ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಕೊರೋನಾ ಸ್ಪೋಟ! ಸುದೆಮುಗೇರು ವಾರ್ಡ್ ಕೊರೊನಾದ ಹಾಟ್‌ಸ್ಪಾಟ್?

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಅದರಲ್ಲೂ ಸುದೆಮುಗೇರು ವಾರ್ಡ್ ಕೊರೊನಾದ ಹಾಟ್‌ಸ್ಪಾಟ್ ಆಗಿದೆ. ಇಲ್ಲಿ 15ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಇಲ್ಲಿನ ಮಂದಿ ಕೊರೊನಾ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಮಾಹಿತಿ ಇದೆ. ತಾಲೂಕು ಆಡಳಿತವೂ ಯಾವುದೋ ಒತ್ತಡಕ್ಕೆ ಕಟ್ಟುಬಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೇ ಅತೀ ಹೆಚ್ಚು ಕೋವಿಡ್ ಪ್ರಕರಣಗಳಿರುವ ಈ ವಾರ್ಡ್‌ನ್ನು ಕಂಟೈನ್‌ಮೆಂಟ್ ಝೋನ್ ಆಗಿ ಇದುವರೆಗೆ ಘೋಷಿಸಲೂ ಇಲ್ಲ; ಈ […]

ತುರ್ತು ಸೇವೆಗೆ ಆ್ಯಂಬುಲೆನ್ಸ್ ಸರ್ವಸನ್ನದ್ಧ

ಬೆಳ್ತಂಗಡಿ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡು ಕಾನೂನನ್ನು ಗೌರವಿಸುವ ಹಾಗೂ ಸರಕಾರ ಸೂಚಿಸಿದ ಕೋವಿಡ್ ನಿಯಮ ಪಾಲಿಸುವ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ನಾಗರಿಕರ ಆತಂಕವನ್ನು ದೂರ ಮಾಡಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆಗಾಗಿ ಅಗತ್ಯ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸುತ್ತಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಮೇ 7ರಂದು ಬೆಳ್ತಂಗಡಿಯ ಶಾಸಕರ ಕಛೇರಿ ‘ಶ್ರಮಿಕ’ದಲ್ಲಿ ತಾಲೂಕಿನ ಆ್ಯಂಬುಲೆನ್ಸ್ ಸೇವೆ ಒದಗಿಸುವವರ ಸಭೆ ಕರೆದು ವಿಚಾರ ವಿನಿಮಯ ನಡೆಸಿದರು.ತಾಲೂಕಿನಲ್ಲಿ ಕೊರೋನಾ […]

ಧರ್ಮಸ್ಥಳ ಸೊಸೈಟಿ ಸಿಇಒ ಅಸಹಜ ಸಾವು ಪ್ರಕರಣ;ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮನವಿ

ಬೆಳ್ತಂಗಡಿ : ‘ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್‍ರವರ ಅಸಹಜ ಸಾವಿನ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಗುರುವಾರ ಮನವಿ ನೀಡಿತು.ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಂ ಸಮಿತಿಯ ಧರ್ಮಸ್ಥಳ ಘಟಕದ ಅಧ್ಯಕ್ಷ ರವೀಂದ್ರನ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಆಧಾರದಲ್ಲಿ ಬ್ಯಾಂಕ್‍ನ ನಿರ್ದೇಶಕರುಗಳಾದ ಜಯರಾಮ ಭಂಡಾರಿ, ರಘುಚಂದ್ರ […]

