ಬಂಟ್ವಾಳ ತಾಲೂಕು ಇಡ್ಕಿದು ಗ್ರಾ.ಪಂ. ಪಿ.ಡಿ.ಒ ಉದ್ದಟತನದ ಬಗ್ಗೆ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಆಕ್ರೋಶ:

ಕೊಕ್ಕಡ, ಎ.14: ಕೊಕ್ಕಡದ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ರವರು ಮಾಹಿತಿ ಹಕ್ಕಿನಡಿಯಲ್ಲಿ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾ.ಪಂ.ನಿಂದ ಕೇಳಿರುವ ಮಾಹಿತಿಗೆ ಅಸ್ಪಸ್ಟ ಹಾಗೂ ಉದ್ದಟತನದ ಉತ್ತರ ನೀಡಿದ ಇಡ್ಕಿದು ಗ್ರಾ.ಪಂ. ಪಿಡಿಒ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಅಪಾಯಕಾರಿ ಕೀಟನಾಶಕಗಳನ್ನು ಗ್ರಾ.ಪಂ ನೇತೃತ್ವದಲ್ಲಿ ಸಿಂಪಡನೆ ಮಾಡಿ ಕಳೆನಾಶ ಮಾಡಲಾಗಿದ್ದು ಈ ಬಗ್ಗೆ ತಮಗೆ ಬಂದ ಮಾಹಿತಿಯ ಸ್ಪಷ್ಟತೆಗಾಗಿ ಎಂಡೊವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ರವರು ಮಾಹಿತಿ ಹಕ್ಕಿನಡಿ ವಿವರಣೆ ಬಯಸಿ […]

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಸಾಮಾಗ್ರಿ ವಿತರಣೆ

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಮಧ್ವ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ಮಂದಿರ ವ್ಯಾಪ್ತಿಯ 326 ಕುಟುಂಬಿಕರಿಗೆ ಅಕ್ಕಿ ಹಾಗೂ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮ ಎಪ್ರಿಲ್ 14ರಂದು ನಡೆಯಿತು.ಮಧ್ವ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ರಾಜಪ್ರಸಾದ್ ಆರಿಗ, ಗೌರವಾಧ್ಯಕ್ಷ ಸುರೇಂದ್ರ ಪೂಜಾರಿ ಮಧ್ವ, ಪ್ರಧಾನ ಕಾರ್ಯದರ್ಶಿ ನಾಗೇಶ್ ಮಧ್ವ, ಪದಾಧಿಕಾರಿಗಳಾದ ಶಿವಪ್ಪ ಗೌಡ ನಿನ್ನಿಕಲ್ಲು, ಶ್ರೀಧರ ಟೈಲರ್ ಮಧ್ವ, ಪ್ರಕಾಶ್ ಮಧ್ವ, ನಿತಿನ್ ಗುರುವಾಯನಕರೆ, ಯಾದೇಶ್ ರೈ, ಸುರೇಶ್ ಮಧ್ವ, ರಮೇಶ್ ಆಚಾರ್ಯ, ತಿಲಕ್ […]

ಮಾನವಧರ್ಮ ಮೆರೆದ ಧರ್ಮಪ್ರಾಂತ್ಯ

ಬೆಳ್ತಂಗಡಿ: ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ತಾಲೂಕಿನ 250ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರಿಗೆ ಎಪ್ರಿಲ್ 14ರಂದು ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸುವ ಮೂಲಕ ಬೆಳ್ತಂಗಡಿ ಉದಯನಗರ ಕ್ರೈಸ್ತ ಧರ್ಮಪ್ರಾಂತ್ಯ ಹಾಗೂ ಡಿ ಕೆ.ಡಿ.ಆರ್.ಎಸ್. ಸಂಸ್ಥೆಯವರು ತಾಲೂಕಿನ 1000 ಅರ್ಹ ಕುಟುಂಬಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಈ ಮಾನವಧರ್ಮ‌ ಕಾರ್ಯದ ಚಾಲನಾ ಪ್ರಕ್ರಿಯೆಯಲ್ಲಿ ಬೆಳ್ತಂಗಡಿ ತಾಲೂಕು […]

