ಅಳದಂಗಡಿ ಶ್ರೀ ಮಹಾಗಣಪತಿ ದೇಗುಲದಲ್ಲಿ ಗಣೇಶ ಚತುರ್ಥಿ.

ಬೆಳ್ತಂಗಡಿ: ಮಹಾಗಣಪತಿಯ ದಿವ್ಯಸಾನಿಧ್ಯವುಳ್ಳ ಅಳದಂಗಡಿ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯು ಸಹಸ್ರಾರು ಆಸ್ತಿಕರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.ವೇದಮೂರ್ತಿ ವಿಜಯಕೃಷ್ಣ ಐತಾಳರ ನೇತೃತ್ವದಲ್ಲಿ 24 ತೆಂಗಿನಕಾಯಿ ಗಣಹವನ, ಪ್ರಧಾನ ಅರ್ಚಕ ಸೋಮನಾಥ ಮಯ್ಯ ಹಾಗೂ ಸಹ ಅರ್ಚಕ ಪ್ರವೀಣ ಮಯ್ಯ ಅವರ ಪೌರೋಹಿತ್ಯದಲ್ಲಿ ವಿವಿಧ ಸೇವೆಗಳು, ಮಹಾಮಂಗಳಾರತಿ ಇತ್ಯಾದಿಗಳು ನಡೆದವು. ಸ್ಥಳೀಯರಿಂದ ಭಜನಾ ಸತ್ಸಂಗ, ಗಣೇಶ ದೇವಾಡಿಗ ಅವರಿಂದ ವಾದ್ಯಸೇವೆ ನೆರವೇರಿತು.ಬೆಳ್ಳಂದೂರಿನ ರಾಣಿ ಶ್ರೀನಿವಾಸ ರೆಡ್ಡಿ ಅವರು ನಾಲ್ಕೂವರೆ ಅಡಿಯ ತೋಮಾಲೆ, ನಾಲ್ಕು ಅಡಿಯ ಸುಗಂಧ […]
ಯಕ್ಷಗಾನ ಸಂಸ್ಕೃತಿ ಯನ್ನು ಹುಟ್ಟುಹಾಕಿದ ಕಲೆ-ಶರತ್‌ಕೃಷ್ಣ ಪಡುವೆಟ್ಣಾಯ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ದೊಂಡೋಲೆ ಮನೆಯಲ್ಲಿ ಸೂರ್ಯನಾರಾಯಣ ರಾವ್ ಅವರು ಪ್ರಾರಂಭಿಸಿಕೊಂಡು ಬಂದ 74ನೇ ವರ್ಷದ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 7ರಂದು ಬೆಳಿಗ್ಗೆ ಗಣಪತಿ ಹವನ, ಶ್ರೀ ಗಣಪತಿ ಮೂರ್ತಿ ಪ್ರತಿಷ್ಠೆ, ಮದ್ಯಾಹ್ನ ಮಹಾಪೂಜೆ, ರಾತ್ರಿ ಮನೆಯವರಿಂದ ಭಜನಾ ಕಾರ್ಯಕ್ರಮ, ಹವ್ಯಾಸಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ, ಕಲಾವಿದರ ಸಮ್ಮಾನ ಹಾಗೂ ಸೆಪ್ಟೆಂಬರ್ 8ರಂದು ಬೆಳಿಗ್ಗೆ ಗಣೇಶಮೂರ್ತಿ ವಿಸರ್ಜನಾ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿದೆ. ಸೆಪ್ಟೆಂಬರ್ 7ರ ಸಂಜೆ ಕಮಲಾ ಸೂರ್ಯನಾರಾಯಣ ರಾವ್ ಚಾರಿಟೇಬಲ್ ಟ್ರಸ್ಟ್‌ನ ಚತುರ್ಥ ವರ್ಷದ ಸಮ್ಮಾನ […]
ಗ್ರಾಮದ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಸಾಕಷ್ಟು. ನಿಡ್ಲೆ ಸೊಸೈಟಿಯ ಶತಮಾನೋತ್ಸವ ಸಮಾರಂಭದಲ್ಲಿ ಡಾ.ಎಂ.ಎನ್.ಆರ್.

