ಯಕ್ಷಭಾರತಿಯಿಂದ ಔಷಧ ವಿತರಣೆ

ಬೆಳ್ತಂಗಡಿ: ಯಕ್ಷಭಾರತಿ (ರಿ) ಬೆಳ್ತಂಗಡಿ ಸಂಸ್ಥೆಯಿಂದ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ, ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮ ಕನ್ಯಾಡಿ ಯ ನೇರೋಳ್ ಪಲ್ಕೆ ಮಂಜುಗುರಿಯ  ಕೃಷ್ಣ ಆಚಾರ್ಯ ಮತ್ತು ಸುಂದರಿ  ದಂಪತಿಗಳಿಗೆ ಮೇ 11ರಂದು ಎರಡು ತಿಂಗಳ  ಔಷಧಿಯನ್ನು ಅವರ ಮನೆಗೆ ತೆರಳಿ  ವಿತರಿಸಲಾಯಿತು. ಈ ಸಂದರ್ಭದಲ್ಲಿ ಯಕ್ಷಭಾರತಿಯ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ವಿಶ್ವಸ್ಥರಾದ ಸೂರ್ಯಾನಂದ ರಾವ್, ಸಂಚಾಲಕ ಮಹೇಶ್ ಕನ್ಯಾಡಿ, ಧರ್ಮಸ್ಥಳ  ಗ್ರಾಮ ಪಂಚಾಯತ್ ಸದಸ್ಯ ವಸಂತ ನಾಯ್ಕ, ಸ್ಥಳೀಯರಾದ ಕಶ್ಯಪ್ ಮತ್ತು ಫಲಾನುಭವಿಯ […]

ಬ್ರಾಹ್ಮಣರ ಅವಹೇಳನಕ್ಕೆ ಖಂಡನೆ

ಬೆಳ್ತಂಗಡಿ: ಕುಂದಾಪುರದ  ಗೋಪಾಲ ಬಂಗೇರ ಎಂಬವರು ಇತ್ತೀಚಿಗೆ  ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರು, ಪುರೋಹಿತರು ಮತ್ತು ಜನಿವಾರದ ಬಗ್ಗೆ  ಅವಹೇಳನದ  ಮಾತುಗಳನ್ನಾಡಿರುವುದು  ತೀರಾ ಖಂಡನೀಯ. ಬ್ರಾಹ್ಮಣ ಸಮಾಜ ಮತ್ತು ವರ್ಗವನ್ನು  ಈ ರೀತಿ ಪದೇಪದೇ  ತೇಜೋವಧೆ ಮಾಡುವ ಕೃತ್ಯ  ಇಲ್ಲಿಗೇ ಮುಗಿಯಬೇಕು. ಮುಂದೆ ಇಂತಹ ಅವಹೇಳನ ಹಾಗೂ ಬ್ರಾಹ್ಮಣ ಸಮಾಜದ ತೇಜೋವಧೆ ಮಾಡಿದಲ್ಲಿ  ಇಡೀ ಬ್ರಾಹ್ಮಣ ಸಮಾಜ ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದು ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ(ರಿ) ಅಧ್ಯಕ್ಷ  ರಾಘವೇಂದ್ರ  ಬೈಪಾಡಿತ್ತಾಯ ಮತ್ತು ತಾಲೂಕಿನ ವಿವಿಧ ವಲಯಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು  ಘಟನೆಯನ್ನು ತೀವ್ರವಾಗಿ  […]

ಕೊರೋನಾ ಸೋಂಕು ತಡೆ ಕಾರ್ಯಕ್ರಮಕ್ಕೆ ವಿಘ್ನ;ಕೋಣ ಕರು ಹಾಕಿತು ಎಂದಾಕ್ಷಣ ಕೊಟ್ಟಿಗೆಯಲ್ಲಿ ಕಟ್ಟು ಎಂದ ಬಂಗೇರ.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕ ವಸಂತ ಬಂಗೇರರ ಒಳ್ಳೆಯತನ ಹಾಗೂ ಪರೋಪಕಾರ ಬುದ್ಧಿಯನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಂಡು; ವಸಂತ ಬಂಗೇರರ ಹೆಸರಿಗೆ ಕಳಂಕ ತಂದ ಸಾಕಷ್ಟು ಪ್ರಕರಣಗಳು ತಾಲೂಕಿನ ಜನತೆಯ ಕಣ್ಣ ಮುಂದೆ ಇದೆ. ತನ್ನ ಬಳಿ ಸಹಾಯ ಕೇಳಿ ಬಂದವರಿಗೆ ತಾನು ನೆರವಾಗಬೇಕು ಎಂಬ ಒಂದಂಶದ ಪ್ರಾಮಾಣಿಕ ಚಿಂತನೆಯನ್ನು ಹೊಂದಿರುವ ಮಾಜಿ ಶಾಸಕ ವಸಂತ ಬಂಗೇರರನ್ನು ಅವರ ಸುತ್ತಮುತ್ತ ಇರುವ ಕೆಲವು ವ್ಯಕ್ತಿಗಳು ಬಳಸಿಕೊಂಡದ್ದಕ್ಕಿಂತ ದುರ್ಬಳಕೆ ಮಾಡಿಕೊಂಡದ್ದೇ ಹೆಚ್ಚು. ಇದೀಗ ಬೆಳ್ತಂಗಡಿ […]

ಸುಧೆಮುಗೇರು ಕಾಲೋನಿಗೆ ಆಹಾರ ಸಾಮಾಗ್ರಿಗಳ ವಿತರಣೆ

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಸುಧೆಮುಗೇರು ಪರಿಶಿಷ್ಟ ಜಾತಿ ಕಾಲೋನಿ ಪ್ರದೇಶದಲ್ಲಿ ಇತ್ತೀಚೆಗೆ ಹದಿಮೂರು ಕೊರೋನಾ ಪಾಸಿಟಿವ್ ಕಂಡುಬಂದಿರುತ್ತದೆ. ಈ ವಿಷಯವನ್ನರಿತ ಸ್ಥಳೀಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರವರು ಈ ಪ್ರದೇಶಕ್ಕೆ ಭೇಟಿನೀಡಿ ಆ ಪ್ರದೇಶದ ಎಲ್ಲಾ 78 ಮನೆಗಳನ್ನು ಕಂಟೋನ್ಮೆಂಟ್ ಪ್ರದೇಶ ಎಂಬುದಾಗಿ ಘೋಷಣೆ ಮಾಡಿ ಸುಧೆಮುಗೇರು ಪರಿಸರಕ್ಕೆ ಇರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿಸಿರುತ್ತಾರೆ.ಮೇ 10ರಂದು ಈ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರಾದ ಕೆ.ವಸಂತ ಬಂಗೇರ ಹಾಗೂ […]

ವಿಶ್ವ ಅಮ್ಮಂದಿರ ದಿನಾಚರಣೆ

ಬೆಳ್ತಂಗಡಿ: ವಿಶ್ವ ಅಮ್ಮಂದಿರ ದಿನವನ್ನು  ಬೆಳ್ತಂಗಡಿ ರೋಟರಿ ಕ್ಲಬ್ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿ  ಮಾದರಿಯಾಗಿದೆ. ವಿನೂತನ ಪರಿಕಲ್ಪನೆಯಲ್ಲಿ ಮೇ 9ರಂದು ವಾತ್ಸಲ್ಯಮಯಿ ಅಮ್ಮನನ್ನು ‘ಭಾವ ಗಾನ’ದ ಮೂಲಕ ಸ್ಮರಿಸಿಕೊಂಡಿದೆ.  ಯಕ್ಷಗಾನದ  ಪ್ರತಿಭಾನ್ವಿತ  ಯುವ ಭಾಗವತೆ ಕಾವ್ಯಶ್ರೀ ನಾಯಕ್ ಅಜೇರು ಅವರು ಆಯ್ದ ಕವಿಗಳ ಅಮ್ಮನನ್ನು ಕುರಿತಾದ ಭಾವಗೀತೆಗಳನ್ನು  ರಾಗಸಂಯೋಜಿಸಿ ತನ್ನ ಮಧುರ ಕಂಠಸಿರಿಯಲ್ಲಿ  ಪ್ರಸ್ತುತ ಪಡಿಸಿದರು. ಅದಕ್ಕೆ ಪೂರಕವಾಗಿ ಯಕ್ಷಗಾನ ಅರ್ಥಧಾರಿ-ಕಲಾವಿದ ಉಜಿರೆ ಅಶೋಕ ಭಟ್ ಅವರ ನಿರೂಪಣೆಯಲ್ಲಿ ತಾಯಿಯ  ಮಾತೃಹೃದಯವನ್ನು  ವಿಸ್ತೃತವಾಗಿ ಬಿಂಬಿಸಲಾಯಿತು.                  ಬೆಳ್ತಂಗಡಿ […]

ಕಳಿಯ ಗ್ರಾಮ ಪಂಚಾಯತ್: ಮಾವಿನಕಟ್ಟೆ ಜನತಾ ಕಾಲೊನಿ ಸೀಲ್ ಡೌನ್.

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್‌ನಲ್ಲಿ ಮೇ10 ರಂದು ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಶ್ಮೆರೋಡ್ ಮಾವಿನಕಟ್ಟೆ ಜನತಾ ಕಾಲೋನಿಯಲ್ಲಿ ಅತೀ ಹೆಚ್ಚು ಕೊರೋನಾ ಪಾಸಿಟಿವ್ ಇದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಲು ತೀಮಾ೯ನಿಸಲಾಯಿತು. ಜನಸಾಮಾನ್ಯರಿಗೆ ತುರ್ತು ಅವಶ್ಯಕತೆ ಇದ್ದರೆ ಹಾಗೂ ಅಗತ್ಯ ವಸ್ತುಗಳಿಗೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯನ್ನು ಹಾಗೂ ಸಿಬ್ಬಂದಿ ವರ್ಗವನ್ನು ಸಂಪರ್ಕಿಸುವಂತೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಯಿತು. ತುರ್ತು ಅವಶ್ಯಕತೆಗಳಿಗೆ ಸಂಘಸಂಸ್ಥೆಯವರು ಸೇವಾ ಮನೋಬಾವದಿಂದ […]

ಪರವೂರಿನಿಂದ ಬರುವ ಸ್ಥಳೀಯರಿಗೆ ಮೊದಲು ಕ್ವಾರಂಟೈನ್;ಧರ್ಮಸ್ಥಳ ಗ್ರಾ. ಪಂ.‌ನಿಂದ ಮಾದರಿ ಕಾರ್ಯಕ್ರಮ.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ದಿನೇದಿನ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಧರ್ಮಸ್ಥಳ ಗ್ರಾಮವೂ ಹೊರತಾಗಿಲ್ಲ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊರೋನಾ ಸೋಂಕಿನ ಬೀಜ ಬಿತ್ತಿದ ಕುಖ್ಯಾತಿ ಹತ್ತಾರು ದಿನಗಳ ಹಿಂದೆ ರಾಜ್ಯ ಸರಕಾರ ಘೋಷಿಸಿದ ಜನತಾ ಲಾಕ್‌ಡೌನ್ ಸಂದರ್ಭ ಬೆಂಗಳೂರಿಂದ ತಮ್ಮ ಊರಿಗೆ ಬಂದ ಮಹಾನುಭಾವರಿಗೆ ಸಲ್ಲುತ್ತದೆ. ಊರಿಗೆ ಬಂದ ಈ ಬೆಂಗಳೂರಿನ ಮಂದಿ ತಮ್ಮ ಹುಟ್ಟೂರ ಶಾಲೆಗಳಲ್ಲಿ ಶಾಸಕ ಹರೀಶ್ ಪೂಂಜ ಊರ ಶಾಲೆಗಳಲ್ಲಿ ವ್ಯವಸ್ಥೆಗೊಳಿಸಿದ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಹತ್ತು ದಿನ ಕ್ವಾರಂಟೈನ್ ಆಗಿ, […]

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆಯೊಂದಿಗೆ ಕೊರೋನಾ ಉಚಿತ

ಬೆಳ್ತಂಗಡಿ: ದೇಶದಲ್ಲಿ ಕೊರೋನಾ ಲಸಿಕೆಯ ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆದ ಕೆಲ ವ್ಯಕ್ತಿಗಳಿಗೂ ಕೊರೋನಾ ಪಾಸಿಟಿವ್ ಬಂದ ವರದಿಗಳು ಮಾಧ್ಯಮಗಳ ಮೂಲಕ ಪ್ರಕಟಗೊಂಡಿದೆ. ಈ ರೀತಿ ಲಸಿಕೆ ಪಡದವರಿಗೂ ಕೊರೋನಾ ಬರಲು ಕಾರಣವೇನು ಎಂಬ ಪ್ರಶ್ನೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಮೇಲಿನ ದೃಶ್ಯಾವಳಿ ಒಂದು ಹಂತದವರೆಗೆ ಉತ್ತರ ನೀಡುತ್ತದೆ.ಮೇ 10ರಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೋವಿಡ್-19 ಲಸಿಕಾ ಕೊಠಡಿಯ ಬಾಗಿಲಲ್ಲಿ ಕಂಡು ಬಂದ ದೃಶ್ಯವಿದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡುವ ಮೂಲಕ […]

ಬೆಳ್ತಂಗಡಿಯಲ್ಲಿ ನಿಷ್ಕ್ರಿಯ ತಾಲೂಕು ಆಡಳಿತ;ಕೋವಿಡ್ ನಿಯಮಗಳಿಗೆ ಸವಾಲಾದ ಕಾನೂನು ವಿರೋಧಿಗಳ ಅಟ್ಟಹಾಸ

ಬೆಳ್ತಂಗಡಿ: ಸರಕಾರ ಹೊರಡಿಸಿದ ಕೊರೋನಾ ಸೋಂಕು ನಿಯಂತ್ರಣ ಮಾರ್ಗಸೂಚಿಗಳ ಅನುಷ್ಠಾನದ ಜವಾಬ್ದಾರಿ ಬೆಳ್ತಂಗಡಿ ತಾಲೂಕಿನಲ್ಲಿ ಪೊಲೀಸರಿಗಷ್ಟೇನಾ…. ತಾಲೂಕು ಆಡಳಿತ ಈ ವಿಚಾರದಲ್ಲಿ ಸಂಪೂರ್ಣ ನಿಷ್ಕ್ರೀಯವಾಗಿದ್ದರೂ ನಮ್ಮ ಶಾಸಕ ಹರೀಶ್ ಪೂಂಜ ಯಾಕೆ ಸುಮ್ಮನಿದ್ದಾರೆ? ರಾಜ್ಯದಲ್ಲೇ ಕೋವಿಡ್ ನಿಯಂತ್ರಣ ನಿಯಮ ಪಾಲನೆಗೆ ಕಾನೂನು ವಿರೋಧಿಗಳು ಸವಾಲು ಹಾಕುವ ಊರುಗಳಲ್ಲಿ ಬೆಳ್ತಂಗಡಿ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದರೂ ತಪ್ಪಾಗದು. ಇದಕ್ಕೆ ನೇರ ಹೊಣೆ ತಾಲೂಕು ಆಡಳಿತ. ಒಂದೊಮ್ಮೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳ್ತಂಗಡಿಯಲ್ಲಿ ಈ ಹಿಂದಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿಯೇ […]

ಉಜಿರೆ ಶ್ರೀ ಧ.‌‌ಮಂ. ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ

ಬೆಳ್ತಂಗಡಿ: ಕೋವಿಡ್ ವಿರುದ್ಧ ಹೋರಾಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗಣನೀಯವಾದ ಸೇವೆ ನೀಡುತ್ತಿದ್ದು, ತನ್ನ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರದ ಮೂಲಕ ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಹಾಗೂ ವಾಹನ ಸೇವೆಯನ್ನು ಈಗಾಗಲೇ ನೀಡಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಬಂದು ಸಾಮಾಜಿಕ ಕಳಕಳಿ ಮೆರೆದಿದ್ದು, ಆರೋಗ್ಯ ಬಿಕ್ಕಟ್ಟು ಎದುರಾಗಿರುವ ಇಂತಹ ಸಂದರ್ಭದಲ್ಲಿ ಗರ್ಭಿಣಿಯರ ಆರೋಗ್ಯ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ. ಸದ್ಯ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತರ ಶುಶ್ರೂಷೆಗಾಗಿ ಮೀಸಲಿಟ್ಟಿದ್ದು, ಇಲ್ಲಿ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. […]