ಅಂಬೇಡ್ಕರ್ ಜಯಂತಿಯಲ್ಲಿ ಸಾಮಾಜಿಕ ಅಂತರ

ಬೆಳ್ತಂಗಡಿ: ಕೊರೋನಾ ಸೋಂಕು ಹರಡುವಿಕೆಯ ಭೀತಿಯ ಹಿನ್ನೆಲೆಯಲ್ಲಿ ಸರಕಾರಿ ಪ್ರಾಯೋಜಿತ ಅಂಬೇಡ್ಕರ್ ಜಯಂತಿಯನ್ನು ಎಪ್ರಿಲ್ 14ರಂದು ಬೆಳ್ತಂಗಡಿಯ ಮಿನಿವಿಧಾನಸೌಧದ ಸಭಾಂಗಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಂಕೇತಿಕವಾಗಿ ಆಚರಿಸಲಾಯಿತು.ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಆಚರಿಸಲಾದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕು ಪಂಚಾಯತಿನ ಕಾರ್ಯನಿರ್ವಹಣಾಧಿಕಾರಿ ಜಯರಾಮ್, ಸಮಾಜ ಕಲ್ಯಾಣ ಇಲಾಖೆಯ ಹೇಮಾವತಿ, ತಾಲೂಕು ಪಂಚಾಯತಿನ ಜಯಾನಂದ ಮತ್ತಿತರರು ಹಾಜರಿದ್ದರು.ಎಲ್ಲ ಸರಕಾರಿ ಅಧಿಕಾರಿಗಳು […]

ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಬೆಳ್ತಂಗಡಿ: ಕೊರೋನಾ ಸೋಂಕಿನ ವಿರುದ್ಧದ ಹೋರಾಟದ ಅಂಗವಾಗಿ ಲಾಕ್ ಡೌನ್ ಘೋಷಿಸಿದ ಸರಕಾರ; ಅಗತ್ಯ ಕೆಲಸಗಳಿಗೆ ಮಾತ್ರ ಮಧ್ಯಾಹ್ನ 12 ಗಂಟೆವರೆಗೆ ಸಮೀಪದ ಅಂಗಡಿಗೆ ಹೋಗಿ ಬರಲು ಅವಕಾಶ ಕಲ್ಪಿಸಿದೆ. ಕೃಷಿಕರಿಗೆ ಇದೇ ಸಂದರ್ಭದಲ್ಲಿ ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಸರಕಾರ ಲಾಕ್ ಡೌನ್ ನ ಸಂದರ್ಭ ಅಗತ್ಯಗಳಿಗೆ ನೀಡಿದ ವಿನಾಯಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಕೆಲವರು ಮನಬಂದಂತೆ ತಮ್ಮ ವಾಹನವೇರಿ ಸುತ್ತಾಡುತ್ತಿದ್ದಾರೆ. ಇಂತಹ ವಿವೇಚನಾರಹಿತರಿಗೆ ಬಿಸಿ ಮುಟ್ಟಿಸುವ ಕೆಲಸ ಎಪ್ರಿಲ್ 14ರ ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್ […]

ಪಟ್ರಮೆ-8 ಕುಟುಂಬಗಳಿಗೆ ಇನ್ನೂ ಪಡಿತರ ಚೀಟಿಯೇ ಇಲ್ಲ

ಕೆಲವೊಂದು ಕಾನೂನಿನ ತೊಡಕಿನಲ್ಲಿ ಮನೆ ನಂಬರ್ , ರೇಷನ್ ಕಾರ್ಡು ವಂಚಿತ ಕುಟುಂಬಗಳುಲಾಕ್ ಡೌನ್ ನ ಪರಿಸ್ಥಿತಿಯಲ್ಲಿ ಸರಕಾರದ ಪಡಿತರ ಪಡೆಯಲೂ ವಿಫಲವಾದ ಕುಟುಂಬಗಳುವಿಶೇಷ ವರದಿ: ಗುರುಮೂರ್ತಿ.ಎಸ್.ಕೊಕ್ಕಡ. ಕೊಕ್ಕಡ: ಪಟ್ರಮೆ ಗ್ರಾಮದ ಅನಾರು ಭಾಗದ ಸುಮಾರು ಏಳೆಂಟು ಕುಟುಂಬಗಳು ಜೀವನಾಧಾರವಾದ ಮೂಲಭೂತ ಅವಶ್ಯಕತೆಯ ಪಡಿತರ ಚೀಟಿಯಿಲ್ಲದ ಸ್ಥಿತಿಯಲ್ಲಿದ್ದು ಇದೀಗ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭ ಈ ಕುಟುಂಬಗಳ ಸದಸ್ಯರಿಗೆ ಸರಕಾರದಿಂದ ನೀಡಲ್ಪಡುವ ಪಡಿತರ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ.ಒಂದೊಂದು ಕುಟುಂಬಗಳ ಕಥೆಯೂ ತೀರಾ ವಿಭಿನ್ನ. ಸುಮಾರು ಹತ್ತಾರು ವರ್ಷಗಳಿಂದ […]

