಂದಿಗೆ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನಿರ್ವಹಿಸಲು ಗ್ರಾಮ ಪಂಚಾಯತುಗಳಿಗೆ ಸೂಚಿಸಲಾಗಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮೂಲಕ ಗ್ರಾಮಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ಸದಸ್ಯರಿಗೂ ಉದ್ಯೋಗ ಸಿಗುವಂತೆ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಬೆಳ್ತಂಗಡಿಯ ತಹಶೀಲ್ದಾರ್ […]
ಸೌತಡ್ಕ ದೇವಳ-ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೊಕ್ಕಡ ಕಂದಾಯ ನಿರೀಕ್ಷಕರು

ಕೊಕ್ಕಡ: ಕೊಕ್ಕಡದ ಶ್ರೀ ಸೌತಡ್ಕ ಶ್ರೀ ಮಹಾಗಣಪತಿ ದೇವಳದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೊಕ್ಕಡ ಹೋಬಳಿಯ ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿಯವರು ಬುಧವಾರದಂದು ತಮ್ಮ ಕರ್ತವ್ಯಕ್ಕೆ ಹಾಜರಾದರು. ಕೊಕ್ಕಡ ನಾಡಕಛೇರಿ ವ್ಯಾಪ್ತಿಯ ಕಂದಾಯ ನಿರೀಕ್ಷಕರಾಗಿ ಇತ್ತೀಚೆಗಷ್ಟೆ ಕರ್ತವ್ಯಕ್ಕೆ ನಿಯುಕ್ತರಾಗಿದ್ದರು. ಸೌತಡ್ಕ ದೇವಳದಲ್ಲಿ ಈ ವರೆಗೆ ಕರ್ತವ್ಯದಲ್ಲಿದ್ದ ಹರಿಶ್ಚಂದ್ರ ಅವರು ಮಂಗಳವಾರದಂದು ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಬುಧವಾರದಂದು ಇವರು ಕೂಡಲೆ ಈ ಕರ್ತವ್ಯಕ್ಕೆ ನಿಯುಕ್ತಿಗೊಂಡಿರುತ್ತಾರೆ. ಕಛೇರಿಯ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ ನೂತನ ಅಧಿಕಾರಿ ಮುಂದಿನ ಕಾರ್ಯಗಳ ಕುರಿತು ದೇವಳದ […]
ಅಳದಂಗಡಿಯಲ್ಲಿ ಸಾನಿಟೈಸರ್ ಸಿಂಪರಣೆ

ಬೆಳ್ತಂಗಡಿ : ಅರಕ್ಷಕ ಠಾಣೆ ವೇಣೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿ, ಗ್ರಾ.ಪಂ.ಅಳದಂಗಡಿ, ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ, ಶ್ರೀ ಗುರು ಚೈತನ್ಯ ಸೇವಾಶ್ರಮ ವೇಣೂರು ಇವರ ಜನಜಾಗೃತಿ ಅಭಿಯಾನದ ಅಂಗವಾಗಿ ಬುಧವಾರ ಅಳದಂಗಡಿ ಪರಿಸರದ ಇನ್ನೂರಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳ ಎದುರು ಎರಡು ತಂಡಗಳಲ್ಲಿ ಸ್ಯಾನಿಟೈಸರ್ ಸಿಂಪಡನೆ ನಡೆಯಿತು.ವೇಣೂರು ಎಸ್‌ಐ ಲೋಲಾಕ್ಷ, ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರು, ಡಾ. ಶಶಿಧರ ಡೋಂಗ್ರೆ, ಶಿವಪ್ರಸಾದ ಅಜಿಲ, ಅಳದಂಗಡಿ- ಸುಲ್ಕೇರಿ ಪಿಡಿಓ ಮಾರ್ಗದರ್ಶನದಲ್ಲಿ ಸಿಂಪಡನೆ ನಡೆಯಿತು.
ಬೆಳ್ತಂಗಡಿ ಲಯನ್ಸ್ ಕ್ಲಬ್ ಸೇವಾಪಥದಡಿ ಕಾರ್ಯಕ್ರಮಗಳು

