ಕೊಕ್ಕಡದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲ ಎಸ್. ಟಿ. ಮೋರ್ಚಾದ ವತಿಯಿಂದ ಕೊಕ್ಕಡ ಗ್ರಾಮದ ಮುಂಡೂರು ಪಳಿಕೆಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಜನ್ಮದಿನದ ಪ್ರಯುಕ್ತ ವೃಕ್ಷಾರೊಪಣ  ಕಾರ್ಯಕ್ರಮದಂತೆ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ ಹಾಗೂ ತಾಲೂಕು ಎಸ್. ಟಿ. ಮೋರ್ಚಾ ಅಧ್ಯಕ್ಷ ಹರೀಶ್ ಎಳನೀರು, ಕಾರ್ಯದರ್ಶಿ ವಿಠಲ ಕೊಕ್ಕಡ, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹಾಗೂ ಕೊಕ್ಕಡ ಗ್ರಾಮ ಪಂಚಾಯತ್ […]

ಅಗತ್ಯ ಸಾಮಗ್ರಿಗಳ ಮತ್ತು ಪೆಟ್ರೋಲ್- ಡಿಸೇಲ್ ಬೆಲೆಯೇರಿಕೆ ವಿರುದ್ಧ ಬೃಹತ್ ಪ್ರತಿಭಟನಾ ಯಾತ್ರೆ

ಬೆಳ್ತಂಗಡಿ: ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳು ಜನ ವಿರೋಧಿಯಾಗಿವೆ. ತೈಲ ಹಾಗೂ ಇಂಧನಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಹಿಂದೆ ಸದಾ ಪ್ರತಿಭಟನೆಗಳಲ್ಲಿ ತೊಡಗಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿಭಟನೆ ಕೈಗೊಳ್ಳಬೇಡಿ ಎಂದು ಕರೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.ಅವರು ಜುಲೈ 7ರಂದು ಉಜಿರೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ತೈಲ ಬೆಲೆ ಏರಿಕೆ ವಿರುದ್ಧದ ಪ್ರತಿಭಟನಾ ಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕೊರೊನಾ ಪೀಡಿತರು ಹಾಗೂ ಅದರಿಂದ ಸಾವನ್ನಪ್ಪಿದವರ ಮನೆ […]

ದಿವ್ಯಾಂಗರಿಗೆ ಔಷಧಿ ಮತ್ತು ದಿನಸಿ ಕಿಟ್ ವಿತರಣೆ

ಬೆಳ್ತಂಗಡಿ: ಬೆನ್ನು ಮೂಳೆ ಮುರಿತಕ್ಕೊಳಗಾದ  ದಿವ್ಯಾಂಗರು ಇಂದು ಮಾನಸಿಕವಾಗಿ ಕುಗ್ಗಿಕೊಳ್ಳದೆ ಕಷ್ಟದೊಂದಿಗೆ ಬದುಕುವ ಅವಕಾಶವನ್ನು ಸೇವಾಧಾಮ ಒದಗಿಸಿಕೊಟ್ಟಿದೆ ಎಂದು ಸೇವಾಧಾಮದ ಸಂಚಾಲಕರಾದ ಕೆ .ಪುರಂದರ ರಾವ್ ನುಡಿದರು.ಅವರು ಡಿಯರ್ ಲೈಫ್ ಎಂಪವರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಬೆನ್ನು ಮೂಳೆ ಮುರಿತಕ್ಕೊಳಗಾದ ದಿವ್ಯಾಂಗರಿಗೆ ಕೊಡಮಾಡಿದ ಮೆಡಿಕಲ್ ಮತ್ತು ದಿನಸಿ ಕಿಟ್ ಗಳನ್ನು ವಿತರಿಸಿ, ಈ ಸೌಲಭ್ಯವನ್ನು ಕೊಡಮಾಡಿದ ದಾನಿ ಸಂಸ್ಥೆ, ಮತ್ತು ಅದರ ಸದಸ್ಯರನ್ನು ಅಭಿನಂದಿಸಿ  ಮಾತನಾಡುತ್ತಿದ್ದರು.        ಡಿಯರ್ ಲೈಫ್ ಸಂಸ್ಥೆಯ ಡಿಸ್ಟ್ರಿಬ್ಯೂಟರ್, […]

