ಮನೆಯಲ್ಲಿದ್ದೇ ಕೊರೊನಾ ಗೆದ್ದ ಮರೋಡಿ ರಾಂತಿಬೆಟ್ಟು ಕುಟುಂಬ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಸೋಂಕನ್ನು ದಿಟ್ಟತನದಿಂದ ಎದುರಿಸಿ ಗೆದ್ದು ಬಂದವರ ಸಂಖ್ಯೆಯೂ ದೊಡ್ಡದಾಗಿ ಬೆಳೆಯುತ್ತಿರುವುದು ಸಮಾಧಾನಕರ ಅಂಶ.ಬೆಳ್ತಂಗಡಿ ತಾಲೂಕಿನ ತೀರಾ ಗ್ರಾಮೀಣ ಪ್ರದೇಶವಾದ ಪೆರಾಡಿ ಗ್ರಾಮದ ರಾಂತಿಬೆಟ್ಟು ಮನೆಯ ಒಂದೇ ಕುಟುಂಬದ 13ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಇದೀಗ ಎಲ್ಲರೂ ಸೋಂಕಿನಿಂದ ಗುಣಮುಖರಾಗಿದ್ದಾರೆ.ಪೆರಾಡಿಯ ರಾಂತಿಬೆಟ್ಟು ಕುಟುಂಬಿಕರು ಇತ್ತೀಚೆಗೆ ಉಡುಪಿಯಲ್ಲಿನ ತಮ್ಮ ಹತ್ತಿರದ ಸಂಬಂಧಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಆ ಬಳಿಕ ಕುಂಟುಂಬದ […]

ಸುದೆಮುಗೇರು ಕಾಲನಿ ನಿವಾಸಿಗರಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊರೋನಾ ಹಾಟ್‌ಸ್ಪಾಟ್ ಪ್ರದೇಶಗಳಲ್ಲೊಂದಾದ ಸೀಲ್ ಡೌನ್ ಆಗಿರುವ ಪ್ರದೇಶ ಸುಧೇಮುಗೇರು ಕಾಲನಿಯ 25 ಮನೆಗಳಿಗೆ ಬೆಳ್ತಂಗಡಿ ಬಿಷಪ್‌ಹೌಸ್‌ನಿಂದ ಮೇ 22ರಂದು ಆಹಾರ ಕಿಟ್ ವಿತರಿಸಲಾಯಿತು.ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಡಾ. ಲಾರೆನ್ಸ್ ಮುಕ್ಕುಯಿ ಅವರ ಮಾರ್ಗದರ್ಶನದಲ್ಲಿ ಇಲ್ಲಿನ 24 ಮನೆಗಳಿಗೆ ಹಾಗೂ ಈ ಭಾಗದ ಓರ್ವ ಪೌರ ಕಾರ್ಮಿಕ ಸೇರಿ ಒಟ್ಟು 25 ಮನೆಗಳಿಗೆ ತಲಾ 10ಕಿಲೋ ಅಕ್ಕಿ, 6ತೆಂಗಿನಕಾಯಿ ಹಾಗೂ ದಿನಬಳಕೆ ಸಾಮಾಗ್ರಿಯನ್ನು ವಿತರಿಸಲಾಯಿತು. ಈ ಸಂದರ್ಭ ಬಿಷಪ್ […]

ವೈದ್ಯಕೀಯ ಪರಿಕರ ಕೊಡುಗೆ

ಬೆಳ್ತಂಗಡಿ: ದಕ್ಷಿಣ ಕನ್ನಡಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಬೆಂಗಳೂರಿನ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ಮೇ 21ರಂದು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸುಮಾರು 3ಲಕ್ಷ ರೂಪಾಯಿ ಮೌಲ್ಯದ ಪಿಪಿಇ ಕಿಟ್, ಸರ್ಜಿಕಲ್ ಗ್ಲೌಸ್, ಮಾಸ್ಕ್, ಸ್ಯಾನಿಟೈಜರ್ ಹಾಗೂ ಇನ್ನಿತರ ವೈದ್ಯಕೀಯ ಬಳಕೆಗೆ ಬೇಕಾಗುವ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು ವೈದ್ಯಕೀಯ ಪರಿಕರಗಳನ್ನು ಸ್ವೀಕರಿಸಿ, ದೇವೇಂದ್ರ ಹೆಗ್ಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ […]

ಈ ಸಂಕಷ್ಟದಲ್ಲಿ ಇಂತಹಾ ಓಲೈಕೆ ಯಾಕೆ?

ಬೆಳ್ತಂಗಡಿ: ಮೇ 21ರಂದು ಬೆಳ್ತಂಗಡಿ ತಾಲೂಕಿನ ನೆರಿಯಾದಲ್ಲಿ ಬೆಳ್ತಂಗಡಿಯ ರೋಟರಿ ಕ್ಲಬ್ ಹಾಗೂ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ವತಿಯಿಂದ ನೆರಿಯ ಗ್ರಾಮ ಪಂಚಾಯತ್‌ಗೆ ಕೋವಿಡ್ ನಿರ್ವಹಣೆಗಾಗಿ ‘ಆಪ್ತರಕ್ಷಕ’ ವಾಹನದ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಇದೇ ಕಾರ್ಯಕ್ರಮದಲ್ಲಿ ಶಾಸಕರಾಗಿ ಮೂರು ವರ್ಷ ಪೂರೈಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರನ್ನು ಸಮ್ಮಾನಿಸುವ ಮೂಲಕ ಬಕೆಟ್ ಹಿಡಿಯುವ ಕಾರ್ಯಕ್ರಮವೂ ನಡೆಯಿತು.ತಾಲೂಕಿನ ಮಾತ್ರವಲ್ಲ; ಇಡೀ ದೇಶದ ಜನತೆ ಕೊರೋನಾ ಸೋಂಕಿನಿಂದ ತತ್ತರಿಸಿ ಭಯದಿಂದ ಬದುಕುತ್ತಿರುವಾಗ; ತಾಲೂಕಿನಲ್ಲೂ ಕೊರೋನಾಗೆ ಬಲಿಯಾದ ಅದೆಷ್ಟೋ […]

ಮಾಜಿ ಪ್ರಧಾನಿ ರಾಜೀವ್ ಗಾಂಧಿ 30ನೇ ಪುಣ್ಯಸ್ಮೃತಿ ಮಾಸ್ಕ್ ಸರಿಸಿ ಭಾಗವಹಿಸಿದ ಹಿರಿಯ ನಾಯಕರು

ಮಾಜಿ ಪ್ರಧಾನಿ ರಾಜೀವ್ ಗಾಂಧಿ 30ನೇ ಪುಣ್ಯಸ್ಮೃತಿ ಮಾಸ್ಕ್ ಸರಿಸಿ ಭಾಗವಹಿಸಿದ ಹಿರಿಯ ನಾಯಕರುಫೊಟೊ ಬೆಳ್ತಂಗಡಿ: ಅಧುನಿಕ ಭಾರತದ ನಿರ್ಮಾತೃ, ಡಿಜಿಟಲ್ ಕ್ರಾಂತಿಯ ಮೂಲಕ ದೇಶದ ಪ್ರಗತಿಗೆ ಮುನ್ನುಡಿ ಬರೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿರವರ 30ನೇ ವರ್ಷದ ಪುಣ್ಯಸ್ಮೃತಿ ಕಾರ್ಯಕ್ರಮವು ಮೇ 21ರಂದು ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಹೊರಗಡೆ ನಡೆಯಿತು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಸ್ಮರಣೆಯಲ್ಲಿ […]

ಬದುಕಿ ಇನ್ನೊಬ್ಬರನ್ನು ಬದುಕಿಸುವ ಶ್ರೇಷ್ಠ ಕಾರ್ಯ ರಕ್ತದಾನ-ಬಂಗೇರ

ಬೆಳ್ತಂಗಡಿ : ‘ರಕ್ತ ನಮ್ಮ ಬದುಕಿನ ಜೀವರಸ. ರಕ್ತದಾನ ಬದುಕಿನ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದ್ದು, ರಕ್ತದಾನದಿಂದ ನಾವು ಬದುಕಿ ಇನ್ನೊಬ್ಬರನ್ನು ಬದುಕಿಸುವ ಸತ್ಕಾರ್ಯವಾಗಿದೆ. ಹಾಗಾಗಿ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಶ್ರೇಷ್ಠ ಮನಸ್ಸನ್ನು ಬೆಳೆಸಿಕೊಂಡಿರಬೇಕು’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.ಅವರು ಮೇ 18ರಂದು ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ತಾಲೂಕು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ […]

ಮಿಡಿದ ಮಾನವ ಹೃದಯದಿಂದ ಅಶಕ್ತರಿಗೆ ಸಹಾಯಹಸ್ತ

ಬೆಳ್ತಂಗಡಿ: ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸರಕಾರ ಘೋಷಿಸಿದ ಲಾಕ್‌ಡೌನ್‌ನಿಂದ ಹೊಟ್ಟೆಗೆ ಸಕಾಲದಲ್ಲಿ ಹಿಟ್ಟಿಲ್ಲದೇ ಸಂಕಷ್ಟದಲ್ಲಿರುವವರಿಗೆ ಕಳೆದ ನಾಲ್ಕಾರು ದಿನಗಳಿಂದ ನೂರಾರು ಮಂದಿಗೆ ಪ್ರತಿನಿತ್ಯ ಬೆಳ್ತಂಗಡಿ ಪರಿಸರದಲ್ಲಿ ಅನ್ನ ದಾಸೋಹದ ಮೂಲಕ ಮೌನವಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿಯ ನ್ಯಾಯವಾದಿ ಹಾಗೂ ನೋಟರಿ ಬಿ. ಮುರಳಿ ತಮ್ಮ ಮಕ್ಕಳಾದ ಬಿ. ಎಂ. ಮಯೂರ ಮತ್ತು ಬಿ. ಎಂ. ಮಂದಾರರೊಂದಿಗೆ ಮೇ 14ರಂದು ಮೇಲಂತಬೆಟ್ಟು ಮತ್ತು ಸವಣಾಲು ಗ್ರಾಮಗಳ 13ಮನೆಗಳಿಗೆ ಹದಿನೈದು ದಿನಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ವಿತರಿಸುವ […]

ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ‘ಆಪ್ತರಕ್ಷಕ’

ಬೆಳ್ತಂಗಡಿ : ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಇಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಕೊರೋನಾ ಸೋಂಕಿನ ಸಂದರ್ಭ ಕೊರೋನಾ ವಾರಿಯರ್ಸ್‌ಗೆ ಬಳಕೆ ಮಾಡಲು “ಆಪ್ತರಕ್ಷಕ’ ಎರಡು ವಾಹನವನ್ನು ಪಟ್ಟಣ ಪಂಚಾಯತಿನ ಮಖ್ಯಾಧಿಕಾರಿ ಸುಧಾಕರ್ ಅವರಿಗೆ ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಉಜಿರೆ, ರಾಜೇಶ್ ಪೈ ಉಜಿರೆ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ಅದ್ಯಕ್ಷ ಬಿ. ಕೆ. ಧನಂಜಯ ರಾವ್ ವಾಹನದ ಕೀಕೈ ನೀಡುವ […]

ಭಾರೀ ಮಳೆಗೆ ತುಂಬಿ ಹರಿದ ನದಿಗಳು, ಅಲ್ಲಲ್ಲಿ ಹಾನಿ

ಬೆಳ್ತಂಗಡಿ: ಮೇ 13ರಂದು ಸಂಜೆಯ ಬಳಿಕ ದಿಡುಪೆ, ಚಾರ್ಮಾಡಿ, ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳ ಉಗಮ ಸ್ಥಾನಗಳಲ್ಲಿ ಭಾರಿ ಮಳೆಯಾಗಿದ್ದು, ಈ ನದಿಗಳ ಹರಿವು ಹೆಚ್ಚಳಗೊಂಡು ಅಲ್ಲಲ್ಲಿ ಹಾನಿ ಸಂಭವಿಸಿದೆ. ಈ ನದಿಗಳು ಹರಿಯುವ ಗ್ರಾಮಗಳಲ್ಲೂ ಮಳೆಯಾದ ಕಾರಣ ತಗ್ಗು ಪ್ರದೇಶಗಳಲ್ಲೂ ನೀರಿನ ಹರಿವಿನ ಪ್ರಮಾಣ ಹೆಚ್ಚಳ ಗೊಂಡಿದ್ದು, ಶುಕ್ರವಾರ ಬೆಳಿಗ್ಗೆಯಿಂದ ನದಿಗಳ ನೀರಿನ ಮಟ್ಟ ಸಾಮಾನ್ಯ ಸ್ಥಿತಿಗೆ ಮರಳ ತೊಡಗಿತು.ನೇತ್ರಾವತಿ ನದಿಯನ್ನು ಸೇರುವ ದಿಡುಪೆ ಭಾಗದ ನಂದಿಕಾಡು ಹಾಗೂ ಆನಡ್ಕ ಹಳ್ಳಗಳಲ್ಲಿ ಹೆಚ್ಚಿನ ಪ್ರಮಾಣದ ನೀರು […]

ಕೋವಿಡ್ ಕಾರ್ಯಪಡೆಯ ಕೆಲಸ ಪರಿಶೀಲನೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳು ಹಾಗೂ ಕೋವಿಡ್ ಕಾರ್ಯಪಡೆಯ ಕೆಲಸ ಪರಿಶೀಲನೆ ಬಗ್ಗೆ ಸಮಾಲೋಚನಾ ಸಭೆ ಮೇ 14ರಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಂಗಡಿ ತಹಶೀಲ್ದಾರ್ ಮಹೇಶ್ ಜೆ.ಯವರ ನಡೆಯಿತು.ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಬೆಡ್‌ಗಳ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಧರ್ಮಸ್ಥಳದ ರಜತಾದ್ರಿ ಸಭಾಭವನವನ್ನು ಉಪಯೋಗಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದ್ದು, ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಅಲ್ಲಿ […]