ದಲಿತ ಯುವತಿಗೆ ಲೈಂಗಿಕ ಕಿರುಕುಳ ಆರೋಪ, ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಎಂಬಲ್ಲಿ ಸಲೀಂ ಎಂಬ ವಿವಾಹಿತ ಯುವಕ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಆರೋಪಿ ತನ್ನ ಬೀಡಿ ಬ್ರ್ಯಾಂಚ್‌ನಲ್ಲಿ ಬೀಡಿ ತೆಗೆಯುವ ಸಂದರ್ಭದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಯುವತಿಯ ಬೊಬ್ಬೆ ಕೇಳಿ ಸ್ಥಳಕ್ಕೆ ಸ್ಥಳೀಯ ಬಂದ ಬಜರಂಗದಳದ ಯುವಕರು ಆರೋಪಿ ಸಲೀಂನನ್ನು ಹಿಡಿದು ಧರ್ಮಸ್ಥಳ ಪೋಲೀಸರಿಗೆ ಒಪ್ಪಿಸಿದ್ದಾರೆ.

ನೆಲ್ಯಾಡಿ ಜೆಸಿಐನಿಂದ ಶಿಕ್ಷಕ ದಿನಾಚರಣೆ; ನಿವೃತ್ತ ಶಿಕ್ಷಕ ಹಾಗೂ ಮಕ್ಕಳ ಸಾಹಿತ್ಯ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ರಿಗೆ ಗೌರವಾರ್ಪಣೆ.

ಕೊಕ್ಕಡ: ನೆಲ್ಯಾಡಿಯ ಜೆಸಿಐ ಸಂಸ್ಥೆಯ ವತಿಯಿಂದ ನೆಲ್ಯಾಡಿ ಪಡುಬೆಟ್ಟಿನ ನಿವೃತ್ತ ಶಿಕ್ಷಕ, ಸಾಹಿತ್ಯ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯರನ್ನು ಶಾಂತಿಗೋಡುನ ಪುಂಡಿಕಾಯಿ ಸ್ವಗೃಹದಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಶುಭಸಂದರ್ಭದಲ್ಲಿ ಗೌರವಪೂರ್ವಕವಾಗಿ ಸಮ್ಮಾನಿಸಲಾಯಿತು.ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲಾ ಕನ್ನಡ ಶಿಕ್ಷಕರಾದ ಕನ್ನಡ ಪಂಡಿತರೂ ಆಗಿರುವ ವಿ.ಆರ್ .ಹೆಗಡೆಯವರು ತಮ್ನ ಅಭಿನಂದನಾ ಭಾಷಣದಲ್ಲಿ ಶಗ್ರಿತ್ತಾಯರು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಸಾಧನೆ ಮತ್ತು ಶಿಕ್ಷಕರಾಗಿ ಸಮಾಜಕ್ಕೆ ನೀಡಿದ ವಿಶಿಷ್ಟ ಸೇವೆ ಇಂದಿಗೂ ಎಲ್ಲರಿಗೂ ಮಾದರಿ. ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ,ಮುಮ್ಮೇಳಗಳೆರಡರಲ್ಲೂ […]

ಸಿಡಿಲು ಬಡಿದು ಅಕೇಶಿಯಾ ಮರ ಛಿದ್ರ

ಬೆಳಾಲು: ಬೆಳಾಲು ಗ್ರಾಮದ ಮಾಯಾ ಕ್ರಾಸ್ ಬಳಿ ಅಪ್ಪಳಿಸಿದ ಸಿಡಿಲಿಗೆ ಅಕೇಶಿಯಾ ಮರವೇ ಛಿದ್ರಗೊಂಡಿದೆ. ಸುದೈವವಶಾತ್ ಈ ರಣಭೀಕರ ಸಿಡಿಲು ಜನಸಂಚಾರವಿರುವಲ್ಲಿ ಅಥವಾ ತೋಟ, ಗದ್ದೆಗಳಿಗೆ ಅಥವಾ ಯಾರದ್ಧೇ ಮನೆಗೆ ಅಪ್ಪಳಿಸದಿರುವುದು, ಇಂತಹ ಅಪಾಯಗಳಿಂದ ಪಾರಾಗಲು ಪರಿಸರದಲ್ಲಿ ಮರಗಳನ್ನು ಬೆಳೆಸಿ ಉಳಿಸಬೇಕೆಂಬ ವಾದಕ್ಕೆ ಪುಷ್ಠಿ ನೀಡಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ; ಬೆಳ್ತಂಗಡಿ ತಾಲೂಕಿನ ಇನ್ನೊಂದು ಶಾಲೆಯಿಂದ 100% ಫಲಿತಾಂಶದ ಸಾಧನೆ.

ಬೆಳ್ತಂಗಡಿ: ಕೊರೋನಾ ಸೋಂಕಿನ ಭೀತಿಯ ನಡುವೆ ನಡೆದ 2019-20ರ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲು ಫಲಿತಾಂಶ ಬಂದಾಗ ಸರಕಾರಿ ಶಾಲೆಗಳ ಪೈಕಿ ಬೆಳ್ತಂಗಡಿ ತಾಲೂಕಿನ ಪೆರ್ಲಬೈಪಾಡಿ ಮತ್ತು ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ 100% ಫಲಿತಾಂಶ ದಾಖಲಿಸಿದ ಶಾಲೆಗಳು ಎಂದು ಗುರುತಿಸಲ್ಪಟ್ಟಿತ್ತು. ಇದೀಗ ಮರು ಮೌಲ್ಯಮಾಪನದ ಬಳಿಕ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ 100% ಫಲಿತಾಂಶ ಪಡೆದ ಸಾಧನೆಯ ಶಾಲೆಯೆಂಬ ಹೆಮ್ಮೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ […]

“ಫಿಟ್ ಇಂಡಿಯಾ ಪ್ರೀಡಮ್ ರನ್”

ಮಡಂತ್ಯಾರು: ಕಾಲೇಜು ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ, ಫಿಸಿಕಲ್ ಎಜುಕೇಶನ್ ಫೌಂಡೇಶನ್ ಆಫ್ ಇಂಡಿಯಾ ಕರ್ನಾಟಕ, ಮತ್ತು ಫಿಟ್ ಇಂಡಿಯಾ ಇವುಗಳ ಸಹಕಾರದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟೀಯ ಸೇವಾ ಯೋಜನೆ ಇವುಗಳ ಜಂಟಿ ಆಶ್ರಯದಲ್ಲಿ “ಫಿಟ್ ಇಂಡಿಯಾ ಫ್ರೀಡಮ್ ರನ್” ಕಾರ್ಯಕ್ರಮವು ಕಾಲೇಜಿನ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 5ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಸಂಚಾಲಕರಾದ ವಂ| ಬೆಸಿಲ್ ವಾಸ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಜೋಸೆಪ್ ಎನ್. ಎಮ್., ಕಾರ್ಯಕ್ರಮ […]

ಫೊಟೋಗ್ರಾಫರ್ಸ್ ಎಸೋಸಿಯೇಷನ್‌ನ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಸೌತ್ ಕೆನರಾ ಫೋಟೊಗ್ರಾಫರ್ಸ್ ಎಸೋಸಿಯೇಷನ್ ದ. ಕ. ಹಾಗೂ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ 18ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 5 ರಂದು ಗುರುವಾಯನಕೆರೆ ಶ್ರೀ ಅಯ್ಯಪ್ಪ ಗುಡಿ ಬಳಿಯಿರುವ ಛಾಯಭವನದಲ್ಲಿ ವಲಯದ ಅಧ್ಯಕ್ಷ ಸುರೇಶ್ ಬಿ. ಕೌಡಂಗೆಯವರ ಅಧ್ಯಕ್ಷತೆಯಲ್ಲಿ ಜರಗಿತು. ದ. ಕ. ಹಾಗೂ ಉಡುಪಿ ಜಿಲ್ಲಾ ಫೋಟೋಗ್ರಾಫರ್ಸ್ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಛಾಯಾಗ್ರಾಹಣ ವೃತ್ತಿ ಉಳಿದರೆ ಮಾತ್ರ ಸಂಘಟನೆ ಬೆಳೆಯಬಹುದು. ನಮ್ಮ ಸದಸ್ಯರ ಕಷ್ಟಗಳನ್ನು ಅರಿತು […]

ಮತ್ತೆ ತಲೆ ಎತ್ತಿದ ಅಕ್ರಮ ಮರಳು ಧಂದೆ

ಬೆಳ್ತಂಗಡಿ: ಮಳೆ ಬಿಡುವು ನೀಡುತ್ತಿದ್ದಂತೆಯೇ ಮಿತ್ತಬಾಗಿಲು ಗ್ರಾಮದ ನೇತ್ರಾವತಿ ನದಿಯ ದಡದಲ್ಲಿ ಅಕ್ರಮ ಮರಳುಗಾರಿಕೆ ಮತ್ತೆ ಆರಂಭವಾಗಿದೆ.ಈಗಾಗಲೇ ನದಿ ಕೊರೆತದಿಂದ ಹಲವರ ಕೃಷಿ ಜಾಗ ನದಿ ಪಾಲಾಗಿದೆ. ಆದರೆ ಮತ್ತೆ ಗಾಯಕ್ಕೆ ಬೆಂಕಿ ಸುರಿಯುವಂತೆ ಮರಳನ್ನು ತೆಗೆಯುವ ಮೂಲಕ ಅಕ್ರಮ ಮರಳುಗಾರರು ಮತ್ತಷ್ಟು ತೊಂದರೆ ನೀಡುತ್ತಿದ್ದಾರೆ.ಕಂಚರೋಡಿ ಭಾಗದಲ್ಲಿ ನದಿ ಕೊರೆತ ಉಂಟಾಗಿದ್ದು ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಈಗ ಇಲ್ಲಿ ಅಕ್ರಮ ಮರಳುಗಾರಿಕೆಯಿಂದ ಕೃಷಿ ಭೂಮಿ ನದಿ ನೀರಿಗೆ ಮತ್ತಷ್ಟು ಕೊರೆದು ಹೋಗುವ ಅಪಾಯ ಉಂಟಾಗಿದೆ.ಬೆಳಗ್ಗೆ 6 ಗಂಟೆಯಿಂದ […]

ನಾಪತ್ತೆಯಾದ ಯುವಕ ಶವವಾಗಿ ಪತ್ತೆ

ಬೆಳ್ತಂಗಡಿ : ಚೆನ್ನರಾಯಪಟ್ಟಣದ ಖಾಸಗಿ ಸಂಸ್ಥೆಯೊಂದರಲ್ಲಿ ಮೇನೇಜರ್ ಆಗಿ9 ದಿನಗಳ ಹಿಂದೆಯಷ್ಷೇ ಕೆಲಸಕ್ಕೆ ಸೇರಿದ್ದ; ತದನಂತರ ಏಕಾಏಕಿ ನಾಪತ್ತೆಯಾದ ಯುವಕನ ಶವ ತನ್ನ ನಾವೂರು ಮನೆಯ ಸಮೀಪ ಕೆರೆಯಲ್ಲಿ ಪತ್ತೆಯಾದ ಘಟನೆ ಆ.28 ರಂದು ವರದಿಯಾಗಿದೆ.ನಾವೂರು ಗ್ರಾಮದ ನಾಗಜೆ ನಿವಾಸಿ ದಿ। ಶೀನಪ್ಪ ಗೌಡರ ಪುತ್ರ ರಕ್ಷಿತ್ (28) ಅಸಹಜವಾಗಿ ಸಾವನ್ನಪ್ಪಿದ ಯುವಕ.ರಕ್ಷಿತ್ 9ದಿನಗಳ ಹಿಂದೆ ಚೆನ್ನರಾಯಪಟ್ಟಣಕ್ಕೆ ಹೋಗಿ ಕೆಲಸಕ್ಕೆ ಸೇರಿದ್ದು, ಕಳೆದ ಆ.22ರಂದು ಶನಿವಾರ ಮನೆಗೆ ಬಂದಿದ್ದರು. ಗಣೇಶ ಹಬ್ಬ ಪೂರೈಸಿದ ಬಳಿಕ ಆಗಸ್ಟ್ 24ರಂದು […]

ರಾಷ್ಟ್ರಮಟ್ಟದ ಜಲಸಾಕ್ಷರತೆ 2020 ಜಲಸಾಕ್ಷರತೆ : ರಾಷ್ಟ್ರಮಟ್ಟದ ವಿಚಾರ ಸಂಕಿರಣ.

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ವತಿಯಿಂದ ಜಲಸಾಕ್ಷರತೆಯ ಬಗ್ಗೆ ರಾಷ್ಟ್ರಮಟ್ಟದ ಆನ್ ಲೈನ್ ವಿಚಾರ ಸಂಕೀರ್ಣವನ್ನು ಆಗಸ್ಟ್ 29ರಂದು ಹಮ್ಮಿಕೊಳ್ಳಲಾಯಿತುಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್. ಎಮ್. ಇವರು ಆನ್ ಲೈನ್ ಮೂಲಕ ಜಲಸಾಕ್ಷರತೆಯ ಬಗ್ಗೆ ಉಪನ್ಯಾಸ ನೀಡಿದರು. ಅಭಿಯಾನದ ಪ್ರಾಯೋಗಿಕ ಉದಾಹರಣೆಗಳ ಸಹಿತ ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿ ನೀಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮವನ್ನು ಸೇಕ್ರೆಡ್ […]

ನಡ ಸರಕಾರಿ ಪ್ರೌಢ ಶಾಲಾ ಗಣಿತ ಶಿಕ್ಷಕ ಯಾಕೂಬ್‌‌ರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ನಡ ಪ್ರೌಢ ಶಾಲೆಯ ಗಣಿತ ಶಿಕ್ಷಕ , ಶಾಲೆಯ ಗಣಿತ ಪ್ರಯೋಗಾಲಯದ ರೂವಾರಿ ಯಾಕೂಬ್‌ರವರನ್ನು ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದ ರಾಷ್ಟ್ರ ಮಟ್ಟದ ಉತ್ತಮ‌ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಘನತೆವೆತ್ತ ರಾಮನಾಥ ಕೋವಿಂದ್ ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.