ಇವರಿಗೆ ಪ್ರಧಾನಿ ಮೋದಿ ಆದರ್ಶನಾ…? ಮಾಸ್ಕ್ ಧರಿಸದೇ ಇನ್ನೊಂದು ಹೈಮಾಸ್ಕ್ ದೀಪ ಉದ್ಘಾಟನೆ

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಕರಾಯ ಗ್ರಾಮದ ಶ್ರೀ ಕೃಷ್ಣ ಭಜನಾ ಮಂದಿರದ ಆವರಣದಲ್ಲಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ನವೆಂಬರ್ 3ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು.‌ ಕಳೆದ ವಾರ ಸುಲ್ಕೇರಿಮೊಗ್ರು ದೈವಸ್ಥಾನದಲ್ಲಿ ನಡೆದಂತೆ ಇಲ್ಲೂ ಕೂಡಾ ಮಾಸ್ಕ್ ಧರಿಸದೇ ಬಹುತೇಕರು ಹೈಮಾಸ್ಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೊರೋನಾ ಸೋಂಕಿಗೆ ಸವಾಲು ಹಾಕಿದರು.ಬಹಳ ವಿಶೇಷವೆಂದರೆ ಹೇಳಿಕೇಳಿ ಈ ಕಾರ್ಯಕ್ರಮಗಳಲ್ಲಿ ಉದ್ಘಾಟಕರಾಗಿ ಭಾಗವಹಿಸಿದ ಶಾಸಕ ಹರೀಶ್ ಪೂಂಜಾರ ಸಹಿತ ಬಹುತೇಕರು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ […]

ಜಾಗೃತ ಸಮಾಜದಿಂದ ಭ್ರಷ್ಟಾಚಾರಕ್ಕೆ ಕಡಿವಾಣ.ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ನ್ಯಾl ನಾಗೇಶ್ ಮೂರ್ತಿ

ಬೆಳ್ತಂಗಡಿ: ಭ್ರಷ್ಟಾಚಾರಕ್ಕೆ ಅದರದ್ಧೇ ಆದ ಕರಾಳ ಇತಿಹಾಸವಿದೆ. ರಾಷ್ಟ್ರದ ಅಭಿವೃದ್ಧಿಗೆ ಭ್ರಷ್ಟಾಚಾರಕ್ಕೆಕಡಿವಾಣ ಹಾಕಬೇಕಾದ್ದು ತೀರಾ ಅಗತ್ಯ. ಅದಕ್ಕಾಗಿ ಸಮಾಜವನ್ನು ಜಾಗೃತಗೊಳಿಸಬೇಕಾಗಿದೆ. ಜಾಗೃತ ಸಮಾಜದಿಂದ ಮಾತ್ರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.‌ ಕೆ. ನಾಗೇಶ್ ಮೂರ್ತಿ ಹೇಳಿದರು.ಅವರು ನವೆಂಬರ್ 2ರಂದು ಬೆಳ್ತಂಗಡಿಯ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, […]

ಕಾರ್ಮಿಕರಿಗೆ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಜ್ದೂರ್ ಸಂಘ ತಾಲೂಕು ಸಮಿತಿ ‌ಬೆಳ್ತಂಗಡಿ ಇದರ ಜಂಟಿ ಅಶ್ರಯದಲ್ಲಿನೊಂದಣಿಯಾದ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮಹಾಗೂ ಕಾರ್ಮಿಕರ ಸೌಲಭ್ಯಗಳ ಮಾಹಿತಿ ಕಾರ್ಯಾಗಾರವು ನವೆಂಬರ್ 1ರಂದು ಮರೋಡಿ ಗ್ರಾಮಪಂಚಾಯತ್ ಸಭಾ ಭವನ ದಲ್ಲಿ ನಡೆಯಿತು.ಭಾರತೀಯ ಮಜ್ದೂರ್ ಸಂಘದ ಮರೀಡಿ ಗ್ರಾಮ ಸಮಿತಿ ಅಧ್ಯಕ್ಷ ಗಣೇಶ್ ಕರ್ಕೇರ ಇವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‌ಸಂಘದ ತಾಲೂಕು ಸಮಿತಿ ಅಧ್ಯಕ್ಷರಾದ ಉದಯ […]

ಘನತ್ಯಾಜ್ಯ ವಿಲೇವಾರಿ ಘಟಕದ ಬ್ರ್ಯಾಂಡಿಗ್ ಲೋಕಾರ್ಪಣೆ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆ ‘ಸ್ವಚ್ಛೋತ್ಸವ -ನಿತ್ಯೋತ್ಸವ’ ಮಾಸಾಚರಣೆ ಪ್ರಯುಕ್ತ ಧರ್ಮಸ್ಥಳ ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ರ್ಯಾಂಡಿಗ್ ಲೋಕಾರ್ಪಣೆ ಕಾರ್ಯಕ್ರಮ ಅಕ್ಟೋಬರ್ 30 ರಂದು ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡುತ್ತಾ, ಸ್ವಚ್ಛತೆ ಕಡೆಗೆ ಆದಷ್ಟು ಗಮನ ನೀಡಬೇಕು. ನಮ್ಮ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆಯಲ್ಲಿ ನಮ್ಮ ಪಾತ್ರ ಪ್ರಾಮುಖ್ಯತೆ ವಹಿಸಿದೆ. ಪಂಚಾಯತ್ ಮಟ್ಟದ ಎಲ್ಲಾ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಹೆಚ್ಚಿನ […]

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಎಸ್.ಟಿ. ಮೋರ್ಚಾದ ಆಶ್ರಯದಲ್ಲಿ ಅಕ್ಟೋಬರ್ 30ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪರ್ಷನೆ ಮಾಡಿ ಮಾತನಾಡುತ್ತಾ, ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮಹನೀಯರ ಆದರ್ಶಗಳನ್ನು ಮುಂದಿಟ್ಡುಕೊಂಡು ಆ ವರ್ಗಗಳಿಗೆ ಶಕ್ತಿ ನೀಡುವ ಕೆಲಸ ಮಾಡುತ್ತಿದೆ. ಮಹರ್ಷಿ ವಾಲ್ಮೀಕಿ ನಮಗೆ ಆ ದೃಷ್ಠಿಯಿಂದ ಆದರ್ಶಪ್ರಾಯರು ಎಂದರು.ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತಾರಾಮ […]

ಬೆಳ್ತಂಗಡಿಯಲ್ಲಿ ನಕಲಿ‌ ನೋಟು ಪತ್ತೆ

ಬೆಳ್ತಂಗಡಿ : ಇತ್ತೀಚಿನ ದಿನಗಳಲ್ಲಿ ಖೋಟಾನೋಟು ಚಲಾವಣೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಜಾಲದ ಬಾಹುಗಳು ಬೆಳ್ತಂಗಡಿ ಚಾಚಿಕೊಂಡ ಬಗ್ಗೆ ತಿಳಿದು ಬಂದಿದೆ.ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಕಾಪಿನಡ್ಕದ ಅಲಡ್ಕ ಚಿಕನ್ ಸೆಂಟರ್ ಮಾಲಕ ದೇವದಾಸ್ ಎಂಬರಿಗೆ ಒಂದು ಬೆಳಿಗ್ಗೆ ಕಾಪನಡ್ಕ ಹೋಟೆಲ್ ಮಾಲಕರೊಬ್ಬರು ವ್ಯವಹಾರ ಸಮಯದಲ್ಲಿ 100 ರೂಪಾಯಿಯ 3 ಹೊಸ ನೋಟು ನೀಡಿದ್ದರು. (300 ರೂಪಾಯಿ) ಅವರು ತನ್ನ ಚಿಕನ್ ಅಂಗಡಿಯಲ್ಲಿ ವ್ಯವಹಾರದ ಸಮಯ ಇದೇ ನೋಟನ್ನು ಬೇರೆಯರಿಗೆ ನೀಡಿದಾಗ ಅವರಿಗೆ ಒಂದು ನೂರು ರೂಪಾಯಿ […]

ಕಡಿರುದ್ಯಾವರದಲ್ಲಿ ತೋಟಕ್ಕೆ ನುಗ್ಗಿದ ಆನೆ

ಬೆಳ್ತಂಗಡಿ: ಕಾಡಿನಿಂದ ತೋಟಕ್ಕೆ ನುಗ್ಗಿದ ಆನೆಗಳ ಹಿಂಡಿನಲ್ಲಿದ್ದ ಆನೆಮರಿಯೊಂದು ಹಿಂದೆ ಹೋಗಲು ದಾರಿ ಕಾಣದೇ ತೋಟದಲ್ಲಿ ಸಿಲುಕಿಕೊಂಡ ಘಟನೆ ಅಕ್ಟೋಬರ್ 29ರಂದು ರಾತ್ರಿ ಕಡಿರುದ್ಯಾವರದಲ್ಲಿ ನಡೆದಿದೆ.ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿಯನ್ನು ತಿಂದು ಸಂಪೂರ್ಣ ನಾಶಗೊಳಿಸಿದ್ದು, ನಂತರ ತೋಟದಿಂದ ಕಾಡಿಗೆ ಮರಳುವ ಸಮಯದಲ್ಲಿ ಮರಿಯಾನೆಗೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಸಿಲುಕಿದ ಪ್ರಕರಣ ಬೆಳಕಿಗೆ ಬಂದಿದೆ. ತೋಟದಲ್ಲಿ ಮರಿಯಾನೆ ಸಿಲುಕಿಕೊಂಡಿದ್ದರಿಂದ ಆನೆಗಳ ಹಿಂಡು ತೋಟದ ಸಮೀಪದ ಕಾಡಿನಲ್ಲಿ ಬೀಡುಬಿಟ್ಟಿತ್ತು. ಬೆಳಗ್ಗೆ ಡೀಕಯ್ಯ ಗೌಡರವರು […]

ಬೆಳ್ತಂಗಡಿ ಕಾರಿನೊಳಗೆ ನಾಗರಹಾವು ಪತ್ತೆ

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಸಂಭಾವ್ಯ ದೊಡ್ಡ ಅನಾಹುತ ಒಂದು ಸುದೈವವಶಾತ್ ತಪ್ಪಿದಂತಾಗಿದೆ. ಕಾರಿನಲ್ಲಿ ಅಡಗಿದ್ದ ನಾಗರಹಾವು ನೋಡಿ ಎಚ್ಚೆತ್ತು ಹೊರಬಂದ ದಂಪತಿ ಹಾಗೂ ಮಗ ಗಂಡಾಂತರದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿಗಳಾದ ಪ್ರವೀಣ್ ಪತ್ನಿ ಮೀನಾ ಮತ್ತು ಮಗ ಕೃತಿಕ್ ಮೂವರು ಬೆಳ್ತಂಗಡಿಯ ಮುಳಿಯ ಜುವೆಲರ್ಸ್ ಮುಂಭಾಗದಲ್ಲಿ ತಮ್ಮ ಕಾರು ಪಾರ್ಕ್ ಮಾಡಿ ಅಮರ್ ಡ್ರಗ್ ಹೌಸ್‌ಗೆ ಮೆಡಿಸಿನ್ ಖರೀದಿಸಲು ಹೋಗಿದ್ದರು. ಹಿಂತುರುಗಿ ಬಂದು ಕಾರಿನಲ್ಲಿ ಪ್ರವೀಣ್ ಚಾಲಕನ ಸೀಟಿನಲ್ಲಿ […]

ಕಾಳಜಿ ರಿಲೀಫ್ ಫಂಡ್‌ಗೆ ದೇಣಿಗೆ

ಬೆಳ್ತಂಗಡಿ: ಬೆಳ್ತಂಗಡಿಯ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ವತಿಯಿಂದ ಬೆಳ್ತಂಗಡಿ ಕಾಳಜಿ ರಿಲೀಫ್ ಫಂಡ್‌ಗೆ 1 ಲಕ್ಷ ರೂಪಾಯಿ ಧನಸಹಾಯದ ಚೆಕ್ಕನ್ನು ಸುಬ್ರಹ್ಮಣ್ಯ ಸ್ಥಾನಿಕ ಸಭಾ ಅಧ್ಯಕ್ಷರಾದ ದಿನೇಶ್ ಕುಮಾರ್ ಎಂ.ಎಸ್. ರಿಲೀಫ್ ಫಂಡ್‌ನ ಅಧ್ಯಕ್ಷರಾದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರಿಗೆ ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಅಕ್ಟೋಬರ್ 29ರಂದು ಹಸ್ತಾಂತರಿಸಿದರು.ಸುಬ್ರಹ್ಮಣ್ಯ ಸ್ಥಾನಿಕ ಸಭಾ ಕೋಶಾಧಿಕಾರಿ ರೇಖಾ ಸುಧೀರ್ ರಾವ್, ಕಾಳಜಿ ರಿಲೀಫ್ ಫಂಡ್ ಕಾರ್ಯದರ್ಶಿ ಬಿ. ಕೆ. ಧನಂಜಯ ರಾವ್ ಈ ಸಂದರ್ಭದಲ್ಲಿ ಹಾಜರಿದ್ದರು.

ವಿಶ್ವ ಪೋಲಿಯೋ ದಿನಾಚರಣೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘ ಉಜಿರೆ ಇವರ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 24ರಂದು ವಿಶ್ವ ಪೋಲಿಯೋ ದಿನಾಚರಣೆಯನ್ನು ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದ ಆವರಣದಲ್ಲಿ ನಡೆಸಲಾಯಿತು.ಈ ಸಂಧರ್ಭದಲ್ಲಿ ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್‌ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್, ರೋಟರಿ ಜಿಲ್ಲೆಯ ಪಲ್ಸ್ ಪೋಲಿಯೊದ ಸಹಾಯಕ ಚೇರ್ಮನ್ ಸುರೇಂದ್ರ ಕಿಣಿ, ರೋಟರಿ ಕ್ಲಬ್ ಬೆಳ್ತಂಗಡಿಯ ಪಲ್ಸ್ ಪೋಲಿಯೊ ಚೇರ್ಮನ್ ಡಾ. ರಾಘವೇಂದ್ರ ಪಿದಮಲೆ, ರೋಟರಿ ಕ್ಲಬ್ ಬೆಳ್ತಂಗಡಿಯ […]