ಸುಧೆಮುಗೇರು ಕಾಲೋನಿಗೆ ಮಾನವ ಹೃದಯಿಗಳಿಂದ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ಇತ್ತೀಚೆಗೆ ಕೊರೊನಾದಿಂದಾಗಿ ಭಾರೀ ಸದ್ದು ಮಾಡಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುಧೆಮುಗೇರು ಪರಿಶಿಷ್ಟ ಜಾತಿ ಕಾಲೋನಿನಲ್ಲಿ ಹಲವಾರು ಜನರು ಕೊರೊನಾ ಬಾದಿತರಾಗಿಈ ಪ್ರದೇಶವನ್ನು ಕೆಲವು ದಿನಗಳಿಂದ ಕಂಟೋನ್ಮೆಂಟ್ ವಲಯ ಎಂಬುದಾಗಿ ಘೋಷಣೆ ಮಾಡಲಾಗಿದೆ. ಇದರಿಂದ ಇಲ್ಲಿನ ಜನರಿಗೆ ಮನೆಯಿಂದ ಹೊರಗಡೆ ಬಾರದಂತೆ ನಗರ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ.ಪರಿಣಾಮವಾಗಿ ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿದ್ದ ಇಲ್ಲಿನ ನಿವಾಸಿಗಳಿಗೆ ಬದುಕು ಸಾಗಿಸುವರೇ ಕಷ್ಟವಾಗುತ್ತಿದೆ.ಒಂದೆಡೆ ಸೀಲ್ ಡೌನ್ ಘೋಷಣೆ ಮಾಡಿದ ಪಟ್ಟಣ ಪಂಚಾಯತ್ ಆಗಲೀ, […]

ಕೊರೋನಾ ಸೋಂಕಿತರ ಸೇವೆಗೆ ಆಪ್ತರಕ್ಷಕ ಸಿದ್ಧ

ಬೆಳ್ತಂಗಡಿ:  ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಪ್ರಜ್ಞಾವಂತ ನಾಗರಿಕರು ಇನ್ನಷ್ಟು ಎಚ್ಚೆತ್ತುಕೊಳ್ಳುವುದರ ಜತೆ ಸವಾಲು, ತೊಂದರೆಗಳನ್ನು ಮೆಟ್ಟಿ ಮುಂದುವರಿಯಬೇಕು, ಗ್ರಾಮಗಳಲ್ಲಿ ಸಂಘ-ಸಂಸ್ಥೆಗಳು, ಉದ್ಯಮಿಗಳು, ಯುವಕರು ಸೇರಿ ಜನ ಜಾಗೃತಿ ಮೂಡಿಸುವುದರ ಜೊತೆಗೆ ಕೊರೊನಾ ವಿರುದ್ಧದ ಹೋರಾಟಕ್ಕೆ ಮುಂದಾಗಿ ಮಾದರಿಯಾಗಬೇಕು ಎಂದು ಬೆಳ್ತಂಗಡಿ ರೋಟರಿ ಕ್ಲಬ್  ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಹೇಳಿದರು.ಅವರು ಮೇ 13ರಂದು  ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿಯ ‘ಬದುಕು ಕಟ್ಟೋಣ ಬನ್ನಿ’ ತಂಡದ ಆಪ್ತರಕ್ಷಕ  ಸೇವಾ […]

ಕಳಿಯ ಸೊಸೈಟಿಯಿಂದ ಮಾದರಿ ಕಾರ್ಯ;ಸೀಲ್‌ಡೌನ್ ಪ್ರದೇಶದಲ್ಲಿ ರೇಷನ್ ಮನೆಬಾಗಿಲಿಗೆ.

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಶ್ಮೆರೋಡ್ ಮಾವಿನಕಟ್ಟೆ ಪ್ರದೇಶವವನ್ನು ಕೊರೋನಾ ಕಾರಣಕ್ಕೆ ಸೀಲ್‌ಡೌನ್ ಮಾಡಲಾಗಿದ್ದು, ಗೇರುಕಟ್ಟೆಯ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದವರು ಲಾಕ್‌ಡೌನ್ ಆದ ಆ ಪ್ರದೇಶದ ನಿವಾಸಿಗರಿಗೆ ತಿಂಗಳ ಪಡಿತರವನ್ನು ಅವರವರ ಮನೆಗಳಿಗೆ ತಲುಪಿಸಿ ವಿತರಿಸಿ ಮಾದರಿಯಾಗಿದ್ದಾರೆ. ಮಾವಿನಕಟ್ಟೆ ಪ್ರದೇಶದಲ್ಲಿ ಸಾಕಷ್ಟು ಕೊರೋನಾ ಪ್ರಕರಣವಿದ್ದು, ಈ ಪ್ರದೇಶವನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್‌ಡೌನ್ ಮಾಡಲಾಗಿತ್ತು. ಇಲ್ಲಿನ ಜನತೆಗೆ ಪಡಿತರ ತೆಗೆದುಕೊಳ್ಳಲು ಅಸಾಧ್ಯವಾದ ಕಾರಣ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತದೊಂದಿಗೆ […]

ಧರ್ಮಸ್ಥಳ ಗ್ರಾ. ಪಂ. ವತಿಯಿಂದ ಕೋವಿಡ್ ಜಾಗೃತಿ

ಬೆಳ್ತಂಗಡಿ: ಮೇ 12ರ ಬೆಳಿಗ್ಗೆಯಿಂದಲೇ ಕೋವಿಡ್ ಜಾಗೃತಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ. ಹಾಗೂ ಸಿಬ್ಬಂದಿ ವರ್ಗದವರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯಾಯಬೆಲೆ ಅಂಗಡಿ, ದಿನಸಿ ಅಂಗಡಿ, ತರಕಾರಿ ಅಂಗಡಿ, ಹಾಲಿನ ಡೈರಿ ಹಾಗೂ ನಂದಿನಿ ಹಾಲಿನ ಡೈರಿಗೆ ಭೇಟಿ ನೀಡಿ, ಅಲ್ಲಿನ ಗ್ರಾಹಕರಿಗೆ ವೈಯಕ್ತಿಕ ಸ್ವಚ್ಛತೆ, ಮಾಸ್ಕ್ ಸರಿಯಾಗಿ ಧರಿಸುವಿಕೆ, ವೈಯಕ್ತಿಕ ಅಂತರ ಕಾಪಾಡುವಿಕೆ ಹಾಗೂ ಸ್ಯಾನಿಟೈಸರ್ ಬಳಕೆಯ ಬಗ್ಗೆ ಮಾಹಿತಿ […]

ಅಧಿಕಾರಿಗಳ ರಾಜಕೀಯದಿಂದ ಕೊರೋನಾ ಸ್ಪೋಟ

ಬೆಳ್ತಂಗಡಿ ಪ. ಪಂ.ನ ಕಲ್ಲಗುಡ್ಡೆಯಲ್ಲಿ 16, ಸುದೆಮುಗೇರಿನಲ್ಲಿ 6 ಹೊಸ ಪಾಸಿಟಿವ್ ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಸುದೆಮುಗೇರು ವಾರ್ಡ್‌ನಲ್ಲಿ‌ ಮೇ 12ರವರೆಗೆ 25 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಇದೀಗ ಇಂದು ಹೊಸ 6ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಇಲ್ಲಿ ಮೇ 9ರಂದು 13ಪ್ರಕರಣ ಪತ್ತೆಯಾದಗಲೇ ಸುದೆಮುಗೇರು ಕಾಲನಿಯನ್ನು ಸೀಲ್‌ಡೌನ್ ಮಾಡಿ ಸೋಂಕು ಹರಡುವಿಕೆ ತಡೆಯಲು ಮುಂದಾದ ಬೆಳ್ತಂಗಡಿಯ ಸ್ಥಳೀಯ ಕಿರಿಯ ಆರೋಗ್ಯ ಪರಿವೀಕ್ಷಕ ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ತರಾಟೆಗೆ […]

ಸೀಲ್‌ಡೌನ್ ತೆರವಾದ ಸುದೆಮುಗೇರು ಕಾಲನಿಯಲ್ಲಿ ಮತ್ತೆ 12ಕೊರೋನಾ ಪಾಸಿಟಿವ್:ಕೊರೋನಾ ಸುನಾಮಿ ಭೀತಿಯಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್

ಬೆಳ್ತಂಗಡಿ: ಈ ಹಿಂದೆ 13ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುದೆಮುಗೇರು ಕಾಲನಿಯನ್ನು ಸರಕಾರದ ಮಾರ್ಗಸೂಚಿಯಂತೆ ಮೇ 9ರ ಸಂಜೆ ಸೀಲ್‌ಡೌನ್ ಮಾಡಿದ ತಾಲೂಕು ಆಡಳಿತ ಬಳಿಕ ಈ ವಾರ್ಡ್‌ನ ಪಟ್ಟಣ ಪಂಚಾಯತ್‌ ಸದಸ್ಯ ಜಗದೀಶ್ ಹಾಕಿದ ಅದಕ್ಕಿಂತಲೂ ಹಾಕಿಸಿದ ರಾಜಕೀಯ ಒತ್ತಡಕ್ಕೆ ಸಿಲುಕಿ ಮೇ 10ರಂದೇ ಸೀಲ್‌ಡೌನನ್ನು ತೆರವುಗೊಳಿಸಿದ ಕ್ರಮ ಪರಿಸರದ ಕಾನೂನುಪಾಲಕ ನಾಗರಿಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ಸುದೆಮುಗೇರು ಕಾಲನಿಯಲ್ಲಿ ಇಂದು ಅಂದರೆ ಮೇ 12ರಂದು ಮತ್ತೆ ಹೊಸದಾಗಿ […]

ಯಕ್ಷಭಾರತಿಯಿಂದ ಔಷಧ ವಿತರಣೆ

ಬೆಳ್ತಂಗಡಿ: ಯಕ್ಷಭಾರತಿ (ರಿ) ಬೆಳ್ತಂಗಡಿ ಸಂಸ್ಥೆಯಿಂದ ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ, ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮ ಕನ್ಯಾಡಿ ಯ ನೇರೋಳ್ ಪಲ್ಕೆ ಮಂಜುಗುರಿಯ  ಕೃಷ್ಣ ಆಚಾರ್ಯ ಮತ್ತು ಸುಂದರಿ  ದಂಪತಿಗಳಿಗೆ ಮೇ 11ರಂದು ಎರಡು ತಿಂಗಳ  ಔಷಧಿಯನ್ನು ಅವರ ಮನೆಗೆ ತೆರಳಿ  ವಿತರಿಸಲಾಯಿತು. ಈ ಸಂದರ್ಭದಲ್ಲಿ ಯಕ್ಷಭಾರತಿಯ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ವಿಶ್ವಸ್ಥರಾದ ಸೂರ್ಯಾನಂದ ರಾವ್, ಸಂಚಾಲಕ ಮಹೇಶ್ ಕನ್ಯಾಡಿ, ಧರ್ಮಸ್ಥಳ  ಗ್ರಾಮ ಪಂಚಾಯತ್ ಸದಸ್ಯ ವಸಂತ ನಾಯ್ಕ, ಸ್ಥಳೀಯರಾದ ಕಶ್ಯಪ್ ಮತ್ತು ಫಲಾನುಭವಿಯ […]

ಬ್ರಾಹ್ಮಣರ ಅವಹೇಳನಕ್ಕೆ ಖಂಡನೆ

ಬೆಳ್ತಂಗಡಿ: ಕುಂದಾಪುರದ  ಗೋಪಾಲ ಬಂಗೇರ ಎಂಬವರು ಇತ್ತೀಚಿಗೆ  ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರು, ಪುರೋಹಿತರು ಮತ್ತು ಜನಿವಾರದ ಬಗ್ಗೆ  ಅವಹೇಳನದ  ಮಾತುಗಳನ್ನಾಡಿರುವುದು  ತೀರಾ ಖಂಡನೀಯ. ಬ್ರಾಹ್ಮಣ ಸಮಾಜ ಮತ್ತು ವರ್ಗವನ್ನು  ಈ ರೀತಿ ಪದೇಪದೇ  ತೇಜೋವಧೆ ಮಾಡುವ ಕೃತ್ಯ  ಇಲ್ಲಿಗೇ ಮುಗಿಯಬೇಕು. ಮುಂದೆ ಇಂತಹ ಅವಹೇಳನ ಹಾಗೂ ಬ್ರಾಹ್ಮಣ ಸಮಾಜದ ತೇಜೋವಧೆ ಮಾಡಿದಲ್ಲಿ  ಇಡೀ ಬ್ರಾಹ್ಮಣ ಸಮಾಜ ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದು ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ(ರಿ) ಅಧ್ಯಕ್ಷ  ರಾಘವೇಂದ್ರ  ಬೈಪಾಡಿತ್ತಾಯ ಮತ್ತು ತಾಲೂಕಿನ ವಿವಿಧ ವಲಯಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು  ಘಟನೆಯನ್ನು ತೀವ್ರವಾಗಿ  […]

ಕೊರೋನಾ ಸೋಂಕು ತಡೆ ಕಾರ್ಯಕ್ರಮಕ್ಕೆ ವಿಘ್ನ;ಕೋಣ ಕರು ಹಾಕಿತು ಎಂದಾಕ್ಷಣ ಕೊಟ್ಟಿಗೆಯಲ್ಲಿ ಕಟ್ಟು ಎಂದ ಬಂಗೇರ.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕ ವಸಂತ ಬಂಗೇರರ ಒಳ್ಳೆಯತನ ಹಾಗೂ ಪರೋಪಕಾರ ಬುದ್ಧಿಯನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಬೇಳೆಯನ್ನು ಬೇಯಿಸಿಕೊಂಡು; ವಸಂತ ಬಂಗೇರರ ಹೆಸರಿಗೆ ಕಳಂಕ ತಂದ ಸಾಕಷ್ಟು ಪ್ರಕರಣಗಳು ತಾಲೂಕಿನ ಜನತೆಯ ಕಣ್ಣ ಮುಂದೆ ಇದೆ. ತನ್ನ ಬಳಿ ಸಹಾಯ ಕೇಳಿ ಬಂದವರಿಗೆ ತಾನು ನೆರವಾಗಬೇಕು ಎಂಬ ಒಂದಂಶದ ಪ್ರಾಮಾಣಿಕ ಚಿಂತನೆಯನ್ನು ಹೊಂದಿರುವ ಮಾಜಿ ಶಾಸಕ ವಸಂತ ಬಂಗೇರರನ್ನು ಅವರ ಸುತ್ತಮುತ್ತ ಇರುವ ಕೆಲವು ವ್ಯಕ್ತಿಗಳು ಬಳಸಿಕೊಂಡದ್ದಕ್ಕಿಂತ ದುರ್ಬಳಕೆ ಮಾಡಿಕೊಂಡದ್ದೇ ಹೆಚ್ಚು. ಇದೀಗ ಬೆಳ್ತಂಗಡಿ […]

ಸುಧೆಮುಗೇರು ಕಾಲೋನಿಗೆ ಆಹಾರ ಸಾಮಾಗ್ರಿಗಳ ವಿತರಣೆ

ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಸುಧೆಮುಗೇರು ಪರಿಶಿಷ್ಟ ಜಾತಿ ಕಾಲೋನಿ ಪ್ರದೇಶದಲ್ಲಿ ಇತ್ತೀಚೆಗೆ ಹದಿಮೂರು ಕೊರೋನಾ ಪಾಸಿಟಿವ್ ಕಂಡುಬಂದಿರುತ್ತದೆ. ಈ ವಿಷಯವನ್ನರಿತ ಸ್ಥಳೀಯ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರವರು ಈ ಪ್ರದೇಶಕ್ಕೆ ಭೇಟಿನೀಡಿ ಆ ಪ್ರದೇಶದ ಎಲ್ಲಾ 78 ಮನೆಗಳನ್ನು ಕಂಟೋನ್ಮೆಂಟ್ ಪ್ರದೇಶ ಎಂಬುದಾಗಿ ಘೋಷಣೆ ಮಾಡಿ ಸುಧೆಮುಗೇರು ಪರಿಸರಕ್ಕೆ ಇರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿಸಿರುತ್ತಾರೆ.ಮೇ 10ರಂದು ಈ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರಾದ ಕೆ.ವಸಂತ ಬಂಗೇರ ಹಾಗೂ […]