ವಿಶಿಷ್ಟ ರೀತಿಯಲ್ಲಿ ಮಹಾತ್ಮಾ ಗಾಂಧೀಜಿ ಜಯಂತಿ ಆಚರಣೆ

ಬೆಳ್ತಂಗಡಿ: ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಬೆಳ್ತಂಗಡಿ, ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಬಂಟ್ವಾಳ ಬ್ರಾಂಚ್ ಮತ್ತು ಜೆಸಿಐ ಸೀನಿಯರ್ ಛೇಂಬರ್‌ಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಆಚರಣೆಯನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಯಿತು.ಬೆಳ್ತಂಗಡಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದ್ದಲ್ಲದೇ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಅತ್ಯಂತ ವಿಶಿಷ್ಟವಾಗಿ ಮಹಾತ್ಮಾ ಗಾಂಧೀಜಿ ಜಯಂತಿ ಆಚರಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.ಈ ಸಂದರ್ಭದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್, ನ್ಯಾಷನಲ್ ಇನ್ಶುರೆನ್ಸ್ […]

‘ಸೈನಿಕರನ್ನು ಗುರುತಿಸಿ ಗೌರವಿಸುವ ನಾಗರಿಕ ಪ್ರಜ್ಞೆ ಹೆಚ್ಚಾಗಿದೆ’

‘lಬೆಳ್ತಂಗಡಿ: ಕಾರ್ಗಿಲ್ ಯುದ್ಧದ ವಿಜಯದ ಬಳಿಕ ನಮ್ಮ ದೇಶವನ್ನು ಕಾಯುವ ವೀರ ಯೋಧರನ್ನು ಗುರುತಿಸಿ ಗೌರವಿಸುವ ನಾಗರಿಕ ಪ್ರಜ್ಞೆ ಹೆಚ್ಚಾಗಿದೆ ಎಂದು ಅಂಕಣಕಾರ ಆದರ್ಶ ಗೋಖಲೆ ಅಭಿಪ್ರಾಯಪಟ್ಟರುಅವರು ಅಕ್ಟೋಬರ್ 2ರಂದು ಮದ್ದಡ್ಕದ ವೀರಯೋಧ ಏಕನಾಥ ಶೆಟ್ಟಿ ಸಭಾ ವೇದಿಕೆಯಲ್ಲಿ ನಾಗರಿಕ ಅಭಿನಂದನಾ ಸಮಿತಿಯಿಂದ ಕುವೆಟ್ಟು ಹಾಗೂ ಓಡಿಲ್ನಾಳ ಗ್ರಾಮದ 35 ಸಂಘ ಸಂಸ್ಥೆಗಳು ಒಟ್ಟು ಸೇರಿ ಭಾರತೀಯ ಭೂಸೇನೆಯಲ್ಲಿ ಸುದೀರ್ಘ 24 ವರ್ಷಗಳ ಕಾಲ ಭಾರತ ಮಾತೆಯ ಸೇವೆಗೈದು ವೃತ್ತಿಯಿಂದ ನಿವೃತ್ತಿ ಹೊಂದಿ ತಾಯ್ನಾಡಿಗೆ ಆಗಮಿಸಿದ ಹೆಮ್ಮೆಯ […]

ಅಂಗನವಾಡಿ ನೌಕರರ ವೇತನ ಪಾವತಿಗೆ ಆಗ್ರಹ

ಬೆಳ್ತಂಗಡಿ: ಅಂಗನವಾಡಿ ನೌಕರರಿಗೆ ಕಳೆದ ಜುಲೈ ತಿಂಗಳಿಂದ ವೇತನ ನೀಡದೇ ಸತಾಯಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ಖಂಡನೀಯ ಹಾಗೂ ಇದು ಮಹಿಳಾ ಶೋಷಣೆಯೋ ಅಲ್ಲ, ಮಹಿಳೆಯರನ್ನು ಜೀತದಾಳುಗಳಂತೆ ದುಡಿಸುವ ಹುನ್ನಾರವೋ ಎಂಬುದನ್ನು ಎರಡೂ ಸರಕಾರಗಳು ಜಂಟಿ ಜವಾಬ್ದಾರಿಯಿಂದ ನಡೆಸುವ ಈ ಐಸಿಡಿಎಸ್ ಯೋಜನೆಯ ಅವ್ಯವಸ್ಥೆಯ ಬಗ್ಗೆ ಉತ್ತರಿಸಬೇಕಿದೆ ಎಂದು ಸಿಐಟಿಯು ಮುಖಂಡ ಬಿ.ಎಂ. ಭಟ್ ಹೇಳಿದರು. ಅಂಗನವಾಡಿ ನೌಕರರ 3 ತಿಂಗಳ ವೇತನ ಬಾಕಿಯನ್ನು ತಕ್ಷಣ ಪಾವತಿಗೆ ಆಗ್ರಹಿಸಿ ಹಾಗೂ ಸರಕಾರ ತನ್ನ ಆದೇಶದಂತೆ […]

‘ಮಹಾತ್ಮಾ ಗಾಂಧೀಜಿಯವರ ಬದುಕು ನಮಗೆ ಪ್ರೇರಣೆಯಾಗಲಿ’