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಪ್ರಥಮ ಹಂತದ ಲಾಕ್‍ಡೌನ್ ಅವಧಿಯಲ್ಲಿ ಹಲವು ಸೇವಾ ಕಾರ್ಯಕ್ರಮಗಳು ಜರಗಿದವು. ತಾಲೂಕಿನ ವಿವಿದೆಡೆ 5 ಕೊರೋನಾ ಜಾಗೃತಿ ನಾಮಫಲಕ, ವಿವಿದೆಡೆ ಸುಮಾರು 2240 ಮಾಸ್ಕ್ ವಿತರಣೆ, ವಿವಿಧ ಸಂಘ ಸಂಸ್ಥೆಗಳ ಮುಖೇನ ಸುಮಾರು 8200 ಕರಪತ್ರಗಳ ಒದಗಣೆ, ತಾಲೂಕಿನ ಅರ್ಹ 43 ಆಯ್ದ ಫಲಾನುಭವಿ ಕುಟುಂಬಗಳಿಗೆ ತಲಾ ರೂ. 940 ವೆಚ್ಚದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಈಗಾಗಲೆ ನಡೆದಿದೆ. ಕ್ಲಬ್ಬಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಫಲಾನುಭವಿಗಳ ಮನೆಗೆ ತೆರಳಿ ಕಿಟ್ […]
ಕಾಂಚೋಡು ಗೋಪಾಲಕೃಷ್ಣ ಅವರ ಸೈನಿಕ ಅನುಭವ ಕಥನ

ಪ್ರಸ್ತುತ ಉಜಿರೆಯಲ್ಲಿ ಕೃಷಿಕರಾಗಿ ನೆಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಾಂಚೋಡಿನವರಾದ ಗೋಪಾಲಕೃಷ್ಣ ಅವರು ಹದಿನೆಂಟು ವರ್ಷಗಳ ಕಾಲ ಭಾರತೀಯ ಭೂಸೇನೆಯ ಫಿರಂಗಿ ದಳದಲ್ಲಿ ಕೆಲಸ ಮಾಡಿದವರು.ಅವರ ಸೈನಿಕ ಅನುಭವಗಳ ಬಗ್ಗೆ ಅರವಿಂದ ಚೊಕ್ಕಾಡಿಯವರು ಬರೆಯುತ್ತಿರುವ ಪುಸ್ತಕ ‘ ಕ್ಷಮತೆ’ಯನ್ನು ವಿಜಯಪುರದ ಚಾಣಕ್ಯ ಪ್ರಕಾಶನದವರು ಪ್ರಕಟಿಸುತ್ತಿದ್ದು,ಈ ಕೃತಿಯು ಪೂರ್ಣಗೊಂಡಿದ್ದರೂ;ಕೋವಿಡ್-19ರ ಕಾರಣದಿಂದ ಇದೇ ಜೂನ್ ತಿಂಗಳಲ್ಲಿ ಓದುಗರ ಕೈ ಸೇರುವ ನಿರೀಕ್ಷೆ ಇದೆ. ಶ್ರೀಲಂಕಾದ ಶಾಂತಿಪಾಲನಾ ಪಡೆಯ ಕಾರ್ಯಾಚರಣೆ,ಕಾಶ್ಮೀರದ ಕಾರ್ಯಾಚರಣೆ,ಜೋಝಿಲಾ ಪಾರ್ ಕಾರ್ಯಾಚರಣೆ,ಚೀನಾದ ಗಡಿ […]
ಸಂಪಾದಕೀಯ

ದೇಶದಲ್ಲಿ ಕೊರೋನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದೃಢ ಸಂಕಲ್ಪ ತೊಟ್ಟಿದ್ದು; ಲಾಕ್ ಡೌನಿನಂತಹ ಕಠಿಣ ಕ್ರಮಗಳನ್ನು ಕೈಗೊಂಡಿದೆ. ದೇಶದ 90%ಜನತೆ ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಸರಕಾರದೊಂದಿಗೆ ಕೈಜೋಡಿಸಿದ್ದು; ರಾಷ್ಟ್ರ ಸಂಕಷ್ಟವನ್ನೆದುರಿಸುವಾಗ ನಮ್ಮ ಅಭಿಪ್ರಾಯ ಭೇದಗಳನ್ನು ಬದಿಗಿರಿಸಿ, ಮನುಕುಲದ ವೈರಿಯಾದ ಕೊರೋನಾ ಸೋಂಕಿನ ವಿರುದ್ಧ ಹೋರಾಡುವ ಒಂದಂಶದ ಕಾರ್ಯಕ್ರಮದಲ್ಲಿ ಸರಕಾರದ ಜೊತೆಗಿರಲು ತೀರ್ಮಾನಿಸಿದ್ದಾರೆ. ದೇಶದ ನಾಗರಿಕರ ಈ ಮೌಲ್ಯಾಧಾರಿತ ನಡೆಯನ್ನೇ ಆಡಳಿತಾರೂಢ ಪಕ್ಷದ ಕೆಲ ಮರಿಪುಢಾರಿಗಳು ತಮಗೆ ಹಾಗೂ ತಮ್ಮ ಪಕ್ಷಕ್ಕೆ […]
ಸಿರಿಯಿಂದ ಬಡವರಿಗೆ ಕಿಟ್

ಕೋರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್ ಡೌನ್ ನ ಪರಿಸ್ಥಿತಿ ಯಲ್ಲಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ-ಬೆಳ್ತಂಗಡಿಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ಜನಾರ್ದನ ರವರ ನಿರ್ದೇಶನದಂತೆಬೆಳ್ತಂಗಡಿ ತಾಲೂಕಿನ ತೀರಾ ಬಡತನವಿರುವ 200 ಕುಟುಂಬಗಳಿಗೆ ಬದುಕು ಕಟ್ಟೋಣ ಬನ್ನಿ -ಉಜಿರೆ ತಂಡದವರ ಸಹಕಾರ ದಲ್ಲಿ ಆಹಾರೋತ್ಪನ್ನಗಳ ಕಿಟ್ ಗಳನ್ನು ಇತ್ತೀಚೆಗೆ ವಿತರಿಸಲಾಯಿತು.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ರವರು ಕಿಟ್ ಗಳನ್ನು ವಿತರಿಸಿ,ಸಿರಿ ಸಂಸ್ಥೆ ಯ ಸಾಮಾಜಿಕ ಕಳಕಳಿಯ […]
ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಬಡ ಅಸಹಾಯಕರಿಗೆ ಕಿಟ್ ವಿತರಣೆ.

ಇಂದು ಬೆಳಿಗ್ಗೆ ಬೆಳ್ತಂಗಡಿ ರೋಟರಿ ಕ್ಲಬ್ ಲಾಯಿಲ ಗ್ರಾಮದ 20 ಬಡ ಕುಟುಂಬಗಳಿಗೆ ತಿಂಗಳ ಅವಧಿಗೆ ಬೇಕಾದ ಆಹಾರ ಪದಾರ್ಥಗಳ ಕಿಟ್ಗಳನ್ನು ಹಸ್ತಾಂತರ ಮಾಡಿದರು. ಲಾಯಿಲ ಗ್ರಾಮದ ಅರ್ಹ ಫಲಾನುಭವಿಗಳನ್ನು ಪಂಚಾಯತ್ ಸದಸ್ಯರು ಗುರುತಿಸಿ ಸಹಕರಿಸಿದರು. ರೋಟರಿ ಅಧ್ಯಕ್ಷ ರೋ ಜಯರಾಮ್, ನಿಯೋಜಿತ ಅಧ್ಯಕ್ಷ ರೋ ದನಂಜಯ ರಾವ್, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ರಾವ್, ಉಪಾಧ್ಯಕ್ಷ ಶ್ರಿ ಗಿರೀಶ್ ಡೋಂಗ್ರೆ, ತಾಲೂಕು ಪಂಚಾಯತ್ ಪಂಚಾಯತ್ ಸದಸ್ಯ ಶ್ರೀ ಸುಧಾಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ವೆಂಕಟರಮಣ […]
ಸೌತಡ್ಕ ದೇಗುಲದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ವಿಧಿವಶ

ಸೌತಡ್ಕ ದೇಗುಲದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ವಿಧಿವಶಕೊಕ್ಕಡದ ಬಯಲು ಆಲಯ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ (52) ದಿಢೀರ್ ತೀವ್ರ ಅನಾರೊಗ್ಯಕ್ಕೆ ತುತ್ತಾಗಿ, ಎಪ್ರಿಲ್ 14ರಂದು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ವಿಧಿವಶರಾದರು.ಕೆಲ ದಿನಗಳ ಹಿಂದೆಯಷ್ಟೇ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಸೌತಡ್ಕ ದೇಗುಲದ ಗಂಟೆ ಏಲಂ ಪ್ರಕ್ರಿಯೆಯಲ್ಲಿ 1ಕೋಟಿ ರೂಪಾಯಿಗೂ ಅವ್ಯವಹಾರವಾಗಿದೆ ಎಂದು ಆರೋಪಿಸಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರರನ್ನು ಹಗರಣದ ಪ್ರಮುಖ ಆರೋಪಿಯನ್ನಾಗಿಸಿದ್ದರು. ಈ ಬಗ್ಗೆ ತನಿಖೆಗೂ ಆಗ್ರಹಿಸಿದ್ದರು. ತನ್ನ […]