ವಿಶ್ವ ಅಮ್ಮಂದಿರ ದಿನಾಚರಣೆ

ಬೆಳ್ತಂಗಡಿ: ವಿಶ್ವ ಅಮ್ಮಂದಿರ ದಿನವನ್ನು ಬೆಳ್ತಂಗಡಿ ರೋಟರಿ ಕ್ಲಬ್ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿ ಮಾದರಿಯಾಗಿದೆ. ವಿನೂತನ ಪರಿಕಲ್ಪನೆಯಲ್ಲಿ ಮೇ 9ರಂದು ವಾತ್ಸಲ್ಯಮಯಿ ಅಮ್ಮನನ್ನು ‘ಭಾವ ಗಾನ’ದ ಮೂಲಕ ಸ್ಮರಿಸಿಕೊಂಡಿದೆ. ಯಕ್ಷಗಾನದ ಪ್ರತಿಭಾನ್ವಿತ ಯುವ ಭಾಗವತೆ ಕಾವ್ಯಶ್ರೀ ನಾಯಕ್ ಅಜೇರು ಅವರು ಆಯ್ದ ಕವಿಗಳ ಅಮ್ಮನನ್ನು ಕುರಿತಾದ ಭಾವಗೀತೆಗಳನ್ನು ರಾಗಸಂಯೋಜಿಸಿ ತನ್ನ ಮಧುರ ಕಂಠಸಿರಿಯಲ್ಲಿ ಪ್ರಸ್ತುತ ಪಡಿಸಿದರು. ಅದಕ್ಕೆ ಪೂರಕವಾಗಿ ಯಕ್ಷಗಾನ ಅರ್ಥಧಾರಿ-ಕಲಾವಿದ ಉಜಿರೆ ಅಶೋಕ ಭಟ್ ಅವರ ನಿರೂಪಣೆಯಲ್ಲಿ ತಾಯಿಯ ಮಾತೃಹೃದಯವನ್ನು ವಿಸ್ತೃತವಾಗಿ ಬಿಂಬಿಸಲಾಯಿತು. ಬೆಳ್ತಂಗಡಿ […]
ಕಳಿಯ ಗ್ರಾಮ ಪಂಚಾಯತ್: ಮಾವಿನಕಟ್ಟೆ ಜನತಾ ಕಾಲೊನಿ ಸೀಲ್ ಡೌನ್.

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್‌ನಲ್ಲಿ ಮೇ10 ರಂದು ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಶ್ಮೆರೋಡ್ ಮಾವಿನಕಟ್ಟೆ ಜನತಾ ಕಾಲೋನಿಯಲ್ಲಿ ಅತೀ ಹೆಚ್ಚು ಕೊರೋನಾ ಪಾಸಿಟಿವ್ ಇದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಲು ತೀಮಾ೯ನಿಸಲಾಯಿತು. ಜನಸಾಮಾನ್ಯರಿಗೆ ತುರ್ತು ಅವಶ್ಯಕತೆ ಇದ್ದರೆ ಹಾಗೂ ಅಗತ್ಯ ವಸ್ತುಗಳಿಗೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯನ್ನು ಹಾಗೂ ಸಿಬ್ಬಂದಿ ವರ್ಗವನ್ನು ಸಂಪರ್ಕಿಸುವಂತೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಯಿತು. ತುರ್ತು ಅವಶ್ಯಕತೆಗಳಿಗೆ ಸಂಘಸಂಸ್ಥೆಯವರು ಸೇವಾ ಮನೋಬಾವದಿಂದ […]
ಪರವೂರಿನಿಂದ ಬರುವ ಸ್ಥಳೀಯರಿಗೆ ಮೊದಲು ಕ್ವಾರಂಟೈನ್;ಧರ್ಮಸ್ಥಳ ಗ್ರಾ. ಪಂ.ನಿಂದ ಮಾದರಿ ಕಾರ್ಯಕ್ರಮ.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ದಿನೇದಿನ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಧರ್ಮಸ್ಥಳ ಗ್ರಾಮವೂ ಹೊರತಾಗಿಲ್ಲ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊರೋನಾ ಸೋಂಕಿನ ಬೀಜ ಬಿತ್ತಿದ ಕುಖ್ಯಾತಿ ಹತ್ತಾರು ದಿನಗಳ ಹಿಂದೆ ರಾಜ್ಯ ಸರಕಾರ ಘೋಷಿಸಿದ ಜನತಾ ಲಾಕ್‌ಡೌನ್ ಸಂದರ್ಭ ಬೆಂಗಳೂರಿಂದ ತಮ್ಮ ಊರಿಗೆ ಬಂದ ಮಹಾನುಭಾವರಿಗೆ ಸಲ್ಲುತ್ತದೆ. ಊರಿಗೆ ಬಂದ ಈ ಬೆಂಗಳೂರಿನ ಮಂದಿ ತಮ್ಮ ಹುಟ್ಟೂರ ಶಾಲೆಗಳಲ್ಲಿ ಶಾಸಕ ಹರೀಶ್ ಪೂಂಜ ಊರ ಶಾಲೆಗಳಲ್ಲಿ ವ್ಯವಸ್ಥೆಗೊಳಿಸಿದ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಹತ್ತು ದಿನ ಕ್ವಾರಂಟೈನ್ ಆಗಿ, […]
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆಯೊಂದಿಗೆ ಕೊರೋನಾ ಉಚಿತ

ಬೆಳ್ತಂಗಡಿ: ದೇಶದಲ್ಲಿ ಕೊರೋನಾ ಲಸಿಕೆಯ ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆದ ಕೆಲ ವ್ಯಕ್ತಿಗಳಿಗೂ ಕೊರೋನಾ ಪಾಸಿಟಿವ್ ಬಂದ ವರದಿಗಳು ಮಾಧ್ಯಮಗಳ ಮೂಲಕ ಪ್ರಕಟಗೊಂಡಿದೆ. ಈ ರೀತಿ ಲಸಿಕೆ ಪಡದವರಿಗೂ ಕೊರೋನಾ ಬರಲು ಕಾರಣವೇನು ಎಂಬ ಪ್ರಶ್ನೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಮೇಲಿನ ದೃಶ್ಯಾವಳಿ ಒಂದು ಹಂತದವರೆಗೆ ಉತ್ತರ ನೀಡುತ್ತದೆ.ಮೇ 10ರಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೋವಿಡ್-19 ಲಸಿಕಾ ಕೊಠಡಿಯ ಬಾಗಿಲಲ್ಲಿ ಕಂಡು ಬಂದ ದೃಶ್ಯವಿದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡುವ ಮೂಲಕ […]
ಬೆಳ್ತಂಗಡಿಯಲ್ಲಿ ನಿಷ್ಕ್ರಿಯ ತಾಲೂಕು ಆಡಳಿತ;ಕೋವಿಡ್ ನಿಯಮಗಳಿಗೆ ಸವಾಲಾದ ಕಾನೂನು ವಿರೋಧಿಗಳ ಅಟ್ಟಹಾಸ

ಬೆಳ್ತಂಗಡಿ: ಸರಕಾರ ಹೊರಡಿಸಿದ ಕೊರೋನಾ ಸೋಂಕು ನಿಯಂತ್ರಣ ಮಾರ್ಗಸೂಚಿಗಳ ಅನುಷ್ಠಾನದ ಜವಾಬ್ದಾರಿ ಬೆಳ್ತಂಗಡಿ ತಾಲೂಕಿನಲ್ಲಿ ಪೊಲೀಸರಿಗಷ್ಟೇನಾ…. ತಾಲೂಕು ಆಡಳಿತ ಈ ವಿಚಾರದಲ್ಲಿ ಸಂಪೂರ್ಣ ನಿಷ್ಕ್ರೀಯವಾಗಿದ್ದರೂ ನಮ್ಮ ಶಾಸಕ ಹರೀಶ್ ಪೂಂಜ ಯಾಕೆ ಸುಮ್ಮನಿದ್ದಾರೆ? ರಾಜ್ಯದಲ್ಲೇ ಕೋವಿಡ್ ನಿಯಂತ್ರಣ ನಿಯಮ ಪಾಲನೆಗೆ ಕಾನೂನು ವಿರೋಧಿಗಳು ಸವಾಲು ಹಾಕುವ ಊರುಗಳಲ್ಲಿ ಬೆಳ್ತಂಗಡಿ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದರೂ ತಪ್ಪಾಗದು. ಇದಕ್ಕೆ ನೇರ ಹೊಣೆ ತಾಲೂಕು ಆಡಳಿತ. ಒಂದೊಮ್ಮೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳ್ತಂಗಡಿಯಲ್ಲಿ ಈ ಹಿಂದಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿಯೇ […]
ಉಜಿರೆ ಶ್ರೀ ಧ.ಮಂ. ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ

ಬೆಳ್ತಂಗಡಿ: ಕೋವಿಡ್ ವಿರುದ್ಧ ಹೋರಾಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗಣನೀಯವಾದ ಸೇವೆ ನೀಡುತ್ತಿದ್ದು, ತನ್ನ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರದ ಮೂಲಕ ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಹಾಗೂ ವಾಹನ ಸೇವೆಯನ್ನು ಈಗಾಗಲೇ ನೀಡಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಬಂದು ಸಾಮಾಜಿಕ ಕಳಕಳಿ ಮೆರೆದಿದ್ದು, ಆರೋಗ್ಯ ಬಿಕ್ಕಟ್ಟು ಎದುರಾಗಿರುವ ಇಂತಹ ಸಂದರ್ಭದಲ್ಲಿ ಗರ್ಭಿಣಿಯರ ಆರೋಗ್ಯ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ. ಸದ್ಯ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತರ ಶುಶ್ರೂಷೆಗಾಗಿ ಮೀಸಲಿಟ್ಟಿದ್ದು, ಇಲ್ಲಿ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. […]
ವಾಹನ ಸಂಚಾರ ತಡೆಗೆ ಪೊಲೀಸ್ ಸರ್ಪಗಾವಲು

ಮೂಡುಬಿದಿರೆ: ವೀಕೆಂಡ್ ಲಾಕ್‌ಡೌನ್ ಇದ್ದರೂ ಮೇ 8ರ ಶನಿವಾರವೇನೋ ಬಹಳಷ್ಟು ಮಂದಿ ತಮ್ಮ ಬೇಕು-ಬೇಡಗಳನ್ನು ಪೂರೈಸಿಕೊಳ್ಳಲು ತಮ್ಮ ದ್ವಿಚಕ್ರ, ತ್ರಿಚಕ್ರ ಮತ್ತು ಚತುಷ್ಚಕ್ರ ವಾಹನಗಳಲ್ಲಿ ಪೇಟೆ ಸವಾರಿ ನಡೆಸಿದ್ದರು. ಆದರೆ ಇಂದು ಮೇ 9ರ ಭಾನುವಾರ ಮುಂಜಾನೆಯೇ ಫೀಲ್ಡಿಗಿಳಿದ ಮೂಡುಬಿದಿರೆ ಪೊಲೀಸರು ಹೆಚ್ಚು ಕಡೆ ವಾಹನ ಸಂಚರಿಸುವ ಭಾಗಗಳನ್ನು ಗುರುತಿಸಿಕೊಂಡು, ಮೂರು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿಕೊಂಡು ಅನಗತ್ಯ ಸಂಚಾರ ನಡೆಸುವವರನ್ನು ತಡೆದು 50ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಮೇ 9ರ ಭಾನುವಾರ ಮುಂಜಾನೆಯೇ ಮಂಗಳೂರಿನಿಂದ ಪೊಲೀಸ್ ಗಸ್ತು ವಾಹನವೊಂದು […]
ಬೆಂಗಳೂರಿಂದ ಬಂದವರ ವರಪ್ರಸಾದ..ಬೆಳ್ತಂಗಡಿ ಪಟ್ಟಣದ ಕಲ್ಲಗುಡ್ಡೆ ವಾರ್ಡ್ ಸೀಲ್‌ಡೌನ್

ಬೆಳ್ತಂಗಡಿ: ಜನತಾ ಲಾಕ್‌ಡೌನ್ ಘೋಷಣೆಯಾಗುತ್ತಲೇ ಬೆಂಗಳೂರಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ಬಂದ ಸಾಕಷ್ಟು ಮಂದಿ ತಮ್ಮತಮ್ಮ ಹುಟ್ಟೂರಿಗೆ ತಮಗರಿವಿಲ್ಲದೇ ಕೊರೋನಾ ಸೋಂಕು ಹೊತ್ತು ತಂದ ಪರಿಣಾಮ ಇಂದು ಬೆಳ್ತಂಗಡಿ ತಾಲೂಕಿನಲ್ಲೂ ಕೊರೋನಾ ಅತ್ಯಂತ ವೇಗವಾಗಿ ಹರಡುತ್ತಿದೆ. ತಾಲೂಕಿನ ವಿವಿದೆಡೆ ಸೀಲ್‌ಡೌನ್ ಆಗುತ್ತಿದೆ. ನಿನ್ನೆಯಷ್ಟೇ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಸುದೆಮುಗೇರು ವಾರ್ಡ್ ಸೀಲ್‌ಡೌನ್ ಆಗಿತ್ತು. ಇಂದು ಮೇ 9ರಂದು ಹತ್ತಾರು ಕೊರೋನಾ ಸೋಂಕು ಪತ್ತೆಯಾದ ಕಲ್ಲಗುಡ್ಡೆ ವಾರ್ಡ್ ಸೀಲ್‌ಡೌನ್. ಎಲ್ಲವೂ ಬೆಂಗಳೂರು ಮಹಿಮೆ.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರು […]
ಪೊಲೀಸರ ಕರ್ತವ್ಯಕ್ಕೆ ಜನಪ್ರತಿನಿಧಿಗಳ ತೊಡರುಗಾಲು;ಪೊಲೀಸರ ನೈತಿಕ ಸ್ಥೈರ್ಯ ಕುಸಿತ.

ಬೆಳ್ತಂಗಡಿ: ಒಂದೆಡೆ ರಾಜ್ಯ ಸರಕಾರ ಲಾಕ್‌ಡೌನ್ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿ, ಕೊರೋನಾ ಚೈನ್‌ಲಿಂಕ್ ತುಂಡರಿಸಲು ಮುಂದಾಗಿದೆ. ಅದಕ್ಕಾಗಿ ಮೇ 10ರಿಂದ ಅಂತರ್‌ಜಿಲ್ಲಾ ಸಂಚಾರಕ್ಕೂ ನಿರ್ಬಂಧ ಹೇರಲು ಮುಂದಾಗಿದೆ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಂತೂ ಈ ನಿಯಮಗಳು ಮತ್ತಷ್ಟು ಬಿಗಿಯಾಗಲಿದೆ. ಆದರೆ ಬೆಳ್ತಂಗಡಿಯಲ್ಲಿ ವೀಕ್‌ಎಂಡ್ ಕರ್ಫ್ಯೂ ಸಂದರ್ಭ ಮೇ 8ರಂದು ರಾಜ್ಯ ಸರಕಾರದ ಮಾರ್ಗಸೂಚಿಯನ್ವಯ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ಪೊಲೀಸರ ಮೇಲೆ ಪ್ರಭಾವ ಬೀರಿ ಅವರ ನೈತಿಕಸ್ಥೈರ್ಯ ಕುಸಿಯುವಂತೆ ಮಾಡುತ್ತಿರುವ ಜನಪ್ರತಿನಿಧಿಗಳು, ಜಿಲ್ಲೆಯ ಹೊರಗಿನಿಂದ ಕೊರೋನಾ ಹೊತ್ತು ತರುವ […]
ಇಲ್ಲಿ ಕೊರೋನಾ ವಾರಿಯರ್ಸ್‌ಗಿಲ್ಲ ರಕ್ಷಣೆ;ಕೊರೋನಾ ವಾರಿಯರ್ಸ್‌ಗೆ ಚಪ್ಪಲಿ ತೋರಿ ಬೆದರಿಕೆ.

ಬೆಳ್ತಂಗಡಿ: ಬೆಳ್ತಂಗಡಿ ಚರ್ಚ್ ಬಳಿಯ ಮನೆಯೊಂದರಲ್ಲಿ ಕರ್ತವ್ಯನಿರತ ದಾದಿ ಓರ್ವರ ಮೇಲೆ ಚಪ್ಪಲಿ ತೋರಿ ಹಲ್ಲೆ ನಡೆಸಲು ಮುಂದಾಗಿ ಬೆದರಿಕೆ ಹಾಕಿದ ಪ್ರಕರಣ ಮೇ 7ರಂದು ವರದಿಯಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮನೆಮನೆಗೆ ತೆರಳಿ ಔಷಧಿ ವಿತರಿಸುವ ಜವಾಬ್ದಾರಿ ಹೊಂದಿದ ಹಿರಿಯ ದಾದಿ ಕಮಲರವರು ಮೇ 7ರ ಸಂಜೆ ಚರ್ಚ್ ಬಳಿಯ ಮನೆಯೊಂದಕ್ಕೆ ಕಿರಿಯ ಆರೋಗ್ಯ ಮೇಲ್ವಿಚಾರಕ ಗಿರೀಶ್‌ರೊಂದಿಗೆ ತೆರಳಿ ಔಷಧಿ ನೀಡುವ ಸಲುವಾಗಿ ಅದೇ ಮನೆಯಲ್ಲಿ […]