ಬೆಳ್ತಂಗಡಿ: ಗಾಂಧೀಜಿ ಭಾರತಕ್ಕೆ ಮಾತ್ರವಲ್ಲ; ಇಡೀ ವಿಶ್ವಕ್ಕೆ ನಾಯಕರು. ಗಾಂಧೀಜಿಯವರ ಸಮಯಪ್ರಜ್ಞೆ, ಸರಳ ಜೀವನ, ಸೇವಾ ಮನೋಭಾವ, ಸ್ವಚ್ಛತೆ, ನುಡಿದಂತೆ ನಡೆದ ಅವರ ಬದುಕು ನಮಗೆಲ್ಲಾ ಪ್ರೇರಣೆಯಾಗಬೇಕು ಎಂದು ನಿವೃತ್ತ ಉಪನ್ಯಾಸಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗಮಕ ಕಲಾ ಪರಿಷತ್ತು ಅಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯ ಹೇಳಿದರು.ಅವರು ಅಕ್ಟೋಬರ್ 2ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯ ಸಭಾಂಗಣದಲ್ಲಿ ನಡೆದ ಮಹಾತ್ಮಾ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಮಹಾತ್ಮಾ ಗಾಂಧೀಜಿಯವರು ನಮ್ಮನ್ನು ಅಗಲಿ ಎಷ್ಟೋ […]

‘ಮದ್ಯಪಾನವು ವಿಷ ಮತ್ತು ದೋಷಪೂರ್ಣವಾಗಿದೆ’

ಬೆಳ್ತಂಗಡಿ: ಮೊದಲು ಮನುಷ್ಯ ಮದ್ಯಪಾನ ಸೇವಿಸುತ್ತಾನೆ. ನಂತರ ಮದ್ಯಪಾನ ಮನುಷ್ಯನನ್ನು ಸೇವಿಸುತ್ತದೆ. ಕೊನೆಗೆ ಮದ್ಯಪಾನ ಮದ್ಯಪಾನವನ್ನೇ ಸೇವಿಸುತ್ತದೆ. ಈ ಹಂತಕ್ಕೆ ವ್ಯಸನ ಅನ್ನುತ್ತಾರೆ. ಮದ್ಯಪಾನದ ವ್ಯಸನವು ನಮ್ಮ ಬದ್ಧತೆ ಮತ್ತು ತೀರ್ಮಾನಗಳಲ್ಲಿ ದೋಷವುಂಟು ಮಾಡಿ ಮನಸ್ಸು ಮತ್ತು ಶರೀರಕ್ಕೆ ಅಪಾಯ ತಂದೊಡ್ಡುತ್ತದೆ. ಆದುದರಿಂದ ಮದ್ಯಪಾನವು ವಿಷ ಮತ್ತು ದೋಷಪೂರ್ಣವಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ತ್ಯಜಿಸುವ ಸಂಕಲ್ಪ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ […]

ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ಬೆಳ್ತಂಗಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ, ರಾಷ್ಟೀಯ ಸೇವಾ ಯೋಜನೆ ಶ್ರೀ ಮಹಾವೀರ ಪದವಿಪೂರ್ವ ಕಾಲೇಜು ಮೂಡುಬಿದಿರೆಯ ಜಂಟಿ ಆಶ್ರಯದಲ್ಲಿ ರಾಷ್ಟೀಯ ಸೇವಾ ಯೋಜನೆ ಘಟಕದ 7 ದಿನಗಳ ವಾರ್ಷಿಕ ವಿಶೇಷ ಶಿಬಿರ ಪಡ್ಡಂದಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಶಿಬಿರವನ್ನು ಉದ್ಘಾಟಿಸಿದ ಪ್ರಗತಿಪರ ಕೃಷಿಕ ಬಾಲ್ಯ ಶಂಕರ್ ಭಟ್ ಮಾತನಾಡಿ; ಈ ಶಿಭಿರವು ವಿದ್ಯಾರ್ಥಿಗಳಿಗೆ ಜೀವನಕ್ಕೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ. ಜನಸಾಮಾನ್ಯರೊಂದಿಗೆ ಬೆರೆಯುವ, ಅವರ ಸಮಸ್ಯೆಯನ್ನು ಅರಿಯುವ ಅವಕಾಶ ನೀಡುತ್ತದೆ ಎಂದರು.ಮುಖ್ಯ […]

ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಉಜಿರೆ ಶ್ರೀ ಅರಿಪ್ಪಾಡಿ ವಾಣಿಜ್ಯ ಸಂಕೀರ್ಣದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘ(ರಿ)ದ 2ನೇ ವರ್ಷದ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಉಜಿರೆ ಶ್ರೀ ಅರಿಪ್ಪಾಡಿ ಸಭಾಭವನದಲ್ಲಿ ಸಂಘದ ಅಧ್ಯಕ್ಷೆ ಸಾವಿತ್ರಿ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷೆ ಸಾವಿತ್ರಿ ರೈ ಮಾತನಾಡಿ; ತಾಲೂಕಿನ ಎಲ್ಲ ಸದಸ್ಯರ ಪೂರ್ಣ ಸಹಕಾರ, ಮಾರ್ಗದರ್ಶನದಲ್ಲಿ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಆರ್ಥಿಕ ನೆರವಿನ ಅವಶ್ಯವುಳ್ಳವರಿಗೆ ಕ್ಷಿಪ್ರ ಸಾಲ ಸೌಲಭ್ಯ ನೀಡಲು ಬದ್ಧವಿದೆ. ಸಂಘದ ಬೆಳವಣಿಗೆಗೆ ನಿರ್ದೇಶಕರು […]

