ಕೊರೋನಾ ನಡುವೆ ಹೆಲ್ಮೆಟ್ ಕೇಸ್

ಮೂಡುಬಿದಿರೆ: ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಜನತಾ ಲಾಕ್‌ಡೌನ್ ಘೋಷಿಸಿರುವ ಮಧ್ಯೆಯೂ, ಅತೀ ಅವಶ್ಯಕ ವಸ್ತುಗಳ ಖರೀದಿಗೆ ಜನರಿಗೆ ಮಧ್ಯಾಹ್ನದವರೆಗೆ ಅವಕಾಶ ಕಲ್ಪಿಸಿರುವ ಕಾರಣ ಮೂಡುಬಿದಿರೆಯಲ್ಲಿ ವಾಹನ ಸಂಚಾರ ಎಗ್ಗಿಲ್ಲದೆ ನಡೆಯುತ್ತಿದೆ.ದ್ವಿಚಕ್ರ, ತ್ರಿಚಕ್ರ ಮತ್ತು ಚತುಷ್ಚಕ್ರ ವಾಹನಗಳು ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿದ್ದು, ಕೆಲವು ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಧರಿಸದೆ ಓಡಾಡಿದ ಪರಿಣಾಮವಾಗಿ ದಂಡ ತೆರಬೇಕಾದ ಸ್ಥಿತಿಯನ್ನು ಮೈಮೇಲೆಳೆದುಕೊಂಡಿದ್ದಾರೆ. ಮೇ 4ರಂದು ಮುಂಜಾನೆಯೇ ಹೆದ್ದಾರಿ ಗಸ್ತುದಳದ ಪೊಲೀಸರು ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು […]

ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಆಳ್ವಾಸ್‌ನಿಂದ ಉಚಿತ ಚಿಕಿತ್ಸೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ। ಎಂ. ಮೋಹನ ಆಳ್ವರ ಹೃದಯವಂತಿಕೆಯಿಂದ ಇಲ್ಲಿನ ನೂತನ ನಿರ್ಮಿತ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನವು ಸಧ್ಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಂಡಿದ್ದು, ಕೊರೋನಾ ಸಂಕಷ್ಟ ಕಾಲದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಈ ಉಚಿತ ಆರೋಗ್ಯ ಸೇವೆ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಯಿದೆ.ಆಯುರ್ವೇದಿಕ್ ವೈದ್ಯರೂ ಆಗಿರುವ ಡಾ। ಎಂ. ಮೋಹನ ಆಳ್ವ ಅವರು ಸ್ವತಹ ಇಲ್ಲಿನ ಮೇಲುಸ್ತುವಾರಿಯನ್ನು ವಹಿಸಿಕೊಂಡು ಇಲ್ಲಿನ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆಯುವಂತೆ ಶ್ರಮಿಸುತ್ತಿರುವುದು ಸರ್ವರ […]

ಮೆಸ್ಕಾಂ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ನಷ್ಟ

ಮೂಡುಬಿದಿರೆ: ಮೆಸ್ಕಾಂ ಅಧಿಕಾರಿಗಳನಿರ್ಲಕ್ಷ್ಯದಿಂದಾಗಿ ಮೆಸ್ಕಾಂ ಇಲಾಖೆಗೇ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.ಮೇ 2ರಂದು ಮಧ್ಯರಾತ್ರಿ ಬೀಸಿದ ಸುಂಟರಗಾಳಿಗೆ ಮೂಡುಬಿದಿರೆ ಮಹಾವೀರ ಕಾಲೇಜು ಸತ್ಯನಾರಾಯಣ ಕಟ್ಟೆಯ ಮುಂಭಾಗದಲ್ಲಿ ಮುಖ್ಯರಸ್ತೆಯಲ್ಲಿದ್ದ ಭಾರೀ ಮರವೊಂದು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದು ಏಳು ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಕಾರಣ ಈ ನಷ್ಟ ಸಂಭವಿಸಿದೆ.ಸುಮಾರು ಎರಡು ತಿಂಗಳ ಹಿಂದೆ ಇಲ್ಲೇ ಸಮೀಪದ ಕೀರ್ತಿನಗರ ಜಂಕ್ಷನ್ ಬಳಿ ವಿದ್ಯುತ್ ತಂತಿ ಸ್ಪರ್ಷಿಸುತ್ತಿದ್ದ ಮರವನ್ನು ಕಡಿಯಲು ಕ್ರೇನ್ ತರಿಸಲಾಗಿತ್ತು. ಈ ಸಂದರ್ಭ ಮೆಸ್ಕಾಂ ಅಧಿಕಾರಿಗಳನ್ನು […]

ಧರ್ಮಸ್ಥಳದ ಬೊಳಿಯಾರು ತಾಲೂಕಿನ ಪ್ರಥಮ ಕಂಟೈನ್‌ಮೆಂಟ್ ಝೋನ್

ಬೆಳ್ತಂಗಡಿ: ತಾಲೂಕು ಆಡಳಿತದ ಸೂಚನೆಯಂತೆ 30ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದ ಧರ್ಮಸ್ಥಳ ಗ್ರಾಮದ ಬೊಳಿಯಾರು ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಬೊಳಿಯಾರು ಪ್ರದೇಶದವರು ಯಾರು ಕೂಡ ಹೊರಗೆ ಹೋಗುವಂತಿಲ್ಲ. ಸದ್ರಿ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಸದ್ರಿ ಪ್ರದೇಶಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿದೆ. ದಿನದ ಅಗತ್ಯ ವಸ್ತುಗಳಿಗೆ ಗ್ರಾಮ ಪಂಚಾಯತಿನಿಂದ ಕ್ರಮವಹಿಸಲಾಗುವುದು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಹರ್ಷಿತ್ ಜೈನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಹಾಗೂ ಸಿಬ್ಬಂದಿಗಳು, […]

ಕಲ್ಲು ಗಣಿಗಾರಿಕೆಗೆ ವಿರೋಧ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಕೊರಂಬಾಡ್ ಪ್ರದೇಶದಲ್ಲಿ ಸ್ಥಳೀಯ ವ್ಯಕ್ತಿಯೊರ್ವರು ಕಲ್ಲು ಗಣಿಗಾರಿಕೆಗೆ ಸಿದ್ದತೆಯನ್ನು ನಡೆಸುತ್ತಿದ್ದು, ಈ ಪರಿಸರದಲ್ಲಿ ಹಲವಾರು ಮನೆಗಳು, ತೋಟಗಳು ಇದ್ದು ಮುಂದೆ ಸಾಕಷ್ಟು ಅನಾಹುತವಾಗುವ ಸಂಭವವಿದೆ. ಆದ್ದರಿಂದ ಈ ಕಲ್ಲು ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಪರವಾನಿಗೆಯನ್ನು ನೀಡಬಾರದು ಎಂದು ಇಂದು ಸ್ಥಳೀಯ ನಿವಾಸಿಗಳು ಗ್ರಾಮ ಪಂಚಾಯತ್‌ಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತಿ ಲೋಕಯ್ಯ ಪೂಜಾರಿ, ಉಪಾಧ್ಯಕ್ಷೆ ಶ್ವೇತಾ ಪರಮೇಶ್ವರ, ಸದಸ್ಯರಾದ ಜಗದೀಶ್ ಹೆಗ್ಡೆ , […]

ತೆಂಗಿನ ಮರ ಬಿದ್ದು ಮನೆಗೆ ಹಾನಿ

ಬೆಳ್ತಂಗಡಿ: ಮೇ 1ರಂದು ಸುರಿದ ಭಾರೀ ಗಾಳಿಮಳೆಗೆ ತೆಂಗಿನ ಮರವೊಂದು ಸುಲ್ಕೇರಿಮೊಗ್ರು ಗ್ರಾಮದ ಕಂಬ್ಳದಡ್ಡ ನಾರಾಯಣ ಮಡಿವಾಳರ ಮನೆಗೆ ಬಿದ್ದ ಪರಿಣಾಮ ಮನೆಯ ಪಾರ್ಶವೊಂದು ಕುಸಿದುಬಿದ್ದಿದೆ. ನಷ್ಟದ ಅಂದಾಜು ಇನ್ನಷ್ಟೇ ತಿಳಿಯಬೇಕಾಗಿದೆ.

ಕಾರ್ಮಿಕ ವಿರೋಧಿ ಕೇಂದ್ರ ಸರಕಾರದ ವಿರುದ್ಧ ಸಂಘಟಿತ ಹೋರಾಟ ಅಗತ್ಯ;ವಿಶ್ವ ಕಾರ್ಮಿಕ ದಿನಾಚರಣೆಯಲ್ಲಿ ಎಸ್.ಎಂ.ಎಸ್.

ಬೆಳ್ತಂಗಡಿ: ಬಿಜೆಪಿ ನೇತೃತ್ವದ ನರೇಂದ್ರ ಮೋದಿಯ ಸರ್ವಾಧಿಕಾರಿ ಆಡಳಿತ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುವ ಮೂಲಕ ದೇಶದ ರೈತ- ಕಾರ್ಮಿಕರು ನರಕಯಾತನೆ ಅನುಭವಿಸುವಂತಾಗಿದೆ. ಇದರ ವಿರುದ್ಧ ರೈತ ಹಾಗೂ ಕಾರ್ಮಿಕರ ಐಕ್ಯತೆಯ-ಸಂಘಟಿತ ಹೋರಾಟ ಅಗತ್ಯವಿದೆ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಎಸ್. ಎಂ. ಕಾರ್ಮಿಕ ವರ್ಗಕ್ಕೆ ಕರೆ ನೀಡಿದರು.ಬೆಳ್ತಂಗಡಿಯ ಅನನ್ಯದಲ್ಲಿ ಮೇ 1ರಂದು ಅತ್ಯಂತ ಸರಳವಾಗಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಕೇಂದ್ರದ ಬಿಜೆಪಿ ಸರ್ಕಾರ […]

ನಿವೃತ್ತ ಸಹಕಾರಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೆರಿಯ ಶಾಖೆಯಲ್ಲಿ ಶಾಖಾ ಪ್ರಬಂಧಕರಾಗಿ ಸೇವೆ ಸಲ್ಲಿಸಿ ಎಪ್ರಿಲ್ 30ರಂದು ವಯೋ ನಿವೃತ್ತಿ ಹೊಂದಿದ ಸಹಕಾರಿ ಎಂ. ಎಸ್. ಕರುಣಾಕರ ಗೌಡರ ಸುದೀರ್ಘ ಸೇವೆಯನ್ನು ಗುರುತಿಸಿ, ಸಂಘದ ಮುಂಡಾಜೆ ಕೇಂದ್ರ ಕಛೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು. ಸಂಘದ ಅಧ್ಯಕ್ಷ ನೂಜಿ ಜನಾರ್ದನ ಗೌಡ, ಉಪಾಧ್ಯಕ್ಷ ಪ್ರಕಾಶ್ ನಾರಾಯಣ ರಾವ್ ಹಾಗೂ ಸಿಇಒ ನಾರಾಯಣ ಫಡ್ಕೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಳಕು ಸೇವಾ ಪ್ರತಿಷ್ಠಾನದಿಂದ ನೆರವು

ಬೆಳ್ತಂಗಡಿ: ಬೆಳಕು ಸೇವಾ ಪ್ರತಿಷ್ಠಾನ ಬೆಳ್ತಂಗಡಿಯ ವತಿಯಿಂದ  ಕುವೆಟ್ಟು ಗ್ರಾಮದ ಅಮರ್ಜಾಲ್  ಕೋಡಿ ನಿವಾಸಿ ಸದಾಶಿವ ಸಪಲ್ಯ ದಂಪತಿಗಳ ಸುಪುತ್ರಿ ಅರ್ಪಿತಾಳ (17) ಹೃದಯ ಶಸ್ತ್ರಚಿಕಿತ್ಸೆಗಾಗಿ ಎಪ್ರಿಲ್ 21ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಭವನದಲ್ಲಿ ಪದಾಧಿಕಾರಿಗಳು ಉಪಸ್ಥಿತರಿದ್ದು, ಆರ್ಥಿಕ ನೆರವಿನ ಚೆಕ್ಕನ್ನು  ಹಸ್ತಾಂತರಿಸಲಾಯಿತು.      ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮೊಕ್ತೇಸರ ಶರತ್‌ಕೃಷ್ಣ  ಪಡುವೆಟ್ನಾಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್, ಶೆಟ್ಟಿ, ಸುವರ್ಣ ಸಾಂಸ್ಕೃತಿಕ  ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಸುವರ್ಣ, ಆರ್.ಎಸ್.ಎಸ್. ಪ್ರಮುಖ್ ದಿನಕರ […]

ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ(ರಿ) ನ ನೂತನ ಸಭಾಭವನಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ಅಯ್ಯಪ್ಪ ಭಜನಾ ಮಂದಿರ ದ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ತುಳು  ಶಿವಳ್ಳಿ ಸಭಾ(ರಿ) ನೇತೃತ್ವದಲ್ಲಿ  ನಿರ್ಮಾಣಗೊಳ್ಳಲಿರುವ  ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದ  ನೂತನ ಸಭಾಭವನಕ್ಕೆ  ಎಪ್ರಿಲ್ 29ರಂದು ಮುಂಜಾನೆ  7.10ರ ಶುಭ ಮುಹೂರ್ತದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. . ವೇದಮೂರ್ತಿ ರಾಮಕೃಷ್ಣ  ಕಲ್ಲೂರಾಯರ ಪೌರೋಹಿತ್ಯದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷಾಬಲಿ, ಭೂವರಾಹ ಹೋಮ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ  ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಪರಿವಾರ ಸಾನ್ನಿಧ್ಯದಲ್ಲಿ ವಿಶೇಷ ಪ್ರಾರ್ಥನೆ-ಪೂಜೆ ಸಲ್ಲಿಸಿ ಸಮಾಜದ ಗೌರವಾಧ್ಯಕ್ಷರು […]