ಬೆಳ್ತಂಗಡಿಯಲ್ಲಿ ಸರಕಾರಕ್ಕೇ ಸವಾಲಾದ ವ್ಯಾಪಾರಿಗಳು

ಗ್ರಾಹಕರಲ್ಲಿ ಸಾಮಾಜಿಕ ಅಂತರವೂ ಇಲ್ಲ, ವ್ಯಾಪಾರಿಗಳಿಗೆ ಸರಕಾರದ ಸೂಚನೆ ಪಾಲಿಸಬೇಕೆಂಬ ಜ್ಞಾನವೂ ಇಲ್ಲ. ದಿನಬಳಕೆಯ ವಸ್ತುಗಳ ಅಂಗಡಿಯೊಂದಿಗೆ ಪ್ಯಾನ್ಸಿ, ಚಪ್ಪಲಿ, ಹಾರ್ಡ್ ವೇರ್, ಜೆರಾಕ್ಸ್, ಹೊಟೇಲ್, ಕೋಲ್ಡ್ ಹೌಸ್ ಗಳು, ಪೈಪುಗಳು-ಫಿಟ್ಟಿಂಗ್ ಗಳು, ವಿದ್ಯುತ್ ಉಪಕರಣಗಳ ಮಳಿಗೆ ಹೀಗೆ ಎಲ್ಲ ಅಂಗಡಿಗಳನ್ನು ತೆರೆದು ರಾಜಾರೋಷವಾಗಿ ಸರಕಾರಕ್ಕೇ ಸವಾಲು ಹಾಕಿ ವ್ಯವಹಾರ ನಡೆಸುವ ದೃಶ್ಯ ಸಾಮಾನ್ಯವಾಗಿತ್ತು. ಇದು ಎಪ್ರಿಲ್ 13ರ ಸೋಮವಾರ ವಾರದ ಸಂತೆಯ ದಿನ ಬೆಳ್ತಂಗಡಿ ಪೇಟೆಯಲ್ಲಿ ಕಂಡುಬಂದ ದೃಶ್ಯ. ಕೊರೋನಾ ಸೋಂಕು ಹರಡುವಿಕೆ ತಡೆಯಲು ತಾಲೂಕು […]
ಮೇಷ ಜಾತ್ರೆ ರದ್ದು

ಮೇಷ ಜಾತ್ರೆ ರದ್ದುಮಚ್ಚಿನ: ರಾಜ್ಯ ಸರಕಾರ ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಇಡೀ ರಾಜ್ಯಕ್ಕೆ ಲಾಕ್ ಡೌನ್ ಘೋಷಿಸಿ; ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಅದರಂತೆ ನಾಡಿನ ಪ್ರಖ್ಯಾತ ದೇಗುಲಗಳಲ್ಲಿ ಒಂದಾದ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಅರ್ಚಕರು, ತಂತ್ರಿಗಳು ಹಾಗೂ ದೈವಜ್ಞರಲ್ಲಿ ಚರ್ಚಿಸಿ ದೇಗುಲದ ವರ್ಷಾವಧಿ ಜಾತ್ರೆಯನ್ನು ರದ್ದುಪಡಿಸಲಾಗಿದೆ ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾl ಹರ್ಷ ಸಂಪಿಗೆತ್ತಾಯ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ. ನಿಗದಿಯಂತೆ ಎಪ್ರಿಲ್ ತಿಂಗಳ 23ರಿಂದ ಮೇ ತಿಂಗಳ […]
ಸಿ.ಎಂ. ಕಾಳಜಿ ಒ.ಕೆ.-ಮಾಸ್ಕ್ ಸರಿಯಾಗಿ ಧರಿಸಿಲ್ಲ ಯಾಕೆ…

ಸಿ.ಎಂ. ಕಾಳಜಿ ಒ.ಕೆ.-ಮಾಸ್ಕ್ ಸರಿಯಾಗಿ ಧರಿಸಿಲ್ಲ ಯಾಕೆ… ಕೊರೋನಾ ವಿರುದ್ಧದ ಹೋರಾಟದ ಅಂಗವಾಗಿ ಲಾಕ್ ಡೌನ್ನಿಗೆ ಕರೆ ನೀಡಿರುವ ತನ್ನ ಸರಕಾರದ ಕಾರ್ಯಾಚರಣೆಯ ರಿಯಾಲಿಟಿ ಚೆಕ್ ಗೆ ಇಳಿದ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರು ಎಪ್ರಿಲ್ 12ರ ಮಧ್ಯಾಹ್ನ ಯಾರಿಗೂ ಪೂರ್ವಸೂಚನೆ ನೀಡದೇ; ಬೆಂಗಳೂರು ನಗರದ ಯಶವಂತಪುರ, ಗೋರಗುಂಟೆಪಾಳ್ಯ ಸಹಿತ ಸಾಕಷ್ಟು ಕಡೆಗಳಲ್ಲಿ ಪರಿಶೀಲನೆ ನಡೆಸಿದರು. ಇಳಿ ವಯಸ್ಸಿನಲ್ಲೂ ರಾಜ್ಯದ ಜನತೆಯ ಬದುಕಿನ ಬಗ್ಗೆ ಕಾಳಜಿ ಹೊತ್ತು, ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಸ್ವತಹ ಆಖಾಡಕ್ಕೆ […]
ದೀಪ ಪ್ರಜ್ವಲನ-ಅವರವರ ಭಾವಕ್ಕೆ