ಸಹಾಯಹಸ್ತ

ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ಪಿಲಿಕುಡೇಲು ನಿವಾಸಿ ಗಜಾನನ ಡೋಂಗ್ರೆ ಇವರ ಪತ್ನಿಯ ಔಷಧೋಪಚಾರಗಳಿಗಾಗಿ ಸೂಳಬೆಟ್ಟು ವಾಳ್ಯದ ಶ್ರೀರೌದ್ರಭೈರವೀ ಸಹಪರಿವಾರ ಹೋರಾಡಿ ದೈವಸ್ಥಾನದ ಜೀರ್ಣೋದ್ದಾರ ಸಮಿತಿ ವತಿಯಂದ ನಗದು ಸಹಾಯಧನವನ್ನು ಎಪ್ರಿಲ್ 13ರಂದು ಅವರ ನಿವಾಸಕ್ಕೆ ತೆರಳಿ ನೀಡಲಾಯಿತು.ಸಮಿತಿ ಅಧ್ಯಕ್ಷ ನಿರಂಜನ ಜೋಶಿ, ಕಾರ್ಯದರ್ಶಿ ರಾಜೇಂದ್ರ ಗೋಖಲೆ, ಜತೆ ಕಾರ್ಯದರ್ಶಿ ದೀಪಕ ಆಠವಳೆ, ದಂತ ವೈದ್ಯ ಡಾ.ಶಶಿಧರ ಡೋಂಗ್ರೆ, ಸ್ಥಳೀಯ ನಿವಾಸಿ ರಮಾನಾಥ ನಾತು ಇದ್ದರು.

ಸೌತಡ್ಕ – ತಹಶೀಲ್ದಾರ್ ರವರಿಗೆ ಅಧಿಕಾರ ಹಸ್ತಾಂತರಿಸಿದ ಆಡಳಿತ ಮಂಡಳಿ

ಕೊಕ್ಕಡ ಎ.13: ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕೊಕ್ಕಡದ ಶ್ರೀ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳೆದ 3 ವರ್ಷಗಳಿಂದ ಆಡಳಿತದಲ್ಲಿದ್ದ ವ್ಯವಸ್ಥಾಪನಾ ಸಮಿತಿಯ ಅವಧಿಯು ಮಾರ್ಚಿ 30 ರಂದು ಮುಕ್ತಾಯವಾಗಿದ್ದು ಎಪ್ರಿಲ್ 8 ರಂದು ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಬರಾಯ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ವಿಶ್ವನಾಥ ಕೊಲ್ಲಾಜೆ, ಪಿ.ವಿಶ್ವನಾಥ ಶೆಟ್ಟಿ, ಪ್ರಶಾಂತ್ ರೈ ಅರಂತಬೈಲು, ಅಣ್ಣಪ್ಪ ಗೌಡ ಕಾಶಿ, ಗಣೇಶ ಪಿ.ಕೆ., ಸಿನಿ […]

ಮಧ್ಯಮವರ್ಗದವರ ಸಂಕಷ್ಟಕ್ಕೆ ಎಂ.ಎಲ್.ಸಿ. ಹರೀಶ್ ಕುಮಾರ್ ಸಹಾನುಭೂತಿ

ಬೆಳ್ತಂಗಡಿ: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಸರಕಾರ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಜನಸಾಮಾನ್ಯರು ದಿನಬಳಕೆಯ ವಸ್ತುಗಳಿಗೆ ಪರದಾಡಬೇಕಾದ ಸಂದಿಗ್ಧ ಸ್ಥಿತಿ ಬಂದೊದಗಿದೆ. ಇದರಲ್ಲೂ ಸಿರಿವಂತರು ಹೇಗಾದರೂ ನಿಭಾಯಿಸುತ್ತಾರೆ. ಬಡವರಿಗೆ ಬಿಪಿಎಲ್ ಪಡಿತರ ಯೋಜನೆಯ ಮೂಲಕ ಸರಕಾರದ ಅನ್ನಭಾಗ್ಯ ಯೋಜನೆಯ ಸೌಲಭ್ಯಗಳಿವೆ. ಇಂದು ನಿಜವಾಗಿ ಹೆಚ್ಚು ಸಂಕಷ್ಟಕ್ಕೊಳಗಾಗಿರುವವರು ನಾಡಿನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ ಕುಟುಂಬಿಕರು ಎಂದು ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಅಭಿಪ್ರಾಯಿಸಿದರು.ಅವರು ಎಪ್ರಿಲ್ 13ರಂದು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ತಾಲೂಕಿನ‌ […]