ಮಡಂತ್ಯಾರು ಅಟೋ ರಿಕ್ಷಾ ಸಂಘದ ಸದಸ್ಯರಿಗೆ ಕೋವಿಡ್‌-19 ಲಸಿಕಾ ಅಭಿಯಾನ

ಬೆಳ್ತಂಗಡಿ: ಮಡಂತ್ಯಾರು ಗ್ರಾಮ ಪಂಚಾಯಿತ್ ವತಿಯಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಡಂತ್ಯಾರು ವರ್ತಕರ ಸಂಘ ಮತ್ತು ಅಟೋ ರಿಕ್ಷಾ ಸಂಘದ ಸದಸ್ಯರಿಗೆ ಕೋವಿಡ್‌-19 ಲಸಿಕಾ ಅಭಿಯಾನ ಜುಲೈ 6ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಸಭಾಭವನದಲ್ಲಿ  ನಡೆಯಿತು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ, ತಾಲೂಕಿನಲ್ಲಿ ಈಗಾಗಲೇ ಶೇಕಡಾ 65ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ತಾಲೂಕಿನ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ […]

ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಂಘದ ವಿಶೇಷ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಂಘದ ವಿಶೇಷ ಸಭೆಯು ಜುಲೈ 6ರಂದು ಬೆಳ್ತಂಗಡಿಯ ಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ನಿರಂಜನ್ ಬಾವಂತಬೆಟ್ಟುರವರ ಅಧ್ಯಕ್ಷತೆಯಲ್ಲಿ‌ನಡೆಯಿತು.ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ತಾಲೂಕಿನ ಹಿರಿಯ ಸಹಕಾರಿ ಎನ್. ಎಸ್. ಗೋಖಲೆ ಮತ್ತು ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಹಾಗೂ ಡಿಸಿಸಿ ಬ್ಯಾಂಕಿನ ನಿರ್ದೇಶಕ ದೇವರಾಜ್ ನಿಧನಕ್ಕೆ ಶಾಂತಿಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು‌. ಅಗಲಿದ ಸಹಕಾರಿಗಳಿಗೆ ಪುಷ್ಪನಮನ ಸಲ್ಲಿಸಿದ […]

ರಾಜ್ಯಮಟ್ಟದ ಚಿತ್ರ-ಕವನ ಸ್ಪರ್ಧೆ

ಬೆಳ್ತಂಗಡಿ: ದರ್ಪಣ ಇದು ಅರಿವಿನ ದೀವಿಗೆ ತಂಡ. ರೇಡಿಯೋ ನಿನಾದ, ಮಡಿಲು ಸಾಂಸ್ಕೃತಿಕ ಟ್ರಸ್ಟ್(ರಿ), ಮಂಗಳೂರು ಮತ್ತು ಕುತೂಹಲ ಕಲರವ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಚಿತ್ರ-ಕವನ ಸ್ಪರ್ಧೆಯನ್ನು ಏರ್ಪಡಿಸಿದೆ.ಭಾಗವಹಿಸಲಿಚ್ಚಿಸುವ ಸ್ಪರ್ಧಾರ್ಥಿಗಳು ಯಾವುದಾದರೂ ವಸ್ತು-ವಿಷಯವನ್ನಿಟ್ಟುಕೊಂಡು ಕವನವನ್ನು ರಚಿಸಬೇಕು. ಕವನಕ್ಕೆ ಪೂರಕವಾದ ಫೋಟೋ ಜೊತೆಗಿರಬೇಕು. ಫೋಟೋಗೆ ಪೂರಕವಾಗಿ ಕವನ ನಿರೂಪಿಸಲ್ಪಟ್ಟಿರಬೇಕು.ಸ್ಪರ್ಧೆ ಎರಡು ಹಂತಗಳಲ್ಲಿ ನಡೆಯಲಿದ್ದು, ಒಂದರಿಂದ ಹತ್ತನೇ ತರಗತಿಯವರೆಗೆ ಪ್ರಾಥಮಿಕ ವಿಭಾಗ ಮತ್ತು ಪಿಯುಸಿ ಮೇಲ್ಪಟ್ಟವರು ಪ್ರೌಢ ವಿಭಾಗದಲ್ಲಿ ಭಾಗವಹಿಸಬಹುದಾಗಿದೆ. ಚಿತ್ರ+ಕವನ ಕಳುಹಿಸಲು ಜುಲೈ15 ಕೊನೆಯ ದಿನಾಂಕವಾಗಿದ್ದು, ಯಾವುದೇ ಕೃತಿಚೌರ್ಯಕ್ಕೆ […]