ದೀಪ ಪ್ರಜ್ವಲನ-ಅವರವರ ಭಾವಕ್ಕೆ ಎಪ್ರಿಲ್ 5ರ ರಾತ್ರಿ 9ಗಂಟೆಗೆ ದೇಶದ ನಾಗರಿಕರು ಪ್ರಧಾನಿ ನರೇಂದ್ರ ಮೋದಿಯ ಕರೆಗೆ ಸ್ಪಂದಿಸಿ, ರಾಜಕೀಯ ಪಕ್ಷ, ಜಾತಿ, ಧರ್ಮ ಸಹಿತ ಎಲ್ಲ ಭೇದವನ್ನು ಬದಿಗಿರಿಸಿ; ತಮ್ಮ ತಮ್ಮ ಮನೆಯ ಹೊರಗಡೆ ದೀಪವನ್ನು ಬೆಳಗುವ ಮೂಲಕ ರಾಷ್ಟ್ರ ಸಂಕಷ್ಟದಲ್ಲಿರುವ ಸಂದರ್ಭಗಳಲ್ಲಿ ನಾವು ಏಕತೆಯಿಂದ ದೇಶದ ಸರಕಾರದ ಜೊತೆಗಿರುತ್ತೇವೆ ಎಂಬ ಸಂದೇಶ ಸಾರಿದರು. ಆ ಮೂಲಕ ಹೆಮ್ಮಾರಿ ಕೊರೋನಾ ವಿರುದ್ಧದ ಹೋರಾಟಕ್ಕೆ ಸರಕಾರಕ್ಕೆ ಸಾಥ್ ನೀಡಿದರು. ಇನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ […]
ತಮಸೋಮಾ ಜ್ಯೋತಿರ್ಗಮಯ

-ಅರವಿಂದ ಚೊಕ್ಕಾಡಿ ಹೇಗೆ ಒಬ್ಬರಿಂದ ಒಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಂಡರೆ ಕಾಯಿಲೆಯನ್ನು ತಡೆಯ ಬಹುದೆಂದು ಗೊತ್ತಿದ್ದರೂ ಅದನ್ನು ಮಾಡದೆ ಅಜ್ಞಾನವನ್ನು ಪ್ರದರ್ಶಿಸಿದ್ದೇವೆಯೋ ಅದೇ ರೀತಿಯಲ್ಲಿ ನಮ್ಮ ಮನೆಯಲ್ಲಿದ್ದ ವಿದ್ಯುತ್ ದೀಪಗಳನ್ನು ನಾವೇ ನಂದಿಸಿ ಕತ್ತಲನ್ನು ಆಹ್ವಾನಿಸಿಕೊಂಡಿದ್ದೇವೆ;ಕೊರೋನಾವನ್ನು ಆಹ್ವಾನಿಸಿಕೊಂಡಂತೆ. ಆ ಕತ್ತಲೆಯಲ್ಲಿಯೇ ಹಣತೆಯಲ್ಲಿ ದೀಪವನ್ನು ಬೆಳಗಿದ್ದೇವೆ.ಕೊರೋನಾವನ್ನು ತಡೆಯುವ ಶಕ್ತಿ ನಮಗಿದೆ ಎಂದು ನಾವೇ ದೃಢಪಡಿಸಿಕೊಂಡಿದ್ದೇವೆ.ಇದು ಜ್ಞಾನದ ಹಣತೆ.ಮೇಲ್ಮುಖಿಯಾಗಿ ಚಲಿಸುವ ಹಣತೆ ಮಾತ್ರವೇ ಜ್ಞಾನದ ಹಣತೆ.ಈ ಹಣತೆಯನ್ನು ಬೆಳಗಿದ ನಂತರವಾದರೂ ನಮ್ಮ ಮೂರ್ಖತನವು ತೊಲಗಲಿ. ಆತ್ಮವನ್ನು ನಾವು ಜ್ಯೋತಿ ರೂಪದಲ್ಲಿ […]