ನಾಳೆಯಿಂದ ದಕ್ಷಿಣ ಕನ್ನಡಕ್ಕೆ ಟಫ್ ರೂಲ್ಸ್ ; ನಿಯಮ ಉಲ್ಲಂಘಿಸಿದರೆ ಬರೆ ಗ್ಯಾರಂಟಿ

ಬೆಳ್ತಂಗಡಿ: ದಿನದಿಂದ ದಿನಕ್ಕೆ ಕೊರೋನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಪಟ್ಟನ್ನು ಬಿಗಿ ಮಾಡುತ್ತಾ ಹೋದರೂ ಇದಕ್ಕೆ ಕ್ಯಾರೇ ಅನ್ನದ ಜಿಲ್ಲೆಯ ಕೆಲ ಮಂದಿ ಸರಕಾರದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ, ಮನಬಂದಂತೆ ತಿರುಗಾಡುತ್ತಿದ್ದರು. ಜಿಲ್ಲೆಯಲ್ಲಿ ಪ್ರತೀದಿನ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾl ಕೆ. ವಿ. ರಾಜೇಂದ್ರ ನಾಳೆಯಿಂದ ಅಂದರೆ ಮೇ 7ರಿಂದ ಜಿಲ್ಲೆಗೆ ಟಫ್‌ರೂಲ್ಸ್‌ನ್ನು ಜ್ಯಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.ಜಿಲ್ಲಾಧಿಕಾರಿಗಳು ಹೊರಡಿಸಿದ ಲಾಕ್‌ಡೌನ್ ಹೊಸ ನಿಯಮದಂತೆ ನಾಳೆಯಿಂದ ದಿನಬಳಕೆ ವಸ್ತು […]

‘ಕೊರೋನಾ ಸೋಂಕಿತರ ಸಾವು ಸರಕಾರ ಪ್ರಾಯೋಜಿತ ಕೊಲೆ’.

ಬೆಳ್ತಂಗಡಿ: ಕೊರೋನಾ ಲಾಕ್ ಡೌನ್ ಹೆಸರಿನಲ್ಲಿ ರಾಜ್ಯ ಸರಕಾರ ಅತ್ಯಂತ ಬೇಜವ್ದಾರಿತನದಿಂದ ವರ್ತಿಸುತ್ತಿದೆ. ರಾಜ್ಯದ ಬಡಜನರಿಗೆ ಸೂಕ್ತ ರೀತಿಯ ಸಾಮಾಜಿಕ ಭದ್ರತಾ ಕ್ರಮಗಳನ್ನು ಕೈಗೊಳ್ಳದೆ ಲಾಕ್ ಡೌನ್ ಘೋಷಿಸುವ ಮೂಲಕ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕೊರೋನಾ ಸಾವಿನ ಜೊತೆಗೆ ಆಹಾರವಿಲ್ಲದೆ ಸಾವನ್ನಪ್ಪುವ ಪರಿಸ್ಥಿತಿ ಉದ್ಭವಿಸುವ ಭೀತಿಯಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆತಂಕ ವ್ಯಕ್ತಪಡಿಸಿದರು.ಅವರು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ […]

ವಿಳಂಬವಾದರೂ ಸುಸಜ್ಜಿತ ಮಾದರಿ ಕೋವಿಡ್ ಸೆಂಟರ್ ಉದ್ಘಾಟನೆ

ಬೆಳ್ತಂಗಡಿ: ಕೊಂಚ ವಿಳಂಬವಾದರೂ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂಪೂರ್ಣ ಸಹಕಾರ ಹಾಗೂ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರ ಪರಿಶ್ರಮದಿಂದ ಲಾಯ್ಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಸಿದ್ಧಗೊಂಡ ಮಾದರಿ ಕೋವಿಡ್ ಕೇರ್ ಸೆಂಟರ್‌ನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೇ 5ರಂದು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಸುಸಜ್ಜಿತವಾಗಿ ಸಿದ್ಧಗೊಂಡ ಈ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅಡುಗೆ […]

ನಾಲ್ಕೂರು ಗ್ರಾಮದಲ್ಲಿ ಕೊರೋನಾ ಅಟ್ಟಹಾಸ.

ಬೆಳ್ತಂಗಡಿ: ತಾಲೂಕಿನ ನಾಲ್ಕೂರು ಗ್ರಾಮದಲ್ಲಿ ಕೋವಿಡ್-19 ಸೋಂಕು ಅಟ್ಟಹಾಸದಿಂದ ಕೇಕೆ ಹಾಕುತ್ತಿದ್ದು; ಉಲ್ಬಣಾವಸ್ಥೆಗೆ ತಲುಪಿದ ಕೊರೋನಾ ಸೋಂಕನ್ನು ಹತೋಟಿಗೆ ತರಲು ಗ್ರಾಮಸ್ಥರು ಸಹಕರಿಸಬೇಕು ಎಂದು ಬಳಂಜ ಗ್ರಾಮ ಪಂಚಾಯತ್ ಆಡಳಿತ ವಿನಂತಿಸಿದೆ.ನಾಲ್ಕೂರು ಗ್ರಾಮದ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೆ ಯಾವುದೇ ರೀತಿಯ ಕಾರ್ಯಕ್ರಮವನ್ನು ನಡೆಸುವಂತಿಲ್ಲ. ಸದ್ರಿ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಅನ್ಯ ಗ್ರಾಮಗಳಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ ಮತ್ತು ಕಾರ್ಯಕ್ರಮವನ್ನು ನಡೆಸುವಂತಿಲ್ಲ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿದ್ದು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಈಗಾಗಲೇ ಕ್ವಾರೈಂಟೆನ್ ನಲ್ಲಿ […]

ಕೊರೋನಾ ಸಂತ್ರಸ್ತರ ನೆರವಿಗೆ ಆರ್‌ಎಸ್‌ಎಸ್

ಬೆಳ್ತಂಗಡಿ: ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ  ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಇಂತಹ ದುಃಸ್ಥಿತಿಯ ಸಮಯದಲ್ಲಿ ಅನೇಕ ಸಾಮಾಜಿಕ ಸಂಘಟನೆಗಳು ಸಮಾಜಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ,  ಸಹಕಾರ ನೀಡಲು ಮುಂದೆ ಬಂದಿವೆ. ಅದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡ ಒಂದು. ಗಂಭೀರ ಸ್ವರೂಪದ ಎರಡನೇ ಅಲೆಯ ಮಧ್ಯೆ ಸಮಾಜಕ್ಕೆ ಶಕ್ತಿ-ವಿಶ್ವಾಸ ತುಂಬುವಂತದ್ದು ಹಾಗೂ ಸಹಾಯ-ಸಹಕಾರ ಮಾಡುವ ದೃಷ್ಟಿಯಿಂದ ಏಳೆಂಟು ವಿಭಾಗಗಳಾಗಿ ವಿಂಗಡಿಸಿ ತಾಲೂಕಿನಾದ್ಯಾಂತ ಸೇವಾ ಭಾರತಿ ಬೆಳ್ತಂಗಡಿ ತಾಲೂಕು  ಮೂಲಕ ಸೇವಾ ಕಾರ್ಯಗಳನ್ನು  ಪ್ರಾರಂಭಿಸಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ […]

ಧರ್ಮಸ್ಥಳ ಸೊಸೈಟಿ ಸಿಇಒ ಅಸಹಜ ಸಾವಿನ ಪ್ರಕರಣ;ತನಿಖೆಗೆ ಸಂಪೂರ್ಣ ಸಹಕಾರ-ಅಧ್ಯಕ್ಷ ಗಾಂಭೀರ್

ಬೆಳ್ತಂಗಡಿ: ಮೇ 3ರಂದು ಸಂಘದ ಸಭಾಂಗಣದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್‌ರ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್, ಮೃತ ರವೀಂದ್ರನ್‌ರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವುದರ ಜೊತೆಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಸರ್ವಶಕ್ತ ಅವರ ಕುಟುಂಬಿಕರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.ಇದೊಂದು ನಂಬಲಾಗದ ದುರ್ದೈವ ಸಂಗತಿ ಎಂದಿರುವ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್, ಮೃತ ರವೀಂದ್ರನ್‌ರ ಕುಟುಂಬಕ್ಕೆ ಸಂಘದಿಂದ ಸಾಧ್ಯವಿರುವ […]

ಧರ್ಮಸ್ಥಳ ಸೊಸೈಟಿ ಸಿಇಒ ಅಸಹಜ ಸಾವು?ಸಮಗ್ರ ತನಿಖೆಗೆ ಬಂಗೇರ ಒತ್ತಾಯ

ಬೆಳ್ತಂಗಡಿ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್ ಮೇ 4ರಂದು ಸಂಘದ ಸಭಾಂಗಣದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು; ಇವರ ಈ ಅಸಹಜ ಸಾವಿಗೆ ಸಂಘದ ಆಡಳಿತ ಮಂಡಳಿಯ ಇಬ್ಬರು ಸದಸ್ಯರು ನೀಡಿದ ಮಾನಸಿಕ‌ ಕಿರುಕುಳವೇ ಕಾರಣ ಎಂದು ಆರೋಪಿಸಿರುವ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.ಅವರು ಮೇ 5ರಂದು ಬೆಳ್ತಂಗಡಿಯ ಶ್ರಿ ಗುರುನಾರಾಯಣ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ […]