ಬೆಳುವಾಯಿಯಲ್ಲಿ ಹೋಂ ಐಸೊಲೇಷನ್ ಕಿಟ್ ವಿತರಣೆ

ಮೂಡುಬಿದಿರೆ: ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಹಾಗೂ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರ ನೇತ್ರತ್ವದಲ್ಲಿ ಕೊರೋನಾ ವೈರಸ್‌ನಿಂದ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ಮಿಥುನ್ ರೈ ಅವರು ಕೊಡುಗೆಯಾಗಿ ನೀಡಿರುವ ಹೋಮ್ ಐಸೊಲೇಷನ್ ಕಿಟ್‌ಅನ್ನು ಇಂದು ಬೆಳುವಾಯಿ ಗ್ರಾಮದಲ್ಲಿ ಆಶಾ ಕಾರ್ಯ ಕರ್ತರಿಗೆ, ಆಟೋ ರಿಕ್ಷಾ ಚಾಲಕರಿಗೆ , ಪೆಟ್ರೊಲ್ ಪಂಪ್ ಸಿಬ್ಬಂದಿಗಳಿಗೆ ವಿತರಿಸಲಾಯಿತು.ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ನಾಯಕರಾದ […]
800 ಕೋಟಿ ರೂಪಾಯಿ ಅನುದಾನದ ದಾಖಲೆ ಬಿಡುಗಡೆಗೊಳಿಸಿದರೆ ಸಾರ್ವಜನಿಕ ಸನ್ಮಾನ – ಶಾಸಕ ಹರೀಶ್ ಪೂಂಜರಿಗೆ ಸವಾಲೆಸೆದ ಮಾಜಿ ಶಾಸಕ ವಸಂತ ಬಂಗೇರ

ಬೆಳ್ತಂಗಡಿ: ‘ಶಾಸಕ ಹರೀಶ್ ಪೂಂಜ ಕಳೆದ ಮೂರು ವರ್ಷದಲ್ಲಿ ತಾನು ತಾಲ್ಲೂಕಿಗೆ ರೂಪಾಯಿ 800 ಕೋಟಿ ಅನುದಾನ ಮಂಜೂರಾತಿ ಮಾಡಿ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ ಎಂದು ಪ್ರಚಾರ ಮಾಡಿದ್ದಾರೆ. ಶಾಸಕರು 800 ಕೋಟಿ ರೂಪಾಯಿ ಅಭಿವೃದ್ಧಿ ಅನುದಾನದ ಅಧಿಕೃತ ಸರ್ಕಾರಿ ದಾಖಲೆಗಳನ್ನು ಬಿಡುಗಡೆಗೊಳಿಸಿದರೆ ನಾನೇ ಮಾಜಿ ಶಾಸಕನ ನೆಲೆಯಲ್ಲಿ ಸಾರ್ವಜನಿಕರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ. ದಾಖಲೆ ಬಿಡುಗಡೆಗೊಳಿಸಲು ವಿಫಲವಾದರೆ ತಾಲ್ಲೂಕಿನ ಜನರಲ್ಲಿ ಶಾಸಕರು ಕ್ಷಮೆ ಕೇಳಬೇಕು’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಸವಾಲು ಹಾಕಿದರು.ಅವರು ಮೇ […]
ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಶಿಕ್ಷಣ ಅಭಿಯಾನಕ್ಕೆ ಶಾಸಕ ಹರೀಶ ಪೂಂಜ ಚಾಲನೆ

ಬೆಳ್ತಂಗಡಿ: ಕೊರೊನಾ ಪೀಡಿತರಿಗೆ ಯಾವ ರೀತಿ ಚಿಕಿತ್ಸೆಯನ್ನು ಆಶಾ ಕಾರ್ಯಕರ್ತೆಯರು ನೀಡಬಹುದು ಎಂಬ ಮಾಹಿತಿಯನ್ನು ನೀಡುವ ಕೋವಿಡ್ ಶಿಕ್ಷಣ ಅಭಿಯಾನಕ್ಕೆ ಶಾಸಕ ಹರೀಶ್ ಪೂಂಜ ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ಮೇ 26ರಂದು ಚಾಲನೆ ನೀಡಿದರು.ರಾಜ್ಯದಲ್ಲೇ ಈ ರೀತಿಯ ಮೊದಲ ಪ್ರಯತ್ನ ಬೆಳ್ತಂಗಡಿಯಲ್ಲಾಗುತ್ತಿದ್ದು ಮೊದಲ ಹಂತದಲ್ಲಿ ಮೇ 26ರಂದು ಉಜಿರೆ ಪಂಚಾಯತಿ ಮಟ್ಟದಲ್ಲಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಶಾಸಕರು ಅಕ್ಸಿಮೀಟರ್, ಪಾಸಿಟಿವ್ ವ್ಯಕ್ತಿಗಳು ಅನುಸರಿಸಬೇಕಾದ ಬಗೆಗಿನ ಕರಪತ್ರ ಹಾಗೂ ಮಾಸ್ಕ್ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಬೆಳ್ತಂಗಡಿಯ ರೋಟರಿ […]
ಡಿಎಸ್ಎಸ್‌ನಿಂದ ಲಾಕ್‌ಡೌನ್ ನಿಯಮ ಉಲ್ಲಂಘಸಿ ಜೈಲ್‌ಭರೋ ಚಳುವಳಿಯ ಎಚ್ಚರಿಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನೆಮನೆಯಲ್ಲಿ ರಾಜ್ಯಾದ್ಯಂತ ನಡೆದ ಪ್ರತಿಭಟನೆಯ ಅಂಗವಾಗಿ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮೇ 24ರಂದು ಪ್ರತಿಭಟನೆ ನಡೆಯಿತು.ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೋಲಿಸ್ ಠಾಣೆಯ ಉಪ ನಿರೀಕ್ಷಕ ಅರ್ಜುನ್‌ನನ್ನು ಸೇವೆಯಿಂದ ಅಮಾನತು ಮಾಡಿ, ಬಂಧಿಸಿ, ಜೈಲಿಗಟ್ಟಬೇಕು; ಕೋವಿಡ್ ಸಂಬಂಧಿತ ಎಲ್ಲಾ ಚಿಕಿತ್ಸೆಯನ್ನು ಉಚಿತಗೊಳಿಸಬೇಕು; ಎಲ್ಲರಿಗೂ ತುರ್ತಾಗಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು; ಎಲ್ಲಾ ಬಡಕುಟುಂಬಗಳಿಗೂ ದಿನಬಳಕೆ ಸಾಮಾಗ್ರಿ ಮತ್ತು ಮಾಸಿಕ 5,000ರೂಪಾಯಿ […]
‘ವಿವೇಕ ಮಿತ್ರ ಕೋವಿಡ್19’ ಉಚಿತ ವಾಹನ ಸೇವೆ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಸ್ವಾಮಿ ಶ್ರೀ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಕೋವಿಡ್-19 ಪರಿಹಾರ ಕಾರ್ಯದಲ್ಲಿ ನೆರವಾಗಲು ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಸಹಯೋಗದೊಂದಿಗೆ ತಾಲೂಕಿನ ಮುಂಡೂರು ಗ್ರಾಮ ವ್ಯಾಪ್ತಿಯ ಕೋವಿಡ್ ಪೀಡಿತರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಮುಂಚೂಣಿಯ ಸ್ವಯಂಸೇವಕರ ಸಂಚಾರಕ್ಕೆ ಹಾಗೂ ಅಗತ್ಯವುಳ್ಳವರಿಗೆ ಆಹಾರ ಸಾಮಗ್ರಿ ಒದಗಿಸಲು ಟ್ರಸ್ಟ್ ವತಿಯಿಂದ ಎರಡು ವಾಹನಗಳನ್ನು ‘ವಿವೇಕಮಿತ್ರ ಕೋವಿಡ್-19’ ಹೆಸರಿನಲ್ಲಿ ಉಚಿತವಾಗಿ ಒದಗಿಸಲಾಗಿದೆ. ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಮೇ 22 ರಂದು ನಡೆದ […]
ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಎಲ್ಲ ಕ್ರಮ-ಕೋಟ

ಬೆಳ್ತಂಗಡಿ: ಮಂಗಳೂರಲ್ಲಿ ಮೇ 25ರಂದು ಮಕ್ಕಳ ತಜ್ಞರ ಜೊತೆ ಸಮಾಲೋಚನಾ ಸಭೆ ಆಯೋಜಿಸಲಾಗಿದ್ದು, ಎಳೆಯ ಮಕ್ಕಳ ಮೇಲೆ ಬರಬಹುದಾದ ಕೊರೋನಾ ಮೂರನೇ ಅಲೆಯನ್ನು ನಿಯಂತ್ರಣದಲ್ಲಿರಿಸಲು ಸರ್ವ ತಯಾರಿ ಮಾಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.ಅವರು ಮೇ 24ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಳದ ವಠಾರದಲ್ಲಿ ಅಳದಂಗಡಿ ಸತ್ಯದೇವತಾ ದೈವಸ್ಥಾನದ ವತಿಯಿಂದ ವತಿಯಿಂದ ಅಳದಂಗಡಿ ಹಾಗೂ ನಾರಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 80 […]
ಲಾಯ್ಲ ಪಡ್ಲಾಡಿ ಕಂಟೋನ್ಮೆಂಟ್ ವಲಯ ನಿವಾಸಿಗರಿಗೆ ಕಿಟ್ ವಿತರಣೆ