ಕ್ರೀಡಾಳುವಿಗೆ ಪ್ರೋತ್ಸಾಹ-ಶುಭ ಹಾರೈಕೆ

ಬೆಳ್ತಂಗಡಿ: ರಾಷ್ಟ್ರೀಯ ಮಟ್ಟದ ಭಾರ ಎತ್ತುವಿಕೆ (81 KG ವಿಭಾಗದ) ಸ್ಪರ್ಧೆಯಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳುವ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಬಂದಾರು ಗ್ರಾಮದ ಕೆ. ತೇಜಸ್ವಿನಿ ಪೂಜಾರಿಯವರಿಗೆ ಅಕ್ಟೋಬರ್ 1ರಂದು ಬೆಳ್ತಂಗಡಿ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ವತಿಯಿಂದ ಆರ್ಥಿಕ ನೆರವು ನೀಡಿ ಶುಭ ಹಾರೈಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಯವೀಕ್ರಮ್ ಕಲ್ಲಾಪು, ಉಪಾಧ್ಯಕ್ಷರಾದ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್., ಕೋಶಾದಿಕಾರಿ ಪ್ರಶಾಂತ್ ಮಚ್ಚಿನ, […]

‘ಡಾ. ಯಶೋವರ್ಮ, ಕರ್ತೃತ್ವ ಶಕ್ತಿಯ ಶಿಕ್ಷಣತಜ್ಞ-ಸಂಘಟಕ -ಯಕ್ಷಪ್ರೇಮಿ’

ಉಜಿರೆ: ಡಾ. ಬಿ. ಯಶೋವರ್ಮ ಅವರು ಶಿಸ್ತು, ದಕ್ಷತೆಯಿಂದ ಯಕ್ಷರಂಗಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ ಅಪೂರ್ವ ಯಕ್ಷಪ್ರೇಮಿ. ಸಸ್ಯ ಶಾಸ್ತ್ರ ಉಪನ್ಯಾಸಕರಾಗಿಮಾಂತ್ರಿಕ ಸ್ಪರ್ಶದಿಂದ ಸಂಶೋಧನೆಗಾಗಿಯೇ ಸೃಷ್ಟಿಸಿದ ಆರ್ಬೊರೇಟಮ್ ‘ಯಶೋವನ’ ವಾಗಿ ತೆರೆದುಕೊಂಡಿದೆ. ಸ್ವಚ್ಛ ಸುಂದರ ಉಜಿರೆಯ ಪರಿಕಲ್ಪನೆಯಲ್ಲಿ ಸಂಘಟಕರಾಗಿ, ಮಾರ್ಗದರ್ಶಕರಾಗಿ ಧರ್ಮಸ್ಥಳದೊಂದಿಗೆ ಅನುಬಂಧ ಹೊಂದಿ ಶಿಸ್ತುಬದ್ಧ ಪಾದಯಾತ್ರೆಗೆ ನಾಂದಿಹಾಡಿದವರು. ತಾಂತ್ರಿಕತೆಯ ಶೈಕ್ಷಣಿಕ ಕ್ರಾಂತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು. ರೋಟರಿ ಸಂಸ್ಥೆಗೆ ಹೊಸ ಚೈತನ್ಯ ನೀಡಿ ಬೆಳೆಸಿದವರು. ಅವರ ಆದರ್ಶ ನಾಯಕತ್ವ, ಮಾರ್ಗದರ್ಶನ, […]

ಕ್ರೀಡಾಳುವಿಗೆ ಪ್ರೋತ್ಸಾಹ – ಹಾರೈಕೆ

ಬೆಳ್ತಂಗಡಿ : ರಾಷ್ಟ್ರೀಯ ಮಟ್ಟದ ಭಾರ ಎತ್ತುವಿಕೆ (81 KG ವಿಭಾಗದ) ಸ್ಪರ್ಧೆಯಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳುವ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿ ಬಂದಾರು ಗ್ರಾಮದ ಕೆ. ತೇಜಸ್ವಿನಿ ಪೂಜಾರಿಯವರಿಗೆ ಅಕ್ಟೋಬರ್ 1ರಂದು ಬೆಳ್ತಂಗಡಿ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ವತಿಯಿಂದ ಆರ್ಥಿಕ ನೆರವು ನೀಡಿ ಶುಭ ಹಾರೈಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಯವೀಕ್ರಮ್ ಕಲ್ಲಾಪು, ಉಪಾಧ್ಯಕ್ಷರಾದ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್., ಕೋಶಾದಿಕಾರಿ ಪ್ರಶಾಂತ್ […]