ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ವಿಧ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಹಸ್ತಾಂತರ

ಬೆಳ್ತಂಗಡಿ: ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣಗುರುಗಳ ಸಂದೇಶದಂತೆ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿರುವ ಯುವವಾಹಿನಿ (ರಿ) ಬೆಳ್ತಂಗಡಿ ಘಟಕವು ದಾನಿಗಳ ನೆರವಿನಿಂದ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ಗುರಿಪಳ್ಳದ ಎಣೀರು ನಿವಾಸಿ ಜಯಂತಿ ಇವರ ಮಗಳಾದ ಸಂಜನಾ ಇವಳ ಒಂದು ವರ್ಷದ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಘಟಕದ ಅಧ್ಯಕ್ಷರಾದ ಎಂ. ಕೆ. ಪ್ರಸಾದ್ ಇವರು ಕಾಲೇಜು ಆಡಳಿತ ಮಂಡಳಿಗೆ ಹಸ್ತಾಂತರಿಸಿದರು, ಈ ಸಂಧರ್ಭದಲ್ಲಿ ಗುರುದೇವ ಕಾಲೇಜಿನ […]

ಕಾಟಾಜೆಯಲ್ಲಿ ಅಸಮರ್ಪಕ-ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಇಲಾಖೆಯ ಅನುಮತಿ-ಆದೇಶವೇ ಇಲ್ಲ:ಅವಾಂತರವಾದರೆ ದೇವರೇ ದಿಕ್ಕು!

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕಾಟಾಜೆ ಪರ್ಪಳ ಪರಿಶಿಷ್ಟ ಜಾತಿ ಕಾಲನಿಗೆ ಅಣಿಯೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಅಸಮರ್ಪಕವಾಗಿ ಮಾತ್ರವಲ್ಲ; ಅವೈಜ್ಞಾನಿಕವಾಗಿ ನಿರ್ವಹಿಸಿದ ಪರಿಣಾಮ ಕಳೆದ ವಾರ ಸುರಿದ ಭಾರೀ ಮಳೆಗೆ ರಸ್ತೆಯ ಇಕ್ಕೆಲಗಳಲ್ಲೂ ಮಣ್ಣು ಕೊಚ್ಚಿ ಹೋಗಿದೆ. ಮಾತ್ರವಲ್ಲ; ರಸ್ತೆ ಬದಿಯಲ್ಲಿದ್ದ ಹತ್ತಾರು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಸುದೈವವಶಾತ್ ಏನೂ ದೊಡ್ಡ ಮಟ್ಟದ ಅನಾಹುತ ಸಂಭವಿಸದ್ದರಿಂದ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಒಂದು ಹಂತದಲ್ಲಿ ಬಚಾವಾಗಿದ್ದಾರೆ. ಆದರೂ ಇವರುಗಳಿಗೆ ಆತಂಕ […]

ಅಸ್ಮಿತೆಯ ಅವಮಾನ ಖಂಡನೀಯ : ತುಳುವೆರೆ ಪಕ್ಷ

ಬೆಳ್ತಂಗಡಿ: ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆಯವರು ಇತ್ತೀಚೆಗೆ ತುಳು ರಾಜ್ಯದ ಬೇಡಿಕೆಯು ಕುಚೋದ್ಯದ ಬೇಡಿಕೆ ಎಂದಿದ್ದು ಖಂಡನೀಯ. ಕನ್ನಡ ಏಕೀಕರಣ ಚಳವಳಿಯನ್ನು ಸಮರ್ಥಸಿರುವ ಇವರು ಅದೇ ತುಳು ಏಕೀಕರಣ ಚಳವಳಿಯನ್ನು ಕುಚೋದ್ಯದ ಬೇಡಿಕೆ ಎಂದಿದ್ದು ಇವರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ತುಳುವರ ನಾಡು ನುಡಿಯ ಹೋರಾಟವನ್ನು ಅವಮಾನಿಸುವ ಮೂಲಕ ಸಮಸ್ತ ತುಳುವರ ಭಾವನೆಗಳಿಗೆ ನೋವು ತಂದಿದ್ದಾರೆ. ತುಳು ಅಸ್ಮಿತೆಯ ವಿಚಾರಗಳನ್ನು ಯಾರೇ ಕುಚೋದ್ಯ ಮಾಡಿದರೂ ಅದನ್ನು ತುಳುವೆರೆ ಪಕ್ಷ ಖಂಡಿಸುತ್ತದೆ ಎಂದು ಪಕ್ಷದ ಅದ್ಯಕ್ಷರಾದ ಶೈಲೇಶ್ ಆರ್.ಜೆ. […]

ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಬೆಳ್ತಂಗಡಿ: ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 21ರಂದು ರಾತ್ರಿ ಇಡೀ ರಾಜ್ಯಾದ್ಯಂತ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಕರೆ ನೀಡಿದಂತೆ ಬೆಳ್ತಂಗಡಿ ತಾಲೂಕಿನಾದ್ಯಂತ ಚಿಮಿಣಿ, ಕ್ಯಾಂಡಲ್, ದೊಂದಿ, ಲಾಟೀನು ಪ್ರದರ್ಶನದೊಂದಿಗೆ ಪ್ರತಿಭಟನೆ ನಡೆಸಲಾಯಿತು.ಕೋವಿಡ್ 19 ಲಾಕ್‌ಡೌನ್ ಹೆಸರಿನಲ್ಲಿ ಜನತೆಯನ್ನು ಕತ್ತಲಲ್ಲಿಟ್ಟು ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ವಂಚಿಸಲಾಗಿದೆ. ಜನರಿಗೆ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೆ ಪರದಾಡುವ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನತೆಯನ್ನು ಅತ್ಯಂತ ಸಂಕಷ್ಟಕ್ಕೆ ದೂಡಲಾಗಿದೆ ಎಂದು […]

ಕಲಾವಿದನಲ್ಲಿ ಕಲೆ ಬೆಳೆಯಲು ನಿರಂತರತೆ ಮುಖ್ಯ-ಪ್ರತಾಪ್‌ಸಿಂಹ ನಾಯಕ್

ಬೆಳ್ತಂಗಡಿ: ವ್ಯಕ್ತಿಯ ಯಶಸ್ಸು ವೃತ್ತಿಯ ನಿರಂತರತೆಯ ಮೇಲೆ ಅವಲಂಬಿತವಾಗಿರುತ್ತದೆ.  ರಾಜಕೀಯದಲ್ಲಿ ನಿರಂತರ ಕೆಲಸ ಮಾಡದಿದ್ದರೆ  ಮೂಲೆಗುಂಪಾಗುತ್ತೇವೆ. ಅದೇ ರೀತಿ ಯಾವುದೇ ಕಲಾವಿದರು ವೃತ್ತಿ ಬಾಂಧವರು ನಿರಂತರ ಸಾಧನೆಯಿಂದ ನೈಪುಣ್ಯತೆ, ಸ್ವಾಮಿತ್ವ ಪಡೆಯುತ್ತಾರೆ. ಕಲಾವಿದರ ವೃತ್ತಿ ಜೀವನ ಮನಸ್ಸಿಗೆ ಆನಂದ, ಜ್ಞಾನ, ಸಂಸ್ಕಾರ ನೀಡುತ್ತದೆ. ಸನಾತನ ಪರಂಪರೆಯ ಯಕ್ಷಗಾನ ಪ್ರೇಕ್ಷಕನ ಮನಸ್ಸಿನ ಮೇಲೆ  ಜೀವನ ಮೌಲ್ಯದ ಪ್ರಭಾವ, ಪರಿಣಾಮ ಬೀರುತ್ತದೆ.  ವಿಪರೀತ ಪರಿಸ್ಥಿತಿಯಲ್ಲಿ  ಬದಲಾದ ಕಾಲ, ಬದಲಾದ ರೀತಿಯಲ್ಲಿ ಹೊಸ ಪ್ರಯೋಗದ ಮೂಲಕ  ಕಲಾಸೇವೆ, ಕಲಾರಾಧನೆ  ನಡೆಯುತ್ತಿರುವುದು  ಶ್ಲಾಘನೀಯವೆಂದು ರೋಟರಿ ಜಿಲ್ಲಾ […]

ಎಂಎಲ್‌ಸಿ ಹರೀಶ್ ಕುಮಾರ್ ಸಿಯೋನ್ ಆಶ್ರಮಕ್ಕೆ ಭೇಟಿ

ಬೆಳ್ತಂಗಡಿ: ವಿಧಾನ ಪರಿಷತ್ತಿನ ಶಾಸಕರಾದ ಕೆ. ಹರೀಶ್ ಕುಮಾರ್‌ರವರು ಜೂನ್ 21  ರಂದು ನೆರಿಯ ಸಿಯೋನ್ ಆಶ್ರಮ ಬೇಟಿ ನೀಡಿ, ಆಶ್ರಮಕ್ಕೆ ಆಹಾರ ಕಿಟ್ ನೀಡಿ ಆಶ್ರಮದ ಟ್ರಸ್ಟಿಗಳಾದ ಯು. ಸಿ. ಪೌಲೋಸ್‌ರವರ ಜೊತೆಗೆ ಮಾತುಕತೆ ನಡೆಸಿದರು. ಅವರು ಕೊರೋನಸಂದರ್ಭದಲ್ಲಿ ಆಶ್ರಮವಾಸಿಗಳ ಸಂಕಷ್ಟ ಪರಿಸ್ಥಿತಿಯ ಬಗ್ಗೆ ವಿವರ ಪಡೆದರು.  ಈ ಸಂಧರ್ಭದಲ್ಲಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ನಮೀತಾ ಕೆ. ಪೂಜಾರಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹಾಗೂ ನೆರಿಯ ಗ್ರಾಮ ಪಂಚಾಯತ್ ಹಾಲಿ ಸದಸ್ಯ ಬಿ. […]

ಮೊಬೈಲ್ ರಿಟೈಲರ್ಸ್ ಸಂಕಷ್ಟ ಪರಿಹರಿಸಲು ಮನವಿ

ಬೆಳ್ತಂಗಡಿ: ಲಾಕ್‌ಡೌನ್‌ನ ಈ ಸಮಯದಲ್ಲಿ ತಾಲೂಕಿನ ಸುಮಾರು 65ಕ್ಕೂ ಹೆಚ್ಚು ಮೊಬೈಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ಅಂಗಡಿ ಮಾಲೀಕರ ಬದುಕು ಸಂಕಷ್ಟಕ್ಕೀಡಾಗಿದ್ದು, ಗ್ರಾಹಕರು ಕೂಡಾ ತುಂಬಾ ಪರದಾಡುವಂತಾಗಿದೆ. ಕೆಲವರ ಮೊಬೈಲ್ ಕೆಟ್ಟು ಹೋಗಿ ಮಕ್ಕಳ ಆನ್‌ಲೈನ್ ಕ್ಲಾಸ್‌ಗೆ ತುಂಬಾನೇ ತೊಂದರೆ ಆಗುತ್ತಿದೆ. ಹಳ್ಳಿಗಳಲ್ಲಿ ಸಣ್ಣ ರಿಚಾರ್ಜ್‌ಗೂ ಮೊಬೈಲ್ ಅಂಗಡಿಯನ್ನು ಅವಲಂಬಿಸಿದ್ದು ಜನರು ತುಂಬಾ ಪರದಾಡುವಂತಾಗಿದೆ. ಕೆಲವರ ಸಿಮ್ ಹಾಳಾಗುತ್ತಿದ್ದು ಮೊಬೈಲ್ ಇಲ್ಲದೆ ತುಂಬ ಕಷ್ಟ ಅನುಭವಿಸುತಿದ್ದಾರೆ. ಅದಲ್ಲದೆ ಸರ್ಕಾರ Online ಸೇವೆಗಳಾದ amazon, flipcartಗಳಿಗೆ ಅವಕಾಶ […]

‘ಎಲ್ಲರಿಗೂ ಲಸಿಕೆ-ಎಲ್ಲರಿಗೂ ಉಚಿತ’ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಎಲ್ಲರಿಗೂ ಲಸಿಕೆ, ಎಲ್ಲರಿಗೂ ಉಚಿತ’ ವಿಶ್ವದ ಅತಿ ದೊಡ್ಡ ಉಚಿತ ಲಸಿಕಾ ಅಭಿಯಾನ ಜೂನ್ 21ರ ವಿಶ್ವ ಯೋಗದಿನದಂದು ದೇಶದಾದ್ಯಂತ ನಡೆಯುತ್ತಿದ್ದು, ಬೆಳ್ತಂಗಡಿ ತಾಲೂಕು ಆರೋಗ್ಯ ಕೇಂದ್ರದ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನದಲ್ಲಿ ನಡೆದ ಕೋವಿಡ್ ಲಸಿಕಾ ಅಭಿಯಾನಕ್ಕೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾl ವಿದ್ಯಾವತಿ, ಕ್ಷೇತ್ರ […]

ಕಲ್ಲಬೆಟ್ಟು ಸಹಕಾರಿ ಸಂಘದಲ್ಲಿ ಕೋವಿಡ್ ಲಸಿಕೆ ಅಭಿಯಾನ

ಕಲ್ಲಬೆಟ್ಟು: ಕಲ್ಲಬೆಟ್ಟು ವ್ಯ. ಸೇ. ಸ. ಸಂಘ (ನಿ.) ಕಲ್ಲಬೆಟ್ಟು ಇದರ ವತಿಯಿಂದ ಇಂದು ನಡೆದ ಕೋವಿಡ್ ಲಸಿಕೆ ಅಭಿಯಾನದಲ್ಲಿ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಭೇಟಿ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಲ್ಲಬೆಟ್ಟು ವ್ಯ ಸೇ ಸ ಬ್ಯಾಂಕ್ ಇದರ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ , ಪುರಸಭಾ ಸದಸ್ಯ ಜೊಸ್ಸಿ ಮಿನೇಜಾಸ್, ಬ್ಲಾಕ್ ವಕ್ತಾರ ರಾಜೇಶ್ ಕಡಲಕೆರೆ, ದಿಲೀಪ್ ಕುಮಾರ್ ಶೆಟ್ಟಿ ಮುಂತಾದವರು ಹಾಜರಿದ್ದರು. ಎಂ.ಸಿ.ಎಸ್. […]

50 ಪಲ್ಸ್ ಆಕ್ಸಿಮೀಟರ್, ಆಹಾರದ ಕಿಟ್,‌ ಎನ್-95 ಮಾಸ್ಕ್ ವಿತರಣೆ

ಬೆಳ್ತಂಗಡಿ: ಮಾಜಿ‌ ಶಾಸಕ‌‌ ವಸಂತ ಬಂಗೇರ ಅವರ ಪುತ್ರಿಯರು ಮತ್ತು ಅಳಿಯಂದಿರ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯ ಇಲಾಖೆಗೆ 50 ಪಲ್ಸ್ ಆಕ್ಸಿಮೀರ್ ಕೊಡುಗೆ; ಹಾಗೂ ತಾಲೂಕಿನ 70 ಮಂದಿ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ, ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ 16ಮಂದಿ ಪೌರ ಕಾರ್ಮಿಕರಿಗೆ ಮತ್ತು ಇತರ 15 ಆಯ್ದ ಕುಟುಂಬಗಳಿಗೆ ಆಹಾರದ ಕಿಟ್ ಮತ್ತು ಎನ್-95 ಮಾಸ್ಕ್ ವಿತರಣಾ ಕಾರ್ಯಕ್ರಮ ಜೂನ್ 21ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು. ಮಾಜಿ ಶಾಸಕ ವಸಂತ ಬಂಗೇರ ಈ […]