ಬೆಳ್ತಂಗಡಿ: ರಾಜ್ಯ ಪ್ರಶಸ್ತಿ ವಿಜೇತ ಉತ್ಸಾಹಿ ಯುವಕ ಮಂಡಲದ ವತಿಯಿಂದ ಕಂಟೋನ್ಮೆಂಟ್ ವಲಯ ಎಂದು ಗುರುತಿಸಲಾಗಿರುವ ಲಾಯಿಲ ಪಡ್ಲಾಡಿ ಪ್ರದೇಶದ ಎಲ್ಲಾ ಮನೆಗಳಿಗೆ ತರಕಾರಿ ಕಿಟ್ ಗಳನ್ನು ಮೇ 24ರಂದು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಚಂದ್ರಕಾಂತ, ಕಾರ್ಯದರ್ಶಿ ಹರ್ಷಿತ್ ನಿನ್ನಿಕಲ್ಲು, ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಚಂದು ಎಲ್., ಯುವಕ ಮಂಡಲದ ಪದಾಧಿಕಾರಿಗಳಾದ ಸಂದೇಶ್ ಎಲ್, ಹರೀಶ್ ಎಲ್, ರವಿಚಂದ್ರ, ಸೂರ್ಯಕಾಂತ್, ಸುಧೀರ್ ಮತ್ತಿತರರು […]
ಆಕ್ಸೀಜನ್ ಘಟಕ ಕಾಮಗಾರಿಗೆ ಶಿಲಾನ್ಯಾಸ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರದ ಸರಕಾರಿ ಆಸ್ಪತ್ರೆಗೆ ರಾಜ್ಯ ಸರ್ಕಾರದ ರೂಪಾಯಿ 82ಲಕ್ಷ ವಿಶೇಷ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಆಕ್ಸಿಜನ್ ಘಟಕ ಕಾಮಗಾರಿಗೆ ಮೇ 24ರಂದು ಕರ್ನಾಟಕ ಸರಕಾರದ ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಪ್ರತಾಪ್‌ಸಿಂಹ ನಾಯಕ್ ಮತ್ತು ಶ್ರೀ ಹರೀಶ್ […]
ಕಾಂಗ್ರೆಸ್ ವತಿಯಿಂದ 1500 ಐಸೊಲೇಷನ್ ಕಿಟ್ ವಿತರಣೆ

ಮೂಡುಬಿದಿರೆ : ಕಾಂಗ್ರೆಸ್ ಯುವನಾಯಕ ಮಿಥುನ್ ರೈಯವರು ಕೋವಿಡ್ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಿರುವ ಉಪಯುಕ್ತ ಔಷಧಿ, ಮಾಹಿತಿ, ವಿಟಮಿನ್ ಮಾತ್ರೆಗಳು ಮತ್ತು ಮಾಸ್ಕನ್ನು ಒಳಗೊಂಡ 1500 ಐಸೊಲೇಷನ್ ಕಿಟ್ ಗಳನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನೇತ್ರತ್ವದಲ್ಲಿ ಮೂಡುಬಿದಿರೆಯ ಆಶಾ ಕಾರ್ಯಕರ್ತೆಯರು, ಆಟೋರಿಕ್ಷಾ ಚಾಲಕರು ಮತ್ತಿತರರಿಗೆ ವಿತರಿಸಲಾಯಿತು.ಸರಕಾರ ವಿಧಿಸಿರುವ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರಧಾನ […]
‘ಮುಂಡಾಜೆಯಲ್ಲಿ ಆಪ್ತರಕ್ಷಕ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸೆಲ್ಫ್ ಕ್ವಾರಂಟೈನ್ ಆಗಲಿ’

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿಯವರು ಮೇ 18ರಂದು ಮುಂಡಾಜೆಯಲ್ಲಿ ಆಯೋಜಿಸಿದ ಮುಂಡಾಜೆ ಗ್ರಾಮ ಪಂಚಾಯತ್‌ಗೆ ಕೊರೋನಾ ಸಂದರ್ಭ ತುರ್ತು ಅಗತ್ಯಕ್ಕಾಗಿ ನೀಡಿದ ‘ಆಪ್ತರಕ್ಷಕ’ ವಾಹನದ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಓರ್ವ ಜನಪ್ರತಿನಿಧಿ ಹಾಗೂ ಓರ್ವ ಆಶಾ ಕಾರ್ಯಕರ್ತೆಗೆ ಕೊರೋನಾ ಪಾಸಿಟಿವ್ ವರದಿಯಾಗಿದ್ದು; ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್‌ನ ಸದಸ್ಯರು ಮತ್ತು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರೆಲ್ಲರೂ ಕೊರೋನಾ ಟೆಸ್ಟ್ ಮಾಡಿಸುವುದರ ಜೊತೆಗೆ ಇವರೆಲ್ಲಾ ಸೋಂಕಿತರ […]