ಬೆಳ್ತಂಗಡಿ: ಶತಮಾನಗಳ ಹಿಂದೆ ನಿಡ್ಲೆಯಂತಹ ತೀರಾ ಹಿಂದುಳಿದ ಗ್ರಾಮದಲ್ಲಿ ಸಹಕಾರ ಸಂಘ ಸ್ಥಾಪಿಸಿದ ಇಲ್ಲಿನ ಹಿರಿಯರ ದೂರದೃಷ್ಟಿಯ ಪರಿಣಾಮ ಇಂದು ಗ್ರಾಮದ ಅಭಿವೃದ್ಧಿಯಲ್ಲಿಯೂ ಇಲ್ಲಿನ ಸೊಸೈಟಿ ಮಹತ್ತರ ಕೊಡುಗೆ ನೀಡುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿನಾಸಿಗರ ಆರ್ಥಿಕ ಸದೃಢತೆಗಾಗಿ ತನ್ನದೇ ಆದ ಕೊಡುಗೆ ನೀಡಿದ ನಿಡ್ಲೆ ಸೊಸೈಟಿ ಜಿಲ್ಲೆಯ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಂದು ಗುರುತಿಸಲ್ಪಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಿಸಿದರು.ಅವರು […]
ದಯಾ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಉಜಿರೆಯ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಆಚರಿಸಲಾಯಿತು. ಶಾಲಾ ಸಂಚಾಲಕರಾದ ವಂದನೀಯ ವಿನೋದ್ ಮಸ್ಕರೇನಸ್ ಕಾರ್ಯಕ್ರಮದ ಅಧ್ಯಕ್ಷತೆದ್ದರು. ಮುಖ್ಯ ಅತಿಥಿಗಳಾಗಿ ಬದ್ಯಾರು ಎಲ್.ಎಂ. ಪಿಂಟೊ ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ರೋಶನ್ ಕ್ರಾಸ್ತಾ, ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್, ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜಾ, ವಿಮುಕ್ತ ಸ್ವ-ಸಹಾಯ ಸಂಘಗಳ ಟ್ರಸ್ಟ್‌ನ ಅಧ್ಯಕ್ಷೆ […]
ಕುಲದೈವೋ ಬ್ರಹ್ಮ’ ನೂತನ ಪ್ರಸಂಗಬಿಡುಗಡೆ

‘ ಬೆಳ್ತಂಗಡಿ: ಮೂಡುಬಿದಿರೆಯ ಕನ್ನಡ ಕಲಾಭವನದಲ್ಲಿ ಸೆಪ್ಟೆಂಬರ್ 1ರಂದು ವಿಶ್ವವಿಖ್ಯಾತ ಶ್ರೀ ಕ್ಷೇತ್ರ ಗೆಜ್ಜೆ ಗಿರಿ ಮಹಾತ್ಮೆಯ ಕರ್ತೃ ನಿತಿನ್ ಕುಮಾರ್ ತೆಂಕಕಾರಂದೂರು ಮತ್ತು ಯೋಗೀಶ್ ರಾವ್ ಚಿಗುರುಪಾದೆ ಪದ್ಯ ರಚನೆಯ ‘ಕುಲದೈವೋ ಬ್ರಹ್ಮ’ ಎಂಬ ನೂತನ ಯಕ್ಷಗಾನ ಪ್ರಸಂಗ ಸಾವಿರಾರು ಕಲಾಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಅಧ್ಯಕ್ಷ ಪೀತಾಂಬರ ಹೆರಾಜೆ ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು; ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭುಜಬಲಿ ಜೈನ್, ಜಾನಪದ ವಿದ್ವಾಂಸ ಶೇಖರ್, ಮೂಡಬಿದ್ರೆ […]
ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಆಚರಣೆ

ಬೆಳ್ತಂಗಡಿ: ಮುಲ್ಕಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಫಯರ್, ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಗ್ರಾಮ ಪಂಚಾಯತ್ ಪಡುಪಣಂಬೂರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಅಂಗವಾಗಿ ತೋಕೂರು ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಣ್ಣು ಹಂಪಲು ವಿತರಣೆಯನ್ನು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಫಯರ್ ವತಿಯಿಂದ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಬಪ್ಪನಾಡು ಲಯನ್ಸ್ ಕ್ಲಬ್ […]
ಸೈಂಟ್ ಮೇರಿಸ್ ವಿಶೇಷ ಮಕ್ಕಳ ಶಾಲೆ ಮಧ್ಯಾಹ್ನದ ಊಟ ವಿತರಣೆ

ಬೆಳ್ತಂಗಡಿ: ಮುಲ್ಕಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಫಯರ್ ವತಿಯಿಂದ ಸೈಂಟ್ ಮೇರಿಸ್ ವಿಶೇಷ ಚೇತನ ಮಕ್ಕಳ ಶಾಲೆಗೆ ಮಧ್ಯಾಹ್ನದ ಊಟ ವಿತರಣೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಬಪ್ಪನಾಡು ಲಯನ್ಸ್ ಅಧ್ಯಕ್ಷ ಬಿ. ಶಿವಪ್ರಸಾದ್, ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಖಜಾಂಚಿ ಅನಿಲ್ ಕುಮಾರ್ ಸದಸ್ಯರಾದ ಕಲ್ಲಪ್ಪ ತಡವಲಗ, ಲಯನ್ ಪ್ರಾಂತ್ಯ 11ರ ಪ್ರಾಂತ್ಯ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ದಿವ್ಯ ಚೇತನ ಶಾಲೆಯ ಮುಖ್ಯ ಶಿಕ್ಷಕಿ ರೇಷ್ಮಾ ಮರಿಯ ಮಾರ್ಟಿಸ್, ಶಿಕ್ಷಕರು ಸಿಬ್ಬಂದಿ ವರ್ಗದವರು ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಕೊಕ್ಕಡ ಪೇಟೆಗೊಂದು ಹೊನ್ನಗರಿ.’ಸ್ವಾಮಿಪ್ರಸಾದ್ ಪ್ಯಾರಡೈಸ್’ ಶುಭಾರಂಭ.

ಬೆಳ್ತಂಗಡಿ: ಅಭಿವೃದ್ಧಿ ಹೊಂದುತ್ತಿರುವ ಕೊಕ್ಕಡ ಪೇಟೆಗೆ ಹೊನ್ನಗರಿಯಂತೆ ತಲೆಎತ್ತಿರುವ ಸುಸಜ್ಜಿತ ಹವಾನಿಯಂತ್ರಿತ ಸಭಾಂಗಣ, ಬಾಲ್ಕನಿಯನ್ನೊಳಗೊಂಡ ವಿಶಾಲ ಕೊಠಡಿಗಳು ಹಾಗೂ ಸವಿರುಚಿಯ ಊಟ-ಉಪಹಾರಗಳ ಹೊಟೇಲನ್ನು ಒಳಗೊಂಡ ಸ್ವಾಮಿಪ್ರಸಾದ್ ಪ್ಯಾರಡೈಸ್ ವಸತಿಗೃಹ ಮತ್ತು ವಾಣಿಜ್ಯ ಸಂಕೀರ್ಣದ ಉದ್ಭಾಟನಾ ಸಮಾರಂಭವು ಸೆಪ್ಟೆಂಬರ್ 6ರಂದು ಆಮಂತ್ರಿತ ಹಿರಿಯರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸರಳವಾಗಿ ಅಷ್ಟೇ ಸಾಂಪ್ರದಾಯಿಕವಾಗಿ ನೆರವೇರಿತು.ಪ್ಯಾರಡೈಸ್‌ನ ಮಾಲಕರಾದ ಗಿರೀಶ್ ಕುಮಾರ್ ಗೌಡ ಕೆ.ಎಂ.ರ ಮಾತಾಪಿತರಾದ ಶ್ರೀಮತಿ ಲೀಲಾವತಿ ಮತ್ತು ಮಾಯಿಲಪ್ಪ ಗೌಡರು ಆಶೀರ್ವಾದಪೂರ್ವಕವಾಗಿ ದೀಪ ಬೆಳಗಿ ನೂತನ ಪ್ಯಾರಡೈಸ್‌ನ್ನು ಉದ್ಘಾಟಿಸಿದರು. ಪುತ್ತೂರಿನ […]
ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸೊಸೈಟಿಯ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಆಗಸ್ಟ್ 31ರಂದು ಬೆಳ್ತಂಗಡಿ ಸಿವಿಸಿ ಹಾಲ್‌ನಲ್ಲಿ ಜರಗಿತು. ಸಂಘದ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ; ಸಂಘದ ಸದಸ್ಯರಿಗೆ 25% ಡಿವಿಡೆಂಡ್ ಘೋಷಿಸಿದರು. ಸಂಘವು 2023-24ನೇ ಸಾಲಿನಲ್ಲಿ ಒಟ್ಟು 308ಕೋಟಿ ರೂಪಾಯಿ ವ್ಯವಹಾರ ನಡೆಸಿ ರೂಪಾಯಿ 1.67 ಕೋಟಿ ಲಾಭ ಗಳಿಸಿದೆ. ರೂಪಾಯಿ 89.11ಕೋಟಿ ಠೇವಣಿ ಸಂಗ್ರಹವಾಗಿದೆ. ಸಂಘವು ಒಟ್ಟು 2647 ‘ಎ’ ವರ್ಗದ ಸದಸ್ಯರನ್ನು ಹೊಂದಿದ್ದು ರೂಪಾಯಿ 94 ಲಕ್ಷ ಪಾಲು ಬಂಡವಾಳ […]
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ನಗರ ಮತ್ತು ಗ್ರಾಮೀಣ ಘಟಕಗಳ ಸಭೆ.

ಬೆಳ್ತಂಗಡಿ: ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ನಗರ ಮತ್ತು ಗ್ರಾಮೀಣ ಘಟಕದ ಪದಾಧಿಕಾರಿಗಳ ಸಭೆಯು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಸರಕಾರವು ಜಾರಿ ಮಾಡಿರುವ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಉಬಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಕೆ. ಬಂಗೇರ ಹಾಗೂ ನಾಗೇಶ್ ಕುಮಾರ್ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೇಖರ್ ಕುಕ್ಕೆಡಿ, ಉಬಯ ಬ್ಲಾಕ್ ಪರಿಶಿಷ್ಟ ಜಾತಿ […]