ಪರಿಸರದೊಂದಿಗೆ ಪತ್ರಿಕಾ ದಿನಾಚರಣೆ ಮಾದರಿಕಾರ್ಯ -ಪ್ರತಾಪ್‌ಸಿಂಹ ನಾಯಕ್

ಬೆಳ್ತಂಗಡಿ: ಜಗತ್ತಿನಲ್ಲಿ ನವ ಮಾಧ್ಯಮಗಳು ಪರಿಣಾಮಕಾರಿಯಾಗಿ ಸುದ್ದಿ ಪ್ರಸಾರ ಮಾಡುತ್ತಿವೆ. ಆ ಮೂಲಕ ಜಗತ್ತಿನ ಮೂಲೆ ಮೂಲೆಯನ್ನು ಕ್ಷಣಮಾತ್ರದಲ್ಲಿ ಸುದ್ದಿ ತಲುಪಲು ಸಾಧ್ಯವಾಗಿದೆ.  ಸಮಾಜಮುಖಿ‌ ಕಾರ್ಯವಾದ ಗಿಡನಾಟಿ ಕಾರ್ಯ ಹಮ್ಮಿಕೊಂಡು ಪತ್ರಿಕಾ ದಿನಾಚರಣೆ ನಡೆಸಿರುವುದು  ಪರಿಸರ ಪರವಾದ ನಡೆಯನ್ನು ಬಿಂಬಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.ಅವರು ಕಳೆಂಜ ನಂದಗೋಕುಲ ಗೋ ಶಾಲೆಯಲ್ಲಿ ಬೆಳ್ತಂಗಡಿ ಮೀಡಿಯಾ ಕ್ಲಬ್ ಹಮ್ಮಿಕೊಂಡಿದ್ದ ಶ್ರಮದಾನದೊಂದಿಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರಾದೇಶಿಕ ಹಾಗೂ ಗ್ರಾಮಾಂತರ ಪ್ರದೇಶದ  ಕಾರ್ಯಕ್ರಮಗಳ ವಿಸ್ತೃತ ವರದಿಗಳಿಂದ ಧನಾತ್ಮಕ […]

ನಾಡಿನ ‘ಸಹಕಾರಿ ಶಕ್ತಿ’ ಎನ್. ಎಸ್. ಗೋಖಲೆಯವರಿಗೆ ಭಾವಪೂರ್ವ ನುಡಿನಮನ

ಬೆಳ್ತಂಗಡಿ: ಸಹಕಾರಿ ಕ್ಷೇತ್ರದ ಅತ್ಯುತ್ತಮ ಚಿಂತಕ ಹಾಗೂ ಮಾರ್ಗದರ್ಶಕರಾಗಿದ್ದು, ಅನೇಕ ಸಂಘ ಸಂಸ್ಥೆಗಳ ಏಳಿಗೆಯಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡಿದ ಎನ್. ಎಸ್. ಗೋಖಲೆಯವರ ಜೀವನದ ಆದರ್ಶ ಹಾಗೂ ತತ್ವಗಳು ಮುಂದಿನ ಪೀಳಿಗೆಯ ಬೆಳವಣಿಗೆಗೆ ಮಾದರಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜುಲೈ 5ರಂದು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಹಿರಿಯ ಸಹಕಾರಿ ಧುರೀಣ ಎನ್. ಎಸ್. ಗೋಖಲೆಯವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಎನ್. ಎಸ್. ಗೋಖಲೆಯವರು ಸಮಾಜಕ್ಕೆ ಸಲ್ಲಿಸಿದ […]

ಸಾಮಾಜಿಕ ಜಾಗೃತಿಯ “ಸ್ಥಿತಿ” ಕಿರುಚಿತ್ರ ಬಿಡುಗಡೆ

ಬೆಳ್ತಂಗಡಿ: ಖ್ಯಾತ ರಂಗಕರ್ಮಿ ಜೀವನ್‌‌ರಾಂ ಸುಳ್ಯ ನಿರ್ದೇಶನದ ಮೊದಲ ಕಿರುಚಿತ್ರ ‘ಸ್ಥಿತಿ’ ಬಿಡುಗಡೆ ಕಾರ್ಯಕ್ರಮವುಸುಳ್ಯದ ರಂಗಮನೆಯಲ್ಲಿ ನಡೆಯಿತು.ಸುಳ್ಯ ತಹಶೀಲ್ದಾರ್‌ ಅನಿತಾಲಕ್ಷ್ಮಿಯವರು ಸ್ಥಿತಿ ಕಿರುಚಿತ್ರದ ಪೋಸ್ಟರ್‌ ಅನಾವರಣಗೊಳಿಸಿ, ಕಂಪ್ಯೂಟರ್‌ ಬಟನ್‌ ಒತ್ತಿ ಟಿ. ವಿ. ಪರದೆಯಲ್ಲಿ ಕಿರುಚಿತ್ರಕ್ಕೆ ಚಾಲನೆ ನೀಡಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ ಹಾಗೂ ಸುಳ್ಯ ಪ್ರೆಸ್‌‌ಕ್ಲಬ್‌ ಅಧ್ಯಕ್ಷ ಹರೀಶ್‌ ಬಂಟ್ವಾಳ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಜೀವನ್ ರಾಮ್ ಸುಳ್ಯ, ಮನುಜ ನೇಹಿಗ ಮತ್ತು ಲಾಲಿತ್ಯ ಆರ್. ತಾರಾಗಣದ  ಒಂಬತ್ತೂವರೆ ನಿಮಿಷಗಳ […]

ನಿರ್ಮಲ ಮನಸ್ಸು- ನೈರ್ಮಲ್ಯ ಪರಿಸರ ಹಾಗೂ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ: ನಿರ್ಮಲ ಮನಸ್ಸು- ನೈರ್ಮಲ್ಯ ಪರಿಸರ ಎಂಬ ಘೋಷಣೆಯೊಂದಿಗೆ ಕಾರ್ಯಚರಿಸುತ್ತಿರುವಸಹಾಯ್ ಉಪ್ಪಿನಂಗಡಿ ಸರ್ಕಲ್‌ನ ಕುಪ್ಪೆಟ್ಟಿ ಸೆಂಟರ್ ವ್ಯಾಪ್ತಿಯ ಸ್ವಚ್ಚತಾ ಅಭಿಯಾನವನ್ನು ಸರಕಾರಿ ಹಿರಿಯ ಪ್ರಾಥಮಿಜ ಶಾಲೆ ಇಳಂತಿಲದ ವಠಾರದಲ್ಲಿ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನ್ಯಾಯವಾದಿ ಮನೊಹರ್ ಕುಮಾರ್ ಸಹಾಯ್ ತಂಡ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದು, ನೊಂದವರ ನೆರವಿಗೆ ಧಾವಿಸುವ ಮೂಲಕ ಕಾರ್ಯಾಚರಣೆ ನಡೆಸುವ ಸಹಾಯ್ ತಂಡ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ […]