ಸೂರು ಕಳೆದುಕೊಳ್ಳುವ ಭೀತಿ ಎದುರಿಸಿದ ಕುಟುಂಬಕ್ಕೆ ಆಸರೆಯಾದ ಮಾಜಿ ಶಾಸಕ ಕೆ. ವಸಂತ ಬಂಗೇರ

ಬೆಳ್ತಂಗಡಿ: ತಾಲೂಕಿನ ಬಂಗಾಡಿ ಉರ್ಲ ಎಂಬಲ್ಲಿ ತೀರಾ ಬಡತನದ ನಡುವೆ ಇಂದೋ ನಾಳೆಯೋ ಎಂಬಂತೆ ಕುಸಿಯುವ ಭೀತಿ ಎದುರಿಸುತ್ತಿರುವ ಕಾನದು ಎಂಬವರ ನಿವಾಸಕ್ಕೆ ಈ ದಿನ ಬೆಳ್ತಂಗಡಿಯ ಮಾಜಿ ಶಾಸಕ ಕೆ. ವಸಂತ ಬಂಗೇರರವರು ತುರ್ತು ಭೇಟಿ ನೀಡಿ ಮನೆಗೆ ಬೇಕಾದ ಅಗತ್ಯ ಆಹಾರ ಸಾಮಗ್ರಿಗಳನ್ನು ಒದಗಿಸಿದರು. ಹಾಗೂ ಕುಸಿತದ ಭೀತಿಯಲ್ಲಿರುವ ಕಾನದುರವರಿಗೆ ತಾತ್ಕಾಲಿಕ ಮನೆಯ ಸೌಲಭ್ಯ ಕಲ್ಪಿಸುವ ಭರವಸೆಯನ್ನು ಸ್ಥಳದಲ್ಲೇ ನೀಡಿ, ಈಗಾಗಲೇ ಮನೆಯ ಆಯ ಸುತ್ತಳತೆಗೆ ಕ್ರಮ ವಹಿಸುವುದಾಗಿಯೂ ನಾಳೆಯೇ ಕೆಲಸ ಕಾರ್ಯ ಆರಂಭಿಸುವುದಾಗಿಯೂ […]
ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಗೆ ಅಡ್ಡವಾಗಿ ಧರಾಶಾಹಿಯಾದ ವಿದ್ಯುತ್ ಕಂಬಗಳು

ಬೆಳ್ತಂಗಡಿ: ವ್ಯಾಪಕ ಮಳೆ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ನಡೆದಿದೆ.ನೆರಿಯ ಗ್ರಾಮದ ಅಣಿಯೂರಿನಿಂದ ಕಾಟಾಜೆ, ಪರ್ಪಳಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕಳೆದ ಎಪ್ರಿಲ್ ನಿಂದ ನಡೆಯುತ್ತಿದೆ. ಈ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬಗಳು ಸೇರಿದಂತೆ ಖಾಸಗಿ ವಿದ್ಯುತ್ ಉತ್ಪಾದನಾ ಘಟಕಗಳ ವಿದ್ಯುತ್ ಪೂರೈಕೆ ಕಂಬಗಳು ಇದೆ. ಇಲ್ಲಿ ವಿದ್ಯುತ್ ಕಂಬಗಳ ಬುಡವನ್ನು ಕೊರೆದು ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಲಾಗಿತ್ತು. ಕಳೆದ ಒಂದು ವಾರದಿಂದ ಸುರಿದ ವ್ಯಾಪಕ […]
ಯುವ ಬಂಟರ ಸಂಘದಿಂದ ಆಹಾರದ ಕಿಟ್ ವಿತರಣೆ

ಮೂಡುಬಿದಿರೆ : ಮೂಡುಬಿದಿರೆ ತಾಲೂಕು ಯುವ ಬಂಟರ ಸಃಘದ ವತಿಯಿಂದ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ತೀರಾ ಸಂಕಷ್ಟದಲ್ಲಿರುವ ಬಂಟರ ಸಮಾಜದ ಆಯ್ದ 90 ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮವು ಇಲ್ಲಿನ ಸಮಾಜ ಮಂದಿರ ಸಭಾಭವನದಲ್ಲಿ ನೆರವೇರಿತು.ಆಹಾರದ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಥಾನದ ಅಧ್ಯಕ್ಷ ಡಾ। ಎಂ. ಮೋಹನ ಆಳ್ವ ಅವರು ಸಮಾಜದಲ್ಲಿ ಅಕ್ಷರಾಭ್ಯಾಸ ಇಲ್ಲದವರು, ತೀರಾ ಸಂಕಷ್ಟದಲ್ಲಿರುವ ಜನರು ಇಂದಿಗೂ ಇದ್ದಾರೆ. ಸಮಾಜದಲ್ಲಿ ಸ್ಥಿತಿವಂತರೆಂದು ಗುರುತಿಸಿಕೊಂಡವರು ತಮ್ಮಲ್ಲಿರುವ ಸಂಪತ್ತಿನ […]
ಹಿಂದು ಸಮಾಜವನ್ನು ಒಡೆಯುವ ನಟ ಚೇತನ್ ಹುನ್ನಾರಕ್ಕೆ ಖಂಡನೆ

ಬೆಳ್ತಂಗಡಿ:ಬೇರೆ ಮತ ಧರ್ಮಗಳ ಹುಳುಕುಗಳನ್ನು ಪ್ರಶ್ನಿಸಲು ಧೈರ್ಯ ತೋರದ ನಟ ಚೇತನ್ ಹಿಂದೂ ಧರ್ಮದ ಒಂದು ಸಮುದಾಯವನ್ನು ಹೀಯಾಳಿಸಿ, ಉಳಿದ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿರುವುದನ್ನು ವಿಶ್ವ ಹಿಂದು ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದು ಪರಿಷತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು.ಅವರು ಜೂನ್ 15ರಂದು ಇಲ್ಲಿನ ಪಿನಾಕಿ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಹಣ ತೆಗೆದುಕೊಂಡು ನಟಿಸುವ ಚೇತನ್ ತನ್ನ ಸ್ವಾರ್ಥಕ್ಕೊಸ್ಕರ ಹೀಯಾಳಿಸುವ ಕೆಲಸ ಮಾಡುತ್ತಿರುವುದು ಖಂಡನೀಯ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ […]
ಕುಸಿಯುವ ಭೀತಿಯಲ್ಲಿದ್ದ ಮನೆಗೆ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡದಿಂದ ಮರುಜೀವ

ಮೂಡುಬಿದಿರೆ: ಮೂಡಬಿದಿರೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪುತ್ತಿಗೆ ಗ್ರಾಮದ ಪಳಕಳ ಎಂಬಲ್ಲಿ ಒಂದು ಬಡ ಕುಟುಂಬದ ಮನೆಯ ಮಾಡು ಕುಸಿಯುವ ಭೀತಿ ಎದುರಾಗಿತ್ತು. ಮಾಡಿನ ಹಂಚುಗಳು ಸಂಪೂರ್ಣ ಬೀಳುವ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಸ್ಥಳೀಯ ಪಂಚಾಯತ್ ಸದಸ್ಯ ಶರೀಫ್ ಮಿಲನ್ ರವರು ಮೂಡಬಿದಿರೆ ಎಸ್ ಕೆ ಎಸ್ ಎಸ್ ಎಫ್ ವಲಯದ ವಿಖಾಯ ತಂಡದ ನೆರವನ್ನು ಕೋರಿದರು. ತಕ್ಷಣವೇ ಅದಕ್ಕೆ ಸ್ಪಂದಿಸಿದ ಎಸ್ ಕೆ ಎಸ್ ಎಸ್ ಎಫ್ ಮೂಡುಬಿದಿರೆ ವಲಯದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಇಸ್ಹಾಕ್ ಹಾಜಿ […]
ಪಶ್ಚಿಮಘಟ್ಟದಲ್ಲಿ ಹಸಿರು ಹೊದಿಕೆ ಅಭಿಯಾನ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಅರಸಿನಮಕ್ಕಿ, ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 13 ರಂದು ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಮತ್ತು ಹತ್ಯಡ್ಕ ಗ್ರಾಮದ ಉಪ್ಪರಡ್ಕ ಎಂಬಲ್ಲಿನ ಫೋರ್ಕಳ ರಕ್ಷಿತಾರಣ್ಯದಲ್ಲಿ ಪಶ್ಚಿಮ ಘಟ್ಟಗಳಿಗೆ ಹಸಿರು ಹೊದಿಕೆ ಅಭಿಯಾನವನ್ನು ನಡೆಸಲಾಯಿತು.ಈ ಅಭಿಯಾನದಲ್ಲಿ ಸುಮಾರು 600 ಕ್ಕೂ ಹೆಚ್ಚು ಕಾಡು ಹಣ್ಣಿನ ಗಿಡಗಳನ್ನು ನೆಡಲಾಯಿತು.ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ರೆಖ್ಯಾ ಸಹಿತ ಸದಸ್ಯರು […]
ಶೌರ್ಯ ಸ್ವಯಂಸೇವಕರ ಸಮಯಪ್ರಜ್ಞೆಯಿಂದ ಉಳಿಯಿತು ಜೀವ

ಬೆಳ್ತಂಗಡಿ: ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಬಳಿ ವ್ಯಕ್ತಿಯೋರ್ವ ಫಿಡ್ಸ್ ಪೀಡಿತನಾಗಿ ಬಳಲುತ್ತಿದ್ದ. ಯಾರೂ ಸಂಬಂಧಿಕರಿಲ್ಲದ ಕಾರಣ ಸಹಾಯಕ್ಕೆ ಯಾರೂ ದೊರೆಯದೆ, ಬಿದ್ದಾಗ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅಪಾಯದಲ್ಲಿದ್ದರು. ಕೂಡಲೇ ಅಲ್ಲೇ ಸಮೀಪದಲ್ಲಿ ಸಾಗುತ್ತಿದ್ದ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಇದನ್ನು ಗಮನಿಸಿ ಸಹಾಯಕ್ಕೆ ಧಾವಿಸಿದರು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ಆಕಾಶ್ ಅವರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ ಆ್ಯಂಬುಲೆನ್ಸ್ ಮುಖಾಂತರ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು.ಧರ್ಮಸ್ಥಳ […]
ಮಕ್ಕಳ ರಕ್ಷಣಾ ನೀತಿಯ ಮಾಹಿತಿ

ಬೆಳ್ತಂಗಡಿ: ಧರ್ಮಸ್ಥಳ ಕನ್ಯಾಡಿಯ ಸೇವಾಭಾರತಿಯ ಅಂಗಸಂಸ್ಥೆಯಾದ ಕೊಕ್ಕಡ ಗ್ರಾಮದ ಸೌತಡ್ಕ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಸೇವಾಭಾರತಿಯ ಸಲಹಾ ಸಮಿತಿ ಸದಸ್ಯರು ಹಾಗೂ ಮಕ್ಕಳ ರಕ್ಷಣಾ ನೀತಿಯ ಅಧ್ಯಕ್ಷೆ ಮನೋರಮಾ ಭಟ್ ಮಕ್ಕಳ ರಕ್ಷಣಾ ನೀತಿಯ ಬಗ್ಗೆ ಸೇವಾಭಾರತಿಯ ಸಿಬ್ಬಂದಿಗಳು ಮತ್ತು ಸೇವಾಧಾಮದ ಶಿಬಿರಾರ್ಥಿಗಳು ಹಾಗೂ ಪೋಷಕರಿಗೆ ಜಾಗೃತಿಯನ್ನು ಮೂಡಿಸಿ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸೇವಾಭಾರತಿಯ ಸಿಬ್ಬಂದಿ ಹಾಗೂ ಮಕ್ಕಳ ರಕ್ಷಣಾ ನೀತಿಯ ಸದಸ್ಯರಾದ ಮೋಹನ್ ಎಸ್., ಸೇವಾಭಾರತಿ ಫಂಡ್ ರೈಸಿಂಗ್ ಮ್ಯಾನೇಜರ್ […]
ಬೆಸ್ಟ್ ಫೌಂಡೇಶನ್ ನ ಐದನೇ ದಿನವೂ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾಗಿರುವ ರಕ್ಷಿತ್ ಶಿವರಾಂರವರ ನೇತೃತ್ವದ ಬ್ರಹ್ಮಶ್ರೀ ಎಜುಕೇಶನ್ & ಸೋಶಿಯಲ್ ಟ್ರಸ್ಟ್ ನ (BEST) ಆಶ್ರಯದಲ್ಲಿ ಬೆಳ್ತಂಗಡಿ ತಾಲ್ಲೂಕು ಯುವ ಕಾಂಗ್ರೆಸ್‌ನ ಸಹಯೋಗದಲ್ಲಿ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಾಲೂಕಿನ ವಿವಿಧೆಡೆ ಅರ್ಹ ಕುಟುಂಬಗಳಿಗೆ ಆಹಾರ ಪರಿಕರ ಸಾಮಗ್ರಿಗಳ ನೆರವನ್ನು ನಾಲ್ಕಾರು ದಿನಗಳಿಂದ ನೀಡುತ್ತಿದ್ದು, ಜೂನ್ 14ರಂದು ಬೆಳ್ತಂಗಡಿ ತಾಲೂಕಿನ ಧರ್ಮ ಪ್ರಾಂತ್ಯದ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ವಠಾರದ ಬಡ ಕುಟುಂಬಗಳಿಗೆ, ಬಡಗಕಾರಂದೂರು, […]
ಬೆಳಕು ಸೇವಾ ಪ್ರತಿಷ್ಠಾನದಿಂದ ಆಹಾರ ಕಿಟ್ ಗೌರವಧನ ವಿತರಣೆ

ಬೆಳ್ತಂಗಡಿ: ಉಜಿರೆಯ ಬೆಳಕು ಸೇವಾ ಪ್ರತಿಷ್ಠಾನದ ವತಿಯಿಂದ ಕಲ್ಮಂಜ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಧಾನ್ಯದ ಕಿಟ್ ಮತ್ತು ಗೌರವ ಧನವನ್ನು ಕಲ್ಮಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ 14ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಎಂ. ಕಲ್ಮಂಜ, ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರ ಶಶೀಧರ್ ಎಂ. ಕಲ್ಮಂಜ, ಪಂಚಾಯತ್ ಸದಸ್ಯ ಹಾಗೂ ಸಮಾಜ ಸೇವಕ ವರದಾಕ್ಷ ಆಚಾರ್ಯ, ಸವಿತಾ, […]